ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ Information about industries in Karnataka Karnatakada Kaigarikegala bagge Mahithi in Kannada
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಸಂಫೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕದ ಕೈಗಾರಿಕೆಗಳು :
ದೇಶದ ಯಾವುದೇ ರಾಜ್ಯದ ತ್ವರಿತವಾದ ಅಭಿವೃದ್ದಿಯಲ್ಲಿ ಕೈಗಾರಿಕಾಭಿವೃದ್ದಿ ಮಹತ್ವದ ಪಾತ್ರವಹಿಸುತ್ತದೆ. ಇಂತಹ ಉತ್ತಮ ಅವಕಾಶ ನಮ್ಮ ರಾಜ್ಯಕ್ಕಿದೆ. ಅಪಾರ ಖನಿಜ ಸಂಪತ್ತು, ಕಚ್ಚಾ ವಸ್ತುಗಳು, ಸೂಕ್ತ ವಾಯುಗುಣ, ಸಾಕಷ್ಟು ನೀರಿನ ಪೂರೈಕೆ, ಸಾರಿಗೆ ವ್ಯವಸ್ಥೆ, ನುರಿತ ಕಾರ್ಮಿಕರ ಲಭ್ಯತೆ, ವಿಶಾಲ ಮಾರುಕಟ್ಟೆ ಹಾಗೂ ತಂತ್ರಜ್ಞಾನ ಇರುವುದರಿಂದ ಕರ್ನಾಟಕವು ಅನೇಕ ವೈವಿಧ್ಯಮಯ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ನಮ್ಮ ರಾಜ್ಯವು ಕೃಷಿ ಆಧಾರಿತ ಗುಡಿ ಕೈಗಾರಿಕೆಗಳಿಂ ಆಧುನಿಕ ಕೈಗಾರಿಕೋದ್ಯಮದೆಡೆಗೆ ದಾಪುಗಾಲು ಹಾಕಿದೆ.
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ :
ಕರ್ನಾಟಕವು ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ. ಸರ್.ಎಂ.ವಿಶ್ವೇಶ್ವರಯ್ಯ ದೂರದೃಷ್ಟಿಯಿಂದ ಬಾಬಾಬುಡನ್ ಗಿರಿ ಬೆಟ್ಟಗಳಲ್ಲಿ ಸಿಗುವ ಉತ್ತಮ ಹಾಗೂ ಅಪಾರ ಕಬ್ಬಿಣದ ಅದಿರನ್ನು ಬಳಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಲಾಯಿತು. ಇದನ್ನು ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಕರೆಯಲಾಯಿತು. ಅನಂತರ 1989 ರಲ್ಲಿ ಭಾರತದ ಉಕ್ಕು ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು. ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯೆಂದು ಹೆಸರಿಡಲಾಯಿತು. ಈ ಕಾರ್ಖಾನೆಗೆ ಅಗತ್ಯವಾದ ಕಬ್ಬಿಣದ ಅದಿರು ಕೆಮ್ಮಣ್ಣುಗುಂಡಿಯಿಂದ, ಬಂಡಿಗುಡ್ಡದಿಂದ ಸುಣ್ಣ, ಭದ್ರಾ ನದಿಯಿಂದ ನೀರು ಹಾಗೂ ಸಂಡೂರಿನಿಂದ ಮ್ಯಾಂಗನೀಸ್ ಪೂರೈಕೆ ಅಗುತ್ತದೆ. ಕರ್ನಾಟಕದ ಮತ್ತೊಂದು ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಖಾಸಗಿ ವಲಯದ ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್. ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001 ರಲ್ಲಿ ಅತ್ಯಾಧುನಿಕ ಕೊರೆಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಲಾಗಿದೆ. ಇದು ಕಬ್ಬಿಣ ಮತ್ತು ಉಕ್ಕನ್ನು ಉತ್ಪಾದಿಸುತ್ತಿದೆ.
ಹತ್ತಿ ಬಟ್ಟೆ ಕೈಗಾರಿಕೆ :
ಆಧುನಿಕ ಹತ್ತಿ ಗಿರಣಿಗಳು 19 ನೇ ಶತಮಾನ ಕೊನೆಯ ಭಾಗದಲ್ಲಿ ಆರಂಭವಾಗತೊಡಗಿದ್ದವು. ಹತ್ತಿಯಿಂದ ಬೀಜ ಬೇರ್ಪಡಿಸುವ, ಹತ್ತಿ ದಾರ ತೆಗೆಯುವ ಇಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರಂಭಗೊಂಡವು. ಮೊಟ್ಟ ಮೊದಲು 1884 ರಲ್ಲಿ ಎಂ.ಎಸ್.ಕೆ.ಗಿರಣಿ ಕಲ್ಬುರ್ಗಿಯಲ್ಲಿ ಸ್ಥಾಪನೆಗೊಂಡಿತು. ಅನಂತರ ಹುಬ್ಬಳ್ಳಿಯಲ್ಲಿ ಹತ್ತಿ ಬಟ್ಟೆ ಕೈಗಾರಿಕೆಗಳು ಪ್ರಾರಂಭಗೊಂಡವು. 1900 ರ ನಂತರ ದೊಡ್ಡ ಹತ್ತಿ ಬಟ್ಟೆ ಗಿರಣಿಗಳು ಸ್ಥಾಪನೆಗೊಂಡವು. ಅವುಗಳಲ್ಲಿ ಬೆಂಗಳೂರಿನ ಬಿನ್ನಿ ಮಿಲ್, ಮಿನರ್ವ ಮಿಲ್, ಮೈಸೂರಿನ ಕೆ.ಆರ್.ಮಿಲ್, ದಾವಣಗೆರೆಯ ಕಾಟನ್ ಮಿಲ್ ಮುಂತಾದವು ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡಿದ್ದವು. ಅನಂತರ ಹತ್ತಿ ಬೆಳೆಯುವ ಉತ್ತರದ ಬಯಲು ಪ್ರದೇಶದಲ್ಲಿ ಅಭಿವೃದ್ದಿಗೊಂಡವು. ದಾವಣಗೆರೆಯು ರಾಜ್ಯದ ಅತಿ ಮುಖ್ಯ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರವಾಯಿತು. ಇದನ್ನು “ಕರ್ನಾಟಕದ ಮ್ಯಾಂಚೆಸ್ಟರ್” ಎಂದು ಕರೆಯುತ್ತಾರೆ. ಪ್ರಸ್ತುತ ರಾಜ್ಯದಲ್ಲಿ 44 ಹತ್ತಿ ಬಟ್ಟೆ ಗಿರಣಿಗಳಿವೆ. ಕರ್ನಾಟಕದಲ್ಲಿ ಜವಳಿ ಉದ್ಯಮದ ಪರಿಸ್ಥಿತಿಯನ್ನು ಸುಧಾರಿಸಲು “ಸುವರ್ಣ ಜವಳಿ ನೀತಿ 2008-2013” ಎಂಬ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿ, 11 ಜಿಲ್ಲೆಗಳಲ್ಲಿ ಬಟ್ಟೆಯ ಸಿದ್ದ ಉಡುಪಿನ ಪಾರ್ಕ್ ಗಳನ್ನು ಸ್ಥಾಪಿಸಿದೆ. ಬಟ್ಟೆ ರಫ್ತಿನಲ್ಲಿ ಕರ್ನಾಟಕವು ದೇಶದಲ್ಲೇ 2 ನೇ ಸ್ಥಾನದಲ್ಲಿದೆ.
ಸಕ್ಕರೆ ಕೈಗಾರಿಕೆ :
ಇದು ಕರ್ನಾಟಕದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 19 ನೇ ಶತಮಾನದ ಆದಿಭಾಗದಲ್ಲೇ ಶ್ರೀರಂಗಪಟ್ಟಣದ ಪಾಲಳ್ಳಿ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಸಕ್ಕರೆ ತಯಾರಿಸುತ್ತಿದ್ದನ್ನು ಸರ್ ಫ್ರಾನ್ಸಿಸ್ ಬುಕಾನನ್ ಉಲ್ಲೇಖಿಸಿರುವನು. ಅವು 1847 ರಲ್ಲಿಯೇ ಸಕ್ಕರೆಯನ್ನು ಉತ್ಪಾದಿಸುತ್ತಿದ್ದು, ಲಂಡನ್ನಿನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದುದು ದಾಖಲೆಗಳಿಂದ ತಿಳಿದು ಬಂದಿದೆ. ಮೊಟ್ಟ ಮೊದಲ ಆಧುನಿಕ ಕೈಗಾರಿಕೆ 1933 ರಲ್ಲಿ ʼಮೈಸೂರು ಸಕ್ಕರೆ ಕಂಪನಿʼ ಮಂಡ್ಯದಲ್ಲಿ ಪ್ರಾರಂಭವಾಯಿತು. 1951 ರವರೆಗೂ ಒಂದೇ ಕಾರ್ಖಾನೆಯಿತ್ತು. ಇಂದು ರಾಜ್ಯದಲ್ಲಿ ಒಟ್ಟು 47 ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕವು ಭಾರತದಲ್ಲೇ ಮೂರನೇ ಸ್ಥಾನದಲ್ಲಿದೆ.
ಕಾಗದ ಕೈಗಾರಿಕೆ :
ಕಾಗದವು ಅಧುನಿಕ ಜಗತ್ತಿನಲ್ಲಿ ಮಹತ್ವದ ವಸ್ತುವಾಗಿದೆ. ಶಿಕ್ಷಣ, ಮುದ್ರಣ, ವೃತ್ತ ಪತ್ರಿಕೆ ಹಾಗೂ ಸಂಸ್ಕೃತಿಯ ವಿಕಾಸಕ್ಕೆ ಅಗತ್ಯವಾದ ವಸ್ತುವಾಗಿದೆ. ಕಾಗದ ಕೈಗಾರಿಕೆಯು ಅರಣ್ಯಾಧಾರಿತವಾದುದು. ಈ ಕೈಗಾರಿಕೆಗೆ ಬಿದಿರು, ಮರದ ತಿರುಳು, ಹುಲ್ಲು, ಕಬ್ಬಿನ ಸಿಪ್ಪೆ, ಚಿಂದಿ ಬಟ್ಟೆ, ರದ್ದಿ ಕಾಗದಗಳನ್ನು ಕಚ್ಚಾ ಪದಾರ್ಥಗಳನ್ನಾಗಿ ಬಳಸಲಾಗುವುದು. ಮೊಟ್ಟ ಮೊದಲು ಭದ್ರಾವತಿಯಲ್ಲಿ ʼಮೈಸೂರು ಪೇಪರ್ ಮಿಲ್ ಲಿಮಿಟೆಡ್ʼ ಕಾರ್ಖಾನೆಯು 1936 ರಲ್ಲಿ ಪ್ರಾರಂಭಗೊಂಡಿತು. ಅನಂತರ ʼವೆಸ್ಟ್ ಕೋಸ್ಟ್ ಪೇಪರ್ ಮಿಲ್ ಲಿಮಿಟೆಡ್ʼ ದಾಂಡೇಲಿಯಲ್ಲಿ ಸ್ಥಾಪನೆಗೊಂಡಿತು. ಸಮೀಪದ ಅರಣ್ಯಗಳ ಬಿದಿರು, ನೀಲಗಿರಿ ಮರದ ತಿರುಳು, ಕಾಳಿ ನದಿ ನೀರು, ಜೋಗ್ ನಿಂದ ವಿದ್ಯುತ್ ಪೂರೈಕೆಯಾಗುತ್ತವೆ. ದೇಶದ ಕಾಗದ ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕವು 4ನೇಯ ಸ್ಥಾನದಲ್ಲಿದೆ.
ಸಿಮೆಂಟ್ ಕೈಗಾರಿಕೆ :
ಸಿಮೆಂಟ್ ಕೈಗಾರಿಕೆಯ ಸ್ಥಾಪನೆಗೆ ಅಗತ್ಯವಾದ ಅಪಾರವಾದ ಸುಣ್ಣಕಲ್ಲು ರಾಜ್ಯದಲ್ಲಿ ದೊರೆಯುತ್ತದೆ. ಜೊತೆಗೆ ಜಿಪ್ಸಂ ಮತ್ತು ಬಾಕ್ಸೈಟ್ ಗಳೂ ದೊರೆಯುತ್ತವೆ. ಕಲ್ಲಿದ್ದಲು ಮಾತ್ರ ನೆರೆಯ ರಾಜ್ಯಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ನೀರು, ಮರಳು, ಸಾರಿಗೆ, ವಿದ್ಯುಚ್ಛಕ್ತಿ, ಜೇಡಿಮಣ್ಣು, ವಿಶಾಲವಾದ ಮಾರುಕಟ್ಟೆ ಸೌಲಭ್ಯಗಳೂ ಸಹ ಸಿಮೆಂಟ್ ಕೈಗಾರಿಕಾಭಿವೃದ್ದಿಗೆ ಸಹಾಯಕವಾಗಿವೆ. ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939 ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿಸಲಾಯಿತು. ಅನಂತರ ಬಾಗಲಕೋಟೆ, ತುಮಕೂರು ಜಿಲ್ಲೆಯ ಅಮ್ಮಸಂದ್ರ, ಕಲ್ಬುರ್ಗಿ ಜಿಲ್ಲೆಯ ಶಹಾಬಾದ್ ಗಳಲ್ಲಿ ಸ್ಥಾಪಿಸಲ್ಪಟ್ಟವು.
FAQ :
ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ರಾಜ್ಯ ಯಾವುದು?
ಕರ್ನಾಟಕ
ಕರ್ನಾಟಕದ ಅತಿ ಮುಖ್ಯ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ ಯಾವುದು?
ದಾವಣಗೆರೆ
ಇತರೆ ವಿಷಯಗಳು :
ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ