ಅಶೋಕನ ಜೀವನ ಚರಿತ್ರೆ | Biography Of Ashoka In Kannada

Join Telegram Group Join Now
WhatsApp Group Join Now

ಅಶೋಕನ ಜೀವನ ಚರಿತ್ರೆ Biography Of Ashoka Ashokaana jeevana Charitre In Kannada

ಅಶೋಕನ ಜೀವನ ಚರಿತ್ರೆ

Biography Of Ashoka In Kannada
Biography Of Ashoka In Kannada

ಈ ಲೇಖನಿಯಲ್ಲಿ ಅಶೋಕನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಚರ್ಕವರ್ತಿ ಅಶೋಕ

ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ. ಪೂ 273 ರಿಂದ ಕ್ರಿ. ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ.

ಅಶೋಕನ ಆರಂಭಿಕ ಜೀವನ

ಮೌರ್ಯ ರಾಜ ಬಿಂದುಸಾರನಿಗೆ ಅವನ ರಾಣಿಯರಲ್ಲೊಬ್ಬಳಾದ ಸುಭದ್ರಾಂಗಿ ಎಂಬಾಕೆಯಿಂದ ಹುಟ್ಟಿದವನೇ ಅಶೋಕ. ಈ ಸುಭದ್ರಾಂಗಿ ರಾಣಿಯು, ಬಡಬ್ರಾಹ್ಮಣನೊಬ್ಬನ ಮಗಳೆಂದೂ, ಅವಳಿಗೆ ಹುಟ್ಟುವ ಮಗ ಮಹಾರಾಜನಾಗುತ್ತಾನೆ ಎಂಬ ಭವಿಷ್ಯ ತಿಳಿದ ಅವಳ ತಂದೆ ,ಅವಳನ್ನು ಬಿಂದುಸಾರನ ಅಂತಃಪುರಕ್ಕೆ ಸೇರಿಸಿದ ಎಂದು ಕಥೆಯಿದೆ. ಧರ್ಮಾ ಬ್ರಾಹ್ಮಣಳಾದರೂ, ರಾಜವಂಶದವಳಲ್ಲ ಎಂಬ ಕಾರಣಕ್ಕೆ ಅಂತಃಪುರದಲ್ಲಿ ಅವಳಿಗೆ ನೀಚ ಸ್ಥಾನವಿತ್ತು. ಅನೇಕ ಮಲ-ಸಹೋದರರೊಂದಿಗೆ, ಹಾಗೂ ಧರ್ಮಾಳ ಇನ್ನೊಬ್ಬ ಮಗ, ವಿತ್ತಶೋಕ ಎಂಬ ತಮ್ಮನೊಂದಿಗೆ, ಅಶೋಕ ಬೆಳೆದ. ರಾಜಕುಮಾರರಲ್ಲಿ ತೀವ್ರ ಸ್ಪರ್ಧೆಯಿದ್ದರೂ ಅಶೋಕ, ಸೈನಿಕ ಹಾಗೂ ಇತರ ಶೈಕ್ಷಣಿಕ ವಿಷಯಗಳಲ್ಲಿ, ಸದಾ ಮುಂದಿದ್ದ. ಈ ಸಹೋದರರಲ್ಲಿ , ಅದರಲ್ಲಿಯೂ ಮುಖ್ಯವಾಗಿ , ಅಶೋಕ ಮತ್ತು ಅವನ ಸಹೋದರ ಸುಶೀಮನಲ್ಲಿ ತೀವ್ರ ಪೈಪೋಟಿ ಯುದ್ಧ ಪಟುಗಳಾಗಿಯೂ, ಆಡಳಿತಗಾರರಾಗಿಯೂ, ಇತ್ತು.

ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು. ಅಶೋಕನು ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. ಆದರೆ 1915ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು. ಅಶೋಕ ಶಬ್ಧಕ್ಕೆ – ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.

ಕಳಿಂಗದ ಯುದ್ಧ

ಆಶೋಕನ ಆಳಿಕೆಯ ಆರಂಭದ ಭಾಗ ಸಾಕಷ್ಟು ರಕ್ತಸಿಕ್ತವಾಗಿತ್ತೆಂದು ಕಂಡು ಬರುತ್ತದೆ. ಅಶೋಕನು ಒಂದಿಲ್ಲೊಂದು ಯುದ್ಧದಲ್ಲಿ ಸದಾ ತೊಡಗಿಕೊಂಡಿದ್ದು ಒಂದರ ಹಿಂದೊಂದು ಪ್ರದೇಶಗಳನ್ನು ಗೆಲ್ಲುತ್ತ ಅದಾಗಲೇ ದೊಡ್ಡದಾಗಿದ್ದ ಮೌರ್ಯ ಸಾಮ್ರಾಜ್ಯವನ್ನು ಮತ್ತೂ ವಿಸ್ತರಿಸುತ್ತ ತನ್ನ ಸಂಪತ್ತನ್ನು ಹೆಚ್ಚಿಸುತ್ತ ಇದ್ದನು. ಕಳಿಂಗದ ಮೇಲಿನದು ಅವನ ಕೊನೆಯ ಗೆಲುವು. ಕಳಿಂಗವು ಇಂದಿನ ಓರಿಸ್ಸಾದ ಪೂರ್ವ ತೀರದ ರಾಜ್ಯವಾಗಿತ್ತು. ಕಳಿಂಗವು ತನ್ನ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವಗಳ ಬಗ್ಗೆ ಹೆಮ್ಮೆಪಡುತ್ತಿತ್ತು. ಸಾರ್ವಭೌಮ ಗಣರಾಜ್ಯವಾದ ಕಳಿಂಗವು ಕ್ಷತ್ರಿಯ ರಾಜರನ್ನೂ ರಾಜಧರ್ಮದ ಕಲ್ಪನೆಯನ್ನೂ ಹೊಂದಿದ್ದ ಅಂದಿನ ಭಾರತದ ಆಡಳಿತವ್ಯವಸ್ಥೆಗೆ ಒಂದು ಅಪವಾದವಾಗಿತ್ತು.

Join WhatsApp Join Telegram

ಕಳಿಂಗ ಯುದ್ಧ (ಕ್ರಿ.ಪೂ.265 ಅಥವಾ ಕ್ರಿ.ಪೂ.263)ದ ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ. ಅಶೋಕನ ಸೊದರರಲ್ಲೊಬ್ಬ – ಬಹುಶಃ ಸುಸೀಮನ ಬೆಂಬಲಿಗನೂ – ಕಳಿಂಗಕ್ಕೆ ಓದಿ ಹೋಗಿ ಆಶ್ರಯ ಪಡೆದಿರಬಹುದು. ಇದರಿಂದ ಅಶೋಕನು ಸಿಟ್ಟಿಗೆದ್ದನು. ಈ ದ್ರೋಹಕ್ಕಾಗಿ ಕಳಿಂಗದ ಮೇಲೆ ಆಕ್ರಮಣ ಮಾಡಲು ಅವನ ಮಂತ್ರಿಗಳು ಸಲಹೆ ನೀಡಿದರು . ಅದರಂತೆ,ಅಶೋಕನು ಶರಣಾಗಲು ಕಳಿಂಗದ ರಾಜಮನೆತನಕ್ಕೆ ಆದೇಶ ನೀಡಿದನು. ಅವರು ಈ ಆದೇಶವನ್ನು ಉಲ್ಲಂಘಿಸಿದಾಗ , ಕಳಿಂಗವನ್ನು ಮಣಿಸಲು ಅಶೋಕನು ತನ್ನ ಒಬ್ಬ ಸೇನಾಪತಿಯನ್ನು ಕಳಿಂಗಕ್ಕೆ ಕಳಿಸಿದನು.

ಬೌದ್ಧಧರ್ಮ ಸ್ವೀಕಾರ ಮತ್ತು ಪ್ರಚಾರ

ಕಳಿಂಗವೆಂದು ಕರಿಯಲ್ಪಡುತ್ತಿದ್ದ ಈಗಿನ ಒರಿಸ್ಸಾ ಅತ್ಯಂತ ಪ್ರಾಚೀನ ರಾಜ್ಯ. ಕೂರ್ಮಪುರಾಣ, ಮಹಾಭಾರತಗಳಲ್ಲೂ ಕಳಿಂಗದ ಉಲ್ಲೇಖ ಬಂದಿದೆ. ಕಾಳಿದಾಸ ತನ್ನ ರಘುವಂಶದಲ್ಲಿ ಸಮುದ್ರ ತೀರದ ರಾಜ್ಯಗಳ ರಾಜಧಾನಿಯಾಗಿ ಇದನ್ನು ಗುರುತಿಸುತ್ತಾನೆ. ಮಹೇಂದ್ರ ಪರ್ವತವನ್ನು ಹೊಂದಿರುವ ಮತ್ತು ದಂಡಕಾರಣ್ಯವನ್ನು ಗಡಿಯಾಗಿ ಪಡೆದಿರುವ ರಾಜ್ಯವೆಂದು ಪರಿಚಯಿಸುತ್ತಾನೆ. ಸಮೃದ್ಧವಾದ ಕರಾವಳಿ ಭಾಗವನ್ನು ಪಡೆದಿರುವ ಕಳಿಂಗ ಸಮುದ್ರ ಮಾರ್ಗದ ಮೂಲಕ ಜಗತ್ತಿಗೆ ಭಾರತದ ಕೊಂಡಿಯಾಗಿತ್ತು.

ದೇವನಾಂಪ್ರಿಯ ಅಶೋಕನಿಗೆ ಕಳಿಂಗವನ್ನು ಏರಿಹೋಗಲು ಇಷ್ಟು ಕಾರಣ ಸಾಕಿತ್ತು. ಕಳಿಂಗದ ಮೇಲೆ ದಾಳಿಗೈದ ಅಶೋಕ ಪೂರ್ಣ ರಾಜ್ಯವನ್ನು ಧ್ವಂಸಗೊಳಿಸಿದ. ಒಂದೂವರೆ ಲಕ್ಷ ಜನರನ್ನು ಬಂಧಿಸಿ ತಂದ. ಒಂದು ಲಕ್ಷ ಜನರನ್ನು ಯುದ್ಧದಲ್ಲಿ ಕೊಲ್ಲಲಾಯ್ತು. ಹೆಣಗಳ ರಾಶಿಯೇ ಅಲ್ಲಿ ಬಿತ್ತು. ಅಶೋಕ ಜಯಶಾಲಿಯಾದ ನಿಜ ಆದರೆ ಸತ್ತವರ ದೇಹಗಳನ್ನು ಕಂಡು ಅವನು ಮಮ್ಮಲಮರುಗಿದ. ಜನರ ನೈತಿಕ ಮತ್ತು ಸಾಮಾಜಿಕ ಬದುಕಿನ ಮೇಲಾದ ಆಘಾತ ಅವನ ಜೀವ ಹಿಂಡಿತು.

ಸದಾ ಒಳಿತನ್ನೇ ಮಾಡುವ ಪರಿವ್ರಾಜಕರು, ಶ್ರಮಣರು, ಬೌದ್ಧ ಪಂಥೀಯರು, ಸಂನ್ಯಾಸಿಗಳು ಇವರನ್ನೂ ಯುದ್ಧ ಬಿಡದೇ ಕೊಂದಿತ್ತು. ಸೆರೆ ಸಿಕ್ಕವರಲ್ಲಿ ಅವರೂ ಇದ್ದರು. ಯುದ್ಧ ಗುಣಮಾಡಲಾಗದಂತಹ ಗಾಯವನ್ನು ಮಾಡಿರುವುದು ಅವನರಿವಿಗೆ ಬಂತು. ಈಗ ಆತ ಶಸ್ತ್ರದ ಗೆಲುವು ಗೆಲುವಲ್ಲವೆಂಬುದನ್ನು ಅರಿತ. ಧರ್ಮದ ಗೆಲುವೇ ನಿಜವಾದ ಗೆಲುವು ಎಂದು ನಿಶ್ಚಯಿಸಿದ. ಧರ್ಮ ವಿಜಯಕ್ಕಾಗಿ ಪಣ ತೊಟ್ಟ. ಅಲ್ಲಿಂದಾಚೆಗೆ ಆತ ಬುದ್ಧನ ಅನುಯಾಯಿಯಾದ ಎನ್ನುತ್ತವೆ ಕೆಲವು ಸಾಹಿತ್ಯಗಳು. ಆದರೆ ಅಶೋಕನೇ ಸ್ತಂಭವೊಂದರ ಬರಹದ ಮೇಲೆ ಆರಂಭದ ಒಂದೆರಡು ವರ್ಷ ನಾನು ಸಾಮಾನ್ಯವಾಗಿಯೇ ಎಲ್ಲರಂತೆ ಇದ್ದೆ. ಆನಂತರವೇ ನನ್ನಲ್ಲಿ ಬಹಳ ಬದಲಾವಣೆ ಬಂದಿದ್ದು ಎಂಬರ್ಥದ ಸಾಲು ಬರೆಸಿದ್ದಾನೆ. ಹೀಗಾಗಿಯೇ ಆತ ಮೊದಲೇ ಬುದ್ಧಾನುಯಾಯಿಯಾಗಿದ್ದ ಆನಂತರ ಕಳಿಂಗ ಯುದ್ಧ ಅವನನ್ನು ಶಾಂತಿ-ಅಹಿಂಸೆಗಳತ್ತ ತೀವ್ರವಾಗಿ ಸೆಳೆಯಿತು ಎಂಬುದನ್ನು ಒಪ್ಪಬಹುದೇನೋ,

ಕಳಿಂಗ ಯುದ್ಧದ ನಂತರ ಅವನಲ್ಲಿ ಮಹತ್ತರವಾದ ಬದಲಾವಣೆ ಬಂದದ್ದನ್ನು ಕಳಿಂಗ ಶಾಸನದಲ್ಲಿ ಕಾಣಬಹುದು. ‘ಪ್ರತಿಯೊಬ್ಬರೂ ನನ್ನ ಮಕ್ಕಳಂತೆ. ಹೇಗೆ ನನ್ನ ಮಕ್ಕಳು ಇಹ ಮತ್ತು ಪರದಲ್ಲಿ ಸುಖ-ಸಮೃದ್ಧಿಯನ್ನು ಪಡೆಯಲೆಂದು ಆಶಿಸುತ್ತೇನೋ ಹಾಗೆಯೇ ಪ್ರತಿಯೊಬ್ಬನಿಗಾಗಿಯೂ ಪ್ರಾಥರ್ಿಸುತ್ತೇನೆ’ ಎಂದಿದೆ. ನಂದರ ಕಾಲದ ಮಗಧಕ್ಕೂ ಮೌರ್ಯರ ಕಾಲದ ಮಗಧಕ್ಕೂ ಇದ್ದ ಅಗಾಧ ವ್ಯತ್ಯಾಸ ಇದು. ಅಶೋಕ ಈ ಪರಿಯ ಪ್ರೇಮದಿಂದಲೇ ತನ್ನ ಪ್ರಜೆಗಳನ್ನು ಗೆದ್ದುಬಿಟ್ಟಿದ್ದ. ಇಲ್ಲವಾದಲ್ಲಿ ಅಷ್ಟು ವಿಸ್ತಾರವಾಗಿದ್ದ ಭೂಖಂಡವನ್ನು ಆಳುವುದು ತಮಾಷೆಯ ಮಾತಾಗಿರಲಿಲ್ಲ.

ಆದರೆ, ಕಳಿಂಗದ ಚಾಣಾಕ್ಷ ದಂಡನಾಯಕನಿಂದ , ಅಶೋಕನ ಸೇನೆ, ಅದರ ನಾಯಕನೊಂದಿಗೆ, ಧೂಳೀಪಟವಾಯಿತು. ಈ ಸೋಲಿನಿಂದ ತಬ್ಬಿಬ್ಬಾದ ಅಶೋಕ, ಅಲ್ಲಿಯವರೆಗಿನ ಭಾರತದ ಇತಿಹಾಸದಲ್ಲೇ ಅತಿದೊಡ್ಡದಾಗಿದ್ದ ದಂಡಿನೊಡನೆ ಕಳಿಂಗದ ಮೇಲೆ ಏರಿ ಹೋದ. ಕಳಿಂಗವು ಭಾರೀ ಪ್ರತಿರೋಧವನ್ನೊಡ್ಡಿತು . ಆದರೆ ಅಶೋಕನ ಬಲಿಷ್ಠ ಸೈನ್ಯ, ಉತ್ತಮ ಆಯುಧಗಳು ಮತ್ತು ಸೈನಿಕರ ಮತ್ತು ಸೇನಾಪತಿಗಳ ಅನುಭವಗಳಿಗೆ ಅವರು ಸಾಟಿಯಾಗಲಿಲ್ಲ. ಇಡೀ ಕಳಿಂಗವನ್ನು ಲೂಟಿ ಮಾಡಿ ನಾಶ ಮಾಡಲಾಯಿತು ಅಶೋಕನ ನಂತರದ ಶಿಲಾಶಾಸನಗಳು ತಿಳಿಸುವಂತೆ ಕಳಿಂಗದ ಕಡೆ ಒಂದು ಲಕ್ಷ ಜನರು ಮತ್ತು ಅಶೋಕನ ಸೈನ್ಯದ ಹತ್ತು ಸಾವಿರ ಜನರು ಕೊಲ್ಲಲ್ಪಟ್ಟರು. ಸಾವಿರಾರು ಜನ ಸ್ತ್ರೀಪುರುಷರನ್ನು ಗಡಿಪಾರು ಮಾಡಲಾಯಿತು.

ಸಾರನಾಥದ ಸ್ಥಂಭ

ಅಶೋಕನು ತನ್ನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಮಗಳು ಹಗೂ ಉಪಗುಪ್ತರೊಂದಿಗೆ ಮತ್ತೊಮ್ಮೆ ಧರ್ಮಯಾತ್ರೆ ಕೈಗೊಂಡುದುದು ಆತನ ಶಾಸನಗಳಿಂದ ತಿಳಿದುಬರುತ್ತದೆ. ಈ ಯಾತ್ರೆಯಲ್ಲಿ ವೈಶಾಲಿನಗರಕ್ಕೆ ಹೋಗಿ, ಅಲ್ಲಿಯ ಗತವೈಭವವನ್ನು, ಬುದ್ಧದೇವನು ವಿಶ್ರಾಂತಿ ಪಡೆದ ಸ್ಥಳಗಳನ್ನು ನೋಡಿದ. ಅಲ್ಲಿಂದ ಪೂರ್ವ ದಿಕ್ಕಿನತ್ತ ಪ್ರಯಾಣ ಮಾಡಿ ರಾಮಗ್ರಾಮಕ್ಕೆ ಬಂದನು. ಬುದ್ಧದೇವನು ನಿರ್ವಾಣ ಹೊಂದಿದ ಮೇಲೆ ಆತನ ಆಸ್ಥಿಗಳನ್ನು ಸಂಗ್ರಹಿಸಿ, ಅರಸನೊಬ್ಬನು ರಾಮಗ್ರಾಮದ ಹತ್ತಿರ ಕಟ್ಟಿಸಿದ ಸ್ಥೂಪವನ್ನು ಕಂಡನು,. ಮುಂದೆ ಲುಂಬಿನಿ, ಕಪಿಲವಸ್ತು, ಶ್ರಾವಂತಿ, ಗಯಾ ಮುಂತಾದ ನಗರ ಹಾಗೂ ಕ್ಷೇತ್ರಗಳಿಗೆ ಭೇಟಿ ಕೊಟ್ಟನು. ತಾನು ಹೋದಕಡೆಗಳಲ್ಲೆಲ್ಲ ತನ್ನ ಯಾತ್ರೆಯ ಸವಿನೆನಪಿಗೆಂದು ಸ್ಥಂಭಗಳನ್ನು ಸ್ಥೂಪಗಳನ್ನು ಕಟ್ಟಿಸಿದನು. ಅವು ಇಂದಿಗೂ ಅಶೋಕ ಚಕವರ್ತಿಯ ಧರ್ಮಯಾತ್ರೆಯ ಸ್ಮರಣೆಯನ್ನು ಸಾರುತ್ತ ನಿಂತಿವೆ.

ಈ ಸ್ಮಾರಕ ಸ್ಥಂಭಗಳಲ್ಲಿ ಕಾಶಿಯ ಹತ್ತಿರದ ಸಾರನಾಥದಲ್ಲಿಯ ಸ್ಥಂಭವು ಒಂದು. ಸುಮಾರು ಐವತ್ತು ಅಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದ ಈ ಸ್ತಂಭದ ಮೇಲೆ ನಾಲ್ಕು ಸಿಂಹಗಳು ಕೂಡಿ ನಿಂತುಕೊಂಡಿರುವಂತೆ ಬಹು ಸುಂದರವಾಗಿ ಕೆತ್ತಲ್ಪಟ್ಟಿವೆ. ಇಂದು ನಮ್ಮ ಭಾರತ ಸರಕಾರವು ತನ್ನ ಅಧಿಕೃತ ಮುದ್ರಯಲ್ಲಿ ಆ ಸಿಂಹಗಳ ಚಿಹ್ನೆಯನ್ನೂ ರಾಷ್ಟ್ರಧ್ವಜದಲ್ಲಿ “ಅಶೋಕ ಚಕ್ರ”ದ ಗುರುತನ್ನೂ ಉಪಯೋಗಿಸಿಕೊಂಡು ಆದರ್ಶ ಅರಸನಿಗೆ ಉಚಿತವಾದ ಗೌರವ ಸಲ್ಲಿಸಿದೆ. ಆದರೆ ದುರ್ದೈವದಿಂದ ಸಾರನಾಥ ನಾಶವಾದಾಗ ಈ ಸ್ಥಂಬ ಮುರಿದು ಬಿದ್ದಿದ್ದು, ಅದರ ಅಳಿದುಳಿದ ಭಾಗಗಳು ಇಂದೂನಮಗೆ ಕಾಣಸಿಗುತ್ತವೆ. ಅಶೋಕನು ನಿರ್ಮಿಸಿದನೆನ್ನಲಾದ ಎಂಬತ್ತ ನಾಲ್ಕು ಸಾವಿರ ಸ್ಥೂಪಗಳಲ್ಲಿ ಕಾಂಚಿಸ್ತೂಪವು ಬಹು ಪ್ರಸಿದ್ಧವಾಗಿದ್ದು ಮತ್ತು ಭವ್ಯವಾದುದು. ಎತ್ತರವಾದ ಕಟ್ಟೆಯ ಮೇಲೆ ಐವತ್ತು ನಾಲ್ಕು ಆಡಿ ಎತ್ತರವಾಗಿ ಅರ್ಧವರ್ತುಲಾಕಾರದಿಂದ ಇಂದಿಗೂ ನಿಂತಿದೆ. ಈ ಸ್ಥಂಭಗಳಲ್ಲದೆ, ಸ್ತೂಪಗಳಲ್ಲದೆ ಅಶೋಕನು ಗುಹಾಲಯಗಳನ್ನು, ಕುಕ್ಕಟಾರಾಮಗಳನ್ನು, ಬೌದ್ಧ ವಿಹಾರಗಳನ್ನು, ಅಗಣಿತ ಸಂಖ್ಯೆಯಲ್ಲಿ ಕಟ್ಟಿಸಿದನು. ಇವೆಲ್ಲವುಗಳು ಆಗಿನ ಕಾಲದ ಅತ್ಯುಚ್ಛ ಶಿಲ್ಪ ಕಲೆಯನ್ನು ತೋರಿಸಿಕೊಡುವ ನಿದರ್ಶನಗಳಾಗಿವೆ.

FAQ

ಅಶೋಕನ ತಂದೆಯ ಹೆಸರೇನು ?

ಬಿಂದುಸಾರ

ಅಶೋಕನ ತಾಯಿಯ ಹೆಸರೇನು ?

ಸುಭದ್ರಾಂಗಿ

ಇತರೆ ವಿಷಯಗಳು :

ಸಮಯದ ಮಹತ್ವದ ಬಗ್ಗೆ ಪ್ರಬಂಧ

ಗಾಂಧೀಜಿಯವರ ಜೀವನ ಚರಿತ್ರೆ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.