ಮಾನವ ಹಕ್ಕುಗಳ ದಿನಾಚರಣೆ ಬಗ್ಗೆ ಪ್ರಬಂಧ Essay on Human Rights Day manava hakku dinacharane prabandha in kannada
ಮಾನವ ಹಕ್ಕುಗಳ ದಿನಾಚರಣೆ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಮಾನವ ಹಕ್ಕುಗಳ ದಿನಾಚರಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಪೀಠಿಕೆ
ಭೂಮಿಯ ಮೇಲೆ ಜನಿಸುವ ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಾತಂತ್ರ್ಯ ಇದೆ. ಸಮಾಜದಲ್ಲಿ ಇದ್ದ ಜಾತಿ, ಲಿಂಗ, ಭಾಷೆ, ಬಣ್ಣದ ಆಧಾರದ ಮೇಲಿನ ಶೋಷಣೆಯನ್ನು ತಡೆಗಟ್ಟುವ ಹಾಗೂ ವಿಶ್ವವನ್ನು ಶಾಂತಿಯಿಂದ ನೆಲೆಸುವಂತೆ ಮಾಡುವ ಸಲುವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಜನರು ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡುವ ವಿಧಾನವಾಗಿದೆ. ಇಂದು ವಿಶ್ವ ಮಾನವ ಹಕ್ಕುಗಳ ದಿನ. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಜಗತ್ತಿನೆಲ್ಲೆಡೆ ಡಿಸೆಂಬರ್ 10 ಅನ್ನು ‘ವಿಶ್ವ ಮಾನವ ಹಕ್ಕುಗಳ ದಿನ’ವಾಗಿ ಆಚರಿಸಲಾಗುತ್ತದೆ.
ವಿಷಯ ವಿವರಣೆ
ಜೀವನಾಧಾರ ಸೇವಾ ಕೇಂದ್ರದ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಹಾಗೂ 39ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದಲ್ಲಿ ನಡೆಯುತ್ತಿದ್ದ ಮಾನವನ ಸ್ವಾತಂತ್ರ್ಯಕ್ಕೆ ಧಕ್ಕೆ, ಅಹಿಂಸಾ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆ 1948ರಲ್ಲಿ ಮಾನವ ಹಕ್ಕುಗಳನ್ನು ಸ್ಥಾಪನೆ ಮಾಡಿದೆ ಎಂದರು. ಮಾನವ ಹಕ್ಕುಗಳ ಕಾಯ್ದೆಯಲ್ಲಿ ಪ್ರತಿಯೊಬ್ಬರಿಗೂ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಬೇಕು ಎಂಬುದು ಇದೆ. ದೇಶದಲ್ಲಿ ಪ್ರತಿ ವರ್ಷಕ್ಕೆ 50 ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳ ಬ್ರೂಣ ಹತ್ಯೆ ನಡೆಯುತ್ತಿದ್ದು, ಇದರಿಂದ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಕೂಡ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ತಿಳಿಸುತ್ತದೆ.
ಮಾನವ ಹಕ್ಕುಗಳ ದಿನ ಹಿನ್ನೆಲೆ
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು.
ಅಂದಿನಿಂದ ಡಿಸೆಂಬರ್ 10 ಅನ್ನು “ವಿಶ್ವ ಮಾನವ ಹಕ್ಕುಗಳ ದಿನ” ವಾಗಿ ಆಚರಿಸಲಾಗುತ್ತಿದೆ. 1950ರ ಡಿಸೆಂಬರ್ 4ರಂದು ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 317ನೇ ಅಧಿವೇಶನದಲ್ಲಿ ಮಾನವ ಹಕ್ಕುಗಳ ಬಗ್ಗೆ ಉಲ್ಲೇಕಿಸಲಾಗಿದೆ. ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ ಜಾರಿಗೊಳಿಸುವ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ.
ಮಾನವ ಹಕ್ಕುಗಳ ದಿನವನ್ನು ಏಕೆ ಆಚರಿಸಲಾಗುತ್ತದೆ
ಮಾನವ ಹಕ್ಕುಗಳ ಪ್ರಾಮುಖ್ಯತೆಯನ್ನು ಕಲಿತ ನಂತರ, ಮಾನವ ಹಕ್ಕುಗಳ ದಿನದಂದು ಒಂದು ಸಣ್ಣ ಪ್ರಬಂಧವನ್ನು ಉಲ್ಲೇಖಿಸುವ ಮೂಲಕ ಮಾನವ ಹಕ್ಕುಗಳ ದಿನವನ್ನು ಆಚರಿಸುವುದು ಏಕೆ ಮುಖ್ಯ ಎಂದು ನಾವು ಈಗ ಅರ್ಥಮಾಡಿಕೊಳ್ಳೋಣ. ಮಾನವ ಹಕ್ಕುಗಳ ದಿನವನ್ನು ಜನರು ಮಾನವರಾಗಿ ಅವರ ಮೂಲಭೂತ ಹಕ್ಕುಗಳನ್ನು ನೆನಪಿಸಲು ಆಚರಿಸಲಾಗುತ್ತದೆ. ಈ ಹಕ್ಕುಗಳನ್ನು ರಕ್ಷಿಸಲು ಇನ್ನೂ ಮಾಡಬೇಕಾದ ಕೆಲಸವನ್ನು ಇದು ನೆನಪಿಸುತ್ತದೆ.
ಮಾನವ ಹಕ್ಕುಗಳ ದಿನವು ಮಾನವ ಹಕ್ಕುಗಳ ಮಹತ್ವವನ್ನು ನೆನಪಿಟ್ಟುಕೊಳ್ಳಲು ಜನರಿಗೆ ಸುಲಭಗೊಳಿಸುತ್ತದೆ. ನಾವೆಲ್ಲರೂ ಈಗ ಅನುಭವಿಸುತ್ತಿರುವ ಹಕ್ಕುಗಳಿಗಾಗಿ ಹೋರಾಡಿದವರ ಹೋರಾಟ ಮತ್ತು ತ್ಯಾಗವನ್ನು ಗುರುತಿಸುವ ದಿನವಾಗಿದೆ. ಪ್ರತಿಯೊಬ್ಬರ ಮಾನವ ಹಕ್ಕುಗಳನ್ನು ನೆನಪಿಸಿಕೊಳ್ಳುವ ಸಮಯವೂ ಆಗಿದೆ. ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು, ಮರಣ ಹೊಂದಿದವರನ್ನು ಸ್ಮರಿಸಲು ಮತ್ತು ಮಾನವ ಹಕ್ಕುಗಳ ಮಹತ್ವದ ಕುರಿತು ಪ್ರತಿಯೊಬ್ಬರಿಗೂ ಶಿಕ್ಷಣ ನೀಡಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
ಮೂಲಭೂತ ಹಕ್ಕುಗಳು
- ಸಮಾನತೆಯ ಹಕ್ಕು ( ವಿಧಿ 14 – 18 )
- ಸ್ವಾತಂತ್ರದ ಹಕ್ಕು ( 19 – 22 )
- ಶೋಷಣೆಯ ವಿರುದ್ಧದ ಹಕ್ಕು ( 23 – 24 )
- ಧಾರ್ಮಿಕ ಸ್ವಾತಂತ್ರದ ಹಕ್ಕು ( 25 – 28 )
- ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕಗಳು ( 29 – 30 )
- ಸಂವಿಧಾನಾತ್ಮಕ ಹಕ್ಕುಗಳು ( 32 ) ( 31 ನ್ನು ರದ್ದು ಮಾಡಲಾಗಿದೆ. )
ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾನವ ಹಕ್ಕುಗಳ ದಿನವನ್ನು ಘೋಷಿಸಲಾಯಿತು. ಈ ದಿನದಂದು ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ದನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ.
ಉಪಸಂಹಾರ
ಬದುಕುವ ಹಕ್ಕು ಎಲ್ಲರಿಗೂ ಇದೆ. ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ವಸತಿ, ಆಹಾರ ಹಾಗೂ ಬಟ್ಟೆ. ಇವುಗಳಿಲ್ಲದೆ ಮನುಷ್ಯನ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ.
FAQ
ವಿಶ್ವ ಮಾನವ ಹಕ್ಕುಗಳ ದಿನವನ್ನು ಯಾವಾಗ ಅಚರಿಸುತ್ತಾರೆ ?
ಡಿಸೆಂಬರ್ ೧೦
ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲಾಗಿ ಪಡೆದುಕೊಂಡಿದೆ ?
ಅಮೇರಿಕಾ
ಇತರೆ ಪ್ರಬಂಧಗಳು: