ಸ್ಕೌಟ್ಸ್ – ಗೈಡ್ಸ್ ಚಳುವಳಿ ಬಗ್ಗೆ ಮಾಹಿತಿ Information about the Scouts-Guides movement Scouts -Guides bagge Mahithi in Kannada
ಸ್ಕೌಟ್ಸ್ – ಗೈಡ್ಸ್ ಚಳುವಳಿ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಸ್ಕೌಟ್ಸ್ – ಗೈಡ್ಸ್ ಚಳುವಳಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಸ್ಕೌಟ್ಸ್ – ಗೈಡ್ಸ್ ಚಳುವಳಿ :
“ಭಾರತದ ಪ್ರತಿಯೊಂದು ಮನೆಯಲ್ಲೂ ಸ್ಕೌಟ್ಸ್ ಗೈಡ್ಸ್ ಮಕ್ಕಳಿರಬೇಕೆಂದು ನಾನು ಅಪಕ್ಷೀಸಸುತ್ತೇನೆ”, ಎಂದು ಮಾಹಾತ್ನ ಗಾಂಧೀಜಿಯವರು ಹೇಳಿದ್ದಾರೆ. ಸ್ಕೌಟ್ಸ್ – ಗೈಡ್ಸ್ ಎಂದರೇ ಅಂತರಾಷ್ಟ್ರೀಯ, ಸ್ವಯಂಸೇವಾ, ಶಿಕ್ಷಣಪೂರಕ, ರಾಜಕೀಯ ಮುಕ್ತ, ಯಾವ ಭೇದವೂ ಇಲ್ಲದ ಯುವ ಚಳುವಳಿ.
ಚಳುವಳಿಯ ಹಿನ್ನಲೆ :
ಸ್ಕೌಟ್ಸ್ – ಗೈಡ್ಸ್ ಯುವ ಚಳುವಳಿಯನ್ನು ಸಂಶೋಧಿಸಿ ಬಿತ್ತಿ ಬೆಳೆಸಿದವರು ಲಾರ್ಡ್ ಬೇಡನ್ ಪಾವೆಲ್. ಅವರು 1876 ರಲ್ಲಿ ವಿದ್ಯಾಭ್ಯಾಸ ಮುಗಿಸಿ ಸೈನ್ಯಕ್ಕೆ ಸೇರಿದರು. ಅವರು ಬಾಲ್ಯದಿಂದಲೇ ಬೆಳೆಸಿಕೊಂಡ ಪ್ರಕೃತಿಯ ಒಡನಾಟ, ಧೈರ್ಯ, ಸಾಹಸ, ಪ್ರತಿಭೆ, ಜಾಣ್ಮೆಗಳು ಸೈನ್ಯದ ಪರೀಕ್ಷೆಯಲ್ಲಿ ಮತ್ತು ವೃತ್ತಿಯಲ್ಲಿ ಉನ್ನತ ಸ್ಥಾನ ದೊರಕಿಸಿಕೊಟ್ಟಿತು.
ಚಳುವಳಿಯ ಪ್ರಾರಂಭ :
ಬೇಡನ್ ಪಾಲ್ ರವರು ಭಾರತದಲ್ಲಿ ಸೇವೆ ಸಲ್ಲಿಸಿ ನಂತರ ದಕ್ಷಿಣ ಆಫ್ರಿಕಾದಲ್ಲಿ ಬೋಯರ್ಸಗಳೊಡನೆ ಮೇಫ್ಕಿಂಗ್ ನಗರದಲ್ಲಿ ಯುದ್ದ ಮಾಡಿದರು. ಸೈನಿಕರ ಸಂಖ್ಯೆ ಕಡಿಮೆ ಇತ್ತು. ಅದೇ ನಗರದ ಬ್ರಿಟಿಷ್ ಗಂಡು ಮಕ್ಕಳ ಒಂದು ಪಡೆಯನ್ನು ರಚಿಸಿ, ತರಬೇತಿ ನೀಡಿಯುದ್ದ ಭೂಮಿಯಲ್ಲಿ ದೂತ ಸೇವೆ ಮಾಡಲು ನೇಮಕ ಮಾಡಿದರು.
ಈ ಪಡೆ ಉತ್ಸಾಹದಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿತು. ಬೇಡನ್ ಪಾಲ್ ರವರು ಈ ಪಡೆಯ ಸೇವೆಯನ್ನು ಮೆಚ್ಚಿದರು. ಬಾಲಕರಿಗೇಕೆ ಸ್ಕೌಟಿಂಗ್ ತರಬೇತಿ ನೀಡಬಾರದು ಎಂಬ ವಿಚಾರ ಅವರ ಮನಸ್ಸಿನಲ್ಲಿ ಅಂಕುರಿಸಿತು. ಈ ವಿಚಾರವನ್ನು ಕಾರ್ಯರೂಪಕ್ಕೆ ತಂದು ಲಂಡನ್ನಿನ ಬ್ರೌನ್ಸೀ ದ್ವೀಪದಲ್ಲಿ 1907 ರಲ್ಲಿ 20 ಗಂಡು ಮಕ್ಕಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಿದರು. ಪ್ರಯೋಗ ಯಶಸ್ವಿಯಾಯಿತು. ಸ್ಕೌಟಿಂಗ್ ಆರಂಭವಾಯಿತು, ಇದನ್ನು ಅನುಸರಿಸಿ ಗೈಡಿಂಗ್ ಆರಂಭವಾಯಿತು.
ಚಳುವಳಿಗೆ ಸೇರುವ ವಿಧಾನ :
ಇದಕ್ಕೆ ಸೇರಲು ನಿಮ್ಮ ಶಾಲೆಯಲ್ಲಿ ಸ್ಕೌಟ್ಸ್ – ಗೈಡ್ಸ್ ದಳ ತೆರೆದಿರಬೇಕು ಮತ್ತು ದಳ ನೊಂದಣಿಯಾಗಿರಬೇಕು. ಇದಕ್ಕಾಗಿ ಸ್ಕೌಟ್ಸ್ – ಗೈಡ್ಸ್ ಪಡೆದ ತರಬೇತಿ ಪಡೆದ ಶಿಕ್ಷಕಿ/ಶಿಕ್ಷಕರು ಇರಬೇಕು. 10 ರಿಂದ 16 ವರ್ಷದ ಗಂಡು ಮಕ್ಕಳಿಗೆ ಸ್ಕೌಟ್ಸ್ ತರಬೇತಿ, ಹೆಣ್ಣು ಮಕ್ಕಳಿಗೆ ಗೈಡ್ಸ್ ತರಬೇತಿ ಇರುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಚಳುವಳಿಯ ಪರಿಚಯ ಮಾಡಿಕೊಂಡು, ಪ್ರತಿಜ್ಞೆಯನ್ನು ಧ್ವಜದಡಿ ನಿಮ್ಮ ಶಿಕ್ಷಕ/ಶಿಕ್ಷಕಿಗೆ ನೀಡಿ ಅವರಿಂದ ಸದಸ್ಯತ್ವ ಪದಕ ಪಡೆಯಬೇಕು. ನೀವು ನಿಮ್ಮ ಶಾಲೆಯಲ್ಲಿ ಸದಸ್ಯರಾದರೆ ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೂ ಸದಸ್ಯರಾದಂತೆ.
ಸ್ಕೌಟ್ಸ್ ಗೈಡ್ಸ್ ಗೆ ಸೇರುವುದರಿಂದ ಆಗುವ ಉಪಯೋಗ :
- ವ್ಯಕ್ತಿತ್ವ ವಿಕಸನ
- ನಾಯಕತ್ವ
- ಪೌರತ್ವ
- ನಿಮ್ಮ ವಿರಾಮ ವೇಳೆಯ ಸದುಪಯೋಗ
- ಜೀವಲ ಶಿಕ್ಷಣ ಕೌಶಲ್ಯ, ಉತ್ತಮ ಜೀವನ
- ಸಮಾಜದ ಬಗ್ಗೆ ಕಾಳಜಿ, ಕರ್ತವ್ಯ ಪ್ರತಿಜ್ಞೆ
- ಸಮಾಜದಲ್ಲಿ ಘನತೆ, ಗೌರವ
- ದೇಶ ವಿದೇಶ ಕಾರ್ಯಕ್ರದಲ್ಲಿ ಭಾಗವಹಿಸುವ ಅವಕಾಶ
- ಶಿಕ್ಷಣ, ಉದ್ಯೋಗ ಅವಕಾಶಗಳಲ್ಲಿ ಮನ್ನಣೆ
FAQ :
ಸ್ಕೌಟ್ಸ್ – ಗೈಡ್ಸ್ ಯುವ ಚಳುವಳಿಯನ್ನು ಸಂಶೋಧಿಸಿ ಬಿತ್ತಿ ಬೆಳೆಸಿದವರು ಯಾರು?
ಲಾರ್ಡ್ ಬೇಡನ್ ಪಾವೆಲ್
ಸ್ಕೌಟ್ಸ್ ಗೈಡ್ಸ್ ಗೆ ಸೇರುವುದರಿಂದ ಆಗುವ ಒಂದು ಉಪಯೋಗ ತಿಳಿಸಿ?
ವ್ಯಕ್ತಿತ್ವ ವಿಕಸನ
ನಾಯಕತ್ವ
ಇತರೆ ವಿಷಯಗಳು :