ತೀವ್ರಗಾಮಿಗಳ ಬಗ್ಗೆ ಮಾಹಿತಿ Information about Tivragamigalu Tivragamigala bagge Mahithi in Kannada
ತೀವ್ರಗಾಮಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ತೀವ್ರಗಾಮಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ತೀವ್ರಗಾಮಿಗಳು :
ಕ್ರಿ.ಶ 1905 ರಿಂದ 1919 ರವರೆಗಿನ ಅವಧಿಯನ್ನು ತೀವ್ರಗಾಮಿ ಯುಗ ಎನ್ನುತ್ತೇವೆ.
ತೀವ್ರಗಾಮಿಗಳ ಹುಟ್ಟಿಗೆ ಕಾರಣ :
ಮಂದಗಾಮಿಗಳ ಮೃದು ಧೋರಣೆಗೆ ಬ್ರಿಟೀಷರು ಉದಾಸೀನ ತೋರಿದರು. ಅಲ್ಲದೆ ವಿಶ್ವದಲ್ಲಿ ನಡೆದ ಕೆಲ ಘಟನೆಗಳು ಹೋರಾಟದ ತೀವ್ರತನ ಬೆಳೆಯಲು ಕಾರಣವಾದವು.
1905 ರಲ್ಲಿ ಕರಾಚಿ ಕ್ರಾನಿಕಲ್ ಎಂಬ ಪತ್ರಿಕೆ ಸಣ್ಣ ದೇಶವಾದ ಜಪಾನ್ ರಷ್ಯಾವನ್ನು ಸೋಲಿಸುವದಾದರೆ ಭಾರತ ಇಂಗ್ಲೆಂಡ್ ನ್ನು ಸೋಲಿಸಿ ವಿಶ್ವದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂಬ ಲೇಖನ ಪ್ರಕಟಿಸಿತು. ಇದರಿಂದ ತೀವ್ರಗಾಮಿ ಚಳುವಳಿ ಬೆಳೆಯಿತು.
ತೀವ್ರಗಾಮಿ ಚಳುವಳಿಯ ಪ್ರಮುಖ ನಾಯಕರು :
ಬಾಲಗಂಗಾಧರ್ ತಿಲಕ್ :
- ಲೋಕಮಾನ್ಯ ಎಂದೇ ಹೆಸರಾದ ತಿಲಕರು ಅಪ್ಪಟ ದೇಶಭಕ್ತರು ಬ್ರಿಟೀಷರನ್ನು ಹೊರ ಹಾಕಲು ಹುಟ್ಟಿದ ಅವತಾರ ಪುರುಷ ಎನಿಸಿಕೊಂಡಿದ್ದರು. 1856 ರಲ್ಲಿ ಮಹಾರಾಷ್ಟ್ರದ ಚಿಖಿಲ್ ಎಂಬ ಗ್ರಾಮದಲ್ಲಿ ಜನಿಸಿದರು.
- ಕೇಸರಿ ದಿ ಮರಾಠ್ ಮತ್ತು ಕಾಲ ಎಂಬ ಪತ್ರಿಕೆಗಳನ್ನು ಹೊರಡಿಸುವುದರ ಮೂಲಕ ಜನರಿಗೆ ರಾಜಕೀಯ ಶಿಕ್ಷಣ ನೀಡಿದರು.
- ಇವರ ಹೋರಾಟದ ಸಂಘಟನೆ ದೇಶಾಭಿಮಾನ ಕಂಡ ಬ್ರಿಟೀಷರು ಇವರನ್ನು ಅಶಾಂತಿಯ ಜನಕ ಎಂದರು.
- ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ಪಡೆದು ತೀರುತ್ತೇನೆಂದು ಹೋರಾಟ ಮಾಡಿದ್ದರಿಂದ ಇವರನ್ನು ಸ್ವಾತಂತ್ರ್ಯಚಳಿವಳಿಯ ನೈಜ ಪಿತಾಮಹಾ ಎನ್ನುತ್ತಾರೆ.
- ಗೀತಾರಹಸ್ಯ ಎಂಬ ಕೃತಿಯನ್ನು ಬರೆದರು.
ಲಾಲಾಲಜಪತರಾಯ್ :
- ಪಂಜಾಬಿನ ಕೇಸರಿ ಎಂದು ಪ್ರಸಿದ್ದರಾಗಿದ್ದಾರೆ. 1865 ರಲ್ಲಿ ಪಂಜಾಬ್ ನ ಜಗರಾನ್ ಎಂಬಲ್ಲಿ ಜನಿಸಿದರು.
- 1916 ರಲ್ಲಿ ಅಮೇರಿಕಾದಲ್ಲಿ ಇಂಡಿಯನ್ ಹೋಂರೂಲ್ ಲೀಗ್ ಸ್ಥಾಪಿಸಿದರು.
- ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೇಸ್ ಸ್ಥಾಪಿಸಿ ಅದರ ಮೊದಲ ಅದ್ಯಕ್ಷರಾದರು.
- ಪಂಜಾಬಿ, ವಂದೇ ಮಾತರಂ, ಪೀಪಲ್ಸ್ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
- 1920 ರಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ನ ವಿಶೇಷ ಅಧಿವೇಶನದ ಅದ್ಯಕ್ಷರಾಗಿದ್ದರು.
ಬಿಪಿನ್ ಚಂದ್ರಪಾಲ್ :
- ಇವರನ್ನು ಕ್ರಾಂತಿಕಾರಕ ವಿಚಾರಧಾರೆಯ ಜನಕ ಎಂದೇ ಹೆಸರಾದರು.
- ಇವರು ಬಾಂಗ್ಲಾದೇಶದ ಪೆಲಿ ಎಂಬ ಗ್ರಾಮದಲ್ಲಿ ಜನಿಸಿದರು.
- ತೀವ್ರಗಾಮಿ ಚಳುವಳಿಯಲ್ಲಿ ಲಾಲ್ ಬಾಲ್ ಪಾಲ್ ಎಂದೇ ಪ್ರಸಿದ್ದರಾಗಿದ್ದಾರೆ.
- ಪೆರಿದಾಶಕ ಎಂಬ ಪತ್ರಕೆಗಳನ್ನು ಹೊರಡಿಸಿದರು.
ಅರವಿಂದ ಘೋಷ್ :
- ಇವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ತತ್ವಜ್ಞಾನಿಗಳು ಮತ್ತು ಕವಿಗಳಾಗಿದ್ದರು.
- ಇವರ ಮಹಾಕಾವ್ಯ ಸಾವಿತ್ರಿ.
- ಇವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಮದಮೋಹನ ಮಾಳವೀಯ, ಸುಭಾಷ್ ಚಂದ್ರ ಬೋಸ್, ರವೀಂದ್ರನಾಥ್ ಟ್ಯಾಗೋರ.
ತೀವ್ರಗಾಮಿ ಯುಗದ ಘಟನೆಗಳು :
- ಬಂಗಾಳದ ವಿಭಜನೆ 1905 ಅಕ್ಟೋಬರ್ 16 ರಂದು ಆಯಿತು
- 1906 ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ
- ಸೂರತ್ ಒಡಕು ಅಥವಾ ಬಿಕ್ಕಟ್ಟು
- 1916 ರ ಹೋಂರೂಲ್ ಚಳುವಳಿ
- 1916 ರ ಲಕ್ನೋ ಒಪ್ಪಂದ
- 1919 ಫೆಬ್ರವರಿ 6 ರ ರೌಲತ್ ಕಾಯಿದೆ
FAQ :
ತೀವ್ರಗಾಮಿ ಯುಗ ಎಂದರೇನು?
ಕ್ರಿ.ಶ 1905 ರಿಂದ 1919 ರವರೆಗಿನ ಅವಧಿಯನ್ನು ತೀವ್ರಗಾಮಿ ಯುಗ ಎನ್ನುತ್ತೇವೆ.
ತೀವ್ರಗಾಮಿ ಯುಗದ ಒಂದು ಘಟನೆ ತಿಳಿಸಿ?
1919 ಫೆಬ್ರವರಿ 6 ರ ರೌಲತ್ ಕಾಯಿದೆ
ಇತರೆ ವಿಷಯಗಳು :
ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾಹಿತಿ