ಸಾಮಾಜಿಕ ಪಿಡುಗುಗಳು ಪ್ರಬಂಧ Samajika Pidugugalu Essay Samajika Pidugugalu Prabandha In Kannada
ಸಾಮಾಜಿಕ ಪಿಡುಗುಗಳು ಪ್ರಬಂಧ
ಈ ಲೇಖನಿಯಲ್ಲಿ ಸಾಮಾಜಿಕ ಪಿಡುಗುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ :
ಸಮಾಜವು ಸಂಕೀರ್ಣವಾದಂತೆಲ್ಲಾ, ಮುಗಿಲು ಮುಟ್ಟುವ ಕಾರ್ಯನಿರ್ವಹಣೆಯ ಬಿಕ್ಕಟ್ಟುಗಳು ಕೆಲವೊಮ್ಮೆ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಕುಬ್ಜವಾಗಿಸಿ ಶೋಷಣೆಗೆ ದೂಡುವುದುಂಟು. ಅವು ಆಯಾ ಕಾಲದ ಸಾಮಾಜಿಕ ಶೋಷಣೆಗಳಾಗಿ, ಸಮಸ್ಯೆಗಳಾಗಿ ವ್ಯಕ್ತವಾಗುತ್ತವೆ. ಭಾರತದಂತಹ ಅಭಿವೃದ್ದಿ ಪಥದಲ್ಲಿರುವ ಸಮಾಜಗಳಲ್ಲಿ ಹಲವಾರು ಬಗೆಯ ಸಾಮಾಜಿಕ ಸಮಸ್ಯೆಗಳು ತಾಂಡವವಾಡುತ್ತಿವೆ.
ವಿಷಯ ವಿವರಣೆ :
ಸಾಮಾಜಿಕ ಪಿಡುಗುಗಳೆಂದರೆ ಮಿತಿಮೀರಿದ ಜನಸಂಖ್ಯೆ, ಬಡತನ, ನಿರುದ್ಯೋಗ, ಬಾಲಾಪರಾಧ, ಭ್ರಷ್ಟಾಚಾರ, ಮಹಿಳೆಯರ ಶೋಷಣೆ, ವರದಕ್ಷಿಣೆ ಕಿರುಕುಳ ಇತ್ಯಾದಿ.
ಬಾಲಕಾರ್ಮಿಕ ಸಮಸ್ಯೆ :
ಸಾಮಾನ್ಯವಾಗಿ, ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆಯನ್ನು ಬಾಲಕಾರ್ಮಿಕತನ ಎಂದು ಕರೆಯಲಾಗುತ್ತದೆ. ಭಾರತ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯ ಉದ್ದೇಶದಿಂದ ದುಡಿಮೆ ಮಾಡುತ್ತಿದ್ದರೆ ಅಂತಹವರನ್ನು ಬಾಲ ಕಾರ್ಮಿಕರು ಎಂದು ಕರೆಯಲಾಗಿದೆ. ಮಕ್ಕಳ ದುಡಿತವೆಂಬುದು ಸಾಮಾಜಿಕ ವ್ಯವಸ್ಥೆಯ ಒಂದು ಗಂಭೀರ ಪಿಡುಗಾಗಿದೆ. ಮಕ್ಕಳನ್ನು ದಿನವಿಡೀ ದುಡಿಸಿಕೊಳ್ಳುವುದಲ್ಲದೇ ಅವರ ಮಾನಸಿಕ, ಭಾವನಾತ್ಮಕ, ಶೈಕ್ಷಣಿಕ, ವೈದ್ಯಕೀಯ ಮತ್ತಿತರ ಅಗತ್ಯತೆಗಳ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇರುವುದಿಲ್ಲ. ಅದರ ಬದಲು ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುವುದು ಕಂಡುಬಂದಿದೆ.
ಬಾಲಕಾರ್ಮಿಕರನ್ನು ನೇಮಕಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ʼಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು 1986 ರಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿದ ಉದ್ಯೋಗಪತಿಗಳು ಪ್ರತಿಯೊಬ್ಬ ಬಾಲಕಾರ್ಮಿಕನ ಪರವಾಗಿ 20,000 ರೂಗಳ ದಂಡವನ್ನು ಕಲ್ಯಾಣ ನಿಧಿಗೆ ಕಡ್ಡಾಯವಾಗಿ ಭರಿಸಬೇಕಾಗುತ್ತದೆ. 1988 ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯನ್ನು ಜಾರಿಗೆ ತಂದಿದೆ.
ಹೆಣ್ಣು ಭ್ರೂಣ ಹತ್ಯೆ :
ಸ್ವಾಭಾವಿಕವಾಗಿ ತಾಯಿಯ ಗರ್ಭದಲ್ಲಿ ಹೆಣ್ಣು ಭ್ರೂಣವಿದ್ದು, ಅದು ತಂದೆ ತಾಯಿಗೆ ಬೇಡವಾದರೆ ಅದನ್ನು ಗರ್ಭದಲ್ಲಿಯೇ ಕೊಂದುಹಾಕುವುದೆ ಹೆಣ್ಣು ಭ್ರೂಣ ಹತ್ಯೆ ಎನ್ನುವರು. ಗಂಡು ಮಕ್ಕಳ ಬಯಕೆಯಿಂದ ಆಧುನಿಕ ತಂತ್ರಜ್ಞಾನದ ದುರ್ಬಳಕೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು 1994 ರಲ್ಲಿ ʼಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆʼ ಯನ್ನು ಜಾರಿಗೆ ತರಲಾಯಿತು.
ಹಸಿವು ಮತ್ತು ಅಪೌಷ್ಟಿಕತೆ :
ನಿಗದಿತವಾದ ಆಹಾರ ಒಬ್ಬ ವ್ಯಕ್ತಿಗೆ ಸತತವಾಗಿ ಸಿಗದೆಯಿದ್ದರೆ ಅದು ಹಸಿವು ನಮಗೆ ಆರೋಗ್ಯವಾಗಿರಲು ಪಿಷ್ಟ, ಕೊಬ್ಬು, ವಿಟಮಿನ್ ಮತ್ತು ಲವಣಗಳು ಇನ್ನೂ ಮುಂತಾದ ಪೋಷಕಾಂಶಗಳು ತಕ್ಕ ಪ್ರಮಾಣದಲ್ಲಿ ದೊರಕಬೇಕು. ಪೋಷಕಾಂಸಗಳ ಅಭಾವವನ್ನು ʼಕಾಣದ ಹಸಿವುʼ ಎನ್ನುತ್ತಾರೆ. ಬಡವರು ಹೆಚ್ಚಾಗಿ ಕ್ಯಾಲೋರಿ ಮತ್ತು ಪೋಷಕಾಂಶ ಎರಡರಿಂದಲೂ ವಂಚಿತರಾಗುತ್ತಾರೆ. ಇದು ಭಾರತದಲ್ಲಿರುವ ಹಸಿವಿನ ಗಂಭೀರತೆಯನ್ನು ಸೂಚಿಸುತ್ತದೆ.
ಲಿಂಗ ತಾರತಮ್ಯ:
ಲಿಂಗತ್ವ ಎಂಬುದು ಮಹಿಳೆಯರು ಮತ್ತು ಪುರುಷರು ಎಂದು ಗುರುತಿಸಿಕೊಳ್ಳುವುದ್ದಕ್ಕಾಗಿ ಇರುವ ಪರಿಕಲ್ಪನೆಯಾಗಿದೆ. ಇದು ಸ್ತ್ರೀ ಪುರುಷರಿಬ್ಬರಿಗೂ ಅವರವರ ಸ್ಥಾನವನ್ನು ಸೂಚಿಸುತ್ತದೆ. ಲಿಂಗತಾರತಮ್ಯದಲ್ಲಿ ಪ್ರಕಾರಗಳಿವೆ ಅವುಗಳೆಂದರೆ ಜನನ ಪ್ರಮಾಣದಲ್ಲಿ ಅಸಮಾನತೆ, ಮೂಲ ಸೌಕರ್ಯದಲ್ಲಿ ಅಸಮಾನತೆ, ಅವಕಾಶಗಳಲ್ಲಿ ಅಸಮಾನತೆ, ಒಡೆತನದ ಅಸಮಾನತೆ, ಕೌಟುಂಬಿಕ ಅಸಮಾನತೆ.
ಬಾಲ್ಯವಿವಾಹ :
ಕಾನೂನಿನ ಪ್ರಕಾರ ಬಾಲ್ಯವಿವಾಹ ಎಂದರೆ 18 ವರ್ಷದೊಳಗಿನ ಹುಡುಗಿಗೆ ಅಥವಾ 21 ವರ್ಷದೊಳಗಿನ ಹುಡುಗನಿಗೆ ಮದುವೆ ಮಾಡಿದರೆ ಅದನ್ನು ಬಾಲ್ಯವಿವಾಹ ಎನ್ನಲಾಗುತ್ತದೆ. ಲಿಂಗತಾರತಮ್ಯ, ಶಿಕ್ಷಣ ಇಲ್ಲದಿರುವಿಕೆ, ಬಾಲಕಾರ್ಮಿಕತೆ, ಇವೆಲ್ಲವೂ ಬಾಲ್ಯ ವಿವಾಹಕ್ಕೆ ಕಾರಣವಾಗಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು 2006 ರಲ್ಲಿ ಜಾರಿಗೆ ತಂದಿದೆ. ಇಂತಹ ಮದುವೆಗೆ ಸಹಾಯ ಮಾಡಿದವರಿಗೆ, ಭಾಗವಹಿಸಿದವರಿಗೆ 2 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲಾಗುತ್ತದೆ.
ಮಕ್ಕಳ ಸಾಗಾಣಿಕೆ ಮತ್ತು ಮಾರಾಟ :
18 ವರ್ಷದೊಳಗಿನ ಯಾವುದೆ ವ್ಯಕ್ತಿಯ ನೇಮಕಾತಿ, ಸಾಗಾಣಿಕೆ, ವರ್ಗಾವಣೆ, ಆಶ್ರಯ, ರವಾನಿಸುವುದು ಅಥವಾ ಶೋಷಣೆಯ ಉದ್ದೇಶಕ್ಕಾಗಿ ನಡೆಯುವ ಕೃತ್ಯವನ್ನು ಮಕ್ಕಳ ಸಾಗಾಣಿಕೆ ಎನ್ನುವರು. ಹೆಚ್ಚಾಗುತ್ತಿರುವ ಇಂಟರ್ನೆಟ್ ಬಳಕೆ, ಸಾಮಾಜಿಕ ಅಸಮಾನತೆ, ಕೌಶಲ್ಯಗಳ ಕೊರತೆ, ಅಸಮಾನ ವ್ಯಾಪಾರ ಸಂಬಂಧ ಇವೆಲ್ಲವೂ ಮಕ್ಕಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಕಾರಣವಾಗಿವೆ. ಅನೈತಿಕ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ 1956 ಕ್ಕೆ ತಿದ್ದುಪಡಿ ತಂದಿದ್ದು ಯಾವುದೇ ಮಗು, ಮಹಿಳೆ,ಮಾನವ ಕಳ್ಳ ಸಾಗಾಣಿಕೆಯನ್ನು ನಿಷೇಧಿಸಿದೆ.
ವರದಕ್ಷಿಣೆ :
ವಿವಾಹದ ಉಡುಗೊರೆಯಾಗಿ ವಧುವಿನ ಕುಟುಂಬದವರಿಂದ ನಾನಾರೂಪದಲ್ಲಿ ಅಪೇಕ್ಷಿಸಲಾಗುವ ಸ್ವತ್ತು, ಚಿನ್ನಾಭರಣ, ನಗದು ಅಥವಾ ವಾಹನ ಇತ್ಯದಿಗಳು ವವರದಕ್ಷಿಣೆಯ ರೂಪಗಳಾಗಿರುತ್ತವೆ. ವರದಕ್ಷಿಣೆಯನ್ನು ಕೊಡುವುದು ಮತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ. ಇದನ್ನು ನಿವಾರಣೆ ಮಾಡಲು 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು. ಉಲ್ಲಂಘಿಸಿದವರಿಗೆ 5 ವರ್ಷಗಳಿಗೂ ಕಡಿಮೆಯಿರದ ಕಾರಾಗೃಹ ಶಿಕ್ಷೆ ಮತ್ತು 15,000 ರೂಗಳಿಗೆ ಕಡಿಮೆಯಿರದ ಹಣವನ್ನು ದಂಡವಾಗಿ ವಿಧಿಸಬಹುದು.
ಉಪಸಂಹಾರ :
ಸಾಮಾಜಿಕ ಪಿಡುಗುಗಳು ದೇಶಕ್ಕೆ ಅಂಟಿದ ಕಪ್ಪು ಚುಕ್ಕೆಯಾಗಿದೆ. ಇದನ್ನು ನಿರ್ಮೂಲನೆ ಮಾಡುವತ್ತ ನಾವೆಲ್ಲರೂ ಸಾಗಬೇಕಾಗಿದೆ. ಇದು ಕೇವಲ ಒಬ್ಬರಿಂದ ಸಾದ್ಯವಿಲ್ಲ, ಎಲ್ಲರೂ ಇವುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಕ್ರಮತೆಗೆದುಕೊಳ್ಳಬೇಕಾಗಿದೆ.
FAQ
ವರದಕ್ಷಿಣೆ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿದೆ ?
1961
ಬಾಲಕಾರ್ಮಿಕ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿದೆ?
1986
ಇತರೆ ವಿಷಯಗಳು :