ಏಕರೂಪ ನಾಗರಿಕ ಸಂಹಿತೆ ಪ್ರಬಂಧ Essay On Ekarupa Nagarika Samhithe Ekarupa Nagarika Samhiteya bagge Prabandha in Kannada
ಏಕರೂಪ ನಾಗರಿಕ ಸಂಹಿತೆ ಪ್ರಬಂಧ
ಈ ಲೇಖನಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪೀಠಿಕೆ :
ಯಾವುದೇ ದೇಶವಾಸಿಗಳ ಭಾವನೆಗಳಿ ಧಕ್ಗೆಕೆಯಾಗದಂತೆ ಕಾನೂನುಗಳನ್ನು ರಚಿಸಿದರು. ಬದಲಾದ ಸನ್ನಿವೇಶನದಲ್ಲಿ ದೇಶದ ಅಭಿವೃದ್ದಿಗೆ ಹಾಗೂ ಸ್ವಾಭಿಮಾನಕ್ಕೆ ದಕ್ಕೆ ತರುವಂತಹವುಗಳಾಗಿವೆ. ಸಮಾನತೆ ಸಮಾಧಿ, ಸಬಲೀಕರಣ ಸ್ವಾಧೀನ ಕಳೆದುಕೊಳ್ಳುತ್ತದೆ. ವೈಯಕ್ತಿಕ ಕಾನೂನುಗಳು ದೇಶದ ಏಕತೆಯನ್ನು ಪ್ರಶ್ನೆ ಮಾಡುತ್ತಿವೆ ಹಾಗಾಗಿ ಎಲ್ಲ ಧರ್ಮ ಜಾತಿ ಸಂಸ್ಕೃತಿಗಳಲ್ಲಿ ಬದುಕುತ್ತಿರುವವರು ಮನುಷ್ಯರು ಎಂಬುದನ್ನು ಅರಿತು ಒಮ್ಮತಕ್ಕೆ ಬರಬೇಕಾದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
ವಿಷಯ ವಿವರಣೆ :
ದೇಶದ ಎಲ್ಲಾ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ನಾಗರೀಕರ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆ ತರುವುದೇ ಏಕರೂಪ ನಾಗರೀಕ ಸಂಹಿತೆ.
ಏಕರೂಪ ನಾಗರಿಕ ಸಂಹಿತೆ ಹಿನ್ನಲೆ :
ಭಾರತ ಬ್ರಿಟೀಷರ ಅಧೀನದಲ್ಲಿದ್ದಾಗಿನಿಂದಲೂ ಈ ಗೊಂದಲಗಳ ಇವೆ. ಕ್ರಿಮಿನಲ್ ಕೋಡ್ ಗೆ ಏಕರೂಪದ ನಾಗರೀಕ ಸಂಹಿತೆಗಳು ಪರಿಹಾರ ಹುಡುಕುವುದು ಕಷ್ಟವೆಂದರಿತು ತಮ್ಮ ಧರ್ಮದ ಕಾನೂನಿಗನುಸಾರವಾಗಿ ಪಾಲಿಸಲು ಬಿಟ್ಟರು. ʼದಿ ಲೆಕ್ಸಿ – ಲೊಸಿʼ ವರದಿ 1840 ಕ್ರಿಮಿನಲ್ ಕೋಡ್ ಗಳಿಗೆ ಮಾತ್ರ ಸೀಮಿತವಾಯಿತು. ದೇಶ್ಕ್ಕೆ ಸ್ವಾತಂತ್ರ ಬಂದ ಮೇಲೆ ಪರ ವಿರೋಧದ ಹಲವಾರು ಚರ್ಚೆಗಳಾದರೂ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಏಕರೂಪ ನಾಗರೀಕ ಸಂಹಿತೆಯನ್ನು ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು. 1961 ರಿಂದ ಗೋವಾ ರಾಜ್ಯವು ಏಕರೂಪದ ನಾಗರೀಕ ಸಂಹಿತೆ ತಂದಿರುವ ರಾಜ್ಯವಾಗಿದೆ.
ಪ್ರಸ್ತುತದಲ್ಲಿರುವ ವೈಯಕ್ತಿಕ ಕಾನೂನುಗಳು :
- ಮುಸ್ಲೀಂ ವೈಯಕ್ತಿಕ ಕಾನೂನು 1937
- ಕ್ರೈಸ್ತ ವಿವಾಹ ಕಾಯ್ದೆ 1872
- ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ 1936
- ವಿಶೇಷ ವಿವಾಹ ಕಾಯ್ದೆ 1954
- ಹಿಂದೂ ವಿವಾಹ ಕಾಯ್ದೆ 1955
- 1956 ಹಿಂದೂ ಉತ್ತರಾಧಿಕಾರತ್ವ ಕಾಯ್ದೆ ಹಾಗೂ ಹಿಂದೂ ದತ್ತು ಮತ್ತು ಪೋಷಣಾ ಕಾಯ್ದೆ ತಂದು ಸಿಖ್ ಬೌದ್ದ ಮತ್ತು ಜೈನ ಧರ್ಮದ ಅನಿಯಾಯಿಗಳನ್ನು ಈ ಕಾಯ್ದೆಯಿಂದ ಹೊರಡಿಸಲಾಯಿತು.
ಪರ ನಿಲುವುಗಳು :
- ಸಮಾನತೆ / ಜಾತ್ಯಾತೀಯತೆ
- ಮಹಿಳಾ ಸಬಲೀಕರಣ
- ಐಕ್ಯತೆ / ಏಕೀಕರಣ
- ರಾಷ್ಟ್ರೀಯತೆ ಬೆಳೆಯುತ್ತದೆ.
- ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವುದು.
- ಮೂಲಭೂತ ಹಕ್ಕುಗಳ ರಕ್ಷಣೆ
- ಯುವ ಚಿಂತನೆಗೆ ಪ್ರೋತ್ಸಾಹ
ವಿರೋಧಿ ನಿಲುವುಗಳು :
- ಧಾರ್ಮಿಕ ಹಕ್ಕಿಗೆ ದಕ್ಕೆ
- ರಾಜಕೀಯ ಕಾರಣ
- ಅಲ್ಪ ಸಂಖ್ಯಾತರಿಗೆ ಭಯ
- ಮತ ಬ್ಯಾಂಕ್ ರಾಜಕೀಯ
- ಮೂಲಭೂತ ವಾದಿಗಳು
- ತಪ್ಪು ಕಲ್ಪನೆಗಳು
ಉಪಸಂಹಾರ :
1950 ರ ದಶಕದಲ್ಲಿ ನೆಹರೂರವರು ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರಲು ಕಾಲ ಪಕ್ಷವಾಗಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಸಮಾನತೆಯ ಸಮಾಜವನ್ನು ಸೃಷ್ಟಿಸದ ಹೊರತು ದೇಶದಲ್ಲಿ ಸಾಮರಸ್ಯ ಸಾಧ್ಯವಿಲ್ಲ. ಅಭಿವೃದ್ದಿಯ ಕಡೆ ಮುಖ ಮಾಡಲು ಮತ್ತಷ್ಟು ಕಷ್ಟವಾಗಬಹುದು. ನಮ್ಮೆಲ್ಲರ ವೈಯಕ್ತಿಕ ಹಠ, ಸ್ವಾರ್ಥ, ದುರಾಭಿಮಾನವನ್ನು ಮರೆತು ದೇಶದ ಅಭಿವೃದ್ದಿಗೆ ಚಿಂತಿಸೋಣ. ಏಕರೂಪ ನಾಗರೀಕ ಸಂಹಿತೆಯನ್ನು ಸ್ವಾಗತಿಸಿಸೋಣ. ಪ್ರತಿಯೊಬ್ಬರು ಸಮಾನ ಎನಿಸಿದಾಗ ಮಾತ್ರ ದೇಶ ಅಭಿವೃದ್ದಿ ಮಂತ್ರ ಪಠಿಸಲು ಸಾಧ್ಯ.
FAQ :
ಗೋವಾ ರಾಜ್ಯವು ಏಕರೂಪದ ನಾಗರೀಕ ಸಂಹಿತೆ ಯಾವಾಗ ಜಾರಿಗೆ ತಂದಿದೆ?
1961
ಹಿಂದೂ ವಿವಾಹ ಕಾಯ್ದೆ ಯಾವಾಗ ಜಾರಿಗೆ ಬಂತು?
1955
ಇತರೆ ವಿಷಯಗಳು :