ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ Information about India’s First War of Independence Bharathada Prathama Swathanthrya Sangramadha Bagge Mahithi in Kannada
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ :
ವಿನಾಯಕ ದಾಮೋದರ ಸಾವರ್ಕರ್ ರವರು 1857 ರ ಸಂದರ್ಭದಲ್ಲಿ ಉಂಟಾದ ಅಸಮಧಾನ ಅತೃಪ್ತಿಯನ್ನು 1857 ರ ಪ್ರಥಮ ಸ್ವಾತಂತ್ರ್ಯಸಂಗ್ರಾಮ ಎಂದು ಕರೆದರು. ಪ್ರಥಮ ಸ್ವಾತಂತ್ರ್ಯಸಂಗ್ರಾಮಕ್ಕೆ ಕಾರಣಗಳು ಈ ಕೆಳಗಿನಂತಿವೆ.
ರಾಜಕೀಯ ಕಾರಣಗಳು :
ಸಹಾಯಕ ಸೈನ್ಯ ಪದ್ದತಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ, ಕೆಂಪು ಕೋಟೆ ಪ್ರಕರಣ, ವಿಶ್ರಾಂತಿ ವೇತನವನ್ನು ರದ್ದುಗೊಳಿಸಿದ್ದು.
ಸಾಮಾಜಿಕ ಕಾರಣಗಳು :
ಬ್ರಿಟೀಷರು ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಿದರು, ಇದು ಸಂಪ್ರದಾಯಸ್ಥರಿಗೆ ನುಂಗಲಾರದ ಬಿಸಿ ತುಪ್ಪವಾಯಿತು. ಇದರಿಂದ ಸಂಪ್ರದಾಯಸ್ಥರು ಬ್ರಿಟೀಷರ ವಿರುದ್ದ ಅಸಮಧಾನಗೊಂಡರು.
ಧಾರ್ಮಿಕ ಕಾರಣಗಳು :
ಬ್ರಿಟೀಷರು ಕ್ರೈಸ್ತ ಧರ್ಮವನ್ನು ಅಭಿವೃದ್ದಿ ಪಡಿಸಿದರು. ಭಾರತದಲ್ಲಿರುವ ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಮೇಲೆ ಬಲವಂತವಾಗಿ ದೌರ್ಜನ್ಯದ ಮುಖಾಂತರ ಕ್ರೈಸ್ತ ಧರ್ಮವನ್ನು ಅಭಿವೃದ್ದಿ ಪಡಿಸುವ ವಿಶಿಷ್ಟ ಯೋಜನೆಯನ್ನು ಬ್ರಿಟೀಷರು ಕೈಗೊಂಡರು.
ಆಡಳಿತಾತ್ಮಕ ಕಾರಣಗಳು :
ಹುದ್ದೆಯ ತಾರತಮ್ಯ, ಉನ್ನತ ಹುದ್ದೆಗಳು ಬ್ರಿಟೀಷರ ಪಾಲಾದವು. ಕೆಳಮಟ್ಟದ ಹುದ್ದೆಗಳು ಭಾರತೀಯರಿಗೆ ಮೀಸಲಾಗಿತ್ತು.
ಸೈನಿಕ ಕಾರಣಗಳು :
ವೇತನ ತಾರತಮ್ಯ, ಭಾರತೀಯರಿಗೆ ಕೇವಲ 80 ರೂ ನೀಡುತ್ತಿದ್ದರು, ಬ್ರಿಟೀಷರಿಗೆ 800 ರೂ ನೀಡಲಾಗುತ್ತಿತ್ತು.
ಆರ್ಥಿಕ ಕಾರಣಗಳು :
“ಈಶ್ವರಿ ಪ್ರಸಾದ್” ರವರ ಪ್ರಕಾರ ಒಂದು ಹಸು ಭಾರತದಲ್ಲಿ ಹುಲ್ಲನ್ನು ತಿಂದು ಯೂರೋಪ್ ಖಂಡದಲ್ಲಿ ಹಾಲನ್ನು ನೀಡುತ್ತಿತ್ತು. ಅಂದರೆ ಭಾರತ ದೇಶದಲ್ಲಿರುವ ಕಚ್ಚಾವಸ್ತುಗಳನ್ನು ತೆಗೆದುಕೊಂಡು ಹೋಗಿ ಯೂರೋಪಿನಲ್ಲಿ ಸಿದ್ದಾವಸ್ತುಗಳನ್ನಾಗಿ ಬದಲಾಯಿಸಲಾಗುತ್ತಿತ್ತು. ಇದರಿಂದ ಭಾರತದಲ್ಲಿರುವ ಗುಡಿ ಕೈಗಾರಿಕೆಗಳು ನೆಲಕಚ್ಚಿದವು. ಕಾರ್ಮಿಕರು ನಿರುದ್ಯೋಗಿಗಳಾದರು. ಇದು ಕೂಡ ಒಂದು ಕಾರಣವಾಯಿತು.
ದಂಗೆಯ ವಿಫಲತೆಗೆ ಕಾರಣಗಳು :
- ಸೀಮಿತ ವ್ಯಾಪ್ತಿ : 1857 ರಸ್ವಾತಂತ್ರ್ಯ ಸಂಗ್ರಾಮವು ಭಾರತದ ತುಂಬೆಲ್ಲಾ ಹರಡಲಿಲ್ಲ, ಇದು ಕಾಶ್ಮೀರ, ಸಿಂಧ್, ಪೂರ್ವ ಬಂಗಾಳ, ಪಂಜಾಬ್, ದಕ್ಷಿಣ ಭಾರತ ಈ ಸ್ಥಳಗಳಲ್ಲಿ 1857 ರ ಸಂಗ್ರಾಮವು ಹರಡಲಿಲ್ಲ.
- ದೇಶದ್ರೋಹಿಗಳ ಸಂಖ್ಯೆ ಅಧಿಕವಾಗಿತ್ತು.
- ಸೂಕ್ತ ನಾಯಕತ್ವದ ಕೊರತೆ.
- ಸಮಾನ ಉದ್ದೇಶ ಇರಲಿಲ್ಲ.
- ಶಸ್ತ್ರಾಸ್ತ್ರಗಳ ಕೊರತೆ.
- ಸಾರಿಗೆ ಸಂಪರ್ಕದ ಕೊರತೆ.
ದಂಗೆಯ ಪರಿಣಾಮಗಳು :
- ಕಂಪನಿಯ ಆಳ್ವಿಕೆ ಅಂತ್ಯವಾಗಿ ರಾಣಿಯ ಆಳ್ವಿಕೆ ಪ್ರಾರಂಭವಾಯಿತು.
- ಅಧಿಕಾರ ಹಸ್ತಾಂತರ ಕಾಯ್ದೆ 1858 ನವೆಂಬರ್ 1 ರಂದು ಜಾರಿಗೆ ಬಂದಿತು.
- ಗವರ್ನರ್ ಜನರಲ್ ಆಳ್ವಿಕೆ ಅಂತ್ಯವಾಗಿ ವೈಸರಾಯ್ ಆಳ್ವಿಕೆ ಪ್ರಾರಂಭವಾಯಿತು.
FAQ :
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಒಂದು ಕಾರಣ ತಿಳಿಸಿ?
ಸೂಕ್ತ ನಾಯಕತ್ವದ ಕೊರತೆ.
ಸಮಾನ ಉದ್ದೇಶ ಇರಲಿಲ್ಲ.
ಶಸ್ತ್ರಾಸ್ತ್ರಗಳ ಕೊರತೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮ ತಿಳಿಸಿ?
ಕಂಪನಿಯ ಆಳ್ವಿಕೆ ಅಂತ್ಯವಾಗಿ ರಾಣಿಯ ಆಳ್ವಿಕೆ ಪ್ರಾರಂಭವಾಯಿತು.
ಅಧಿಕಾರ ಹಸ್ತಾಂತರ ಕಾಯ್ದೆ 1858 ನವೆಂಬರ್ 1 ರಂದು ಜಾರಿಗೆ ಬಂದಿತು.
ಗವರ್ನರ್ ಜನರಲ್ ಆಳ್ವಿಕೆ ಅಂತ್ಯವಾಗಿ ವೈಸರಾಯ್ ಆಳ್ವಿಕೆ ಪ್ರಾರಂಭವಾಯಿತು.
ಇತರೆ ವಿಷಯಗಳು :