ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ | Information about basic rights and duties in Kannada

Join Telegram Group Join Now
WhatsApp Group Join Now

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ Information about basic rights and duties Mulabhutha Hakkugalu mattu Karthavyagala bagge Mahithi in Kannada

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮೂಲಭೂತ ಹಕ್ಕುಗಳ ಅರ್ಥ :

ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕಾಗಿ ಸಂವಿದಾನ ನೀಡಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳೆಂದು ಕರೆಯಲಾಗುತ್ತದೆ. ಇವು ನಾಗರಿಕರಿಗೆ ನೀಡಿದ ಸಾಂವಿಧಾನಿಕ ಹಕ್ಕುಗಳಾಗಿವೆ. ಮೂಲಭೂತ ಹಕ್ಕುಗಳು ಸಾಮಾಜಿಕ ಜೀವನಕ್ಕೆ ಅತ್ಯಗತ್ಯವಾಗಿದೆ. ಇವುಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ. ಮೂಲಭೂತ ಹಕ್ಕಿಗಳಿಗೆ ನ್ಯಾಯಾಂಗದ ರಕ್ಷಣೆ ಇದೆ.

ಮೂಲಭೂತ ಹಕ್ಕುಗಳ ವಿಧಗಳು :

  • ಸಮಾನತೆಯ ಹಕ್ಕು – ವಿಧಿ 14-18 :

ಕಾನೂನಿನ ಮುಣದೆ ಎಲ್ಲರೂ ಸಮಾನರು, ಯಾರೇ ಆಗಲೀ ಕಾನೂನಿಗಿಂತ ದೊಡ್ಡವರಲ್ಲ, ಮತ್ತು ಎಲ್ಲರಿಗೂ ಸಮಾನ ರಕ್ಷನೆ ದೊರಕಬೇಕೆಂಬ ಅಂಶಗಳು ಸಮಾನತೆಯ ಹಕ್ಕಿನಲ್ಲಿ ಒಳಗೊಂಡಿದೆ. ಧರ್ಮ, ಕುಲ, ಜಾತಿ, ಲಿಂಗ, ಜನ್ಮಸ್ಥಳ ಇವುಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ. ಅಂಗಡಿ, ಹೋಟೆಲ್‌ ಮತ್ತು ಮನೋರಂಜನಾ ಸ್ಥಳಗಳ ಪ್ರವೇಶಕ್ಕೆ ಯಾವುದೇ ಪ್ರಜೆಯ ಮೇಲೆ ನಿರ್ಬಂಧ ಹೇರುವಂತಿಲ್ಲ. ಸಾರ್ವಜನಿಕ ಬಾವಿ, ಕೆರೆ, ರಸ್ತೆ ಮತ್ತು ವಿರಾಮ ಸ್ಥಳಗಳನ್ನು ಉಪಯೋಗಿಸಲು ಕೂಡ ನಿರ್ಬಂಧವಿರುವುದಿಲ್ಲ. ಸರ್ಕಾರಿ ಸೇವೆಗೆ ಸೇರಲು ಎಲ್ಲಾ ನಾಗರಿಕರಿಗೂ ಸಮಾನ ಅವಕಾಶವಿದೆ.

  • ಸ್ವಾತಂತ್ರ್ಯದ ಹಕ್ಕು – ವಿಧಿ 19-22 :

ವಾಕ್‌ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ, ಸಂಘಸಂಸ್ಥೆಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ, ದೇಶದ ಎಲ್ಲೆಡೆ ನಿರ್ಬಂಧವಿಲ್ಲದೆ ಸಂಚರಿಸುವ ಸ್ವಾತಂತ್ರ್ಯ, ಭಾರತದ ಯಾವುದೇ ಭಾಗದಲ್ಲಾದರೂ ವಾಸಿಸುವ ಸ್ವಾತಂತ್ರ್ಯ, ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ, ವ್ಯವಹಾರ ಮಾಡುವ ಸ್ವಾತಂತ್ರ್ಯ.

  • ಶೋಷಣೆಯ ವಿರುದ್ದದ ಹಕ್ಕು – ವಿಧಿ 23-24 :

ಬಡವರು, ಮಹಿಳೆಯರು, ಮಕ್ಕಳು ಮತ್ತು ದುರ್ಬಲರನ್ನು ಶೋಷಣೆ ಮಾಡಬಾರದು ಎಂಬುದು ಈ ಹಕ್ಕಿನ ಉದ್ದೇಶ. ಧರ್ಮ, ಜಾತಿ, ವರ್ಗ ಹಾಗೂ ಲಿಂಗದ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಕಾಯಿದೆಗಳನ್ನು ಜಾರಿಗೆ ತಂದಿವೆ.

Join WhatsApp Join Telegram
  • ಧಾರ್ಮಿಕ ಸ್ವಾತಂತ್ರ್ಯ ಹಕ್ಕು – ವಿಧಿ 25-28 :

ಭಾರತದ ಪ್ರಜೆಗಳು ತಮಗೆ ಸರಿಯೆನಿಸುವ, ಇಷ್ಟವಾಗುವ ಧರ್ಮವನ್ನು ಸ್ವೀಕರಿಸುವ ಹಾಗೂ ಅನುಸರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಸಾರ್ವಜನಿಕ ಶಾಂತಿ, ಶಿಸ್ತು, ಆರೋಗ್ಯ ಮತ್ತು ನೈರ್ಮಲ್ಯಕ್ಕೆ ದಕ್ಕೆಯಾಗದಂತೆ ಇತರ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಮತಧರ್ಮವನ್ನು ಆಚರಿಸುವ ಹಕ್ಕು ಎಲ್ಲರಿಗೂ ಇದೆ. ಬಲತ್ಕಾರ, ಮೋಸ ಮತ್ತು ಆಮಿಷಗಳ ಮೂಲಕ ಮತಾಂತರ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದೆ.

  • ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು- ವಿಧಿ 29-30 :

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ರಕ್ಷಿಸುವುದು ಈ ಮೂಲಭೂತ ಹಕ್ಕಿನ ಉದ್ದೇಶವಾಗಿದೆ. ಯಾವುದೇ ಜನರು ತಮ್ಮ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ರಕ್ಷಿಸುವ ಹಕ್ಕನ್ನು ಪಡೆದಿದ್ದಾರೆ. ಅಲ್ಪಸಂಖ್ಯಾತರಿಗೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಆಡಳಿತವನ್ನು ನಡೆಸುವ ಹಕ್ಕು ಇದೆ. ಆದರೆ ಬಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳು ರಾಜ್ಯದ ನಿಯಮಗಳಿಗೆ ಬದ್ದವಾಗಿರಬೇಕು.

  • ಸಂವಿಧಾನಬದ್ದ ಪರಿಹಾರದ ಹಕ್ಕು – ವಿಧಿ 32 :

ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ನಾಗರಿಕನು ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಈ ಹಕ್ಕನ್ನು “ಸಂವಿಧಾನಬದ್ದ ಪರಿಹಾರದ ಹಕ್ಕು” ಎನ್ನುವರು.

ಮೂಲಭೂತ ಕರ್ತವ್ಯಗಳು :

ಮೂಲಭೂತ ಕರ್ತವ್ಯಗಳನ್ನು ರಷ್ಯಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಮೊದಲು 8 ಕರ್ತವ್ಯಗಳನ್ನು ಶಿಫಾರಸ್ಸು ಮಾಡಿತು. ಸರ್ಕಾರ 4 ಕರ್ತವ್ಯಗಳನ್ನು ಸೇರಿಸಿ 1976ರಲ್ಲಿ 42ನೇ ತಿದ್ದುಪಡಿ ಮಾಡುವ ಮೂಲಕ 4ಎ ಹೊಸದಾದ ಭಾಗ ಮಾಡಿಕೊಂಡು 51ಎ ಹೊಸದಾದ ವಿಧಿ ಮಾಡಿಕೊಂಡು ಅದರಲ್ಲಿ 10 ಕರ್ತವ್ಯಗಳನ್ನು ಸೇರಿಸಲಾಯಿತು. 2002 ರಲ್ಲಿ 86ನೇ ತಿದ್ದುಪಡಿ ಮಾಡುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಕರ್ತವ್ಯವನ್ನು ಸೇರಿಸಲಾಯಿತು. ಇದು 11ನೇ ಕರ್ತವ್ಯವಾಗಿದೆ.

  • ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು.
  • ಸ್ವಾತಂತ್ರ್ಯ ಚಳುವಳಿಯ ಉನ್ನತ ಆದರ್ಶಗಳನ್ನು ಪಾಲಿಸುವುದು.
  • ಭಾರತದ ಏಕತೆಯನ್ನು ರಕ್ಷಿಸುವುದು.
  • ಮಾತೃಭೂಮಿಯನ್ನು ರಕ್ಷಿಸುವುದು.
  • ಬಾರತೀಯರಾದ ನಾವೆಲ್ಲಾ ಒಂದು ಎಂಬ ಭಾವನೆಯನ್ನು ಬೆಳೆಸುವುದು.
  • ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವುದು.
  • ಪ್ರಾಕೃತಿಕ ಪರಿಸರವನ್ನು ಸಂರಕ್ಷಿಸಿ, ಅಭಿವೃದ್ದಿ ಪಡಿಸುವುದು.
  • ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವುದು.
  • ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಹಿಂಸೆಯನ್ನು ತ್ಯಜಿಸುವುದು.
  • ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ದೇಶದ ಪ್ರಗತಿಗೆ ಶ್ರಮಿಸುವುದು.
  • ಎಲ್ಲಾ ತಂದೆ ತಾಯಿಯರು ಹಾಗೂ ಪೋಷಕರು 6ರಿಂದ 14 ವಯಸ್ಸಿನ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶಗಳನ್ನು ಒದಗಿಸುವುದು.

FAQ :

ಸಮಾನತೆಯ ಹಕ್ಕು ಎಷ್ಟನೆ ವಿಧಿ?

14 ರಿಂದ 18

ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಎಷ್ಟಿವೆ?

11

ಇತರೆ ವಿಷಯಗಳು :

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.