ರಕ್ತದ ಬಗ್ಗೆ ಮಾಹಿತಿ | Information about blood in Kannada

Join Telegram Group Join Now
WhatsApp Group Join Now

ರಕ್ತದ ಬಗ್ಗೆ ಮಾಹಿತಿ Information about blood Rakthada bagge Mahithi in kannada

ರಕ್ತದ ಬಗ್ಗೆ ಮಾಹಿತಿ :

Information about blood in Kannada
ರಕ್ತದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಕ್ತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಕ್ತ(Blood) :

  • ಆರೋಗ್ಯವಂತ ಮಾನವರಲ್ಲಿ 4.5 ರಿಂದ 5.6 ಲೀಟರ್‌ ಇರತ್ತದೆ
  • ಮಾನವನ ರಕ್ತವು ಪ್ರತ್ಯಾಮ್ಲೀಯ ಗುಣವನ್ನು ಹೊಂದಿದೆ.
  • ಕೆಂಪು ರಕ್ತ ಕಣಗಳು ಕಣದಂಗಗಳನ್ನು ಒಳಗೊಂಡಿರುವುದಿಲ್ಲ.
  • ರಕ್ತ ಹೆಪ್ಪುಗಟ್ಟಲು 2 ನಿಮಿಷ ಅವಧಿ ಬೇಕು.
  • ರಕ್ತವು ಒಂದು ದ್ರವಸಂಯೋಜಕ ಅಂಗಾಂಶ
  • ರಕ್ತದ pH ಮೌಲ್ಯ – 7.4
  • ರಕ್ತದ ರೋಗಗಳು ಮತ್ತು ಚಿಕತ್ಸೆಯ ಅಧ್ಯಯನ – ಹೆಮಟಾಲಜಿ
  • ರಕ್ತದ ವೈಜ್ಞಾನಿಕ ಅಧ್ಯಯನ – ಸಿರಾಲಜಿ
  • ರಕ್ತ ಹೆಪ್ಪು ಗಟ್ಟಲು ಸಹಾಯಕವಾದ ಖನಿಜ – ಕ್ಯಾಲ್ಸಿಯಂ
  • ರಕ್ತ ಹೆಪ್ಪುಗಟ್ಟಲು ಸಹಾಯಕವಾದ ರಕ್ತ ಕಣಗಳು – ಕಿರುತಟ್ಟೆ
  • ರಕ್ತ ಹೆಪ್ಪುಗಟ್ಟಲು ಸಹಾಯಕವಾದ ಪ್ರೋಟಿನ್‌ಗಳು – ಪೈಬ್ರಿನೋಜನ್‌
  • ರಕ್ತ ಹೆಪ್ಪುಗಟ್ಟಲು ಸಹಾಯಕವಾದ ವಿಟಮಿನ್‌ – k
  • ರಕ್ತವು ಪ್ಲಾಸ್ಮ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಕಿರುತಟ್ಟೆಗಳನ್ನು ಒಳಗೊಂಡಿರುತ್ತದೆ.
  • ದೇಹದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಗಟ್ಟುವ ಪ್ರೋಟೀನ್‌ – ಹೆಪ್ಯಾರಿನ್‌

ಪ್ಲಾಸ್ಮಾ :

  • 90% ರಷ್ಟು ನೀರಿನಿಂದ ಮಾಡಲ್ಪಟ್ಟಿದೆ.
  • ಇದು ತಿಳಿ ಹಳದಿ ಬಣ್ಣವನ್ನು ಹೊಂದಿದೆ.
  • ಇದರಲ್ಲಿ ಪೈಬ್ರಿನೋಜನ್‌ ಮತ್ತು ಪ್ರೋಥಾಂಬಿನ್ಗಳು ಇರುತ್ತವೆ.
  • ಪ್ರೋಟಿನಗಳು ಕಂಡುಬರುತ್ತವೆ.
  • ಇದು ರಕ್ತದ PH ಮೌಲ್ಯವನ್ನು ಕ್ರಮಗೊಳಿಸುತ್ತದೆ.

ರಕ್ತದ ಕಣಗಳು :

ಕೆಂಪು ರಕ್ತ ಕಣಗಳು :

  • ಇವುಗಳನ್ನು ಎರಿಥ್ರೋಸೈಟ್ಸ್‌ಗಳೆಂದು ಕರೆಯುತ್ತಾರೆ.
  • ಇವುಗಳಲ್ಲಿ ಕಬ್ಬಿಣದ ಅಂಶವನ್ನು ಹೊಂದಿರುವ ಹಿಮೋಗ್ಲೋಬಿನ್‌ ಇರುತ್ತದೆ.
  • ಇವುಗಳು ಭ್ರೂಣದಲ್ಲಿ ಲಿವರ್‌ ಮತ್ತು ಗುಲ್ಮದಲ್ಲಿ ಉತ್ಪತ್ತಿಯಾಗುತ್ತದೆ. ವಯಸ್ಕರಲ್ಲಿ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ.
  • ಈ ಕಣಗಳು ಆಮ್ಲಜನಕವನ್ನು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ.
  • ಈ ಕಣಗಳು ಒಂದು ಸೆಕೆಂಡಿಗೆ 1.2 ಮಿಲಿಯನ್ಗಳ ವೇಗದಲ್ಲಿ ಉತ್ಪತ್ತಿಯಾಗುತ್ತದೆ.
  • ಈ ಕಣಗಳ ಜೀವಿತಾವಧಿ 120 ದಿನಗಳು
  • ಈ ಕಣಗಳು ಲೀವರ ಮತ್ತು ಪ್ಲೀಹದಲ್ಲಿ ನಾಸಗೊಳ್ಳುತ್ತವೆ. ಆದ್ದರಿಂದ ಪ್ಲೀಹನ್ನು ಕೆಂಪು ರಕ್ತ ಕಣಗಳ ಸ್ಮಶಾನ ಎನ್ನುತ್ತಾರೆ.
  • ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದರೆ ಅನೀಮಿಯಾ ಮತ್ತು ಹೆಚ್ಚಾದರೆ ಪಾಲಿ ಸೈಥೇಮಿಯಾ ಎಂಬ ಕಾಯಿಲೆ ಉಂಟಾಗುತ್ತದೆ.
  • ರಕ್ತಹೀನತೆ ಅಥವಾ ಅನೀಮಿಯಾ ರೋಗ ಬಿ-12 ಜೀವಸತ್ವದ ಕೊರತೆಯಿಂದ ಕಂಡುಬರುತ್ತದೆ.

ಬಿಳಿ ರಕ್ತ ಕಣಗಳು :

  • ಇವು ನ್ಯೂಕ್ಲಿಯಸ್‌ನ್ನು ಹೊಂದಿರುತ್ತವೆ.
  • ಇವುಗಳನ್ನು ಲುಕೋಸೈಟ್ಸ್ಗಳೆಂದು ಕರೆಯುತ್ತಾರೆ.
  • ಈ ಕಣಗಳ ಜೀವಿತಾವಧಿಯು 12 ಗಂಟೆಯಿಂದ ಕೆಲವು ವಾರಗಳ ವರೆಗೆ.
  • ಇವು ಮಾನವನ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತವೆ.
  • ಇವುಗಳನ್ನು ದೇಹದ ಸೈನಿಕರೆಂದು ಕರೆಯುತ್ತಾರೆ.
  • ಇವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ರೋಗಾಣುಗಳನ್ನು ನಾಶಮಾಡುತ್ತವೆ.
  • ಈ ಕಣಗಳ ಸಂಖ್ಯೆ ಹೆಚ್ಚಾದರೆ ಲುಕೇಮಿಯಾ ರಕ್ತದ ಕ್ಯಾನ್ಸರ್‌ ಬರುತ್ತದೆ.

ಕಿರುತಟ್ಟೆಗಳು :

  • ಇವುಗಳನ್ನು ಥ್ರೋಂಬೋ ಸೈಟ್ಸ್‌ ಎಂದು ಕರೆಯುತ್ತಾರೆ.
  • ಇವು ಅಸ್ತಿಮಜ್ಜೆಯಲ್ಲಿ ಉತ್ಪತಿಯಾಗುತ್ತವೆ.
  • ಇವುಗಳ ಜೀವಿತಾವಧಿ 7 ರಿಂದ 9 ದಿನಗಳು
  • ಇವುಗಳ ಸಂಖ್ಯೆ 2,50,000 ಕ್ಯುಬಿಕ್‌ ಮಿಲಿ ಲೀಟರ್‌
  • ಇವು ರಕ್ತ ಹೆಪ್ಪುಗಟ್ಟಿಸುವಿಕೆಯಲ್ಲಿ ಪಾಲ್ಗೊಳ್ಳುತ್ತವೆ.
  • ಇವು ನ್ಯೂಕ್ಲಿಯಸ್ ನ್ನು ಹೊಂದಿರುವುದಿಲ್ಲ.
  • ರಕ್ತ ಹೆಪ್ಪುಗಟ್ಟದೇ ಇರುವ ಸ್ಥಿತಿಯನ್ನು ಹಿಮೋಫಿಲಿಯಾ/ರಾಯಲ್‌ ಕಾಯಿಲೆ ಎನ್ನುವರು.

ರಕ್ತದ ಗುಂಪುಗಳು :

  • 1900 ರಲ್ಲಿ ಕಾರ್ಲ್ಲ್ಯಾಂಡ್‌ ಸ್ಟೀನರ್‌ ರಕ್ತದ ಗುಂಪುಗಳನ್ನು ಕಂಡಿಹಿಡಿದರು.
  • ಸ್ಟೀನ್ ರವರನ್ನು ರಕ್ತದ ಗುಂಪುಗಳ ಪಿತಾಮಹಾ ಎನ್ನುವರು.
  • 1902 ರಲ್ಲಿ ಡಿ ಕ್ಯಾಸ್ಟಿಲೋ ಮತ್ತು ಸ್ಟರ್ಲಿ AB ರಕ್ತದ ಗುಂಪನ್ನು ಕಂಡುಹಿಡಿದರು.
  • ಸ್ಟಿನರ್‌ನು ರಕ್ತದ ಗುಂಪುಗಳಿಗೆ ಸಂಬಂಧಪಟ್ಟಂತೆ ಕೆಂಪು ರಕ್ತ ಕಣಗಳ ಮೇಲೆ ಗ್ಲೈಕ್ಲೋ ಪ್ರೋಟೀನ್‌ ರಾಸಾಯನಿಕ ಪದಾರ್ಥಗಳನ್ನು ಗುರುತಿಸಿದನು. ಇವುಗಳನ್ನು ಯಾಂಟಿಜನ್‌ ಅಥವಾ ಪ್ರತಿಕಾಯಜನಕ ಎಂದು ಕರೆದನು.
  • ಯಾಂಟಿಜನ್ಗಳಲ್ಲಿ 2 ವಿಧಗಳು : ಯಾಂಟಿಜನ್‌ A, ಯಾಂಟಿಜನ್‌ B
  • ಸ್ಟಿನರ್‌ ರವರು ಯಾಂಟಿಜನ್ಗಳ ಆಧಾರದ ಮೇಲೆ ಮಾನವನ ರಕ್ತವನ್ನು A, B, AB, O ಎಂದು ವಿಂಗಡಿಸಿದ್ದಾರೆ.
  • ಸ್ಟೀನರ್‌ ನು ರಕ್ತದ ಗುಂಪುಗಳಿಗೆ ಸಂಬಂಧಪಟ್ಟಂತೆ ಪ್ಲಾಸ್ಮಾದಲ್ಲಿ ಕೆಲವೊಂದು ಪ್ರೋಟಿನ್ಗಳೂ ಕಂಡುಹಿಡಿದನು.
  • ಒಂದೇ ತರಹದ ಯಾಂಟಿಜನ್‌ ಮತ್ತು ಯಾಂಟಿಬಾಡಿಗಳು ಕೂಡಿಕೊಂಡರೆ ರಕ್ತ ಹೆಪ್ಪುಗಟ್ಟುತ್ತದೆ.
  • AB ರಕ್ತದ ಗುಂಪನ್ನು ಸಾರ್ವತ್ರಿಕ ಸ್ವೀಕಾರಿ ಎನ್ನುವರು.
  • O ರಕ್ತದ ಗುಂಪನ್ನು ಸಾರ್ವತ್ರಿಕ ದಾನಿ ಎನ್ನುವರು.
  • ಭಾರತೀಯರಲ್ಲಿ ಅತಿ ಹೆಚ್ಚು ರಕ್ತದ ಗುಂಪು B ಕಂಡು ಬರುತ್ತದೆ.

FAQ :

ಆರೋಗ್ಯವಂತ ಮಾನವರಲ್ಲಿ ಎಷ್ಟು ಲೀಟರ್‌ ಇರುತ್ತದೆ?

4.5 ರಿಂದ 5.6 ಲೀಟರ್‌ ಇರತ್ತದೆ.

Join WhatsApp Join Telegram

ರಕ್ತ ಹೆಪ್ಪುಗಟ್ಟದೇ ಇರುವ ಸ್ಥಿತಿಯನ್ನು ಏನೆಂದು ಕರೆಯುವರು?

ರಾಯಲ್‌ ಕಾಯಿಲೆ

ಇತರೆ ವಿಷಯಗಳು :

ಜಾಗತೀಕರಣದ ಬಗ್ಗೆ ಮಾಹಿತಿ

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.