ಸರ್ವೋಚ್ಛ ನ್ಯಾಯಾಲಯದ ಬಗ್ಗೆ ಮಾಹಿತಿ
ಸರ್ವೋಚ್ಛ ನ್ಯಾಯಾಲಯದ :
ನಮ್ಮ ನ್ಯಾಯಾಂಗ ವ್ಯವಸ್ಥೆಯು ಏಕೀಕೃತವಾಗಿದ್ದು, ಹೆಚ್ಚು ಮಹತ್ವದ ಸ್ಥಾನ ಪಡೆದುಕೊಂಡಿದೆ. ಅಂದರೆ ಅಮೇರಿಕಾದಂತೆ ಕೇಂದ್ರ ಹಾಗೂ ಪ್ರಾಂತ್ಯಗಳಿಗೆ ಪ್ರತ್ಯೇಕ ನ್ಯಾಯಾಲಯಗಳಿರದೆ ಸಮಸ್ತ ರಾಷ್ಟ್ರಕ್ಕೆ ಒಂದೇ ನ್ಯಾಯಾಂಗ ವ್ಯವಸ್ಥೆ ಜಾರಿಯಲ್ಲಿದೆ. ನಮ್ಮ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಸ್ವತಂತ್ರವಾಗಿದೆ. ಉಚ್ಛ ನ್ಯಾಲಯಗಳು ಮತ್ತು ಅಧೀನ ನ್ಯಾಯಲಯಗಳು, ಸರ್ವೋಚ್ಛ ನ್ಯಾಯಾಲಯದ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಕ್ಕೂ ಸರ್ವೋಚ್ಛ ನ್ಯಾಯಾಲಯವೇ ರಾಷ್ಟ್ರದ ಅತ್ಯುನ್ನತ ನ್ಯಾಯಾಲಯವಾಗಿದೆ. ಇದರ ತೀರ್ಪೇ ಅಂತಿಮವಾದುದು.
ಸರ್ವೋಚ್ಛ ನ್ಯಾಯಾಲಯದ ರಚನೆ :
ಸಂವಿಧಾನದಲ್ಲಿ ಹೇಳಿರುವಂತೆ ಸಂಸತ್ತಿನ ಶಾಸನದಿಂದ ರಚಿಸಲಾದ ಸರ್ವೋಚ್ಛ ನ್ಯಾಯಾಲಯವು ಜನವರಿ 28, 1950 ರಂದು ಅಸ್ತಿತ್ವಕ್ಕೆ ಬಂದಿದ್ದು, ಕೇಂದ್ರ ಕಛೇರಿ ದೆಹಲಿಯಲ್ಲಿದೆ. ಈ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ. ಪ್ರಸ್ತುತ ಮುಖ್ಯ ನ್ಯಾಯಾಧೀಶರನ್ನೊಳಗೊಂಡು 31 ಮಂದಿ ನ್ಯಾಯಾಧೀಶರಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಅಹರ್ತೆಗಳು :
- ಭಾರತದ ಪ್ರಜೆಯಾಗಿರಬೇಕು.
- ಯಾವುದೇ ಉಚ್ಛನ್ಯಾಯಾಲಯದಲ್ಲಿ ಕನಿಷ್ಠ 5 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಯಾವುದೇ ಉಚ್ಛ ನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಅಥವಾ ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ನ್ಯಾಯ ನಿಪುಣರಾಗಿರಬೇಕು.
- ಈ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷ ಮತ್ತು ಅದಕ್ಕೂ ಮುಂಚೆಯೇ ರಾಷ್ಟ್ರಪತಿಗಳಿಗೆ ರಾಜೀನಾಮೆ ನೀಡಬಹುದು. ಅವರು ಕರ್ತವ್ಯಲೋಪ ಎಸಗಿದಲ್ಲಿ ಸಂಸತ್ತಿನ ಎರಡೂ ಸದನಗಳ ನಿರ್ದಿಷ್ಟ ಬಹುಮತದ ಕೋರಿಕೆಯಂತೆ ರಾಷ್ಟ್ರಪತಿಗಳು ಅವರನ್ನು ಪದಚ್ಯುತಿಗೊಳಿಸಬಹುದು. ನಿವೃತ್ತಿಯಾದ ಅಥವಾ ಪದಚ್ಯುತಿಗೊಂಡ ನಂತರ ದೇಶದ ಯಾವುದೇ ನ್ಯಾಯಾಲಯದಲ್ಲಿ ಇವರು ವಾದ ಮಾಡುವಂತಿಲ್ಲ. ಇವರ ವೇತನ ಭತ್ಯೆಗಳನ್ನು ಸಂಸತ್ತು ಕಾನೂನು ಮಾಡುವುದರ ಮೂಲಕ ನಿರ್ಧರಿಸುತ್ತದೆ.
ಅಧಿಕಾರ ಕಾರ್ಯಗಳು :
ಮೂಲ ಅಧಿಕಾರ ವ್ಯಾಪ್ತಿ :
ಸರ್ವೋಚ್ಛ ನ್ಯಾಯಾಲಯದಲ್ಲಿ ನೇರವಾಗಿ ಮೊಕದ್ದಮೆ ಹೂಡುವುದೇ ಮೂಲ ಅಧಿಕಾರ ಮೂಲ ಅಧಿಕಾರ ವ್ಯಾಪ್ತಿ. ಕೇಂದ್ರ-ರಾಜ್ಯಗಳ ನಡುವೆ , ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸರ್ವೋಚ್ಛ ನ್ಯಾಯಾಲಯಕ್ಕಿದೆ. ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು, ಸಂವಿಧಾನಕ್ಕೆ ಅರ್ಥ ವಿವರಣೆ ನೀಡುವ ಅಧಿಕಾರ , ಆಜ್ಞೆಗಳನ್ನು ನೀಡುವುದು.
ಮೇಲ್ಮನವಿ ಅಧಿಕಾರ ವ್ಯಾಪ್ತಿ :
ಕೆಳ ನ್ಯಾಯಾಲಯಗಳು ನೀಡುವ ತೀರ್ಪುಗಳ ವಿರುದ್ದ ಕಕ್ಷಿದಾರರು ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇಂತಹ ಮೇಲ್ಮನವಿ ಸ್ವೀಕರಿಸಿ ವಿಒಚಾರಣೆ ನಡೆಸುವ ಅಧಿಕಾರ ಈ ನ್ಯಾಯಾಲಯಕ್ಕಿದೆ ಮತ್ತು ಮೇಲ್ಮನವಿ ಸಲ್ಲಿಸುವಂತೆ ವಿಶೇಷ ಅನುಮತಿ ನೀಡುವ ಅಧಿಕಾರವೂ ಈ ನ್ಯಾಯಾಲಯಕ್ಕಿದೆ.
ಸಲಹಾ ಅಧಿಕಾರ ವ್ಯಾಪ್ತಿ :
ಸಾರ್ವಜನಿಕವಾಗಿ ಪ್ರಮುಖವಾಗಿರುವ ವಿಷಯದ ಬಗ್ಗೆ ರಾಷ್ಟ್ರಪತಿಗಳು ಸಲಹೆ ಕೇಳಿದಾಗ ಸರ್ವೋಚ್ಛ ನ್ಯಾಯಾಲಯ ಸಲಹೆ ನೀಡುವ ಅಧಿಕಾರವಿದೆ. ಸಂವಿಧಾನ ಜಾರಿಗೆ ಬರುವುದಕ್ಕಿಂತ ಮುಂಚೆ ಸರ್ಕಾರ ಮಾಡಿಕೊಂಡಿರುವ ಒಪ್ಪಂದ, ಕರಾರು ಮುಂತಾದ ವಿಷಯಗಳ ಬಗ್ಗೆ ವಿವಾದ ಉಂಟಾದರೆ ರಾಷ್ಟ್ರಪತಿಗಳು ಈ ನ್ಯಾಯಾಲಯದ ಸಲಹೆ ಕೇಳಬಹುದು.
ಈ ಮೇಲ್ಕಂಡ ಅಧಿಕಾರಗಳ ಜೊತೆಗೆ ಸರ್ವೋಚ್ಛ ನ್ಯಾಯಾಲಯವು ದಾಖಲೆಗಳ ನ್ಯಾಯಾಲಯವಾಗಿ, ಕೇಮದ್ರ ಮತ್ತು ರಾಜ್ಯಗಳಿಗೆ ಮುಖ್ಯ ಸಲಹೆಗಾರನಾಗಿ, ವಿಶೇಷ ರಿಟ್ಗಳನ್ನು ಹೊರಡಿಸುವ ಅಧಿಕಾರ ಪಡೆದಿದೆ.
FAQ :
ಸರ್ವೋಚ್ಛ ನ್ಯಾಯಾಲಯವು ಯಾವಾಗ ಅಸ್ತಿತ್ವಕ್ಕೆ ಬಂತು?
ಜನವರಿ 28, 1950
ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಒಂದು ಅಹರ್ತೆ ತಿಳಿಸಿ?
ಯಾವುದೇ ಉಚ್ಛನ್ಯಾಯಾಲಯದಲ್ಲಿ ಕನಿಷ್ಠ 5 ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರಬೇಕು ಅಥವಾ ಯಾವುದೇ ಉಚ್ಛ ನ್ಯಾಯಾಲಯದಲ್ಲಿ 10 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಅಥವಾ ರಾಷ್ಟ್ರಪತಿಯವರ ಅಭಿಪ್ರಾಯದಲ್ಲಿ ನ್ಯಾಯ ನಿಪುಣರಾಗಿರಬೇಕು.
ಇತರೆ ವಿಷಯಗಳು :