ಗುರುತ್ವಾಕರ್ಷಣ ಬಲದ ಬಗ್ಗೆ ಮಾಹಿತಿ Information about the force of gravity Gurutvakarshana Balada bagge Mahithi in Kannada
ಗುರುತ್ವಾಕರ್ಷಣ ಬಲದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಗುರುತ್ವಾಕರ್ಷಣ ಬಲದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಗುರುತ್ವ :
- ಯಾವುದೇ ವಸ್ತುವನ್ನು ಮೇಲಕ್ಕೆ ಎಸೆದಾಗ ಕೆಳಗೆ ಬರುತ್ತದೆ. ಇದಕ್ಕೆ ಕಾರಣ ಭೂಮಿಯ ಗುರುತ್ವ ಬಲ.
- ಗುರುತ್ವ ವೇಗೋತ್ಕರ್ಷ – ಗುರುತ್ವ ಬಲದಿಂದ ಕಾಯಗಳು ಗಳಿಸಿಕೊಳ್ಳುವ ವೇಗೋತ್ಕರ್ಷವನ್ನು ಗುರುತ್ವ ವೇಗೋತ್ಕರ್ಷ ಎನ್ನುವರು.
- ಒಂದು ಕಾಯವು ಭೂ ಕೇಂದ್ರದಿಂದ ಮೇಲಕ್ಕೆ ಚಲಿಸುತ್ತಿದ್ದರೆ ಆಗ g= -9.8m/sec2 ಬೆಲೆಯನ್ನು ತೆಗೆದುಕೊಳ್ಳಬೇಕು.
- ಒಂದು ಕಾಯವು ಮೇಲಿನಿಂದ ಭೂಮಿಯ ಕೇಂದ್ರದ ಕಡೆಗೆ ಆಗಮಿಸುತ್ತಿದ್ದ ಆಗ g=9.8m/sec2 ಬೆಲೆಯನ್ನು ತೆಗೆದುಕೊಳ್ಳಬೇಕು.
- ಭೂಮಿಯ ಗುರುತ್ವ ವೇಗೋತ್ಕರ್ಷವು 9.8m/sec ಆಗಿದೆ.
- ಭೂಮಿಯ ಗುರುತ್ವ ವೇಗೋತ್ಕರ್ಷ ಯಾವುದೇ ವಸ್ತುವಿನ ರಾಶಿಯನ್ನು ಅವಲಂಬಿಸಿಲ್ಲ ಎಂದು ಹೇಳಿದ ವಿಜ್ಞಾನಿ ಗೆಲಿಲಿಯೋ ಗೆಲಲಿ.
- ಭೂಮಿಯ ಗುರುತ್ವ ಬಲವು ಭೂಮಿಯ ದ್ರವ್ಯರಾಶಿ ಮತ್ತು ಭೂ ಕೇಂದ್ರದಿಂದ ವಸ್ತುವಿಗೆ ಇರುವ ದೂರವನ್ನು ಅವಲಂಬಿಸಿದೆ.
- ಒಂದು ವಸ್ತುವಿನ ತೂಕವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಆದರೆ ವಸ್ತುವಿನ ರಾಶಿಯು ಎಲ್ಲ ಸ್ಥಳದಲ್ಲಿಯೂ ಸಮನಾಗಿರುತ್ತದೆ.
ವಿಶ್ವವ್ಯಾಪಿ ಗುರುತ್ವ ನಿಯಮ :
- ವಿಶ್ವವ್ಯಾಪಿ ಗುರುತ್ವ ನಿಯಮವನ್ನು ಪ್ರತಿಪಾದಿಸಿದವರು – ಸರ್ ಐಸಾಕ್ ನ್ಯೂಟನ್
- ವಿಶ್ವವ್ಯಾಪಿ ಗುರುತ್ವ ನಿಯಮವೆಂದರೆ ವಿಶ್ವದಲ್ಲಿನ ಪ್ರತಿಯೊಂದು ಕಣವು ಇತರೆ ಕಣವನ್ನು ಆಕರ್ಷಿಸುತ್ತದೆ. ಈ ಆಕರ್ಷಣಾ ಬಲ ಕಣಗಳ ರಾಶಿಯ ಗುಣಲಬ್ದಕ್ಕೆ ನೇರ ಅನುಪಾತದಲ್ಲಿಯೂ ಮತ್ತು ಅವುಗಳ ನಡುವಣ ದೂರದ ವರ್ಗಕ್ಕೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.
- ವಿಶ್ವವ್ಯಾಪಿ ಗುರುತ್ವ ಬಲವು ಯಾವುದೇ ವಸ್ತುವಿನ ಸ್ಥಿತಿಯನ್ನಾಗಲಿ ಯಾವುದೇ ಮಾಧ್ಯಮವನ್ನಾಗಲಿ ಅವಲಂಬಿಸಿಲ್ಲ. ಬೃಹತ್ ರಾಶಿಯ ಕಾಯಗಳಿಗೂ ಮತ್ತು ಚಿಕ್ಕ ಗಾತ್ರದ ಕಾಯಗಳ ಮೇಲೆ ವರ್ತಿಸುವ ಬಲ ಒಂದೆ ಆಗಿರುತ್ತದೆ.
ತೂಕ :
ಭೂಮಿಯ ಮೇಲೆ ನಾವು ನಿಂತಿರುವಾಗ ಒಂದು ಬಲವನ್ನು ಪ್ರಯೋಗಿಸಲಾಗಿ ಭೂಮಿಯು ಸಹ ಅದಕ್ಕೆ ಸಮ ಮತ್ತು ವಿರುದ್ದವಾದ ಬಲದಿಂದ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆಯನ್ನು ತೂಕ ಎಂದು ಕರೆಯುವರು.
ತೂಕ ರಹಿತ ಸ್ಥಿತಿ :
- ಭೂಮಿಯನ್ನು ಸುತ್ತುತ್ತಿರುವ ವ್ಯೂಮ ನೌಕೆಯ ಮೇಲೆ ವರ್ತಿಸುವ ಗುರುತ್ವ ಬಲವು ಕೇಂದ್ರಾಭಿಮುಖ ಬಲವಾಗಿರುವುದರಿಂದ ನೌಕೆಯಲ್ಲಿರುವ ವ್ಯಕ್ತಿಗೆ ಪ್ರತಿಕ್ರಿಯಾ ಬಲ ಇರುವುದಿಲ್ಲ. ಅರ್ಥಾತ್ ಸೊನ್ನೆ ಪ್ರತಿಕ್ರಿಯಾ ಬಲವನ್ನು ಅನುಭವಿಸುತ್ತಾನೆ ಈ ಪ್ರತಿಕ್ರಿಯೆಯನ್ನು ತೂಕ ರಹಿತ ಸ್ಥಿತಿ ಎಂದು ಕರೆಯುವರು.
- ದೈತ್ಯ ಚಕ್ರದಲ್ಲಿ ಸುತ್ತುತ್ತಿರುವ ವ್ಯಕ್ತಿಯು ಈ ಸ್ಥಿತಿಯನ್ನು ಅನುಭವಿಸುತ್ತಾರೆ.
- ಲಿಪ್ಟನಿಂದ ಕೆಳಗೆ ಇಳಿಯುತ್ತಿರುವ ವ್ಯಕ್ತಿಯು ಈ ಸ್ಥಿತಿಯನ್ನು ಅನುಭವಿಸುತ್ತಾನೆ.
- ಭೂಮಿಯನ್ನು ಸುತ್ತುತ್ತಿರುವ ವ್ಯೂಮ ನೌಕೆಯಲ್ಲಿ ಕುಳಿತಿರುವ ಗಗನ ಯಾತ್ರಿಕ ಈ ಸ್ಥಿತಿಯನ್ನು ಅನುಭವಿಸುತ್ತಾನೆ.
ಸೂರ್ಯನ ಸುತ್ತ ಗ್ರಹಗಳ ಚಲನೆ :
- ಸೂರ್ಯನ ಸುತ್ತ ಗ್ರಹಗಳ ಚಲನೆಯ ನಿಯಮಗಳನ್ನು ಪ್ರತಿಪಾದಿಸಿದ ವಿಜ್ಞಾನಿ ಜೋಹಾನ್ಸ್ ಕೆಪ್ಲರ್, ಹಾಗಾಗಿ ಈ ನಿಯಮಗಳಿಗೆ ಕೆಪ್ಲರ್ ಚಲನೆಯ ನಿಯಮಗಳು ಎಂದು ಕರೆಯುವರು.
- ಈ ಚಲನೆಯ ನಿಯಮಗಳು ಟೈಕೋಬ್ರಾಹೆ ಎಂಬ ಖಗೋಳ ವಿಜ್ಞಾನಿಯು ಅಸ್ಪಷ್ಟವಾಗಿ ಪ್ರತಿಪಾದಿಸಿದ ನಿಯಮಗಳ ಮೇಲೆ ಅಥವಾ ವೀಕ್ಷಣಾ ವರದಿಯ ಮೇಲೆ ಆಧಾರಿತವಾಗಿವೆ.
ಕೆಪ್ಲರನ ಒಂದನೇ ನಿಯಮ : ಸೂರ್ಯನು ಕೇಂದ್ರದಲ್ಲಿದ್ದು ಸೂರ್ಯನ ಸುತ್ತಲೂ ಎಲಿಪ್ಸಿಯ ಕಕ್ಷೆಗಳಲ್ಲಿ ಗ್ರಹಗಳು ಸೂರ್ಯನನ್ನು ಸುತ್ತುತ್ತವೆ.
ಕೆಪ್ಲರನ ಎರಡನೇ ನಿಯಮ : ಸೂರ್ಯನಿಂದ ಗ್ರಹಕ್ಕೆ ಎಳೆದಿರುವ ಕಲ್ಪನಾ ರೇಖೆಯು ಸಮಾನ ಕಾಲಾವಧಿಯಲ್ಲಿ ಸಮಾನ ದೂರವನ್ನು ಕ್ರಮಿಸುವಂತೆ ಗ್ರಹಗಳು ಸೂರ್ಯವನ್ನು ಸುತ್ತುತ್ತವೆ.
ಕೆಪ್ಲರನ ಮೂರನೇ ನಿಯಮ : ಸೂರ್ಯನಿಂದ ಗ್ರಹಕ್ಕೆ ಎಳೆದಿರುವ ದೂರದ ಘನವು ಆ ಗ್ರಹದ ಪರಿಭ್ರಮಣಾ ಅವಧಿಯ ವರ್ಗಕ್ಕೆ ಅನುಪಾತೀಯವಾಗಿರುತ್ತದೆ.
ಗುರುತ್ವ ಬಲದಿಂದ ವಿವರಿಸಲ್ಪಟ್ಟ ಅಂಶಗಳು :
- ಭೂಮಿ, ನಮ್ಮನ್ನು ಬಂದಿಸಿರುವ ಬಲ ಗುರುತ್ವ ಬಲ
- ಭೂಮಿಯ ಸುತ್ತ ಚಂದ್ರನ ಚಲನೆ
- ಕೆಪ್ಲರನ ಚಲನೆಯ 3ನೇ ನಿಯಮವನ್ನು ಉಪಯೋಗಿಸಿಕೊಂಡು ಸೂರ್ಯನಿಂದ ಗ್ರಹಕ್ಕೆ ಇರುವ ದೂರ ಮತ್ತು ಒಂದು ಗ್ರಹದ ಪರಿಭ್ರಮಣ ಅವಧಿಯನ್ನು ಕಂಡು ಹಿಡಿಯಬಹುದು.
FAQ :
ಕೆಪ್ಲರನ ಒಂದನೇ ನಿಯಮ ತಿಳಿಸಿ?
ಸೂರ್ಯನು ಕೇಂದ್ರದಲ್ಲಿದ್ದು ಸೂರ್ಯನ ಸುತ್ತಲೂ ಎಲಿಪ್ಸಿಯ ಕಕ್ಷೆಗಳಲ್ಲಿ ಗ್ರಹಗಳು ಸೂರ್ಯನನ್ನು ಸುತ್ತುತ್ತವೆ
ಕೆಪ್ಲರನ ಎರಡನೇ ನಿಯಮ ತಿಳಿಸಿ?
ಸೂರ್ಯನಿಂದ ಗ್ರಹಕ್ಕೆ ಎಳೆದಿರುವ ಕಲ್ಪನಾ ರೇಖೆಯು ಸಮಾನ ಕಾಲಾವಧಿಯಲ್ಲಿ ಸಮಾನ ದೂರವನ್ನು ಕ್ರಮಿಸುವಂತೆ ಗ್ರಹಗಳು ಸೂರ್ಯವನ್ನು ಸುತ್ತುತ್ತವೆ
ಇತರೆ ವಿಷಯಗಳು :