ವಿಶ್ವ ಮಲೇರಿಯಾ ದಿನದ ಬಗ್ಗೆ ಮಾಹಿತಿ Information about World Malaria Day Vishwa Malaria Dinada Bagge Mahithi in Kannada
ವಿಶ್ವ ಮಲೇರಿಯಾ ದಿನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವ ಮಲೇರಿಯಾ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವಿಶ್ವ ಮಲೇರಿಯಾ ದಿನ :
ವಿಶ್ವ ಮಲೇರಿಯಾ ದಿನವನ್ನು ಏಪ್ರಿಲ್ 25 ರಂದು ಮಲೇರಿಯಾ ರೋಗವನ್ನು ನಿಯಂತ್ರಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಆಚರಣೆ ಮಾಡಲಾಗುತ್ತದೆ.
ಮಲೇರಿಯಾ :
ಮಲೇರಿಯಾವು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ, ಅದು ಮನುಷ್ಯರು ಮತ್ತು ಇತರ ಪ್ರಾಣಿಗಳ ಮೇಲೆ ಪರಿಣಾಮ ಉಂಟುಮಾಡುತ್ತದೆ. ಉಷ್ಣವಲಯ ಮತ್ತು ಉಪೋಷ್ಣವಲಯದ ದೇಶಗಳಲ್ಲಿ ಮಲೇರಿಯಾ ರೋಗವು ಹೆಚ್ಚಾಗಿ ಕಂಡುಬರುತ್ತದೆ. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಮನುಷ್ಯರಿಗೆ ಹರಡುತ್ತದೆ.
ಮಲೇರಿಯಾ ರೋಗದ ಲಕ್ಷಣಗಳು :
- ಚಳಿ, ಜ್ವರ
- ಅಸ್ವಸ್ಥತೆಯ ಸಾಮಾನ್ಯ ಭಾವನೆ
- ತಲೆನೋವು
- ವಾಕರಿಕೆ ಬರುವುದು ಮತ್ತು ವಾಂತಿ
- ಅತಿಸಾರ
- ಹೊಟ್ಟೆ ನೋವು ಕಾಣಿಸಿಕೊಳ್ಳುವುದು
- ಸ್ನಾಯು ಅಥವಾ ಕೀಲು ನೋವು
- ಆಯಾಸವಾಗುವುದು
- ತ್ವರಿತ ಉಸಿರಾಟ
- ತ್ವರಿತ ಹೃದಯ ಬಡಿತ
- ಕೆಮ್ಮು
ಮಲೇರಿಯಾ ಅತಿ ಹೆಚ್ಚಾಗಿ ಕಂಡುಬರುವ ದೇಶಗಳು :
- ಆಫ್ರಿಕಾ
- ಮಧ್ಯ ಮತ್ತು ದಕ್ಷಿಣ ಅಮೇರಿಕಾ
- ಪೂರ್ವ ಯುರೋಪ್
- ದಕ್ಷಿಣ ಮತ್ತು ಆಗ್ನೇಯ ಏಷ್ಯಾ
- ಮಧ್ಯ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳಲ್ಲಿ ಕಂಡುಬರುತ್ತದೆ.
ವಿಶ್ವ ಮಲೇರಿಯಾ ದಿನದ ಇತಿಹಾಸ :
2008 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಇದು ಆಫ್ರಿಕಾ ದೇಶದಿಂದ ವಿಕಸನಗೊಂಡಿತು. ಆಫ್ರಿಕನ್ ದೇಶಗಳು 2001 ರಿಂದ ಪ್ರತಿ ವರ್ಷ ಮಲೇರಿಯಾ ದಿನವನ್ನು ಆಚರಿಸುತ್ತಿತ್ತು. ದೇಶಗಳಲ್ಲಿ ಮಲೇರಿಯಾವನ್ನು ನಿಯಂತ್ರಿಸುವ ಮತ್ತು ಇದರಿಂದಾಗುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸಲು ಆಚರಣೆ ಮಾಡಲಾಗುತ್ತಿತ್ತು. 2007 ರಲ್ಲಿ, ವಿಶ್ವ ಆರೋಗ್ಯ ಅಸೆಂಬ್ಲಿಯ 60 ನೇ ಅಧಿವೇಶನದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ ಸಭೆಯ ವೇಳೆ ಪ್ರಪಂಚದಾದ್ಯಂತದ ರಾಷ್ಟ್ರಗಳಲ್ಲಿ ಮಲೇರಿಯಾ ಹರಡುವಿಕೆಯನ್ನು ತಡೆಯಲು ಮತ್ತು ರೋಗದ ಬಗ್ಗೆ ಜಾಗತಿಕವಾಗಿ ಜಾಗೃತಿ ಮೂಡಿಸಲು ಆಫ್ರಿಕಾ ಮಲೇರಿಯಾ ದಿನವನ್ನು “ವಿಶ್ವ ಮಲೇರಿಯಾ ದಿನ” ಎಂದು ಮರುನಾಮಕರಣ ಮಾಡಲಾಯಿತು.
ವಿಶ್ವ ಮಲೇರಿಯಾ ದಿನದ ಮಹತ್ವ :
ಈ ಮಲೇರಿಯಾವನ್ನು ನಿಯಂತ್ರಿಸುಲು ಮತ್ತು ನಿರ್ಮೂಲನೆ ಮಾಡಲು ಇದನ್ನು ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ವಿಶ್ವ ಮಲೇರಿಯಾ ದಿನವನ್ನು ಮೊದಲು 2008 ರಲ್ಲಿ ಆಚರಿಸಲಾಯಿತು. ಮಲೇರಿಯಾವು ಗುಣಪಡಿಸಬಹುದಾದ ರೋಗವಾಗಿದೆ. ಹಾಗಾಗಿ ಇದರ ಬಗ್ಗೆ ಎಲ್ಲರೂ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಜಾಗ್ರತೆ ವಹಿಸಲು ಈ ದಿನವು ಮಹತ್ವವಾಗಿದೆ.
FAQ :
ವಿಶ್ವ ಮಲೇರಿಯಾ ದಿನವನ್ನು ಯಾವಾಗ ಆಚರಿಸಲಾಗತ್ತದೆ?
ಏಪ್ರಿಲ್ 25
ಮಲೇರಿಯಾ ರೋಗದ ಒಂದು ಲಕ್ಷಣಗಳಾವುವು?
ಚಳಿ, ಜ್ವರ
ಅಸ್ವಸ್ಥತೆಯ ಸಾಮಾನ್ಯ ಭಾವನೆ
ತಲೆನೋವು
ಇತರೆ ವಿಷಯಗಳು :
ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನದ ಪ್ರಬಂಧ