ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ Information about 10 districts of Karnataka Karnatakada 10 Jillegala Bagge Mahithi in Kannada
ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವಿಜಯಪುರ ಜಿಲ್ಲೆ :
- ಈ ಜಿಲ್ಲೆಯಲ್ಲಿ ತಾಳಿಕೋಟೆ ಅಥವಾ ರಕ್ಕಸ ತಂಗಡಗಿ ಎಂಬ ಯುದ್ದ ನಡೆದ ಭೂಮಿ ಇದೆ. ಈ ಕದನವು ಜನವರಿ 23 ರಂದು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯಿತು. ಇದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು.
- ಭಾರತದ ಅತಿ ದೊಡ್ಡ ಗುಮ್ಮಟವಾದ ಗೋಲ ಗುಮ್ಮಟವು ಬಿಜಾಪುರದಲ್ಲಿದೆ. ಈ ಕಟ್ಟಡವನ್ನು ಮಹಮ್ಮದ್ ಆದಿಲ ಷಾ ಕಟ್ಟಿಸಿದನು.
- ಬಿಜಾಪುರದಲ್ಲಿರುವ ಇಬ್ರಾಹಿಂ ರೋಜಾವನ್ನು ದಕ್ಷಿಣ ಭರತದ ತಾಜ್ಮಹಲ್ ಎಂದು ಕರೆಯಲಾಗುತ್ತದೆ. ಇದನ್ನು 2 ನೇ ಇಬ್ರಾಹಿಂ ಆದಿಲ್ ಷಾ ಕಟ್ಟಿಸಿದನು.
- ಬಿಜಾಪುರವನ್ನು ಕರ್ನಾಟಕದ ಪಂಜಾಬ್ ಎನ್ನುವರು.
- ಇಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲಾಗಿದೆ
- ಆಲಮಟ್ಟಿ ಅಥವಾ ಲಾಲ್ ಬಹದ್ದೂರ್ ಶಾಸ್ತ್ರೀ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
- ಇಲ್ಲಿ ಕೃಷ್ಣಾ, ದೋಣಿ, ಭೀಮಾ ನದಿಗಳು ಹರಿಯುತ್ತವೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ದ್ರಾಕ್ಷಿ ಮತ್ತು ಜೋಳ ಬೆಳೆಯುವ ಜಿಲ್ಲೆಯಾಗಿದೆ.
- ಇಂಡಿಯಲ್ಲಿ ಲಿಂಬೆ ಪಾರ್ಕ್ ಸ್ಥಾಪನೆಯಾಗಿದೆ.
ಬಾಗಲಕೋಟೆ ಜಿಲ್ಲೆ :
- ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು.
- ಈ ಜಿಲ್ಲೆಯವರಾದ ಬಿ.ಡಿ. ಜತ್ತಿಯವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
- ನವನಗರದ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
- ಇಲ್ಲಿನ ಬಾದಾಮಿಯಲ್ಲಿರುವ ಗುಹಾಂತರ ದೇವಾಲಯವನ್ನು ಚಾಲುಕ್ಯರು ನಿರ್ಮಿಸಿದ್ದಾರೆ.
- ಐಹೊಳೆ ದೇವಾಲಯವು ಭಾರತದ ಸಂಸತ್ತಿಒನ ಆಕಾರವನ್ನು ಹೊಂದಿದೆ. ಇದನ್ನು ದೇವಾಲಯಗಳ ತೊಟ್ಟಿಲು ಎಂದು ಕರೆಯುವರು.
- ಯಡೆಹಳ್ಳಿ ಎಂಬ ಪ್ರದೇಶವು ಚಿಂಕಾರ ಜಿಂಕೆಗಳಿಗೆ ಪ್ರಸಿದ್ದಿಯಾಗಿದೆ.
- ಇಲಕಲ್ ಪಿಂಕ್ ಕಲ್ಲಿನ ಗ್ರಾನೈಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ.
- ಮುಧೋಳ ತಾಲೂಕಿನಲ್ಲಿ ಹಲಗಲಿ ಎನ್ನುವ ಊರು ಇದೆ.
- ಇಲ್ಲಿ ಬೇಡರ ದಂಗೆಯು 1857 ರಲ್ಲಿ ನಡೆಯಿತು. ಈ ದಂಗೆಯು ಸಶಸ್ತ್ರ ದಂಗೆಯಾಗಿದೆ.
- ಇಲ್ಲಿ ಐಹೊಳೆ, ಪಟ್ಟದಕಲ್ಲು, ಬಾದಾಮಿ ಎಂಬ ಊರುಗಳಿವೆ.
- ಪಟ್ಟದಕಲ್ಲು 1987 ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ.
ಕಲ್ಬುರ್ಗಿ ಜಿಲ್ಲೆ :
- ಕರ್ನಾಟಕದಲ್ಲಿ ಅತಿ ಹೆಚ್ಚು ತೊಗರಿ ಬೇಳೆ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ತೊಗರಿ ಬೇಳೆ ನಿಗಮ ಕೇಂದ್ರ ಕಛೇರಿ ಸ್ಥಾಪಿಸಲಾಗಿದೆ.
- ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
- ಇಲ್ಲಿ ಖ್ವಾಜ ಬಂದೇನವಾಜ್ ದರ್ಗಾ ಇದೆ.
- ಕರ್ನಾಟಕದಲ್ಲಿ ಅತಿ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
- ಇದು ಅತಿ ಹೆಚ್ಚು ಬೀಳು ಭೂಮಿ ಹೊಂದಿದ ಜಿಲ್ಲೆಯಾಗಿದೆ.
- ಜಾಮೀಯ ಮಸೀದಿ ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಹಾಗೂ ಕರ್ನಾಟಕದ ದೊಡ್ಡ ಮಸೀದಿಯಾಗಿದೆ.
- ಕರ್ನಟಕದಲ್ಲಿ ಮೊದಲ ದೂರದರ್ಶನ ಬಂದಿದ್ದು ಕಲ್ಬುರ್ಗಿ ಜಿಲ್ಲೆಯಾಗಿದೆ.
- ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
- ಕರ್ನಾಟಕದಲ್ಲಿ ವಿಸ್ತೀರ್ಣದಲ್ಲಿ 2ನೇ ಅತಿದೊಡ್ಡ ಜಿಲ್ಲೆಯಾಗಿದೆ.
ಯಾದಗಿರಿ ಜಿಲ್ಲೆ :
- ಇಲ್ಲಿ ಶಹಪುರ, ಸುರಪುರ, ಎಂಬ ತಾಲೂಕುಗಳನ್ನು ಒಳಗೊಂಡಿದೆ.
- ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ 1857 ರಲ್ಲಿ ಬ್ರಿಟೀಷರ ವಿರುದ್ದ ಹೋರಾಟ ಮಾಡಿದ.
- ಕರ್ನಾಟಕದ ಅತಿ ದೊಡ್ಡ ಭೋನಾಳ ಪಕ್ಷಿಧಾಮವಿದೆ.
- ಇಲ್ಲಿ ಮಲಗಿರುವ ಬುದ್ದನ ಬೆಟ್ಟ ಕಂಡು ಬರುತ್ತದೆ. ಇದು ಶಹಪುರ ತಾಲ್ಲೂಕಿನಲ್ಲಿದೆ.
- ಕರ್ನಾಟಕದಲ್ಲಿ ಅತಿ ಕಡಿಮೆ ಸಾಕ್ಷರತೆ ಮತ್ತುತಲಾ ಆದಾಯ ಹೊಂದಿದ ಜಿಲ್ಲೆಯಾಗಿದೆ.
- ಇಲ್ಲಿ ನಾರಾಯಣ ಜಲಾಶಯವನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದಕ್ಕೆ ಬಸವ ಸಾಗರ ಆಣೆಕಟ್ಟು ಎಂದು ನಾಮಕರಣ ಮಾಡಲಾಗಿದೆ.
ಬೀದರ್ ಜಿಲ್ಲೆ :
- ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ರವರು ಬೀದರ್ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್ ಝರಾ ಇದೆ.
- ಬಹುಮನಿ ಸುಲ್ತಾನರ 2ನೇ ರಾಜಧಾನಿ ಆಗಿತ್ತು.
- ಮೀನುಗಾರಿಕೆ ವಿಶ್ವವಿದ್ಯಾಲಯ ಇದೆ.
- ಇಲ್ಲಿ ಕಾರಂಜಾ ಆಣೆಕಟ್ಟು ಇದೆ. ಇದನ್ನು ಮಾಂಜ್ರಾ ನದಿಯ ಉಪನದಿಯಾದ ಕಾರಂಜಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಇಲ್ಲಿ ಮಹಮ್ಮದ್ ಗವಾನ್ ಕಟ್ಟಿಸಿದ ಮದರಸ ಇದೆ.
- ಇಲ್ಲಿ ಬುಡಕಟ್ಟು ಪಾರ್ಕ್ ಇದೆ.
ಧಾರವಾಡ ಜಿಲ್ಲೆ :
- ಕರ್ನಾಟಕದಲ್ಲಿ ಹೋಂರೂಲ್ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
- 1890 ರಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದೆ.
- ಹುಬ್ಬಳ್ಳಿಯಲ್ಲಿ ಡಾ. ಎನ್. ಎಸ್. ಹರ್ಡೇಕರ್ ರವರು ಹಿಂದೂಸ್ತಾನಿ ಸೇವಾದಳವನ್ನು ಸ್ಥಾಪಿಸಿದರು.
- ಇಲ್ಲಿ ಆಲೂರು ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ಸ್ಥಾಪಿಸಿದರು.
- ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇದೆ.
- ಧಾರವಾಡ ಎಮ್ಮೆಗೆ ರಾಷ್ಟ್ರೀಯ ಮಾನನ್ಯತೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆ :
- ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ.
- ದಾವಣಗೆರೆ ವಿಶ್ವ ವಿದ್ಯಾಲಯವಿದೆ. ಇದರ ದ್ಯೇಯ ವಾಕ್ಯ : ತಮಸೋಮ ಜ್ಯೋತಿರ್ಗಮಯ.
- ಇಲ್ಲಿ ಸಮಗ್ರ ಅಂಗವಿಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ :
- ಇಲ್ಲಿ ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಭಾರತದ ಮೊದಲ ಹುಲ್ಲು ಹಾಸಿನ ವಿಮಾನ ನಿಲ್ದಾಣವಾಗಿದೆ.
- ಇಲ್ಲಿನ ದೇವನಳ್ಳಿಯು ರೇಷ್ಮೆಗೆ ಹೆಸರುವಾಸಿಯಾಗಿದೆ.
- ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ್ 1750 ನವೆಂಬರ್ 20 ಜನಿಸಿದರು.
ಕೊಡಗು ಜಿಲ್ಲೆ :
- ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
- ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
- ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ.
- ಭಾರತದ ಪ್ರಥಮ ಸೇನಾ ದಂಡನಾಯಕ ಜನರಲ್ ಕೆ. ಎಂ.ಕಾರ್ಯಪ್ಪ ಇದೇ ಜಿಲ್ಲೆಯವರು.
- ಇಲ್ಲಿ ತಲಕಾವೇರಿಯಲ್ಲಿ ಕಾವೇರಿ ನದಿ ಉಗಮವಾಗುತ್ತದೆ.
- ಇದನ್ನು ಭಾರತದ ಸ್ಕಾಟ್ ಲ್ಯಾಂಡ್ ಎಂದು ಕರೆಯುತ್ತಾರೆ.
- ಇದು ರೈಲು ಮಾರ್ಗ ಹೊಂದಿರದ ಏಕೈಕ ಜಿಲ್ಲೆಯಾಗಿದೆ.
- ಇಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇದೆ. ಇದನ್ನು ರಾಜೀವಗಾಂಧೀ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆ :
- ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
- ಇಲ್ಲಿ ಗಗನಚುಕ್ಕಿ, ಭರಚುಕ್ಕಿ ಎಂಬ ಜುಪಾತ ಇದೆ.
- ಇಲ್ಲಿ ಸುವರ್ಣವತಿ ಡ್ಯಾಂ ಇದೆ.
- ಇಲ್ಲಿ ಬಿಳಿಗಿರಿ ರಂಗನ ಬೆಟ್ಟವಿದೆ. ಇಲ್ಲಿ ಆನೆಗಳನ್ನು ರಕ್ಷಿಸಲಾಗಿದೆ.
- ಹೊಗೆನ್ಕಲ್ ಜಲಪಾತ ವಿವಾದವು ಕರ್ನಾಟಕದ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇದೆ.
- ಇಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಇದೆ. ಇದು ಭಾರತದ ಮೊದಲ ಹುಲಿ ಸಂರಕ್ಷಣಾ ತಾಣವಾಗಿದೆ. ಮತ್ತು ಕರ್ನಾಟಕದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ.
FAQ :
ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
ದಾವಣಗೆರೆ
ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯುವರು?
ಬಿಜಾಪುರ
ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
ಕೊಡಗು
ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮ ಯಾವುದು?
ಭೋನಾಳ
ಇತರೆ ವಿಷಯಗಳು :