ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ | Information about Consumer Protection Act in Kannada

Join Telegram Group Join Now
WhatsApp Group Join Now

ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ Information about Consumer Protection Act Grahaka Samrakshana Kayde bagge Mahithi in Kannada

ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ

Information about Consumer Protection Act in Kannada
ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆ :

ನಿರಂತರ ಶೋಷಣೆಯಿಂದ ಬೇಸತ್ತ ಕೆಲವರು ಬಳಕೆದಾರರ ಅಸಹಾಯಕತೆಯನ್ನು ಅರಿತು ಗ್ರಾಹಕರ ಪರವಾದ ಹೋರಾಟ, ಚಳುವಳಿಗಳನ್ನು ಆರಂಭಿಸಿದರು. ಈ ರೀತಿಯ ಒತ್ತಡಗಳಿಂದ ಸರ್ಕಾರ ಗ್ರಾಹಕರ ಪರವಾದ ಹೊಸ ಕಾಯ್ದೆಗಳನ್ನು ರೂಪಿಸಿತು. ಕಳೆದ ಐದು ದಶಕಗಳಲ್ಲಿ ಸುಮಾರು ಮೂವತ್ತಕ್ಕಿಂತ ಹೆಚ್ಚು ಕಾಯ್ದೆಗಳು ಅನುಷ್ಠಾನಗೊಂಡಿವೆ. ಉದಾಹರಣೆಗೆ ಅಗತ್ಯ ವಸ್ತುಗಳ ಕಾಯ್ದೆ, ತೂಕ ಮತ್ತು ಅಳತೆ ಕಾಯ್ದೆ, ಆಹಾರ ಕಲಬೆರಕೆ ಪ್ರತಿಬಂಧಕ ಕಾಯ್ದೆ ಇತ್ಯಾದಿ. ಭಾರತ ಸರ್ಕಾರವು 1986ರಲ್ಲಿ ಜಾರಿಗೆ ತಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಈ ದೆಸೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

ವಿಶ್ವ ಗ್ರಾಹಕ ದಿನಾಚರಣೆ :

ವಿಶ್ವಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಮಾರ್ಚ್‌ 15, 1962 ಒಂದು ಮಹತ್ವದ ದಿನವಾಗಿದೆ. ಅಂದು ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್.‌ ಕೆನಡಿ ಅವರು ಅಲ್ಲಿನ ನಾಗರಿಕರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದರು. ಈ ಕಾರಣದಿಂದ ಪ್ರತಿ ವರ್ಷವು ಮಾರ್ಚ್‌ 15ನೇ ತಾರೀಖಿನಂದು ವಿಶ್ವಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ.

ಕಾಯ್ದೆಯ ಮುಖ್ಯ ಉದ್ದೇಶಗಳು :

  • ಗ್ರಾಹಕ ಸಂರಕ್ಷಣಾ ಕಾಯ್ದೆಯು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
  • ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
  • ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ದತಿಗಳನ್ನು ತಡೆಗಟ್ಟುವುದು.
  • ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.
  • ಬಳಕೆದಾರರು ತಾವು ಖರೀದಿಸುವ ವಸ್ತು ಅಥವಾ ಸೇವೆಗಳಿಂದ ತೊಂದರೆಗೆ ಒಳಗಾದಲ್ಲಿ ಅವರಿಗೆ ಸೂಕ್ತ ಪರಿಹಾರ ಕೊಡಿಸುವುದು.
  • ಗ್ರಾಹಕ ಶಿಕ್ಷಣ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು.
  • ಆರೋಗ್ಯಕರ ಸ್ಪರ್ಧೆಯೊಂದಿಗೆ ಯೋಗ್ಯ ಬೆಲೆಗೆ ಉತ್ತಮ ಗುಣಮಟ್ಟದ ವಸ್ತು ಅಥವಾ ಸೇವೆ ದೊರೆಯುವಂತೆ ಮಾಡುವುದು.

ಗ್ರಾಹಕ ಹಕ್ಕುಗಳು :

  • ಗ್ರಾಹಕರ ಜೀವನ ಮತ್ತು ಆಸಕ್ತಿಗೆ ಅಪಾಯಕಾರಿಯೆನಿಸುವ ಸರಕುಗಳ ವಿಕ್ರಯದ ವಿರುದ್ದ ರಕ್ಷಿಸಲ್ಪಡುವ ಹಕ್ಕು.
  • ಮಾಹಿತಿ ಪಡೆಯುವ ಹಕ್ಕು : ಸರಕುಗಳ ಮತ್ತು ಸೇವೆಗಳ ಗುಣಮಟ್ಟ, ಪ್ರಮಾಣ, ಶಕ್ತಿ, ಸಾಮರ್ಥ್ಯ, ಪರಿಶುದ್ದತೆ ಮತ್ತು ಬೆಲೆಗಳ ವಿರುದ್ದ ಮಾಹಿತಿ ಪಡೆಯುವ ಹಕ್ಕು.
  • ವಸ್ತುಗಳ ಆಯ್ಕೆಯ ಹಕ್ಕು : ಸ್ಪರ್ಧಾತ್ಮಕ ಬೆಲೆಗಳಲ್ಲಿ ವೈವಿದ್ಯಮಯವಾದ ಸರಕುಗಳನ್ನು ಆರಿಸಿಕೊಳ್ಳುವ, ಅಥವಾ ಆಯ್ಕೆ ಮಾಡುವ ಹಕ್ಕು.
  • ವಸ್ತುಗಳ ಬಗ್ಗೆ ಆಲಿಸುವ ಹಕ್ಕು : ಗ್ರಾಹಕರ ಇಷ್ಟಗಳನ್ನು ಕೇಳಿ ತಿಳಿದುಕೊಂಡು ಅವನ್ನು ಸೂಕ್ತ ರೀತಿಯಲ್ಲಿ ಪರಿಗಣಿಸುವ ಹಕ್ಕು.
  • ಶೋಷಣೆಯ ವಿರುದ್ದ ಪರಿಹಾರ ಕೇಳುವ ಹಕ್ಕು : ಗ್ರಾಹಕರಿಗೆ ವಂಚನೆ ಅಥವಾ ಮೋಸಮಾಡುವ ಆಚರಣೆಗಳ ವಿರುದ್ದ ಹಕ್ಕು ಪಡೆಯುವುದು.
  • ಗ್ರಾಹಕ ಶಿಕ್ಷಣದ ಹಕ್ಕು : ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಸರಿಯಾದ ತಿಳುವಳಿಕೆ ಪಡೆಯುವ ಹಕ್ಕು.
  • ಗ್ರಾಹಕರಿಗೆ ಉತ್ತಮ ಆರೋಗ್ಯಕರ ಮತ್ತು ಭೌತಿಕ ಪರಿಸರವನ್ನು ಉಂಟುಮಾಡಿ ಅವರ ಜೀವನ ರೀತಿಗಳನ್ನು ಉತ್ತಮ ಪಡಿಸಿಕೊಳ್ಳುವ ಹಕ್ಕು.

ಗ್ರಾಹಕ ಸಂರಕ್ಷಣಾ ಕಾಯ್ದೆಯು ಕೇಂದ್ರ ಸಂರಕ್ಷಣ ಮಂಡಳಿಯ ಸ್ಥಾಪನೆಗೆ ಎಡೆಮಾಡಿಕೊಟ್ಟಿತು. ಕಾಯ್ದೆಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ವೇದಿಕೆ, ರಾಜ್ಯ ಮಟ್ಟದಲ್ಲಿ ರಾಜ್ಯಸಂರಕ್ಷನಾ ವೇದಿಕೆ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಗ್ರಾಹಕರ ಸಂರಕ್ಷಣಾ ಮಂಡಲಿಗಳನ್ನು ಸ್ಥಾಪಿಸಿದೆ. ಕೇಂದ್ರ ಗ್ರಾಹಕರ ಕಲ್ಯಾಣ ಇಲಾಖೆಯ ಮಂತ್ರಿಗಳು ರಾಷ್ಟ್ರೀಯ ಗ್ರಾಹಕರ ಸಂರಕ್ಷಣಾ ವೇದಿಕೆಯು ಅಧ್ಯಕ್ಷರಾಗಿರುತ್ತಾರೆ. ಇದೇ ರೀತಿ ರಾಜ್ಯ ಸರ್ಕಾರದ ಗ್ರಾಹಕ ಸಂಬಂಧಿ ಇಲಾಖೆಯ ಮಂತ್ರಿಗಳು ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಲಿಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಗ್ರಾಹಕರ ಸಂರಕ್ಷಣೆಗೆ 3 ವೇದಿಕೆಗಳಿವೆ :

ಜಿಲ್ಲಾ ವೇದಿಕೆ :

Join WhatsApp Join Telegram

ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ವೇದಿಕೆ ಇರುತ್ತದೆ. ಜಿಲ್ಲಾ ವೇದಿಕೆಯ ನ್ಯಾಯ ಪೀಠಕ್ಕೆ ರಾಜ್ಯ ಸರ್ಕಾರದಿಂದ ನಾಮಾಂಕಿತಗೊಂಡ ಜಿಲ್ಲಾ ನ್ಯಾಯಾಧೀಶರ ಅರ್ಹತೆಯುಳ್ಳ ವ್ಯಕ್ತಿಯು ಅಧ್ಯಕ್ಷರಾಗಿರುತ್ತಾರೆ. ಈ ವೇದಿಕೆಯು ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕರ ದೂರುಗಳನ್ನು ತೆಗೆದುಕೊಳ್ಳುತ್ತದೆ. ಇದರಲ್ಲಿ ಇಬ್ಬರು ಸದಸ್ಯರಿದ್ದು ಅವರಲ್ಲಿ ಒಬ್ಬರು ಮಹಿಳೆಯಾಗಿರುತ್ತಾರೆ.

ರಾಜ್ಯ ಆಯೋಗ :

ಈ ಆಯೋಗಕ್ಕೆ ರಾಜ್ಯದ ಉಚ್ಚನ್ಯಾಯಾಲಯದ ನಿವೃತ್ತಿ ನ್ಯಾಯಾಧೀಶರಾಗಲಿ ಅಥವಾ ಹಾಲಿ ನ್ಯಾಯಾಧೀಶರಾಗಲಿ ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೊಂದಿರುವ ಇಬ್ಬರು ಸದಸ್ಯರಿರುತ್ತಾರೆ. ಅವರಲ್ಲಿ ಒಬ್ಬರು ಮಹಿಳಾ ಸದಸ್ಯರಾಗಿರುತ್ತಾರೆ. ಈ ಆಯೋಗವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದು ಒಂದು ಕೋಟಿ ರೂಪಾಯಿವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ತೆಗೆದುಕೊಳ್ಳುತ್ತದೆ.

ರಾಷ್ಟ್ರೀಯ ಆಯೋಗ :

ಈ ಆಯೋಗವು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಸರ್ವೋಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರ ಅಧ್ಯಕ್ಷತೆಯಿಂದ ಕೂಡಿರುತ್ತದೆ. ಇಲ್ಲಿ ಇತರೆ 4 ಸದಸ್ಯರಿರುತ್ತಾರೆ. ಇವರು ಸಾರ್ವಜನಿಕ ವ್ಯವಹಾರ ಅಥವಾ ಆಡಳಿತದಲ್ಲಿ ನುರಿತವರಾಗಿರಬೇಕು. ಇವರಲ್ಲಿ ಒಬ್ಬರು ಮಹಿಳಾ ಸದಸ್ಯರಿರುತ್ತಾರೆ. ಈ ಆಯೋಗವು ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರುಗಳನ್ನು ಇತ್ಯರ್ಥ ಮಾಡುತ್ತದೆ.

FAQ :

ಗ್ರಾಹಕ ಸಂರಕ್ಷಣಾ ಕಾಯ್ದೆಯು ಎಷ್ಟರಲ್ಲಿ ಜಾರಿಗೆತರಲಾಯಿತು?

1986

ಈ ಕಾಯ್ದೆಯ ಮುಖ್ಯ ಉದ್ದೇಶಗಳನ್ನು ತಿಳಿಸಿ?

ಗ್ರಾಹಕ ಸಂರಕ್ಷಣಾ ಕಾಯ್ದೆಯು ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದು.
ಅಪಾಯಕಾರಿ ವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ತಪ್ಪಿಸುವುದು.
ಮಾರುಕಟ್ಟೆಯಲ್ಲಿ ನಡೆಯಬಹುದಾದ ಅನುಚಿತ ವ್ಯವಹಾರ ಪದ್ದತಿಗಳನ್ನು ತಡೆಗಟ್ಟುವುದು.
ಗುಣಮಟ್ಟ, ಅಳತೆ, ತೂಕ, ಬೆಲೆ ಇತ್ಯಾದಿಗಳ ಮೇಲೆ ನಿಗಾವಹಿಸುವುದು.

ಇತರೆ ವಿಷಯಗಳು :

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.