ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ Information about Karnataka State Commission for Women Karnataka Rajya Mahila Ayogadha bagge Mahithi in Kannada
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗ :
ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಶಾಸನಬದ್ದ ಆಯೋಗವಾಗಿದ್ದು ದಿನಾಂಕ 6/8/1996 ರಿಂದ ಅಸ್ತಿತ್ವದಲ್ಲಿದ್ದು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಮುಖ ಭಾಗ. ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಆಯೋಗಧ ವಿವಿಧ ಸೌಲಭ್ಯಗಳು ಮತ್ತು ಸಾರ್ವಜನಿಕರಿಗೆ, ಮಹಿಳೆಯರ ಬಗ್ಗೆ ತಿಳಿಸಿಕೊಡುತ್ತದೆ.
ಸೌಲಭ್ಯಗಳು :
- ಕೌಟುಂಬಿಕ ಸಮಸ್ಯೆಗಳಾದ ವರದಕ್ಷಿಣೆ ಕಿರುಕುಳ, ಜೀವನಾಂಶ, ವಿವಾಹ ವಿಚ್ಛೇಧನ, ಕೌಟುಬಿಂಕ ಕಾನೂನು ಮತ್ತು ಆಸ್ತಿ ಹಕ್ಕುಗಳ ಬಗ್ಗೆ, ಲೈಂಗಿಕ ಕಿರುಕುಳದ ಬಗ್ಗೆ ಮಹಿಳೆಯರು ಕಾನೂನಿನ ಅಡಿಯಲ್ಲಿ ಪರಿಹಾರ ಪಡೆಯಲು ಮತ್ತು ಸಹಾಯ ಪಡೆದುಕೊಳ್ಳಲು ಸೌಲಭ್ಯವಿರುತ್ತದೆ.
- ಕೌಟುಂಬಿಕ ನ್ಯಾಯಾಲಯದಲ್ಲಿ ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದಂತಹ ಕೌಟುಂಬಿಕ ಪ್ರಕರಣಗಳ ವ್ಯಾಜ್ಯಗಳನ್ನು ಪಾರಿವಾರಿಕ್ ಲೋಕ್ ಅದಾಲತ್ನಲ್ಲಿ ಸಮಾಲೋಚಿಸಿ ಬಗೆಹರಿಸಿಕೊಳ್ಳುವ ಸೌಲಭ್ಯ ಇರುತ್ತದೆ.
- ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾವೆ ಹೂಡಲು ಮಹಿಳೆಯರು ಕನಿಷ್ಠ 20,000 ರೂ ಗಳಿಂದ ಗರಿಷ್ಠ 2,00,000 ರೂ ವರೆಗೆ ಧನ ಸಹಾಯ/ಪರಿಹಾರ ಪಡೆದುಕೊಳ್ಳಲು ಸೌಲಭ್ಯಯಿರುತ್ತದೆ.
ಮಹಿಳೆಯರ ಬಗ್ಗೆ ಸಾರ್ವಜನಿಕರಿಗೆ ಇರಬೇಕಾದ ಮಾಹಿತಿಗಳು :
- ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಅಪರಾಧ.
- ಹೆಣ್ಣ ಮಗಳ ಮದುವೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
- ಮದುವೆಯ ಸಂದರ್ಭದಲ್ಲಿ ತೆಗೆಯಲಾಗಿದ ಭಾವಚಿತ್ರಗಳನ್ನು, ಉಡುಗೊರೆಗಳು, ಸ್ತ್ರೀಧನ ಇತ್ಯದಿಗಳ ದಾಖಲಾತಿಗಳನ್ನು ಇಟ್ಟುಕೊಳ್ಳುವುದರಿಂದ ಮುಂದೆ ತೊಂದರೆ ಆದಾಗ ಅನುಕೂಲವಾಗುತ್ತದೆ.
- ಮಹಿಳೆಯರ ಮೇಲೆ ಅತ್ಯಾಚಾರ ಆದಾಗ ಅವಳಿಗೆ ಪ್ರಥಮ ಚಿಕಿತ್ಸೆಯನ್ನು ಸರ್ಕಾರಿ ವೈದ್ಯರಿಂದ ಕೊಡಿಸಿ, ಅವಳ ಬಟ್ಟೆಯನ್ನು ಸಾಕ್ಷಿಗೆ ಜೋಪಾನವಾಗಿ ಇಡುವುದು.
- ಮಹಿಳೆಯ ಮೇಲೆ ದೌರ್ಜನ್ಯವಾದಾಗ ಸರ್ಕಾರಿ ವೈದ್ಯರಿಂದ ವೈದ್ಯಕೀಯ ಧೃಡೀಕರಣ ಪಡೆಯಲು ಮರೆಯಬೇಡಿ.
- ಮಹಿಳೆಯರ ಅಸ್ವಭಾವಿಕ ಸಾವು ಆದಾಗ ಸರ್ಕಾರಿ ವೈದ್ಯರಿಂದ ಶವ ಪರೀಕ್ಷೆಯನ್ನು ಮಾಡಿಸುವುದು.
- ಕುಟುಂಬದಲ್ಲಿ ಸಾವು, ಅಪಘಾತ, ಜಗಳ ಆಗಿರುವಾಗ, ಮಹಿಳೆಯು ಮಾನಸಿಕ ಅಸ್ಥಿರತೆಯಲ್ಲಿ ಇರುವಾಗ ಮಹಿಳೆಯರ ಸಂಬಂಧದವರು ನೀಡುವ ಯಾವುದೇ ಕಾಗದದ ಮೇಲೆ ರುಜು ಮಾಡಬೇಡಿ. ಇದರ ದುರುಪಯೋಗ, ಮೋಸ ಆಗಬಹುದು.
- 1989 ರ ನಂತರ ಮದುವೆ ಆದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲೀನ ಹಕ್ಕಿದೆ.
- ಸ್ಥಿರ ಆಸ್ತಿಗಳನ್ನು ಗಂಡ ಮತ್ತು ಹೆಂಡತಿ ಇಬ್ಬರ ಹೆಸರಿನಲ್ಲಿ ನೊಂದಾಯಿಸಬೇಕು.
- ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ದೂರು ನಿವಾರಣಾ ಸಮಿತಿ ರಚಿಸಬೇಕು.
- ತಾಲ್ಲೂಕು ಕೇಂದ್ರಗಳ ಸಿಡಿಪಿ ಕಛೇರಿಗಳಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ಅನ್ಯಾಯಗಳ ಬಗ್ಗೆ ಸಲಹೆ ಸಹಾಯ ನೀಡಲು ಸಾಂತ್ವನ ಕೇಂದ್ರಗಳಿವೆ.
FAQ :
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಯಾವಾಗ ಅಸ್ಥಿತ್ವಕ್ಕೆ ಬಂದಿತು?
6/8/1996
ಮಹಿಳೆಯರ ಬಗ್ಗೆ ಸಾರ್ವಜನಿಕರಿಗೆ ಇರಬೇಕಾದ ಮಾಹಿತಿಗಳು ಯಾವುವು?
ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಅಪರಾಧ.
ಹೆಣ್ಣ ಮಗಳ ಮದುವೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಇತರೆ ವಿಷಯಗಳು :