ಸಮೂಹ ಮಾಧ್ಯಮಗಳ ಬಗ್ಗೆ ಪ್ರಬಂಧ | Essay On Mass Media In Kannada

Join Telegram Group Join Now
WhatsApp Group Join Now

ಸಮೂಹ ಮಾಧ್ಯಮಗಳ ಬಗ್ಗೆ ಪ್ರಬಂಧ Essay On Mass Media Samuha Madhyamagalu Prabandha in Kannada

ಸಮೂಹ ಮಾಧ್ಯಮಗಳ ಬಗ್ಗೆ ಪ್ರಬಂಧ

Essay On Mass Media In Kannada
Essay On Mass Media In Kannada

ಈ ಲೇಖನಿಯಲ್ಲಿ ಸಮೂಹ ಮಾಧ್ಯಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ಸಾರ್ವಜನಿಕರಿಗೆ ಮಾಹಿತಿ ಮತ್ತು ಮನರಂಜನೆಯನ್ನು ವಿತರಿಸಲು ಮತ್ತು ಪ್ರಸಾರ ಮಾಡಲು ಸಹಾಯ ಮಾಡುವ ಎಲ್ಲಾ ರೀತಿಯ ವಿವಿಧ ಸಾಧನಗಳು ಸಮೂಹ ಮಾಧ್ಯಮ ಪದದ ಅಡಿಯಲ್ಲಿ ಬರುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ರೇಡಿಯೋ, ಪತ್ರಿಕೆಗಳು, ಕೇಬಲ್, ದೂರದರ್ಶನ ಮತ್ತು ರಂಗಭೂಮಿ ಸೇರಿದಂತೆ ಎಲ್ಲವೂ ಸಮೂಹ ಮಾಧ್ಯಮದ ಭಾಗಗಳಾಗಿವೆ. ಈ ಸಾಧನಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದು ಮತ್ತು ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಒಳಗೊಂಡಿವೆ. ಸಮೂಹ ಮಾಧ್ಯಮದ ಪ್ರಬಂಧದ ಮೂಲಕ, ನಾವು ಅದರ ಮೂಲಕ ವಿವರವಾಗಿ ಹೋಗುತ್ತೇವೆ.

ವಿಷಯ ವಿವರಣೆ

ಸುದ್ದಿ ಮತ್ತು ಮಾಹಿತಿಯನ್ನು ಸಂವಹನ ಮಾಡುವ ಸಾಧನವನ್ನು ಸಮೂಹ ಮಾಧ್ಯಮ ಎಂದು ಕರೆಯಲಾಗುತ್ತದೆ. ವಿಶಾಲ ಪ್ರಪಂಚದಲ್ಲಿ ದಿನನಿತ್ಯ ಹಲವಾರು ಘಟನೆಗಳು ಜರುಗುತ್ತವೆ. ಅವುಗಳನ್ನು ಏಕಕಾಲದಲ್ಲಿ ಎಲ್ಲಾ ಜನತೆಗೂ ವಿಷಯಗಳನ್ನು ತಲುಪಿಸುವಂತಹ ಮಹತ್ವವಾದ ಕಾರ್ಯವನ್ನು ಸಮೂಹ ಮಾಧ್ಯಮಗಳು ನಿರ್ವಹಿಸುತ್ತವೆ. ಇದಕ್ಕೆ ಸಮೂಹ ಮಾಧ್ಯಮಗಳುಸಎನ್ನುತ್ತಾರೆ. ಸಮೂಹ ಮಾಧ್ಯಮಗಳಾದ ದೂರದರ್ಶನ, ಆಕಾಶವಾಣಿ ಅಥವಾ ರೇಡಿಯೋ, ವೃತ್ತಿ ಪತ್ರಿಕೆಗಳು ಮೊದಲಾದ ಸಂಪರ್ಕ ಸಾಧನಗಳಾಗಿವೆ. ಸಮೂಹ ಮಾಧ್ಯಮಗಲನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲಾಗುತ್ತದೆ. ನಮ್ಮ ಜನರಿಗೆ ಅವಶ್ಯಕವಾದ ವಿಷಯಗಳನ್ನು ಮುಟ್ಟಿಸುವಲ್ಲಿ ಹಾಗೂ ಸಮಾಜವನ್ನು ಸರಿದಾರಿಗೆ ತರುವಲ್ಲಿ ಸಮೂಹ ಮಾಧ್ಯಮಗಳು ಶ್ರಮಿಸುತ್ತವೆ. ಇದರಿಂದ ಅವಶ್ಯಕವಾದ ಮಾಹಿತಿ ಅಥವಾ ವಿಷಯಗಳನ್ನು ಮಾತ್ರ ಆಯ್ದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು.

ಸಮೂಹ ಮಾಧ್ಯಮಗಳು

 • ಆಕಾಶವಾಣಿ ಅಥವಾ ರೇಡಿಯೋ
 • ದೂರದರ್ಶನ
 • ಪತ್ರಿಕೆಗಳು
 • ದೂರವಾಣಿ, ಮೊಬೈಲ್
 • ಗಣಕಯಂತ್ರ

ಸಮೂಹ ಮಾಧ್ಯಮಗಳ ಪ್ರಮುಖ ಕಾರ್ಯಗಳು

ಮನರಂಜನೆ :

ಸಾಮಾಜಿಕ ಒತ್ತಡವನ್ನು ಕಡಿಮೆಗೊಳಿಸಲು ಮನರಂಜನೆಯನ್ನು ನೀಡುತ್ತದೆ. ಮನಸ್ಸಿಗೆ ಸಂತೋಷವನ್ನು ನೀಡಲು ಮನರಂಜನೆಯು ಬೇಕೇ ಬೇಕಾಗುತ್ತದೆ. ಮನರಂಜನೆ ಎಂಬುದು ಪ್ರತಿಯೊಬ್ಬರ ಜೀವನಕ್ಕು ಅತಿ ಮುಖ್ಯವಾಗಿ ಬೇಕಾಗುತ್ತದೆ. ಇದು ಸಮೂಹ ಮಾಧ್ಯಮದಿಂದ ಸಿಗುತ್ತದೆ.

Join WhatsApp Join Telegram

ಮಾಹಿತಿಯನ್ನು ಒದಗಿಸಲು :

ವಿವಿಧ ಕ್ಷೇತ್ರಗಳು ಅಂದರೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯ, ಕ್ರೀಡೆ ಇನ್ನು ಮುಂತಾದ ಕ್ಷೇತ್ರಗಳಿಗೆ ಸಂಬಂದಿಸಿದ ಮಾಹಿತಿಗಳನ್ನು ಏಕಕಾಲದಲ್ಲಿ ಎಲ್ಲರಿಗೂ ಮಾಹಿತಿಯನ್ನು ಒದಗಿದುತ್ತದೆ.

ಸಾಮಾಜಿಕ ಸಂಪರ್ಕ ಕಲ್ಪಿಸುವುದು :

ದೇಶ ದೇಶಗಳ ನಡುವೆ ಯುದ್ದಗಳು, ದುರಂತಗಳು, ಸಂಭವಿಸಿದಾಗ ಜನರನ್ನು ಮತ್ತು ಸಮಾಜವನ್ನು ಸಂರ್ಕಿಸುವ ಕೊಂಡಿಯಾಗಿದೆ.

ಸಮಾಜದಲ್ಲಿ, ಸರ್ಕಾರದಲ್ಲಿ ಅಹಿತಕರ ಘಟನೆಗಳು ಸಂಭವಿಸಿದರೆ ಎಚ್ಚರಿಸುವುದು :

ಸರ್ಕಾರಗಳು ತಮ್ಮ ಆಡಳಿತದಲ್ಲಿ ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರಿಸಲು ಈ ಸಮೂಹ ಮಧ್ಯಮಗಳು ಸಹಕಾರಿಯಾಗಿವೆ.

ಸಮೂಹ ಮಾಧ್ಯಮದ ಅನುಕೂಲತೆಗಳು

 • ಏಕಕಾಲದಲ್ಲಿ ವಿಷಯಗಳನ್ನು ರವಾನಿಸುತ್ತದೆ.
 • ಸಮಾಜದ ಅವಿಭಾಜ್ಯ ಅಂಗವಾಗಿ ಸಮೂಹ ಮಾಧ್ಯಮಗಳು ಕಾರ್ಯನಿರ್ವಹಿಸುತ್ತವೆ.
 • ವಿಶ್ವದಲ್ಲಿ ನಡೆಯುವಂತ ವಿಚಾರಗಳನ್ನು ಮನೆಯಲ್ಲೇ ಕುಳಿತುಕೊಂಡು ತಿಳಿದುಕೊಳ್ಳಬಹುದು.
 • ಸಮೂಹ ಮಾಧ್ಯಮಗಳು ಜನರಿಗೆ ಮಾಹಿತಿ ನೀಡುವುದರ ಜೊತೆಗೆ ಮನರಂಜನೆಯನ್ನು ಸಹ ನೀಡುತ್ತವೆ.
 • ವ್ಯಕ್ತಿಗತ ಸಾಮರ್ಥ ತೋರ್ಪಡಿಕೆಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಮತ್ತು ಪ್ರತಿಭೆಯ ಅನಾವರಣಕ್ಕೆ ಉತ್ತಮವಾದ ವೇದಿಕೆಯಾಗಿದೆ.
 • ಸಾಮಾಜಿಕ ಜಾಲತಾಣಗಳು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಕೆಲವೊಂದು ವಿಷಯಗಳನ್ನು ಓದಿದ ನಂತರ ಇದರ ಮೂಲಕ ಆ ಅಧ್ಯನದ ವಿಷಯಗಳಿಗೆ ಸಂಬಂದಿಸಿದ ಚಿತ್ರಗಳನ್ನು ನೋಡುವುರಿಂದ ಆ ವಿಷಯವು ಸರಿಯಾಗಿ ಅರ್ಥ ಮ್ಡಿಕೊ‍ಳ್ಳಲು ಸಹಕಾರಿಯಾಗಿತ್ತದೆ.
 • ಹೊಸ ಹೊಸ ವ್ಯಕ್ತಿಗಳ ಪರಿಚಯಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ.
 • ಒಂಟಿ ತನವನ್ನು ದೂರ ಮಾಡಿ ಸಮಾಜ ಜೀವಿ ಎಂಬ ಭಾವನೆಯನ್ನು ಮೂಡಿಸತ್ತದೆ.
 • ಹಣ ಗಳಿಕೆಯ ಸಾಧನವು ಕೂಡ ಆಗಿದೆ.
 • ಗ್ರಾಹಕರ ಆಸಕ್ತಿ ತಿಳಿದು ಬೇಡಿಕೆಗಳಿಗನುಗುಣವಾಗಿ ವಸ್ತುಗಳನ್ನು ಪಡೆಯಲು ಆನ್‌ ಲೈನ್‌ ಮೂಖಾಂತರ ಅವಕಾಶ ಒದಗಿಸುತ್ತದೆ.

ಸಮೂಹ ಮಾಧ್ಯಮದ ಅನಾನುಕೂಲತೆಗಳು

 • ಇದರಿಂದ ಕೌಶ್ಯಲ್ಯತೆಗಳು ವೃದ್ಧಿಯಾದವು, ಆದರೆ ಸೋಮಾರಿಗಳನ್ನು ಸೃಷ್ಠಿಸಿದಂತಾಯಿತು.
 • ಇದನ್ನು ಹೆಚ್ಚು ಸಮಯ ವ್ಯರ್ಥವಾಗುವಂತ ವಿಷಯಗಳನ್ನು ಹೆಚ್ಚು ನೋಡುತ್ತಿರುವುದು.
 • ಈ ಸಮೂಹ ಮಾಧ್ಯಮಗಳಿಗೆ ಹೆಚ್ಚು ಅವಲಂಬಿಸಿರುವುದರಿಂದ ಸಮಾಜವನ್ನು ಹೆಚ್ಚು ಸಂಕಷ್ಟಕ್ಕೆ ದಾರಿ ಮಾಡಿದಂತಾಗುತ್ತದೆ.
 • ಹಣ ಗಳಿಕೆಯ ಸಾಧನವು ಹೌದು ಆದರೆ ಇದರಿಂದ ಹೆಚ್ಚು ಜನರು ಮೋಸಕ್ಕೆ ಸಿಲುಕುತ್ತಿದ್ದಾರೆ. ಹಾಗೆ ಮೋಸ ಮಾಡುವವರನ್ನು ಹೆಚ್ಚು ಬೆಳೆಸಿದಂತಾಗುತ್ತಿದೆ.
 • ಈ ಸಮೂಹ ಮಾಧ್ಯಮಗಳು ಬಂದಾಗಿನಿಂದ ನೈತಿಕ ಗುಣಗಳನ್ನು, ಮಾನವೀಯತೆಯನ್ನ ಜನರು ಮರೆಯುತ್ತಿದ್ದಾರೆ.
 • ಹೊಸ ಹೊಸ ವ್ಯಕ್ತಿಗಳ ಪರಿಚಯದಿಂದ ಮೋಸ ಹೋಗುವಂತದ್ದು, ಸಂಕಷ್ಟಕ್ಕೆ ಸಿಲುಕಿಕೊಳ್ಳುವುದಾಗಿದೆ.

ಉಪಸಂಹಾರ

ಈ ಸಮೂಹ ಮಾಧ್ಯಮಗಳು ಸಕರಾತ್ಮಕವಾಗಿ ಹಾಗೂ ನಕರಾತ್ಮಕವಾಗಿಯು ಕೆಲವು ಅಂಶಗಳಿಂದ ಗುರುತಿಸಿಕೊಂಡಿವೆ. ಇವುಗಳನ್ನು ಒಳ್ಳೆಯ ಜ್ಞಾನಕ್ಕೆ ಉಪಯೋಗಿಸಿಕೊಳ್ಳುವುದು ಸೂಕ್ತ. ಈ ಸಮೂಹ ಮಾಧ್ಯಮಗಳು ಏಕಕಾಲದಲ್ಲಿ ಎಲ್ಲರಿಗೂ ವಿಶ್ವದ ವಿಷಯಗಳನ್ನು ತಲುಪಿಸುವಂತಹ ಮಹತ್ತರವಾದ ಸಾಧನವಾಗಿ ಹೊರ ಹೊಮ್ಮಿದೆ.

FAQ

ಸಮೂಹ ಮಾಧ್ಯಮಗಳೆಂದರೆ ಯಾವು ?

ಆಕಾಶವಾಣಿ ಅಥವಾ ರೇಡಿಯೋ
ದೂರದರ್ಶನ
ಪತ್ರಿಕೆಗಳು
ದೂರವಾಣಿ, ಮೊಬೈಲ್
ಗಣಕಯಂತ್ರ

ಸಮೂಹ ಮಾಧ್ಯಮದ ಅನಾನುಕೂಲತೆಗಳನ್ನು ತಿಳಿಸಿ ?

ಇದರಿಂದ ಕೌಶ್ಯಲ್ಯತೆಗಳು ವೃದ್ಧಿಯಾದವು, ಆದರೆ ಸೋಮಾರಿಗಳನ್ನು ಸೃಷ್ಠಿಸಿದಂತಾಯಿತು, ಹೆಚ್ಚು ಸಮಯ ವ್ಯರ್ಥವಾಗುವಂತ ವಿಷಯಗಳನ್ನು ಹೆಚ್ಚು ನೋಡುತ್ತಿರುವುದು.

ಸಮೂಹ ಮಾಧ್ಯಮದ ಅನುಕೂಲತೆಗಳನ್ನು ತಿಳಿಸಿ ?

ಏಕಕಾಲದಲ್ಲಿ ವಿಷಯಗಳನ್ನು ರವಾನಿಸುತ್ತದೆ, ಸಮಾಜದ ಅವಿಭಾಜ್ಯ ಅಂಗವಾಗಿ ಸಮೂಹ ಮಾಧ್ಯಮಗಳು ಕಾರ್ಯನಿರ್ವಹಿಸುತ್ತವೆ.

ಇತರೆ ವಿಷಯಗಳು :

ರಾಷ್ಟ್ರೀಯ ಸೇನಾ ದಿನದ ಬಗ್ಗೆ ಪ್ರಬಂಧ 

ಪುಸ್ತಕಗಳ ಮಹತ್ವ ಪ್ರಬಂಧ

Leave your vote

12 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.