ಜಾಗತೀಕರಣದ ಬಗ್ಗೆ ಮಾಹಿತಿ Information about Globalization Jagathikaranada bagge Mahithi in Kannada
ಜಾಗತೀಕರಣದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಜಾಗತೀಕರಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಜಾಗತೀಕರಣದ ಅರ್ಥ :
ಅಂತರಾಷ್ಟ್ರೀಯ ಹಣಕಾಸು ನಿಧಿಯು ಜಾಗತೀಕರಣವನ್ನು ಈ ರೀತಿಯಾಗಿ ವ್ಯಾಖ್ಯಾನಿಸುತ್ತದೆ. ಸರಕು ಮತ್ತು ಸೇವೆಗಳು ಹಾಗೂ ಅಂಯರಾಷ್ಟ್ರೀಯ ಬಂಡವಾಳದ ಹರಿವು, ತೀವ್ರ ಮತ್ತು ವ್ಯಾಪಕವಾದ ತಾಂತ್ರಿಕತೆಯ ಪ್ರಸರಣಗಳ ಮೂಲಕ ವಿಶ್ವದಾದ್ಯಂತ ಹೆಚ್ಚಿನ ಪ್ರಮಾಣದ ವೈವುಧ್ಯತೆಯ ಗಡಿಯಾಚೆಗಿನ ವ್ಯವಹಾರಗಳಿಂದಾಗಿ ಹೆಚ್ಚುತ್ತಿರುವ ದೇಶಗಳ ಅಂತರ ಸ್ವಾವಲಂಬನೆ.
ಜಾಗತೀಕರಣದಲ್ಲಿ ಅಡಕವಾಗಿರುವ ಅಂಶಗಳು :
- ಜಾಗತೀಕರಣವು ವಿಶ್ವದಾದ್ಯಂತ ಆಧುನಿಕ ಸಂಪರ್ಕಜಾಲ, ಸಂಚಾರ ಸೌಲಭ್ಯಗಳು, ಕಾನೂನಿನ ಮೂಲಭೂತ ಸ್ಥಿರತೆ ಹಾಗೂ ಪ್ರಜ್ಞಾಪೂರ್ವಕ ಆರ್ಥಿಕ, ತಾಂತ್ರಿಕ, ರಾಜಕೀಯ ಹಾಗೂ ರಾಜಕೀಯ ಹಾಗೂ ಸಂಸ್ಕೃತಿಗಳಲ್ಲಿ ವಿನಿಮಯವನ್ನು ತೋರಿಸುವುದು.
- ರಾಜಕೀಯ ಅರಿಕೆಗಳಿಂದ ಗಡಿಭಾಗಗಳ ಸಂಬಂಧಗಳ ಮೂಲಕ ಅಂತರಾಷ್ಟ್ರೀಯ ಬಂಡವಾಳ ಮತ್ತು ವ್ಯಾಪಾರವನ್ನು ಪ್ರೋತ್ಸಾಹಿಸುವುದು.
- ಆಮದು ಮತ್ತು ರಫ್ತುಗಳ ಸುಂಕಗಳನ್ನು ನಿರ್ಮೂಲನೆ ಮಾಡಿ ಮುಕ್ತ ವಲಯಗಳನ್ನು ಸೃಷ್ಟಿಸುವುದು.
- ಸಾರಿಗೆ ವೆಚ್ಚವನ್ನು ಸಮುದ್ರಯಾನದಲ್ಲಿ ಕಂಟೈನರ್ ಸೇವೆಯ ಅಳವಡಿಕೆಯಿಂದ ಕಡಿಮೆ ಮಾಡುವುದು.
- ಬಂಡವಾಳ ಹತೋಟಿಯನ್ನು ಕಡಿಮೆಗೊಳಿಸುವುದು ಅಥವಾ ನಿರ್ಮೂಲನೆ ಮಾಡುವುದು.
- ವಿಶ್ವವ್ಯಾಪಿ ಸಂಸ್ಥೆಗಳಿಗೆ ಪ್ರೋತ್ಸಾಹ ದನ ಸೃಷ್ಟಿಸುವುದು.
- ಅನೇಕ ದೇಶಗಳ ನಡುವೆ ಬೌದ್ದಿಕ ಆಸ್ತಿ ಸಂಬಂಧ ಕಾಯಿದೆಗಳು ನಿರ್ಬಂದಗಳಿಲ್ಲದೆ ಸಾಮರಸ್ಯ ಉಂಟುಮಾಡುವುದು.
ಜಾಗತೀಕರಣದ ಮುಖ್ಯ ಲಕ್ಷಣಗಳು :
- ಜಾಗತೀಕರಣವು ವಿಶ್ವದ ಆರ್ಥಿಕತೆಯ ಏಳಿಗೆಗಿಂತ ತೀವ್ರವಾಗಿ ಅಂತರಾಷ್ಟ್ರೀಯ ವ್ಯಾಪಾರವನ್ನು ಹೆಚ್ಚಿಸುತ್ತದೆ.
- ಅಂತರಾಷ್ಟ್ರೀಯ ಬಂಡವಾಳವನ್ನು ವೃದ್ದಿಸಿ ಬಂಡವಾಳದ ಹರಿವನ್ನು ಮತ್ತು ಬಂಡವಾಳದ ನೇರ ಹೂಡಿಕೆಯನ್ನು ಹೆಚ್ಚಿಸುತ್ತದೆ.
- ಅಂತರಾಷ್ಟ್ರೀಯ ವ್ಯಾಪಾರ ಕರಾರುಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿಯೇ ವಿಶ್ವವ್ಯಾಪಾರ ಸಂಸ್ಥೆಗಳು ಪ್ರಾರಂಭವಾದುದು.
- ವಿಶ್ವ ಹಣಕಾಸಿನ ನೀತಿಯನ್ನು ಅಭಿವೃದ್ದಿ ಪಡಿಸುತ್ತದೆ.
- ಅಂತರಾಷ್ಟ್ರೀಯ ಸಂಸ್ಥೆಗಳಾದ ವಿಶ್ವವ್ಯಾಪಾರ ಸಂಘಟನೆ ಮತ್ತು ಅಂತರಾಷ್ಟ್ರೀಯ ಹಣಕಾಸುನಿಧಿಗಳ ಪಾತ್ರ ಹೆಚ್ಚಿಸುತ್ತದೆ.
- ಕೆಲವು ಆರ್ಥಿಕ ವ್ಯವಹಾರ ಪದ್ದತಿಗಳಾದ ಹೊರನೆರವು ಮುಂತಾದವುಗಳನ್ನು ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಕ ಹೆಚ್ಚಿಸುತ್ತದೆ.
- ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯಗಳನ್ನು ಹೆಚ್ಚು ಮಾಡುತ್ತದೆ.
- ವಿವಿಧ ಸಾಂಸ್ಕೃತಿಕ ಪದ್ದತಿಗಳನ್ನು ಹರಡಲು ಸಹಾಯ ಮಾಡುತ್ತದೆ.
- ಅಂತರಾಷ್ಟ್ರೀಯ ಸಂಚಾರ ಮತ್ತು ಪರ್ಯಟನೆಗಳಿಗೆ ಅವಕಾಶಗಳನ್ನು ಒದಗಿಸುತ್ತದೆ.
- ದೇಶಗಳ ನಡುವೆ ವಲಸೆ ಹೋಗುವುದನ್ನು ಹೆಚ್ಚಿಸುತ್ತದೆ. ಇದು ಕಾನೂನು ಬಾಹಿರ ವಲಸೆಗಳಿಗೂ ಅವಕಾಶ ಕಲ್ಪಿಸುತ್ತದೆ.
- ಸ್ಥಳೀಯ ಆಹಾರ ಪದಾರ್ಥಗಳು ಬೇರೆ ದೇಶಗಳಿಗೂ ಹಬ್ಬಲು ಸಾಧ್ಯವಾಗುತ್ತದೆ.
- ವಿಶ್ವವ್ಯಾಪಿ ಸಂವಹನ ಸಂದೇಶ, ಅಂತರ್ಜಾಲ ಮತ್ತು ಸಂಪರ್ಕ ಸಾಧನೆಗಳು ತಮ್ಮ ಮೂಲಭೂತ ಸಾಧನೆಗಳೊಂದಿಗೆ ಗಡಿಗಳನ್ನು ದಾಟಿಹೋಗಲು ಸಹಾಯ ಮಾಡುತ್ತದೆ.
- ಮಾಹಿತಿಗಳ ವಿನಿಮಯ ತಾಂತ್ರಿಕತೆ, ಸೆಲ್ಫೋನ್ಗಳು ಅಂತರಾಷ್ಟ್ರೀಯ ದೂರ ಸಂಪರ್ಕ ಕ್ಷಿಪಣಿಗಳು ರೂಢಿಗೆ ಬರುತ್ತವೆ.
ಜಾಗತೀಕರಣದ ಅನುಕೂಲತೆಗಳು :
- ಜಾಗತೀಕರಣವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ. ಹೆಚ್ಚಿನ ಸರಕು ಮತ್ತು ಸೇವೆಗಳು ವಿಶಾಲವಾಗಿ ಉತ್ಪದನೆಯಾಗಲು ಸಹಾಯ ಮಾಡುತ್ತದೆ.
- ಜಾಗತೀಕರಣವು ಜನರ ಜೀವನ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.
- ಜಾಗತೀಕರಣದಿಂದಾಗಿ ಪ್ರಪಂಚದಾದ್ಯಂತ ಒಂದೇ ರೀತಿಯ ವಸ್ತುಗಳು ದೊರಕಲು ಸಾಧ್ಯವಾಗುತ್ತದೆ.
- ಜಾಗತೀಕರಣವು ದೇಶದ ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚಿಸುತ್ತದೆ.
- ಜಾಗತೀಕರಣವು ಒಂದು ದೇಶದ ಜನದ ವರಮಾನವನ್ನು ಹೆಚ್ಚಿಸುತ್ತದೆ.
- ಬೇರೆ ಬೇರೆ ದೇಶಗಳ ವಸ್ತುಗಳು ಮಾರುಕಟ್ಟೆಯಲ್ಲಿ ದೊರಕಿರುವುದರಿಂದ ಜನರಿಗೆ ವಸ್ತುಗಳ ಆಯ್ಕೆಯಲ್ಲಿ ವಿಶಾಲತೆ ಕಂಡುಬರುತ್ತದೆ.
- ಸ್ಥಳೀಯ ವ್ಯಾಪಾರ ಸಂಸ್ಥೆಗಳ ಮಧ್ಯೆ ಪೈಪೋಟಿ ಉಂಟಾಗಿ ಸರಕುಗಳ ಬೆಲೆಗಳು ಕಡಿಮೆ ಇರುತ್ತದೆ.
ಜಾಗತೀಕರಣದ ಅನಾನುಕೂಲಗಳು :
- ವೆಚ್ಚಗಳನ್ನು ಕಡಿಮೆ ಮಾಡುವ ದೆಸೆಯಲ್ಲಿ ಅಭಿವೃದ್ದಿ ಹೊಂದಿರುವ ದೇಶಗಳು ತಮ್ಮ ಉತ್ಪಾದನೆಗಳನ್ನು ಹೊರಮೂಲಗಳಿಂದ ರೂಢಿಗೆ ತಂದು ನೌಕರ ಶಾಹಿ ಕೆಲಸಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಅಭಿವೃದ್ದಿ ಹೊಂದಿತ್ತಿರುವ ರಾಷ್ಟ್ರಗಳಲ್ಲಿ ಗುಲಾಮಿತನ ಹಾಗೂ ಬಾಲಕಾರ್ಮಿಕ ಪದ್ದತಿಗಳು ಉಂಟಾಗುವ ಸಾಧ್ಯತೆ ಇದೆ.
- ಜಾಗತೀಕರಣದಿಂದ ವಿಶ್ವ ಮಾರುಕಟ್ಟೆಯಲ್ಲಿ ತೀವ್ರವಾದ ಪೈಪೋಟಿ ಉಂಟಾಗಿ ಅನೇಕ ನೀತಿಬಾಹಿರ ಪದ್ದತಿಗಳು ವ್ಯವಹಾರ ವಹಿವಾಟುಗಳಲ್ಲಿ ರೂಡಿಗೆ ಬರುವ ಸಾಧ್ಯತೆ ಇದೆ.
- ಜಾಗತೀಕರನವು ಭಯೋತ್ಪಾದನೆ ಮತ್ತು ಪಾತಕಿಗಳಿಗೆ ಸಹಾಯವಾಗುತ್ತದೆ.
- ಜಾಗತೀಕರಣದಿಂದಾಗಿ ಪಟ್ಟಣಗಳು ಅಭಿವೃದ್ದಿ ಹೊಂದಿ ಕಸದ ತೊಟ್ಟಿಗಳಾಗಿ ಮಾರ್ಪಾಡಾಗುವ ಸಾಧ್ಯತೆ ಉಂಟಾಗಿದೆ. ಕೈಗಾರಿಕಾ ತ್ಯಾಜ್ಯಗಳು ಶೇಖರಣೆ ಹೊಂದಿ ಮಾಲಿನ್ಯವು ಆಕಾಶದೆತ್ತರಕ್ಕೆ ಬೆಳೆಯುತ್ತದೆ.
- ಮತ್ತೊಂದು ಅಪಾಯಕಾರಿ ಪರಿಣಾಮವೆಂದರೆ ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಾರೆ, ಬಡವರು ಒಂದು ಊಟಕ್ಕೂ ಶ್ರಮಪಡಬೇಕಾಗುತ್ತದೆ.
- ಅನೇಕ ಮಾರಣಾಂತಿಕ ವೈರಾಣುಗಳಿಂದ ಹಬ್ಬುವ ರೋಗಗಳು ವಿಶ್ವದಾದ್ಯಂತ ಹಬ್ಬುತ್ತದೆ.
- ಜಾಗತೀಕರಣವು ಪರಿಸರದ ಅವನತಿಗೆ ಕಾರಣವಾಗಿದೆ.
- ಕೈಗಾರಿಕೆಗಳಿಗೆ ಬೇಕಾದ ಕಚ್ಚಾಪದಾರ್ಥಗಳನ್ನು ನೈಸರ್ಗಿಕ ಸಂಪನ್ಮೂಲಗಳಿಂದ ಪಡೆಯುವುದರಿಂದ ಭೂಖಂಡದಲ್ಲಿ ಮಾಲಿನ್ಯವು ಹೆಚ್ಚಾಗಿ ನಾವು ಉಸಿರಾಡುವ ವಾಯು ಕೂಡ ಮಾಲಿನ್ಯದಿಂದ ಕೂಡಿ ಬದುಕುಳಿಯಲು ಕಷ್ಟಸಾಧ್ಯವಾಗುತ್ತದೆ.
- ಅಗ್ಗ ವಸ್ತುಗಳ ಆಮದಿನಿಂದಾಗಿ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಉತ್ಪಾದನೆಯು ಕಡಿಮೆಯಾಗಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತದೆ.
FAQ :
ಜಾಗತೀಕರಣದ ಅನುಕೂಲತೆಗಳನ್ನು ತಿಳಿಸಿ?
ಜಾಗತೀಕರಣವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿ. ಹೆಚ್ಚಿನ ಸರಕು ಮತ್ತು ಸೇವೆಗಳು ವಿಶಾಲವಾಗಿ ಉತ್ಪದನೆಯಾಗಲು ಸಹಾಯ ಮಾಡುತ್ತದೆ.
ಜಾಗತೀಕರಣವು ಜನರ ಜೀವನ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.
ಜಾಗತೀಕರಣದಿಂದಾಗಿ ಪ್ರಪಂಚದಾದ್ಯಂತ ಒಂದೇ ರೀತಿಯ ವಸ್ತುಗಳು ದೊರಕಲು ಸಾಧ್ಯವಾಗುತ್ತದೆ.
ಜಾಗತೀಕರಣವು ದೇಶದ ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚಿಸುತ್ತದೆ.
ಜಾಗತೀಕರಣದ ಅನಾನುಕೂಲಗಳೇನು?
ವೆಚ್ಚಗಳನ್ನು ಕಡಿಮೆ ಮಾಡುವ ದೆಸೆಯಲ್ಲಿ ಅಭಿವೃದ್ದಿ ಹೊಂದಿರುವ ದೇಶಗಳು ತಮ್ಮ ಉತ್ಪಾದನೆಗಳನ್ನು ಹೊರಮೂಲಗಳಿಂದ ರೂಢಿಗೆ ತಂದು ನೌಕರ ಶಾಹಿ ಕೆಲಸಗಳನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಅಭಿವೃದ್ದಿ ಹೊಂದಿತ್ತಿರುವ ರಾಷ್ಟ್ರಗಳಲ್ಲಿ ಗುಲಾಮಿತನ ಹಾಗೂ ಬಾಲಕಾರ್ಮಿಕ ಪದ್ದತಿಗಳು ಉಂಟಾಗುವ ಸಾಧ್ಯತೆ ಇದೆ.
ಜಾಗತೀಕರಣದಿಂದ ವಿಶ್ವ ಮಾರುಕಟ್ಟೆಯಲ್ಲಿ ತೀವ್ರವಾದ ಪೈಪೋಟಿ ಉಂಟಾಗಿ ಅನೇಕ ನೀತಿಬಾಹಿರ ಪದ್ದತಿಗಳು ವ್ಯವಹಾರ ವಹಿವಾಟುಗಳಲ್ಲಿ ರೂಡಿಗೆ ಬರುವ ಸಾಧ್ಯತೆ ಇದೆ.
ಜಾಗತೀಕರನವು ಭಯೋತ್ಪಾದನೆ ಮತ್ತು ಪಾತಕಿಗಳಿಗೆ ಸಹಾಯವಾಗುತ್ತದೆ.
ಇತರೆ ವಿಷಯಗಳು :
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ
ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ