ಭ್ರಷ್ಟಾಚಾರ ಮುಕ್ತ ಭಾರತ ಪ್ರಬಂಧ Corruption Free India Essay Brastachara Mukta Bharatha Prabandha in Kannada
ಭ್ರಷ್ಟಾಚಾರ ಮುಕ್ತ ಭಾರತ ಪ್ರಬಂಧ
ಈ ಲೇಖನಿಯಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪೀಠಿಕೆ :
ಭಾರತವು ಎದುರಿಸುತ್ತಿರುವ ಜ್ಲಲಂತ ಸಮಸ್ಯೆಗಳಲ್ಲಿ ಭ್ರಷ್ಟಾಚಾರವೂ ಒಂದಾಗಿದೆ. ಇದು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ತನ್ನದೆ ಪ್ರಮಾಣದಲ್ಲಿ ಬೇರೂರಿದ್ದು ದೇಶದ ಪ್ರಗತಿಗೆ ಮಾರಕವಾಗಿದೆ. ಭ್ರಷ್ಟಾಚಾರವು ನಮ್ಮ ದೇಶದ ವಿವಿಧ ಗಂಭೀರ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ನಾವೆಲ್ಲರೂ ಭ್ರಷ್ಟಾಚಾರ ಮುಕ್ತ ಪ್ರಪಂಚದ ಕನಸು ಕಾಣುತ್ತೇವೆ. ಭಾರತದಲ್ಲಿ ಭ್ರಷ್ಟಾಚಾರವು ಅನಾದಿ ಕಾಲದಿಂದಲೂ ಒಂದಲ್ಲ ಒಂದು ರೂಪದಲ್ಲಿ ಚಾಲ್ತಿಯಲ್ಲಿದೆ. ಭಾರತದಲ್ಲಿ ಭ್ರಷ್ಟಾಚಾರವು ಅಧಿಕಾರಿಗಳು, ರಾಜಕಾರಣಿಗಳು ಮತ್ತು ಅಪರಾಧಿಗಳ ನಡುವಿನ ಸಂಪರ್ಕದ ಪರಿಣಾಮವಾಗಿದೆ. ಹಿಂದಿನ ದಿನಗಳಲ್ಲಿ, ತಪ್ಪುಗಳನ್ನು ಮಾಡಲು ಲಂಚವನ್ನು ನೀಡಲಾಗುತ್ತಿತ್ತು, ಆದರೆ ಈಗ ಸಮಾಜದಲ್ಲಿ ಸರಿಯಾದ ಕೆಲಸವನ್ನು ಮಾಡಲು ಲಂಚವನ್ನು ನೀಡಲಾಗುತ್ತಿದೆ.
ವಿಷಯ ವಿವರಣೆ :
ಭ್ರಷ್ಟಾಚಾರ ಎಂದರೇನು?
ಯಾವುದೆ ಅಧಿಕಾರಿ ಅಥವಾ ಜನಪ್ರತಿನಿಧಿಯ ನೇರವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ಥಾನ, ಹುದ್ದೆ ಅಥವಾ ಸಂಪನ್ಮೂಲಗಳನ್ನು ಕಾನೂನು ವ್ಯಾಪ್ತಿಯನ್ನು ಮೀರಿ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ಭ್ರಷ್ಟಾಚಾರ ಎನ್ನುವರು.
ಲಂಚ, ಕಮಿಷನ್, ಕೊಡುಗೆಗಳು, ಸಾರ್ವಜನಿಕ ಹಣದ ದುರುಪಯೋಗ, ಕಾನೂನುಬಾಹಿರ ಕೆಲಸಗಳು, ಪಕ್ಷಪಾತ, ಅನೈತಿಕ ಬೆಂಬಲ ಹೀಗೆ ಇನ್ನೂ ಮುಂತಾದವು ಭ್ರಷ್ಟಾಚಾರದ ಮೂಲಗಳಾಗಿವೆ.
ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣಗಳು :
- ನೈತಿಕ ಮೌಲ್ಯಗಳ ಕೊರತೆ :
ಮನೆಯೇ ಮೊದಲ ಪಾಠ ಶಾಲೆ ಎನ್ನುತ್ತಾರೆ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳದ ಕುಟುಂಬಗಳಿಂದ ಬರುವ ವ್ಯಕ್ತಿಗಳು ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ.
- ಸ್ವಾರ್ಥ ಪರತೆ :
“ಜನ ಸೇವೆಯೇ ಜನಾರ್ಧನ ಸೇವೆ” ಎಂಬುದನ್ನು ಅಧಿಕಾರಿಗಳು ಹಾಗೂ ಜನ ನಾಯಕರು ಕಡೆಗಣಿಸಿರುವುದು ಹಾಗೂ ಇವರ ನೈತಿಕ ಮೌಲ್ಯಗಳು ಅಧಃಪತನಗೊಂಡು ವೈಯಕ್ತಿಕ ಹಿತಾಸಕ್ತಿಯಲ್ಲಿ ತೊಡಗಿರುವುದು.
- ರಾಜಕೀಯ ಕಾರಣಗಳು ;
ಅಧಿಕಾರಿಗಳು ಪ್ರಾಮಾಣಿವಾಗಿದ್ದರೂ ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗೆ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ.
- ಉದ್ಯೋಗ ಅವಕಾಶಗಳ ಕೊರತೆ :
ಅರ್ಹ ಯುವಕರ ಸಂಖ್ಯೆಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಉದ್ಯೋಗಗಳು ಕಡಿಮೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಯಾವುದೇ ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದರೆ, ಇತರರು ತಮ್ಮ ವಿದ್ಯಾರ್ಹತೆಗೆ ಸರಿಸಮಾನವಲ್ಲದ ಉದ್ಯೋಗಗಳನ್ನು ತೆಗೆದುಕೊಳ್ಳುತ್ತಾರೆ. ಈ ವ್ಯಕ್ತಿಗಳ ನಡುವಿನ ಅಸಮಾಧಾನ ಮತ್ತು ಹೆಚ್ಚು ಹಣವನ್ನು ಗಳಿಸುವ ಅವರ ಉದ್ದೇಶವು ಭ್ರಷ್ಟಾಚಾರಕ್ಕ ಕಾರಣವಾಗುತ್ತದೆ.
- ಕಠಿಣ ಕಾನೂನಿನ ಕೊರತೆ :
ನಮ್ಮ ದೇಶದಲ್ಲಿ ಜನರು ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು, ಆದಾಯ ತೆರಿಗೆ ಪಾವತಿಸದಿರುವುದು, ವ್ಯವಹಾರಗಳನ್ನು ನಡೆಸಲು ಭ್ರಷ್ಟ ಮಾರ್ಗಗಳನ್ನು ಅನುಸರಿಸುತ್ತಾರೆ. ಜನರ ಚಟುವಟಿಕೆಗಳ ಮೇಲೆ ನಿಗಾ ಇಡಲು ಯಾವುದೇ ಕಠಿಣ ಕಾನೂನು ಇಲ್ಲ. ಜನರು ಸಿಕ್ಕಿಬಿದ್ದರೂ, ಅವರಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಲು ಇದು ಒಂದು ಕಾರಣವಾಗಿದೆ.
- ದುರಾಸೆ ಮತ್ತು ಬೆಳೆಯುತ್ತಿರುವ ಸ್ಪರ್ಧೆ :
ದುರಾಸೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಪೈಪೋಟಿ ಕೂಡ ಬೆಳೆಯುತ್ತಿರುವ ಭ್ರಷ್ಟಾಚಾರಕ್ಕೆ ಕಾರಣ. ಇತ್ತೀಚಿನ ದಿನಗಳಲ್ಲಿ ಜನರು ಅತ್ಯಂತ ದುರಾಸೆಯವರಾಗಿದ್ದಾರೆ. ಅವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗಿಂತ ಹೆಚ್ಚಿನದನ್ನು ಗಳಿಸಲು ಬಯಸುತ್ತಾರೆ ಮತ್ತು ಈ ಹುಚ್ಚು ವಿಪರೀತದಲ್ಲಿ ಅವರು ತಮ್ಮ ಕನಸುಗಳನ್ನು ನನಸಾಗಿಸಲು ಭ್ರಷ್ಟ ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಇತರೆ ಕೊರತೆಗಳು :
- ಮೌಲ್ಯಾಧಾರಿತ ಶಿಕ್ಷಣದ ಕೊರತೆ.
- ಮರೀಚಿಕೆಯಾಗಿರುವ ಮಾನವೀಯ ಮೌಲ್ಯಗಳು.
- ಪಾರದರ್ಶಕವಿಲ್ಲದ ಆಡಳಿತ ವ್ಯವಸ್ಥೆ.
- ಭ್ರಷ್ಟಾಚಾರ ತಡೆಗಟ್ಟಲು ಇರುವ ಕಾನೂನುಗಳನ್ನು ನಿರ್ಭಯ ಹಾಗೂ ನಿಷ್ಪಕ್ಷಪಾತವಾಗಿ ಜಾರಿಗೊಳಿಸುವಲ್ಲಿನ ಬದ್ದತೆಯ ಕೊರತೆ.
ಭ್ರಷ್ಟಾಚಾರದ ಪರಿಣಾಮಗಳು :
- ದೇಶದ ಸರ್ವಾಂಗೀಣ ಅಭಿವೃದ್ದಿ ಕುಂಠಿತ
- ಸಾಮಾಜಿಕ ನ್ಯಾಯದ ಉಲ್ಲಂಘನೆ
- ಕಪ್ಪು ಹಣ ಅಕ್ರಮ ಆಸ್ತಿಯ ಹೆಚ್ಚಳ
- ವರ್ಗ ತಾರತಮ್ಯ ಹಾಗೂ ಸಂಘರ್ಷಕ್ಕೆ ದಾರಿ
- ಮುಷ್ಕರ, ಬಂಡಾತ ಹಾಗೂ ಕ್ರಾಂತಿಗಳಿಗೆ ಅವಕಾಶ
- ನಿರುದ್ಯೋಗದಲ್ಲಿ ಏರಿಕೆ
- ಹಸಿವು ಮತ್ತು ಬಡತನದಲ್ಲಿ ಏರಿಕೆ
- ಭಾರತೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಕುಸಿತ
- ಮಾನಸಿಕ ಮತ್ತು ಸಾಮಾಜಿಕ ಅಸ್ವಸ್ಥತೆ
- ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿರುವುದರಿಂದ ಭ್ರಷ್ಟಾಚಾರವೂ ಬಡತನಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರ ಘೋಷಿಸಿದ ಎಲ್ಲ ಪ್ಯಾಕೇಜ್‌ಗಳು, ಪರಿಹಾರಗಳು ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳಿಗೆ ತಲುಪುವುದಿಲ್ಲ, ಬದಲಾಗಿ ಶ್ರೀಮಂತರ ಕೈ ಸೇರಿತ್ತಿದೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು :
- ಭಾರತೀಯ ದಂಡ ಸಂಹಿತೆ – 1860
- ಭ್ರಷ್ಟಾಚಾರ ತಡೆ ಶಾಸನ – 1947
- ಭ್ರಷ್ಟಾಚಾರ ವಿರೋಧಿ ಕಾಯ್ದೆ – 1964
- ಕೆ. ಸಂತಾನಂ ಸಮಿತಿಯ ಶಫಾರಸ್ಸಿನ ಮೇರೆಗೆ ಕೇಂದ್ರ ಜಾಗೃತಿ ಮಂಡಲ ಸ್ಥಾಪನೆ – 1964
- ಕೇಂದ್ರೀಯ ತನಿಖಾ ಸಂಸ್ಥೆ
- ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ – 1988
- ಬೇನಾಮಿ ಟ್ರಾನ್ಸಾಕ್ಷನ್ ಆಕ್ಟ್ – 1988
- ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ – 2002
ಭ್ರಷ್ಟಾಚಾರ ನಿಯಂತ್ರಣಕ್ಕೆ ಕೆಲವು ಸಲಹೆಗಳು :
- ಭ್ರಷ್ಟಾಚಾರಿಗಳನ್ನು ಧರ್ಮಾತೀತ, ಜಾತ್ಯಾತೀತ, ಪಕ್ಷಾತೀತವಾಗಿ ನೋಡುವುದು.
- ಅಧಿಕಾರದ ಪ್ರತಿಯೊಣದು ಹಂತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು.
- ಗುಣಮಟ್ಟದ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದು.
- ನೌಕರರಿಗೆ ಸಂಬಳ ಹೆಚ್ಚಿಸುವುದು.
- ಆಡಳಿತದಲ್ಲಿ ತಂತ್ರಜ್ಞಾನವನ್ನು ದಕ್ಷತೆಯಿಂದ ಬಳಸುವುದು.
ಉಪಸಂಹಾರ :
ಭ್ರಷ್ಟಾಚಾರವೆಂಬುದು ಇಂದು ಮನುಷ್ಯನ ಹುಟ್ಟಿನಿಂದ ಸಾಯುವವರೆಗಿನ ತನ್ನ ಎಲ್ಲಾ ಆಯಾಮಗಳಲ್ಲಿ ತನ್ನ ಕಬಂಧ ಬಾಹುಗಳನ್ನುಚಾಚಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿಯೊಬ್ಬ ಪ್ರಜೆಯಲ್ಲೂ ನೈತಿಕತೆಯನ್ನು ಜಾಗೃತಗೊಳಿಸುವುದರ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಿ ದೇಶದ ಅಭಿವೃದ್ದಿಗೆ ಅಡಿಗಲ್ಲು ಹಾಕಬೇಕಾಗಿದೆ.
FAQ :
ಭ್ರಷ್ಟಾಚಾರ ಎಂದರೇನು?
ಯಾವುದೆ ಅಧಿಕಾರಿ ಅಥವಾ ಜನಪ್ರತಿನಿಧಿಯ ನೇರವಾಗಿ ಅಥವಾ ಪರೋಕ್ಷವಾಗಿ ತನ್ನ ಸ್ಥಾನ, ಹುದ್ದೆ ಅಥವಾ ಸಂಪನ್ಮೂಲಗಳನ್ನು ಕಾನೂನು ವ್ಯಾಪ್ತಿಯನ್ನು ಮೀರಿ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ಭ್ರಷ್ಟಾಚಾರ ಎನ್ನುವರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಒಂದು ಕ್ರಮ ತಿಳಿಸಿ?
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ – 1988
ಭ್ರಷ್ಟಾಚಾರದ ಒಂದು ಪರಿಣಾಮ ತಿಳಿಸಿ?
ದೇಶದ ಸರ್ವಾಂಗೀಣ ಅಭಿವೃದ್ದಿ ಕುಂಠಿತ.
ಉತ್ತಮ ಸಮಾಜ ನಿರ್ಮಾಣಕ್ಕೆ ಅಡ್ಡಿ.
ಇತರೆ ವಿಷಯಗಳು :
ಸ್ವಚ್ಛ ಭಾರತ ಅಭಿಯಾನ ಯೋಜನೆ ಬಗ್ಗೆ ಮಾಹಿತಿ