ಭಾರತದಲ್ಲಿ ನಿರುದ್ಯೋಗ ಪ್ರಬಂಧ | Unemployment in India Essay in Kannada

Join Telegram Group Join Now
WhatsApp Group Join Now

ಭಾರತದಲ್ಲಿ ನಿರುದ್ಯೋಗ ಪ್ರಬಂಧ Unemployment in India Essay Bharathadalli Nirudhyoga Prabandha in Kannada

ಭಾರತದಲ್ಲಿ ನಿರುದ್ಯೋಗ ಪ್ರಬಂಧ

Unemployment in India Essay in Kannada
ಭಾರತದಲ್ಲಿ ನಿರುದ್ಯೋಗ ಪ್ರಬಂಧ

ಈ ಲೇಖನಿಯಲ್ಲಿ ಭಾರತದಲ್ಲಿ ನಿರುದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಪ್ರಸ್ತುತ ಕೂಲಿ ದರದಲ್ಲಿ ಕೆಲಸ ಮಾಡಲು ಇಚ್ಛಿಸುವ ಒಬ್ಬ ವ್ಯಕ್ತಿಗೆ ಕೆಲಸ ದೊರಕದೇ ಇರುವ ಸ್ಥಿತಿಯನ್ನು ನಿರುದ್ಯೋಗ ಎಂದು ಕರೆಯುತ್ತೇವೆ. ಭಾರತದಲ್ಲಿ ಕೆಲಸವಿಲ್ಲದ ಮತ್ತು ನಿರುದ್ಯೋಗಿಗಳ ಸಂಖ್ಯೆ ಅಧಿಕವಿದೆ ಅಲ್ಲದೇ ಹೆಚ್ಚಾಗುತ್ತಲೇ ಇದೆ. ನಿರುದ್ಯೋಗ ದರವನ್ನು ಕೆಲಸ ದೊರಕದೇ ಇರುವ ಕಾರ್ಮಿಕರ ಪ್ರತಿಶತ ಪ್ರಮಾಣದವೆಂದು ಲೆಕ್ಕ ಹಾಕಲಾಗುತ್ತದೆ. ಭಾರತದ ಪ್ರಮುಖ ಸಮಸ್ಯೆಗಳಲ್ಲಿ ನಿರುದ್ಯೋಗ ಸಮಸ್ಯೆಯು ಒಂದಾಗಿದೆ.

ವಿಷಯ ವಿವರಣೆ :

ಭಾರತದಂಥ ಬೃಹತ್‌ ರಾಷ್ಟ್ರದಲ್ಲಿ ಒಟ್ಟು ನಿರುದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಹಾಕುವುದು ಅಷ್ಟು ಸರಳವಲ್ಲ. ಭಾರತ ಸರ್ಕಾರದ ಕಾರ್ಮಿಕ ಬ್ಯೂರೋ ಮಾಡಿದ ಸರ್ವೇಕ್ಷಣೆಯ ಪ್ರಕಾರ 1951 ರಲ್ಲಿ 5 ದಶಲಕ್ಷಗಳಷ್ಟಿದ್ದ ನಿರುದ್ಯೋಗಿಗಳ ಸಂಖ್ಯೆಯು 2010ರ ವೇಳೆಗೆ 40.47 ದಶಲಕ್ಷಕ್ಕೆ ಏರಿಕೆಯಾಗಿದೆ. ಸಧ್ಯ ಭಾರತದಲ್ಲಿಯ ನಿರುದ್ಯೋಗದ ಪ್ರಮಾಣವು ಒಟ್ಟು ಶ್ರಮಶಕ್ತಿಯ ಶೇ 9.4ರಷ್ಟಿದೆ. ಪುರುಷರಲ್ಲಿ ಅದು ಶೇ 8ರಷ್ಟಿದ್ದರೆ, ಮಹಿಳೆಯರಲ್ಲಿ ಅದು ಶೇ 14.6ರಷ್ಟಿದೆ. ಅಂತಯೇ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರವು ಶೇ 10.1ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ 7.3 ರಷ್ಟಿದೆ.

ಭಾರತದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣಗಳು :

  • ಉದ್ಯೋಗ ರಹಿತ ಆರ್ಥಿಕ ಬೆಳವಣಿಗೆ :

ಭಾರತದ ಇತ್ತೀಚಿನ ಆರ್ಥಿಕ ಬೆಳವಣಿಗೆಯನ್ನು ಉದ್ಯೋಗರಹಿತವೆಂದು ವರ್ಣಿಸಲಾಗುತ್ತದೆ. 1990ರಿಂದೀಚಿಗೆ ಜರುಗಿದ ಉದ್ಯಮ ರಂಗದ ಮತ್ತು ಸೇವಾ ವಲಯದ ಬೆಳವಣಿಗೆಯು ಬಂಡವಾಳ ಸಾಂಧ್ರ ತಂತ್ರಜ್ಞಾನ ಬಳಸಿ ಸಾಧಿಸಿದ ಬೆಳವಣಿಗೆಯಾದ್ದರಿಂದ ಕಡಿಮೆ ಪ್ರಮಾಣದ ಉದ್ಯೋಗ ನಿರ್ಮಾಣವಾಗಿದೆ. ಹಾಗೆಯೇ, ಪ್ರಾಥಮಿಕ ವಲಯದ ಅತ್ಯಂತ ನಿಧಾನ ಗತಿಯ ಬೆಳವಣಿಗೆಯು ಗ್ರಾಮೀಣ ಪ್ರದೇಶಗಳನ್ನು ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ. ಹೀಗಾಗಿ ಒಟ್ಟಾರೆ ಬೆಳವಣಿಗೆಯು ಉದ್ಯೋಗರಹಿತವಾಗಿದೆ.

  • ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ :

ಏರುತ್ತಿರುವ ಜನಸಂಖ್ಯೆಯು ಕಾರ್ಮಿಕರ ಸಂಖ್ಯೆಯನ್ನು ದಿನೇ ದಿನೇ ಅಧಿಕಗೊಳಿಸುತ್ತಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅರೆ ಉದ್ಯೋಗದ ಪರಿಸ್ಥಿತಿ ಇದ್ದರೆ, ನಗರ ಪ್ರದೇಶಗಳಲ್ಲಿ ಅದು ಮುಕ್ತ ರೂಪದಲ್ಲಿ ಗೋಚರಿಸುತ್ತಿದೆ.

Join WhatsApp Join Telegram
  • ಅಸಮಂಜಸ ತಂತ್ರಜ್ಞಾನ :

ಈಗಾಗಲೇ ತಿಳಿಸಿದ ಹಾಗೇ, ಕೃಷಿ ಹಾಗೂ ಉದ್ದಿಮೆಗಳಲ್ಲಿ ಬಳಸುತ್ತಿರುವ ತಂತ್ರಜ್ಞಾನವು ಬಂಡವಾಳ ಸಾಂಧ್ರವಾಗಿದ್ದು ಬಾರತದ ಪರಿಸ್ಥಿತಿಗೆ ಅಸಮಂಜಸ ಎಂದು ಹೇಳಬಹುದು.

  • ಕೃಷಿಯ ಮೇಲಿನ ಅವಲಂಬನೆ :

ಕೃಷಿಯು ಋತುಮಾನ ಆಧಾರಿತ ಚಟುವಟಿಕೆಯಾಗಿದ್ದು ಅದರಲ್ಲಿ ತೊಡಗಿಕೊಂಡವರಿಗೆ ವರ್ಷದ ಕೆಲವು ತಿಂಗಳುಗಳಿಗೆ ಮಾತ್ರ ಉದ್ಯೋಗ ಲಭ್ಯತೆ ಇರುತ್ತದೆ. ಆದ್ದರಿಂದ ಕೃಷಿಯ ಮೇಲಿನ ಅವಲಂಬನೆಯು ಅಧಿಕವಾಗಿದ್ದರಿಂದ ಭಾರತದಲ್ಲಿ ನಿರುದ್ಯೋಗವು ಅಧಿಕವಿದೆ.

  • ಸಣ್ಣ ಮತ್ತು ಕೈಗಾರಿಕೆಗಳ ಅವನತಿ :

ಭಾರತದಲ್ಲಿ ಸಾಕಷ್ಟು ಉದ್ಯೋಗ ಒದಗಿಸುತ್ತಿದ್ದ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅವನತಿಯಿಂದಾಗಿಯೂ ನಿರುದ್ಯೋಗ ಅಧಿಕವಾಗಿದೆ.

  • ಕಾರ್ಮಿಕರ ಕಡಿಮೆ ಚಲನಶೀಲತೆ :

ಕಾರ್ಮಿಕರ ಕೌಟುಂಬಿಕ ನಿಷ್ಠೆ, ಭಾಷೆ, ಧರ್ಮ, ಸಂಸ್ಕೃತಿಯಲ್ಲಿನ ಭಿನ್ನತೆಗಳು ಕಾರ್ಮಿಕರು ದೂರದ ಊರುಗಳಿಗೆ ವಲಸೆ ಹೋಗುವುದನ್ನು ನಿರ್ಬಂಧಿಸುತ್ತವೆ. ಈ ಕಾರಣದಿಂದಾಗಿಯೂ ಸಹ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಅಧಿಕವಿದೆ

ಭಾರತದಲ್ಲಿ ಉದ್ಯೋಗ ನಿರ್ಮಾಣದ ಕಾರ್ಯಕ್ರಮಗಳು :

ದೇಶದಲ್ಲಿ ಅನುಷ್ಠಾನಗೊಳಿಸಿದ ಪ್ರತಿಯೊಂದು ಪಂಚವಾರ್ಷಿಕ ಯೋಜನೆಯು ನಿರುದ್ಯೋಗವನ್ನು ಕಡಿಮೆ ಮಾಡುವ ನಿರ್ದಿಷ್ಟ ಗುರಿಯನ್ನು ಹೊಂದಿದ್ದವು. ಅಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಉದ್ಯೋಗ ಸೃಷ್ಟಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಅವು ಜನರಿಗೆ ಸ್ವಂತ ಉದ್ದಿಮೆ ಪ್ರಾರಂಭಿಸಿ ಸ್ವ ಉದ್ಯೋಗ ಹೊಂದಲು ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಕೂಲಿಯಾಧಾರಿತ ಉದ್ಯೋಗ ದೊರಕಿಸುವ ಮಹದಾಸೆ ಹೊಂದಿದ್ದವು.

ಗ್ರಾಮೀಣ ಪ್ರದೇಶ :

  • 1977 : ಕೂಲಿಗಾಗಿ ಕಾಳು ಯೋಜನೆ
  • 1979 : ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗಕ್ಕಾಗಿ ತರಬೇತಿ ಯೋಜನೆ
  • 1980 : ಸಮಗ್ರ ಗ್ರಾಮೀಣ ಅಭಿವೃದ್ದಿ ಯೋಜನೆ
  • 1983 : ಗ್ರಾಮೀಣ ಭೂರಹಿತರಿಗೆ ಉದ್ಯೋಗ ಖಾತ್ರಿ ಯೋಜನೆ
  • 1989 : ಜವಹಾರ ರೋಜಗಾರ್‌ ಯೋಜನೆ
  • 1993 : ಉದ್ಯೋಗ ಭರವಸೆ ಯೋಜನೆ
  • 1999 : ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ ಯೋಜನೆ
  • 2004 : ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆ
  • 2006 : ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಳಾತ್ರಿ ಯೋಜನೆ

ನಗರ ಪ್ರದೇಶ :

  • 1989 : ನೆಹರು ರೋಜಗಾರ್‌ ಯೋಜನೆ
  • 1990 : ನಗರ ಕೂಲಿ ಉದ್ಯೋಗ ಯೋಜನೆ
  • 1993 : ಪ್ರಧಾನ ಮಂತ್ರಿ ರೋಜಗಾರ್‌ ಯೋಜನೆ
  • 1997 : ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ :

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಆಗಸ್ಟ್‌ 25, 2005ರಂದು ಕಾಯ್ದೆಯಾಗಿ ಪಾಸು ಮಾಡಿದ್ದರೂ ಅದು ಜಾರಿಯಾಗಿದ್ದು ಮಾತ್ರ ಫೆಬ್ರವರಿ 2, 2006 ರಂದು. ಈ ಕಾಯ್ದೆಯು ಗ್ರಾಮೀಣ ಪ್ರದೇಶದ ಯಾವುದೇ ಕುಟುಂಬದ ಒಬ್ಬ ವಯಸ್ಕ ಕಾರ್ಮಿಕನಿಗೆ ಪ್ರತಿವರ್ಷ ಒಂದು ನೂರು ದಿನಗಳ ಕೌಶಲ್ಯರಹಿತ ಉದ್ಯೋಗ ಖಾತ್ರಿಯನ್ನು ಕನಿಷ್ಟ ಕೂಲಿದರದಲ್ಲಿ ನೀಡುವ ಸಾಂವಿಧಾನಿಕ ಖಾತ್ರಿ ಒದಗಿಸುತ್ತದೆ. ಒಂದು ವೇಳೆ ಉದ್ಯೋಗ ನೀಡುವಲ್ಲಿ ಸರ್ಕಾರ ವಿಫಲವಾದರೆ, ಆ ವ್ಯಕ್ತಿಗೆ ನಿರುದ್ಯೋಗ ಭತ್ಯೆ ನೀಡುವ ನಿಯಮವನ್ನು ಈ ಯೋಜನೆ ಒಳಗೊಂಡಿದೆ. ನರೇಗ ಯೋಜನೆಯು ನೂರು ಪ್ರತಿಶತ ನಗರ ಜನಸಂಖ್ಯೆ ಇರುವ ಜಿಲ್ಲೆಗಳನ್ನು ಹೊರತು ಪಡಿಸಿ ಭಾರತದ ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಉಪಸಂಹಾರ :

ಇಂದಿನ ಕಾಲದಲ್ಲಿ ನಿರುದ್ಯೋಗ ಸಮಸ್ಯೆಯು ಒಂದು ಸಾಮಾಜಿಕ ಪಿಡುಗಿನಂತಾಗಿದೆ. ಜನತೆಯ ಜ್ಞಾನದ ಮಟ್ಟ ವಿದ್ಯಾರ್ಹತೆ, ಅನುಭವಕ್ಕೆ ತಕ್ಕ ಉದ್ಯೋಗಗಳನ್ನುಮ ಒದಗಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟಾಗ ಜನತೆ ಸಂತೋಷದಿಂದ ಪ್ರಾಮಾಣಿಕರಾಗಿ ತಮ್ಮ ಉದ್ಯೋಗದಲ್ಲಿ ಪ್ರಗತಿ ಸಾಧಿಸುತ್ತಾರೆ. ಆಗ ರಾಷ್ಟ್ರವೂ ತಾನೇ ತಾನಾಗಿ ಈ ಸಮಸ್ಯೆಗಳಿಂದ ಬಿಡುಗಡೆ ಹೊಂದಿ ಪ್ರಗತಿ ಹೊಂದುತ್ತದೆ.

FAQ :

ಭಾರತದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣಗಳನ್ನು ತಿಳಿಸಿ?

ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ, ಕಾರ್ಮಿಕರ ಕಡಿಮೆ ಚಲನಶೀಲತೆ, ಸಣ್ಣ ಮತ್ತು ಕೈಗಾರಿಕೆಗಳ ಅವನತಿ, ಕೃಷಿಯ ಮೇಲಿನ ಅವಲಂಬನೆ.

ಭಾರತದಲ್ಲಿ ಉದ್ಯೋಗ ನಿರ್ಮಾಣದ ಕಾರ್ಯಕ್ರಮಗಳನ್ನು ತಿಳಿಸಿ?

1977 : ಕೂಲಿಗಾಗಿ ಕಾಳು ಯೋಜನೆ
1979 : ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗಕ್ಕಾಗಿ ತರಬೇತಿ ಯೋಜನೆ
1980 : ಸಮಗ್ರ ಗ್ರಾಮೀಣ ಅಭಿವೃದ್ದಿ ಯೋಜನ
1989 : ನೆಹರು ರೋಜಗಾರ್‌ ಯೋಜನೆ
1990 : ನಗರ ಕೂಲಿ ಉದ್ಯೋಗ ಯೋಜನೆ

ಇತರೆ ವಿಷಯಗಳು :

ಭಾರತದಲ್ಲಿ ಮೀಸಲಾತಿ ಪದ್ದತಿ ಪ್ರಬಂಧ

ಏಕರೂಪ ನಾಗರಿಕ ಸಂಹಿತೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.