ಸರ್ವಜ್ಞನ ವಚನಗಳ ಬಗ್ಗೆ ಮಾಹಿತಿ | Information about Omniscient Verses in Kannada

Join Telegram Group Join Now
WhatsApp Group Join Now

ಸರ್ವಜ್ಞನ ವಚನಗಳ ಬಗ್ಗೆ ಮಾಹಿತಿ Information about Omniscient Verses Sarvagnana Vachangalu in Kannada

ಸರ್ವಜ್ಞನ ವಚನಗಳ ಬಗ್ಗೆ ಮಾಹಿತಿ

Information about Omniscient Verses in Kannada
Information about Omniscient Verses in Kannada

ಈ ಲೇಖನಿಯಲ್ಲಿ ಸರ್ವಜ್ಞನ ವಚನಗಳ ಬಗ್ಗೆ ಸಂಪೂರ್ಣವಾದ ಮಾಗಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸರ್ವಜ್ಞ

ಸರ್ವಜ್ಞನು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕು ಅಂಬಲೂರ ಮಾಸೂರು ಎಂಬಲ್ಲಿ ಜನಿಸಿದ್ದನು. ಇದು ಈಗ ಸರ್ವಜ್ಞನ ಮಾಸೂರು ಎಂದೇ ಪ್ರಸಿದ್ಧಿಯನ್ನು ಹೊಂದಿದೆ. ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು – ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ. ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ಸರ್ವಜ್ಞ ಒಂದು ಸ್ಥಳದಲ್ಲಿ ನಿಲ್ಲದೆ ಸದಾ ಸಂಚರಿಸುತ್ತಾ ಸಮಾಜದ ಎಲ್ಲಾ ಬಗೆಯ ಅಂಕುಡೊಂಕುಗಳನ್ನು ಒರೆ ಹಚ್ಚಿ ಅದಕ್ಕೊಂದು ಪರಿಹಾರ ಕೊಡುತ್ತಾ ತಮ್ಮ ವಚನಗಳಲ್ಲಿ ತುಂಬಾ ಸರಳವಾಗಿ ಬಿಡಿಸಿಬಿಟ್ಟಿದ್ದಾರೆ. ಇವರ ವಚನಗಳು ತುಂಬಾ ಸರಳವಾಗಿದ್ದು, ಜನಸಾಮನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಸರ್ವಜ್ಞನ ತ್ರಿಪದಿಗಳು ಜನರ ಬಾಯಲ್ಲಿ ಗಾದೆ ಮಾತುಗಳಾಗಿ ನೆಲೆ ನಿಂತಿವೆ. ಸರ್ವಜ್ಞ ಕನ್ನಡ ನಾಡಿನ ಕವಿಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲಾ ವಿಷಯಗಳು ಇವರ ತ್ರಿಪದಿಯಲ್ಲಿ ಅಡಕವಾಗಿವೆ (ತ್ರಿಪದಿಗಳೆಂದರೆ ಮೂರು ಸಾಲಿನ ವಚನಗಳು).

ಸರ್ವಜ್ಞ ಎಂದರೆ ಸಂಸ್ಕೃತದಲ್ಲಿ “ಎಲ್ಲವನ್ನೂ ತಿಳಿದವ” ಎನ್ನಲಾಗಿದೆ. ಈತನ ಕಾಲ ಮತ್ತು ಜೀವನಗಳ ಬಗ್ಗೆ ನಿಖರವಾಗಿ ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಈ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತ ಜೀವಿಸಿದ್ದ ಕಾಲ ಸುಮಾರಾಗಿ 16-17ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಇವರ ಕಾವ್ಯನಾಮ.

ವಚನಗಳು

ಅಗ್ಗ ಬಡವಗೆ ಲೇಸು ಬುಗ್ಗೆಯಗಸಗೆ ಲೇಸು
ತಗ್ಗಿದ ಗದ್ದೆ ಉಳಲೇಸು, ಜೇಡಂಗೆ
ಮಗ್ಗ ಲೇಸೆಂದ ಸರ್ವಜ್ಞ

Join WhatsApp Join Telegram

ವಚನದ ಅರ್ಥ :

ಅಗ್ಗವಿದ್ದಂಥ ವಸ್ತುಗಳು ಬಡವನಿಗೆ, ಬುಗ್ಗೆಯು ಅಗಸನಿಗೆ, ತಗ್ಗಿನಲ್ಲಿದ್ದ ಗದ್ದೆಯು ಬಿತ್ತನೆಯ ಕೆಲಸಕ್ಕೆ ಯೋಗ್ಯವಿರುವಂತೆ ನೇಕಾರನಿಗೆ ಮಗ್ಗವೇ ಲೇಸು.

ಗಾಣಿಗನು ಈಶ್ವರ ಕಾಣನೆಂಬುದು ಸಹಜ
ಏಣಾಂಕಧರನು, ಧರೆಗಿಳಿಯಲವನಿಂದ
ಗಾಣವಾಡಿಸುವ ಸರ್ವಜ್ಞ

ವಚನದ ಅರ್ಥ :

ಗಾಣಿಗನು ಈಶ್ವರನನ್ನು ಕಂಡಿಲ್ಲವೆಂಬುದು ನಿಜ; ಆದರೆ ಒಂದು ವೇಳೆ ಮಹದೇವನೇ ಅವನ ಬಳಿ ಇರುವುದಾದರೆ ಗಾಣಿಗನು ಶಿವನಿಗೂ ಗಾಣ ತಿರುಗಿಸಲು ಹಚ್ಚದೇ ಬಿಡಲಾರನು.

ಮಾತೆಯಿಂ ಹಿತರಿಲ್ಲ ಕೋತಿಯಿಂ ಮರುಳಿಲ್ಲ
ಜ್ಯೋತಿಯಿಂದಧಿಕ ಬೆಳಕಿಲ್ಲ, ದೈವವ
ಜಾತನಿಂದಿಲ್ಲ ಸರ್ವಜ್ಞ

ವಚನದ ಅರ್ಥ :

ತಾಯಿಗಿಂತ ಹೆಚ್ಚಿನ ಬಂಧುಗಳಿಲ್ಲ, ಮಂಗನಿಗಿಂತ ಹೆಚ್ಚಿನ ಮೂರ್ಖರಿಲ್ಲ ಹಾಗೂ ಜ್ಯೋತಿಗಿಂತ ಹೆಚ್ಚಿನ ಬೆಳಕು ಇಲ್ಲ. ಅದರಂತೆಯೇ ದೈವಪ್ರಾಪ್ತಿಯು ಪುತ್ರನಿಂದಲೇ ಹೊರತು ಅನ್ಯರಿಂದಲ್ಲ.

ಭಕ್ತಿಯಿಂದಲೇ ಮುಕ್ತಿ ಭಕ್ತಿಯಿಂದಲೇ ಶಕ್ತಿ
ಭಕ್ತಿ ವಿರಕ್ತಿಯಳಿದರೀ, ಜಗದಲ್ಲಿ
ಮುಕ್ತಿಯೆಲ್ಲೆಂದ ಸರ್ವಜ್ಞ

ವಚನದ ಅರ್ಥ :

ಭಕ್ತಿಯಿಂದಲೇ ಮುಕ್ತಿ, ಅದರಿಂದ ಶಕ್ತಿಯೂ ಇದೆ. ಭಕ್ತಿ- ವಿರಕ್ತಿಗಳು ಅಳಿದರೆ ಈ ಜಗತ್ತಿನೊಳಗೆ ಮುಕ್ತಿಯೇ ಇಲ್ಲ.ಅದಕ್ಕಾಗಿ ಭಕ್ತಿಯು ಬೇಕೇ ಬೇಕು.

ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ, ಕೊಡಲೊಲ್ಲದವನೊಡನೆ
ಕಳ್ಳಗೆ ನೃಪಗೆ ಸರ್ವಜ್ಞ

ವಚನದ ಅರ್ಥ :

ತನ್ನ ಬಳಿ ಇದ್ದಾಗ ಸರಿಯಾಗಿ ಮಾಡದಂಥವನು, ಒಳ್ಳೆಯ ಬಟ್ಟೆಗಳನ್ನು ತೊಡಲಾರದಂಥವನು ಹಾಗೂ ಸತ್ಪಾತ್ರರಲ್ಲಿ ದಾನವನ್ನು ಮಾಡಲಾರದಂಥವನ ಐಶ್ವರ್ಯವು ಕಳ್ಳರು ಹಾಗೂ ಸರಕಾರದ ಪಾಲಾಗುವುದರಲ್ಲಿ ಸಂಶಯವಿಲ್ಲ.

ಅನ್ನವನು ಇಕ್ಕಿ ನೀಂ ಖಿನ್ನವನು ಪಡಬೇಡ
ಭಿನ್ನ ಭೇದಗಳ ಇಲ್ಲದಲೆ, ಶಿವ ಜವ
ನಿನ್ನು ಸಲಹುವನು ಸರ್ವಜ್ಞ

ವಚನದ ಅರ್ಥ :

ನೀನು ಅನ್ನವನಿಕ್ಕಿ ಅನ್ನದಾನವ ಮಾಡಿ ದುಃಖ ಪಡಬೇಡ.ಶಿವ ಯಾವುದೇ ತರಹದ ಭಿನ್ನ-ಭೇದಗಳಿಲ್ಲದೇ ಜಗತ್ತನ್ನು ರಕ್ಷಿಸುತ್ತಿರುವದನ್ನು ನೀನು ಮರೆಯಬೇಡ.

FAQ

ಸರ್ವಜ್ಞನು ಎಲ್ಲಿ ಜನಿಸಿದರು ?

ಸರ್ವಜ್ಞನು ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕು ಅಂಬಲೂರ ಮಾಸೂರು ಎಂಬಲ್ಲಿ ಜನಿಸಿದ್ದನು.

ಸರ್ವಜ್ಞ ಎಂದರೇನು ?

ಎಲ್ಲವನ್ನೂ ತಿಳಿದವ ಎಂದರ್ಥವನ್ನು ಹೊಂದಿದೆ.

ಇತರೆ ವಿಷಯಗಳು :

ಅತಿ ಆಸೆ ಗತಿಗೇಡು ಗಾದೆ ವಿವರಣೆ

ರಸ್ತೆ ಸುರಕ್ಷತೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.