ಆತ್ಮ ನಿರ್ಭರ ಭಾರತ ಪ್ರಬಂಧ Atma Nirbhar Bharat Essay Athma Nirbhara Bharathada bagge Prabandha in Kannada
ಆತ್ಮ ನಿರ್ಭರ ಭಾರತ ಪ್ರಬಂಧ
ಈ ಲೇಖನಿಯಲ್ಲಿ ಆತ್ಮ ನಿರ್ಭರ ಭಾರತ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪೀಠಿಕೆ :
ಭಾರತದ ಆರ್ಥಿಕತೆಯ ಪ್ರಸ್ತುತ ಪ್ರಕ್ಷುಬ್ದ ಸ್ಥಿತಿಯಲ್ಲಿದ್ದು, ದೀರ್ಘಕಾಲದ ಮಂದಗತಿಯ ಬಗ್ಗೆ ಸುಳಿವು ನೀಡುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕವು ಕಳೆದ ವರ್ಷದಿಂದಲೂ ಭಾರತದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ದುರ್ಬಲಗೊಳಿಸಿದೆ ಮತ್ತು ಈ ವರ್ಷವೇ ಅದನ್ನು ಚೇತರಿಸಲು ಅಸಂಭವವಾಗಿದೆ. ಬೆಳವಣಿಗೆಯ ಕುಸಿತದಿಂದಾಗಿ ಹಣದುಬ್ಬರ ಹೆಚ್ಚಾಗಿದ್ದು, ನಿರುದ್ಯೋಗ ಸಮಸ್ಯೆ ತೀರಾ ಉಲ್ಬಣವಾಗಿದೆ. ಭಾರತದ GDP ಯು ಇಡೀ ವರ್ಷ ಋಣಾತ್ಮಕವಾಗಿ ಉಳಿಯುವ ನಿರೀಕ್ಷೆಯಿದೆ.
ವಿಷಯ ವಿವರಣೆ :
“ಆತ್ಮ ನಿರ್ಭರ ಭಾರತಕ್ಕೆ ಕರೆ” :
- ಜಾಗತಿಕ ಮಾರುಕಟ್ಟೆಯಲ್ಲಿ ಬಾರತದ ಉತ್ಪನ್ನಗಳು ಪಾಲನ್ನು ಪಡೆಯಲು ಮತ್ತು ಗುಣಮಟ್ಟದ ಸರಕುಗಳನ್ನು ವಿದೇಶಿ ಬ್ರಾಂಡ್ ಗಳಿಗೆ ಪರ್ಯಾಯವಾಗಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ “ಆತ್ಮ ನಿರ್ಭರ ಭಾರತಕ್ಕೆ” ಕರೆ ನೀಡಿದ್ದಾರೆ.
- ಇದು ದೇಶವನ್ನು ಸ್ವಾವಲಂಬನೆಯಾಗಿಸುತ್ತದೆ ಮತ್ತು ಯಾವುದೇ ರೀತಿಯ ಜಾಗತಿಕ ಮಾರುಕಟ್ಟೆಯಿಂದ ಹಿಂದೆ ಸರಿಯುವ ತಂತ್ರವನ್ನು ಇದು ಒಳಗೊಂಡಿಲ್ಲ.
- ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮತ್ತು RBI ತೆಗೆದುಕೊಂಡ ನಿರ್ಧಾರಗಳೊಂದಿಗೆ ಒಟ್ಟು 20 ಲಕ್ಷ ಕೋಟಿ ರೂಗಳ ಪ್ಯಾಕೇಜನ್ನು ಇದರಡಿ ಘೋಷಿಸಲಾಗಿದ್ದು, ಇದು ಭಾರತದ GDP ಯ ಸುಮಾರು 10% ಸಮಾನವಾಗಿದೆ.
- ಆತ್ಮನಿರ್ಭರ ಭಾರತ ಪ್ಯಾಕೇಜಿನಿಂದ ಭೂಮಿ, ಕಾರ್ಮಿಕರು, ಕಾನೂನುಗಳು ಹತ್ತಿ ಬಟ್ಟೆ ಕೈಗಾರಿಕೆ, MSME ಗಳು ಹಾಗೂ ಕೈಗಾರಿಕೆಗಳ ವಿವಿಧ ವಿಭಾಗಗಳಿಗೆ ಚೇತರಿಕೆ ನೀಡಲಾಗುತ್ತದೆ.
ಆತ್ಮನಿರ್ಭರ ಭಾರತದ 5 ಸ್ತಂಭಗಳು :
- ಆರ್ಥಿಕತೆ : ಇದು ಭಾರತದ ಆರ್ಥಿಕತೆಗೆ ತಕ್ಷಣದ ಮತ್ತು ದೀರ್ಘಕಾಲೀನ ಉತ್ತೇಜನಗಳನ್ನು ನೀಡಲಿದೆ.
- ಮೂಲಸೌಕರ್ಯ : ಇದು ಭಾರತದಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಿದೆ.
- ವ್ಯವಸ್ಥೆ : 21 ನೇ ಶತಮಾನದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಬರಲಿವೆ.
- ಜನಸಂಖ್ಯಾ ಲಾಭ : ಭಾರತದ ಯುವಶಕ್ತಿಯನ್ನು ಬಳಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ.
- ಬೇಡಿಕೆ : ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಪೂರೈಕೆ ಸರಪಳಿಯನ್ನು ಉತ್ತಮಪಡಿಸಬಹುದು.
ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವ :
- ಬಿಕ್ಕಟ್ಟ ನ್ನು ಅವಕಾಶವಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಸಾಂಕ್ರಾಮಿಕ ಬಿಕ್ಕಟ್ಟು, ಭಾರತದ PPE ಕಿಟ್ಗಳು ಮತ್ತ N-95 ಮುಖಗವಸುಗಳ ಉತ್ಪಾದನೆಯನ್ನು ಪ್ರತಿದಿನ 2 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವಂತೆ ಮಾಡಿದೆ.
- “ಸ್ವಾವಲಂಬಿ” ಯಾಗುವುದೇ ಭಾರತದ ನಿಜವಾದ ಗುರಿ ಎಂದು ಪ್ರಧಾನಿ ಮೋದಿ ವೇದ ಶಾಸ್ತ್ರಗಳಲ್ಲಿನ “ಈಶಃಪಂಥಃ” ಎಂಬ ಉಕ್ತಿಯನ್ನು ಉದ್ಘೋಷಿಸಿದರು. ಇದು ಆರ್ಥಿಕ ಕೇಂದ್ರಿತ ಜಾಗತೀಕರಣ ಬದಲು, ಮಾನವ ಕೇಂದ್ರಿತ ಜಾಗತೀಕರಣ ಸ್ಥಾಪಿಸುತ್ತವೆ.
- ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುವ ಅಗತ್ಯವಿದೆ ಎಂದ ಪ್ರಧಾನಿ ಒತ್ತಿ ಹೇಳಿದರು. ಇದಕ್ಕಾಗಿ ಜನರಿಗೆ ಸ್ಥಳೀಯ ಉತ್ಪನ್ನ ಖರೀದಿಸಲು ಒತ್ತಾಯಿಸಿದ್ದಾರೆ.
ಉಪಸಂಹಾರ :
“ಆತ್ಮನಿರ್ಭರ ಭಾರತ” ಅಭಿಯಾನ ಕಾರ್ಯತಂತ್ರವು ಬಂಡವಾಳದ ಹರಿವನ್ನು ಹೆಚ್ಚಿಸಿ, ಕೃಷಿ ಮತ್ತ ವ್ಯಾಪಾರ ಕ್ಷೇತ್ರಗಳನ್ನು ಬಲಪಡಿಸುವ ಅವಕಾಶವನ್ನು ಒದಗಿಸುತ್ತದೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಯಾಗಬೇಕಿದೆ ಆಗ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ.
FAQ :
ಆತ್ಮನಿರ್ಭರ ಭಾರತದ 5 ಸ್ತಂಭಗಳನ್ನು ತಿಳಿಸಿ?
ಆರ್ಥಿಕತೆ : ಇದು ಭಾರತದ ಆರ್ಥಿಕತೆಗೆ ತಕ್ಷಣದ ಮತ್ತು ದೀರ್ಘಕಾಲೀನ ಉತ್ತೇಜನಗಳನ್ನು ನೀಡಲಿದೆ.
ಮೂಲಸೌಕರ್ಯ : ಇದು ಭಾರತದಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಿದೆ.
ವ್ಯವಸ್ಥೆ : 21 ನೇ ಶತಮಾನದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಬರಲಿವೆ.
ಜನಸಂಖ್ಯಾ ಲಾಭ : ಭಾರತದ ಯುವಶಕ್ತಿಯನ್ನು ಬಳಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ.
ಬೇಡಿಕೆ : ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಪೂರೈಕೆ ಸರಪಳಿಯನ್ನು ಉತ್ತಮಪಡಿಸಬಹುದು
ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವ ತಿಳಿಸಿ?
ಬಿಕ್ಕಟ್ಟ ನ್ನು ಅವಕಾಶವಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಸಾಂಕ್ರಾಮಿಕ ಬಿಕ್ಕಟ್ಟು, ಭಾರತದ PPE ಕಿಟ್ಗಳು ಮತ್ತ N-95 ಮುಖಗವಸುಗಳ ಉತ್ಪಾದನೆಯನ್ನು ಪ್ರತಿದಿನ 2 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವಂತೆ ಮಾಡಿದೆ.
“ಸ್ವಾವಲಂಬಿ” ಯಾಗುವುದೇ ಭಾರತದ ನಿಜವಾದ ಗುರಿ ಎಂದು ಪ್ರಧಾನಿ ಮೋದಿ ವೇದ ಶಾಸ್ತ್ರಗಳಲ್ಲಿನ “ಈಶಃಪಂಥಃ” ಎಂಬ ಉಕ್ತಿಯನ್ನು ಉದ್ಘೋಷಿಸಿದರು. ಇದು ಆರ್ಥಿಕ ಕೇಂದ್ರಿತ ಜಾಗತೀಕರಣ ಬದಲು, ಮಾನವ ಕೇಂದ್ರಿತ ಜಾಗತೀಕರಣ ಸ್ಥಾಪಿಸುತ್ತವೆ.
ಇತರೆ ವಿಷಯಗಳು :