ರಾಷ್ಟ್ರೀಯ ಪಂಚಾಯತ್‌ ದಿನದ ಬಗ್ಗೆ ಪ್ರಬಂಧ | Essay on National Panchayat Day in Kannada

Join Telegram Group Join Now
WhatsApp Group Join Now

ರಾಷ್ಟ್ರೀಯ ಪಂಚಾಯತ್‌ ದಿನದ ಬಗ್ಗೆ ಪ್ರಬಂಧ Essay on National Panchayat Day Rastriya Panchayat Dinada Bagge Prabandha in Kannada

ರಾಷ್ಟ್ರೀಯ ಪಂಚಾಯತ್‌ ದಿನದ ಬಗ್ಗೆ ಪ್ರಬಂಧ

Essay on National Panchayat Day in Kannada
ರಾಷ್ಟ್ರೀಯ ಪಂಚಾಯತ್‌ ದಿನದ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ರಾಷ್ಟ್ರೀಯ ಪಂಚಾಯತ್‌ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಪ್ರತಿ ವರ್ಷ ಏಪ್ರಿಲ್ 24 ಅನ್ನು “ರಾಷ್ಟ್ರೀಯ ಪಂಚಾಯತ್ ರಾಜ್” ದಿನವೆಂದು ಆಚರಿಸಲಾಗುತ್ತದೆ. 1992 ರಲ್ಲಿ 73 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸಿದ ದಿನದ ಸವಿನೆನಪಿಗಾಗಿ ವಾರ್ಷಿಕ ಆಚರಣೆಯನ್ನು ಮಾಡಲಾಗುತ್ತದೆ. ಈ ಕಾಯ್ದೆಯು ಏಪ್ರಿಲ್ 24, 1993 ರಂದು ಜಾರಿಗೆ ಬಂದಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2010 ಏಪ್ರಿಲ್ 24 ರಂದು ಮೊದಲ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಘೋಷಿಸಿದ್ದರು. ‘ಪಂಚ’ ಎಂದರೆ ‘ಐದು’ ಮತ್ತು ‘ಆಯತ್’ ಎಂದರೆ ‘ಸಭೆ’ ಮತ್ತು ‘ರಾಜ್’ ಎಂದರೆ ‘ಆಡಳಿತ’.

ಪಂಚಾಯತ್ ರಾಜ್ ಇತಿಹಾಸ :

73 ನೇ ತಿದ್ದುಪಡಿಯ ಶಾಸನವು ಇತಿಹಾಸದಲ್ಲಿ ಮಹತ್ವದ್ದಾಗಿದೆ. ಇದು ಗ್ರಾಮ ಪಂಚಾಯತ್‌ಗಳನ್ನು ಸಂಘಟಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸ್ವಯಂ-ಸರ್ಕಾರದ ಘಟಕಗಳಾಗಿ ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಾದ ಅಧಿಕಾರ ಮತ್ತು ಅಧಿಕಾರವನ್ನು ಒದಗಿಸಲು ರಾಜ್ಯಗಳಿಗೆ ಅವಕಾಶ ಒದಗಿಸುತ್ತದೆ. 73 ನೇ ತಿದ್ದುಪಡಿ ಲೋಕಸಭೆಯಲ್ಲಿ ಡಿಸೆಂಬರ್‌ 22 1992 ರಲ್ಲಿ ಅಂಗೀಕಾರವಾಯಿತು. ಏಪ್ರಿಲ್‌ 20, 1993 ರಾಷ್ಟ್ರಪತಿಗಳು ಅಂಗೀಕಾರ ಮಾಡಿದರು. ನಂತರ ಏಪ್ರಿಲ್‌ 24, 1993 ರಂದು ಜಾರಿಯಾಯಿತು.

ಪಂಚಾಯತ್ ರಾಜ್ ವ್ಯವಸ್ಥೆಗಾಗಿ ನೇಮಕ ಮಾಡಿದ ಸಮಿತಿಗಳು :

ಬಲವಂತರಾಯ್ ಮೆಹ್ತಾ ಸಮಿತಿ :

 ಬಲವಂತರಾಯ್ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ 1957 ರಲ್ಲಿ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು 3 ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಜಾರಿಗೆ ತಂದಿತು. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ, ಬ್ಲಾಕ್ ಮಟ್ಟದಲ್ಲಿ ಪಂಚಾಯಿತಿ ಸಮಿತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ.

Join WhatsApp Join Telegram

ಕೆ ಸಂತಾನಂ ಸಮಿತಿ :

1963 ರಲ್ಲಿ ನೇಮಕ ಮಾಡಲಾಯಿತು. ಈ ಸಮಿತಿಯು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಹಣಕಾಸು ಹಂಚಿಕೆ ಮಾಡಲು ಶಿಫಾರಸ್ಸು ಮಾಡಿತು. ಪಂಚಾಯಿತಿಗಳು ಭೂ ಕಂದಾಯ ಮತ್ತು ಮನೆ ಕಂದಾಯ ವಸೂಲಿ ಮಾಡಬೇಕು ಎಂದು ಹೇಳಿತು. [ಪಂಚಾಯಿತಿ ಸಂಸ್ಥೆಗಳಿಗೆ ರಾಜ್ಯ ಮಟ್ಟದ ಅನುದಾನವನ್ನು ವರ್ಗಾಯಿಸಬೇಕು ಎಂದು ಹೇಳಿತು.

ಅಶೋಕ್‌ ಮೆಹ್ತಾ ಸಮಿತಿ :

1977 ರಲ್ಲಿ ನೇಮಕ ಮಾಡಲಾಯಿತು. ಎರ ಹಂತದ ಪಂಚಾಯತ್‌ ವ್ಯವಸ್ಥೆಯನ್ನು ಶಿಫಾರಸ್ಸು ಮಾಡಿತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್‌, ಗ್ರಾಮ ಮಟ್ಟದಲ್ಲಿ ಮಂಡಲ್‌ ಪಂಚಾಯಿತಿಯನ್ನು ತಂದಿತು. ಈ ಸಮಿತಿಯನ್ನು ನೇಮಕ ಮಾಡಿದವರು ಮೊರಾರ್ಜಿ ದೇಸಾಯಿ.

ಜಿ.ವಿ.ಕೆ.ರಾವ್‌ ಸಮಿತಿ :

1985 ರಲ್ಲಿ ನೇಮಕ. ಅಧಿಕಾರಿಶಾಹಿಗಳ ಪಾಲ್ಗೊಳ್ಳುವಿಕೆ ಕಡಿಮೆ ಇರಬೇಕು ಎಂಬುದನ್ನು ಈ ಸಮಿತಿ ಶಿಫಾರಸ್ಸು ಮಾಡಿತು.

ಎಲ್‌.ಎಂ. ಸಿಂಘ್ವಿ ಸಮಿತಿ :

1986 ರಲ್ಲಿ ರಾಜೀವಗಾಂಧಿಯವರು ಈ ಸಮಿತಿಯನ್ನು ನೇಮಕ ಮಾಡುತ್ತಾರೆ. ಮೂರು ಹಂತದ ಏಕರೂಪ ಪಂಚಾಯತ್ ರಾಜ್‌ ವ್ಯವಸ್ಥೆಯನ್ನು, ರಾಜ್ಯ ಹಣಕಾಸು ಆಯೋಗ ರಚನೆ ಬಗ್ಗೆ, ಪಂಚಾಯತ್‌ ಸಂಸ್ಥೆಗಳಿಗೆ ಸಂವಿಧಾನದ ಮಾನ್ಯತೆ ನೀಡುವ ಕುರಿತು ಶಿಫಾರಸ್ಸು ಮಾಡಿತು.

ಪಿ.ಕೆ.ತುಂಗನ್‌ ಸಮಿತಿ :

1988 ರಲ್ಲಿ ಈ ಸಮಿತಿ ನೇಮಕ. ಈ ಸಮಿತಿಯು ಪ್ರಮುಖ ಶಿಫಾರಸ್ಸು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಸಂವಿಧಾನತ್ಮಕ ಮನ್ನಣೆ ದೊರೆಯಬೇಕು ಎಂದು ಶಿಫಾರಸ್ಸು ಮಾಡಿತು.

ಗಾಡ್ಗಿಲ್‌ ಸಮಿತಿ :

1989 ರಲ್ಲಿ ಈ ಸಮಿತಿ ನೇಮಕ. ಈ ಸಮಿತಿ 3 ಹಂತಗಳ ಪಂಚಾಯಿತಿ ವ್ಯವಸ್ಥೆಗೆ ಶಿಫಾರಸ್ಸು ಮಾಡಿತು. 5 ವರ್ಷದ ಅಧಿಕಾರ ಅವಧಿಯನ್ನು 3 ಹಂತದ ಪಂಚಾಯತ್‌ ವ್ಯವಸ್ಥೆಗೂ ನಿಗದಿಪಡಿಸಬೇಕು ಎಂದು ಶಿಫಾರಸ್ಸು ಮಾಡಿತು. ಎಸ್‌.ಸಿ, ಎಸ್‌.ಟಿ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿತು.

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ :

ರಾಜಸ್ತಾನವು ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವಾಗಿದೆ. 1959, ಅಕ್ಟೋಬರ್ 2‌ ರಂದು ಜವಹಾರ್‌ ಲಾಲ್‌ ನೆಹರು ರವರು ಉದ್ಗಾಟಿಸಿದರು.

ರಾಷ್ಟ್ರೀಯ ಪಂಚಾಯತ್‌ ದಿನದ ಮಹತ್ವ :

ನಮ್ಮ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ, ಪಂಚಾಯತ್ ರಾಜ್ ನ ಪ್ರತ್ಯೇಕ ಸಚಿವಾಲಯವನ್ನು 27 ಮೇ 2004 ರಂದು ಸ್ಥಾಪನೆ ಮಾಡಲಾಯಿತು. ದೇಶದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು 24 ಏಪ್ರಿಲ್ 2010 ರಿಂದ ಆಚರಿಸುತ್ತಾ ಬಂದಿದ್ದೇವೆ.

ಭಾರತದಲ್ಲಿ ವಿಕೇಂದ್ರೀಕೃತ ಅಧಿಕಾರವನ್ನು ಗುರುತಿಸಲು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತದೆ.

ದೇಶದಲ್ಲಿ ಇರುವ ಪಂಚಾಯತ್ ಪ್ರತಿನಿಧಿಗಳೊಂದಿಗೆ ನೇರ ಸಂವಾದ ಮಾಡಲು, ಅವರ ಸಾಧನೆಗಳನ್ನು ಗುರುತಿಸಲು ಸಹಾಯಕವಾಗಿದೆ.

ಈ ದಿನದಂದು ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪಂಚಾಯತ್‌ಗಳ ಸಾಧನೆಗಳ ಬಗ್ಗೆ ದೇಶದಾದ್ಯಂತ ಅರಿವು ಮೂಡಿಸಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಮಾಧ್ಯಮವಾಗಿದೆ.

ಉಪಸಂಹಾರ :

ಪಂಚಾಯಿತಿಗಳ ಅಭಿವೃದ್ದಿಯು ದೇಶದ ಅಭಿವೃದ್ದಿಯ ಒಂದು ಭಾಗವಾಗಿದೆ. ಸಾಮಾಜಿಕ ನ್ಯಾಯದ ಜೊತೆಗೆ ಸಮಗ್ರ ಅಭಿವೃದ್ಧಿ ಮತ್ತು ಸೇವೆಗಳ ಸಮರ್ಥ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜವಾಬ್ದಾರಿಯುತ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪನೆಮಾಡಬೇಕು. ಹಾಗೂ ಅದಕ್ಕೆ ಬೇಕಾದಂತಹ ನಿಷ್ಟಾವಂತ ಅಧಿಕಾರಿಯನ್ನು ನೇಮಿಸಿ ಅಧಿಕಾರ ವಹಿಸಿಕೊಡಬೇಕು.

FAQ :

ರಾಷ್ಟ್ರೀಯ ಪಂಚಾಯತ್‌ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಏಪ್ರಿಲ್‌ 24

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಯಾವುದು?

ರಾಜಸ್ತಾನ

ಇತರೆ ವಿಷಯಗಳು :

ಆನ್‌ಲೈನ್ ಶಿಕ್ಷಣ ಪ್ರಬಂಧ

ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನದ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.