ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ Information About 10 Districts of Karnataka Karnatakada 10 Jillegala Bagge Mahithi details in Kannada
ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಮೈಸೂರು ಜಿಲ್ಲೆ :
- ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಧಾಮಗಳನ್ನು ಹೊಂದಿದ ಜಿಲ್ಲೆಯಾಗಿದೆ.
- ಭಾರತದ ಮೊದಲ ಆಕಾಶವಾಣಿ ಕೇಂದ್ರವನ್ನು ಡಾ. ಎಂ.ವಿ.ಗೋಪಾಲಸ್ವಾಮಿರವರು 1935 ರಲ್ಲಿಮೈಸೂರಿನಲಕ್ಲಿ ಜನಿಸಿದರು.
- ಇಲ್ಲಿ ಚಾಮುಂಡಿ ಬೆಟ್ಟವಿದೆ.
- ಇಲ್ಲಿ ಲಲಿತ್ ಮಹಲ್ ಎಂಬ ಕಟ್ಟಡವಿದೆ.
- ಇಲ್ಲಿ ಮತದಾನ ಸಮಯದಲ್ಲಿ ಉಪಯೋಗಿಸುವ ಶಾಹಿ ತಯಾರಿಕ ಘಟಕವಿದೆ.
- ಇದನ್ನು ಭಾರತದ ಸ್ವಿಟ್ಜರ್ಲ್ಯಾಂಡ್ ಎಂದು ಕರೆಯುತ್ತಾರೆ.
- ಭಾರತದ ಪ್ರಥಮ ಸ್ಮಾರ್ಟ್ ಕಾರ್ಡ್ ಆಧಾರಿತ ಸಾರ್ವಜನಿಕ ಬೈಸಿಕಲ್ ಹಂಚಿಕೊಳ್ಳುವ ಪ್ರದರ್ಶನ ಟ್ರಿಣ್ ಟ್ರಿಣ್ ಮೈಸೂರು ನಗರದಲ್ಲಿ ಪ್ರಾರಂಭಿಸಲಾಯಿತು.
- ಕರ್ನಾಟಕದ ಪೋಲೀಸ್ ಅಕಾಡೆಮಿ ಇದೆ.
- ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ.
- ಇಲ್ಲಿ ಸೇಂಟ್ ಫಿಲೋಮಿನಾ ಚರ್ಚ್ ಇದೆ.
- 1985 ರಲ್ಲಿ ಪ್ರಥಮ ವಿಶ್ವಕನ್ನಡ ಸಮ್ಮೇಳನ ಕುವೆಂಪು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಂಗಳೂರು ಜಿಲ್ಲೆ :
- ಕೆಂಪೇಗೌಡರು ನಿರ್ಮಿಸಿದರು.
- ವಿಸ್ತೀರ್ಣದಲ್ಲಿ ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ.
- ಇಲ್ಲಿ ವಿಧಾನಸೌಧವಿದೆ. ಇದನ್ನು ಕೆಂಗಲ್ ಹನುಮಂತಯ್ಯ ಕಟ್ಟಿಸಿದ್ದಾರೆ.
- ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.
- ಇದನ್ನು ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ.
- NASDAQ ನ ದಕ್ಷಿಣ ಏಷ್ಯಾದ ಕೇಂದ್ರ ಕಛೇರಿ ಇದೆ.
- ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
- ಇಲ್ಲಿ ಚಿನ್ನಸ್ವಾಮಿಸ್ಟೇಡಿಯಂ ಇದೆ. ಈ ಕ್ರೀಡಾಗಂಣವು ಸಬ್ ಏರ್ ಸೌಲಭ್ಯ ಹೊಂದಿದ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣವಾಗಿದೆ.
- ಇಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಇದೆ. ಇದು ಕರ್ನಾಟಕದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನ.
- ಇಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಜೆಮ್ಷೆಡ್ ಜೀ ಟಾಟಾರವರು 1909 ರಲ್ಲಿ ಸ್ಥಾಪಿಸಿದರು.
- ಇದು ಕರ್ನಾಟಕದಲ್ಲಿ ಅತಿ ಕಡಿಮೆ ಲಿಂಗಾನುಪಾತ ಹೊಂದಿದ ಜಿಲ್ಲೆಯಾಗಿದೆ.
- ಕರ್ನಾಟಕದಲ್ಲಿ ಬ್ರಹ್ಮಸಮಾಜದ ಮೊದಲ ಶಾಖೆ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.
ರಾಮನಗರ ಜಿಲ್ಲೆ :
- ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
- ಭಾರತದ ಏಕಮಾತ್ರ ಹದ್ದುಗಳ ಅಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಾಗಿದೆ.
- ಇಲ್ಲಿ ಬ್ಯಾಲ್ಯಾಳು ಎಂಬ ಪ್ರದೇಶವನ್ನು ಮೇಕೆದಾಟು ಜಲವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತದೆ.
- ಇಲ್ಲಿಯ ಚೆನ್ನಪಟ್ಟಣವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ.
- ಇಲ್ಲಿ ಚೆನ್ನಪಟ್ಟಣದಲ್ಲಿ ಪೊಲೀಸ್ ತರಬೇತಿ ಶಾಲೆ ಇದೆ.
- ಇದನ್ನು ರೇಷ್ಮೆ ಪಟ್ಟಣ ಎಂದು ಕರೆಯಲಾಗಿದೆ.
ಮಂಡ್ಯ ಜಿಲ್ಲೆ :
- ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
- ಮೇಲುಕೋಟೆಯಲ್ಲಿ ಚೆಲುವನಾರಾಯಣ ದೇವಾಲಯ ಇದೆ.
- ಇದನ್ನು ಸಕ್ಕರೆ ಬೋಗುಣಿ ಎಂದು ಕರೆಯುತ್ತಾರೆ.
- ಇಲ್ಲಿ ಶಿವನಸಮುದ್ರ ಜಲವಿದ್ಯುತ್ ಉತ್ಪಾದನ ಕೇಂದ್ರವಿದೆ.
- ಇದು ಆದಿಚುಂಚನಗಿರಿ ನವಿಲುಗಳಿಗೆ ಹೆಸರುವಾಸಿಯಾಗಿದೆ.
- ಬೃಂದಾವನ ಗಾರ್ಡನ್ ಕಾಶ್ಮೀರದಲ್ಲಿರುವ ಶಾಲಿಮಾರ್ ಉದ್ಯಾನವನದ ಪ್ರತಿರೂಪವಾಗಿದೆ.
- ಶ್ರೀರಂಗಪಟ್ಟಣ ಎಂಬ ತಾಲ್ಲೂಕಿನಲ್ಲಿ ಕೆ.ಆರ್.ಎಸ್ ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಇಲ್ಲಿ ರಂಗನತಿಟ್ಟು ಪಕ್ಷಿಧಾಮವಿದೆ.
- ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆಯನ್ನು ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರಾರಂಭಿಸಲಾಯಿತು.
ಕೋಲಾರ ಜಿಲ್ಲೆ :
- ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
- ಬೂದಿಕೋಟೆ ಎಂಬಲ್ಲಿ ಹೈದರಾಲಿ ಜನಿಸಿದನು.
- ಇಲ್ಲಿನ ಮುಳಬಾಗಿಲು ಕರ್ನಾಟಕದಲ್ಲಿ ಮೊದಲು ಸೂರ್ಯ ಉದಯವಾಗುವ ಸ್ಥಳ.
- ಇದರ ಮೊದಲ ಹೆಸರು ಕುವಲಾಲ.
- ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೋಲಾರ ಜಿಲ್ಲೆಯವರು.
- ಜಾನ್ ಟೇಲರ್ ಎಂಬ ಕಂಪನಿಯು K.G.F ನಲ್ಲಿ ಬಂಗಾರದ ಗಣಿಯನ್ನು ಪ್ರಾರಂಭಿಸಿತು.
ಹಾಸನ ಜಿಲ್ಲೆ :
- ಶ್ರವಣಬೆಳಗೊಳವನ್ನು ಜೈನರ ಕಾಶಿ ಎಂದು ಕರೆಯುತ್ತಾರೆ.
- ಶ್ರವಣಬೆಳಗೊಳದಲ್ಲಿ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
- ಕರ್ನಾಟಕದಲ್ಲಿ ಅತಿ ಹೆಚ್ಚು ಕ್ರೋಮಿಯಂ ಅನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
- ಇಲ್ಲಿಯ ಚೆನ್ನಕೇಶವ ದೇವಾಲಯವಿದೆ.
- ಇಲ್ಲಿ ಬಿಸಿಲೆ ಕಾಡುಗಳು ಕಂಡುಬರುತ್ತವೆ.
- ಇಲ್ಲಿಯ ಗೊರೂರು ಜಲಾಶಯವನ್ನು ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ಚಿಕ್ಕ ಬಳ್ಳಾಪುರ ಜಿಲ್ಲೆ :
- ಇಲ್ಲಿಯ ವಿದುರಾಶ್ವತ ಎಂಬ ಸ್ಥಳವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯುತ್ತಾರೆ.
- ವಿದುರಾಶ್ವತ ದುರಂತವು 1938 ಏಪ್ರಿಲ್ 25 ರಂದು ನಡೆಯಿತು.
- ಇಲ್ಲಿನ ಮುದ್ದೇನಹಳ್ಳಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರು 1861 ಸೆಪ್ಟಂಬರ್ 15 ರಂದು ಜನಿಸಿದರು.
- ಇಲ್ಲಿ ಟಿಪ್ಪು ಡ್ರಾಪ್ ಎಂದು ಪ್ರಸಿದ್ದಿಯಾಗಿರುವ ನಂದಿ ಬೆಟ್ಟ ಇದೆ.
- ಗೌರಿಬಿದನೂರಿನಲ್ಲಿ ಭೂಮಾಪನ ಕೇಂದ್ರವಿದೆ.
- ಅಜ್ಜಂಪುರ ಎಂಬ ಊರಿನಲ್ಲಿ ಅಮೃತ್ ಮಹಲ್ ಎಂಬ ಹಸುವಿನ ತಳಿ ಸಂಶೋಧನಾ ಕೇಂದ್ರವಿದೆ.
ತುಮಕೂರು ಜಿಲ್ಲೆ :
- ಮಾರ್ಕೋನಿನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ಕೆಂಪು ಮಣ್ಣನ್ನು ಹೊಂದಿರುವ ಜಿಲ್ಲೆಯಾಗಿದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ರಾಗಿ ಹಾಗೂ ತೆಂಗಿನಕಾಯಿ ಉತ್ಪಾದಿಸುವ ಜಿಲ್ಲೆಯಾಗಿದೆ.
- ಕುಣಿಗಲ್ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.
- ಮಧುಗಿರಿಯಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ನ್ನು ಸ್ಥಾಪಿಸಲಾಗಿದೆ.
- ಪಾವಗಡ ಎಂಬಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ನ್ನು ಸ್ಥಾಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ :
- ಇಲ್ಲಿ ಗರಿಷ್ಟ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರುಬೆಸ್ಟಾ.
- ಇಲ್ಲಿ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ ಇದೆ.
- ಇಲ್ಲಿ ಮುಳ್ಳಯ್ಯನಗಿರಿ ಶಿಖರ ಇದೆ.
- ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಇದೆ.
- ಕುದುರೆಮುಖ ಕಬ್ಬಿಣದ ಅದಿರಿಗೆ ಹೆಸಾರಯವಾಸಿಯಾಗಿದೆ.
- ಶೃಂಗೇರಿಯಲ್ಲಿ ಶಾರದ ಪೀಠ ಇದೆ. ಇದು ತುಂಗಾ ನದಿ ದಂಡೆ ಮೇಲಿದೆ.
- ಇಲ್ಲಿ ಬಾಬಾಬುಡನ್ ಗಿರಿ ಬೆಟ್ಟವಿದೆ. ಇದನ್ನು ಚಂದ್ರ ದ್ರೋಣ ಪರ್ವತ ಎಂದು ಕರೆಯುತ್ತಾರೆ.
ಉಡುಪಿ ಜಿಲ್ಲೆ :
- ಇಲ್ಲಿ ಕನಕನ ಕಿಂಡಿ ಇದೆ.
- ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
- ಇಲ್ಲಿ ಮಣಿಪಾಲ್ ವಿಶ್ವವಿದ್ಯಾಲಯವಿದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ.
- ಇಲ್ಲಿ ಸಿಂಡೀಕೇಟ್ ಬ್ಯಾಂಕನ್ನು 1925 ರಲ್ಲಿ ಸ್ಥಾಪಿಸಲಾಯಿತು.
- ಇಲ್ಲಿ ಸೇಂಟ್ ಮೇರೀಸ್ ದ್ವೀಪವಿದೆ.
FAQ :
ಕರ್ನಾಟಕದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ಜಿಲ್ಲೆ ಯಾವುದು?
ಉಡುಪಿ
ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು?
ಮುಳ್ಳಯ್ಯನಗಿರಿ ಶಿಖರ
ಇತರೆ ವಿಷಯಗಳು :