ಹವಾಮಾನ ವೈಪರಿತ್ಯ ಪ್ರಬಂಧ | Climate Change Essay in Kannada

Join Telegram Group Join Now
WhatsApp Group Join Now

ಹವಾಮಾನ ವೈಪರಿತ್ಯ ಪ್ರಬಂಧ Climate Change Essay Havamana Vaiparithya Prabandha in Kannada

ಹವಾಮಾನ ವೈಪರಿತ್ಯ ಪ್ರಬಂಧ

Climate Change Essay in Kannada
ಹವಾಮಾನ ವೈಪರಿತ್ಯ ಪ್ರಬಂಧ

ಈ ಲೇಖನಿಯಲ್ಲಿ ಹವಾಮಾನ ವೈಪರಿತ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಭೂಮಿ ಮನುಷ್ಯನಿಗೆ ಸೇರಿದ್ದಲ್ಲ, ಮನುಷ್ಯ ಭೂಮಿಗೆ ಸೇರಿದವ. ಆದರೆ ಒಂದು ಮನುಷ್ಯನು ಇದನ್ನು ಯೋಚಿಸದೇ ತನ್ನದೇ ಲಾಭಕ್ಕಾಗಿ ಬಳಸುವ, ಶೋಷಿಸುವ, ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾನೆ. ನವೀಕರಿಸಬಹುದಾದ ಭೂಮಿಯ ಸಾಮರ್ಥ್ಯಕ್ಕಿಂತಲೂ ಅಧಿಕವಾದ ಆತನ ಬೇಡಿಕೆಯ ಪರಿಣಾಮವಾಗಿಯೇ ನಾವಿಂದು ಹವಾಮಾನ ವೈಪರಿತ್ಯವನ್ನು ಕಾಣುತ್ತಿದ್ದೇವೆ.

ವಿಷಯ ವಿವರಣೆ :

ಹವಾಮಾನ ವೈಪರಿತ್ಯವೆಂಬುದು ಸಾಮಾನ್ಯವಾಗಿರುವ ಹವಾಮಾನ ಸ್ಥಿತಿಯಲ್ಲಿನ ಬದಲಾವಣೆಯಾಗಿದ್ದು ಮುಖ್ಯವಾಗಿ ತಾಪಮಾನದ ಹೆಚ್ಚಳದಿಂದಾಗಿ ವಾಯುಗುಣದಲ್ಲಿ ಅಸಮತೋಲನವುಂಟಾಗಿ ಹಿಮ ಕರಗುವಿಕೆ, ಸಮುದ್ರ ನೀರಿನ ಹೆಚ್ಚಳ, ಪ್ರವಾಹ, ಬಗಾಲ ಇನ್ನಿತರ ಋತುಮಾನಗಳಲ್ಲಿ ಬದಲಾವಣೆ ಉಂಟಾಗುತ್ತವೆ. ಈ ವಿದ್ಯಾಮಾನವು ಪ್ರೃತಿ ಹಾಗೂ ಮಾನವ ಜನ್ಯ ಕಾರಣಗಳಿಂದ ಉಂಟಾಗಬಹುದಾದರೂ; ಮಾನವಜನ್ಯ ಕಾರಣವು ಇಂದು ಅತಿಯಾಗಿದೆ.

ಹವಾಮಾನ ವೈಪರಿತ್ಯಕ್ಕೆ ಕಾರಣಗಳು :

 • ಕೈಗಾರಿಕಾ ಕ್ರಾಂತಿಯ ನಂತರ ಅಪಾರ ಪ್ರಮಾಣದ ಕೈಗಾರಿಕೆಗಳು ಬಿಡುಗಡೆಮಾಡುವ ಅನಿಲಗಳು.
 • ವಿಪರೀತ ಜನಸಂಖ್ಯೆಯ ಅಪರಿಮಿತ ಬಯಕೆಗಳು ಮತ್ತು ಅವುಗಳ ಪರಿಣಾಮಗಳು ಉದಾಹರಣೆಗೆ ಹೆಚು ಕಾರುಗಳ ಬಳಕೆ.
 • ಅಪಾರ ಪ್ರಮಾಣದ ನಗರೀಕರಣ ಮತ್ತು ಅರಣ್ಯ ನಾಶ.
 • ಆಧಶುನಿಕ ಕೃಷಿ ವ್ಯವಸ್ಥೆ ಮತ್ತು ಕೃಷಿ ತ್ಯಾಜ್ಯ ದಹನದಿಂದಾಗಿ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ.
 • ಭೂಮಿ ಬಳಕೆಯ ಬದಲಾವಣೆ ರಸಾಯನಿಕ ಗೊಬ್ಬರಗಳ ಹೆಚ್ಚು ಬಳಕೆ.
 • ಕಲ್ಲಿದ್ದಲು ಕಚ್ಚಾತೈಲ ನೈಸರ್ಗಿಕ ಅನಿಲಗಳ ಹೆಚ್ಚಾದ ಬಳಕೆಯೂ ಕೂಡ ಜಾಗತಿಕ ತಾಪಮಾನದ ಏರಿಕೆಗೆ ಬಹುಮುಖ್ಯ ಕಾರಣವಾಗಿದೆ.
 • ಹವಾನಿಯಂತ್ರಕ ಉಪಕರಣಗಳು ಹಾಗೂ ಸುಗಂಧ ದ್ರವ್ಯಗಳು ಕೂಡ ಅಥವಾ ವರಣದಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ.
 • ಗ್ರಾಮೀಣ ಭಾಗದಲ್ಲಿ ಅಡುಗೆಗಾಗಿ ಬಳಸುವ ಕಟ್ಟಿಗೆಗಳು ಕೂಡ ಜಾಗತಿಕ ತಾಪಮಾನದಲ್ಲಿ ಏರುಪೇರಾಗಲು ಕಾರಣವಾಗುತ್ತದೆ.
 • ಹೆಚ್ಚುತ್ತಿರುವ ನಗರೀಕರಣ.
 • ಪರಮಾಣು ಬಾಂಬುಗಳ ಸ್ಪೋಟ.

ಪರಿಣಾಮಗಳು :

 • ನೀರ್ಗಲ್ಲು ಕರಗಿ ಸಾಗರದಲ್ಲಿನ ನೀರಿನ ಹೆಚ್ಚಾಗುತ್ತಿದೆ.
 • ಜಗತ್ತಿನ ಮಳೆ ಹಂಚಿಕೆಯಲ್ಲಿ ಏರುಪೇರಾಗುವುದು.
 • ಬೇರೆ ಬೇರೆ ರೀತಿಯ ರೋಗಗಳು ಕಂಡುಬರುವುದು.
 • ಆಹಾರ ಮತ್ತು ಉತ್ತಮ ನೀರಿನ ಸಮಸ್ಯೆ.
 • ಹವಳದ ದಿಬ್ಬಗಳು ಅವನತಿ ಹೊಂದುತ್ತವೆ.
 • ಭಾರತ ಕುಸಿತ ಚಂಡಮಾರುತ ಪ್ರವಾಹಗಳು ಉಂಟಾಗಲು ಕಾರಣವಾಗಿದೆ.

ಹಸಿರುಮನೆ ಅನಿಲಗಳನ್ನು ಕಡಿತಗೊಳಿಸಲು ಕೈಗೊಂಡ ಕ್ರಮಗಳು :

ಈ ಹವಾಮಾನ ವೈಪರಿತ್ಯವು ಇಂದು ವಿಶ್ವ ಸಮಸ್ಯೆಯಾಗಿ ಬೆಳೆದುನಿಂತಿದೆ. ಇದರ ತಡೆಗಟ್ಟುವಿಕೆ ಮತ್ತು ನಿಯಂತ್ರಣವು ವಿಶ್ವವೇದಿಕೆಯಲ್ಲಿ ಚರ್ಚಿಸಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸುಸ್ಥಿರ ಅಭಿವೃದ್ದಿ ಪರಿಕಲ್ಪನೆ :

Join WhatsApp Join Telegram

ಬ್ರಂಟ್‌ ಲ್ಯಾಂಡ್‌ ಆಯೋಗ ವ್ಯಾಖ್ಯಾನಿಸಿತು. 1987 ಇದರ ಪ್ರಕಾರ ಸುಸ್ಥಿರ ಅಭಿವೃದ್ದಿ ಎಂದರೇ ಇಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದರೊಂದಿಗೆ ಭವಿಷ್ಯತ್ತಿನ ಪೀಳಿಗೆಯ ಅವಶ್ಯಕತೆಗಳಿಗೆ ಪೂರೈಸಲು ಶಾಜಿಯಾಗದೇ ಇರುವುದು.

1992 ರಲ್ಲಿ ರಿಯೋದಲ್ಲಿ ಭೂ ಶೃಂಗಸಭೆ ನಡೆಯಿತು. ಇದರಲ್ಲಿ ಜೀವವೈವಿದ್ಯತೆಯಲ್ಲಿನ ಬದಲಾವಣೆಯಿಂದಾಗಿ ಉಂಟಾಗುವ ಅಸುಸ್ಥಿರತೆಯಿಂದ ಮಾನವ ಸಂಕುಲವನ್ನು ಕಾಪಾಡುವ ಸಲುವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಪರಿಸರ ಅಭಿವೃದ್ದಿಗಾಗಿ ನಿಧಿ ಸಂಗ್ರಹ ಉದ್ದೇಶದೊಂದಿಗೆ ನಡೆದ ಹವಾಮಾನ ಬದಲಾವಣೆಯ ಚೌಕಟ್ಟಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಹಾ ಅಧಿವೇಶನ ಮತ್ತು ಜೀವವೈವಿದ್ಯ ಸಮಾವೆಶದ ಫಲವಾಗಿ ಜಾಗತಿಕ ಪರಿಸರ ಸೌಲಭ್ಯವನ್ನು ಸ್ಥಾಪಿಸಲಾಯಿತು.

ಉಪಸಂಹಾರ :

ಭೂಮಿಯು ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ. ವಿಶ್ವದ ದೇಶಗಳೆಲ್ಲಾ ಒಟ್ಟಾಗಿ ಸೇರಿ ಸುರಕ್ಷಿತ ಭೂಮಿಯನ್ನು, ಜೀವನದ ಭರವಸೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ನಾವು ಈಗಿಂದಲೇ ಜಾಗೃತರಾಗಬೇಕಾಗಿದೆ.

FAQ :

ಹವಾಮಾನ ವೈಪರಿತ್ಯಕ್ಕೆ ಒಂದು ಕಾರಣ ತಿಳಿಸಿ?

ಕೈಗಾರಿಕಾ ಕ್ರಾಂತಿಯ ನಂತರ ಅಪಾರ ಪ್ರಮಾಣದ ಕೈಗಾರಿಕೆಗಳು ಬಿಡುಗಡೆಮಾಡುವ ಅನಿಲಗಳು.

ಹವಾಮಾನ ವೈಪರಿತ್ಯದ ಪರಿಣಾಮ ತಿಳಿಸಿ?

ನೀರ್ಗಲ್ಲು ಕರಗಿ ಸಾಗರದಲ್ಲಿನ ನೀರಿನ ಹೆಚ್ಚಾಗುತ್ತಿದೆ.
ಜಗತ್ತಿನ ಮಳೆ ಹಂಚಿಕೆಯಲ್ಲಿ ಏರುಪೇರಾಗುವುದು.
ಬೇರೆ ಬೇರೆ ರೀತಿಯ ರೋಗಗಳು ಕಂಡುಬರುವುದು.

ಇತರೆ ವಿಷಯಗಳು :

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ

ಜಲ ಸಂರಕ್ಷಣೆ ಬಗ್ಗೆ ಪ್ರಬಂಧ

Leave your vote

23 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.