ರಕ್ತದ ಬಗ್ಗೆ ಮಾಹಿತಿ Information about blood Rakthada bagge Mahithi in kannada
ರಕ್ತದ ಬಗ್ಗೆ ಮಾಹಿತಿ :
ಈ ಲೇಖನಿಯಲ್ಲಿ ರಕ್ತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ರಕ್ತ(Blood) :
- ಆರೋಗ್ಯವಂತ ಮಾನವರಲ್ಲಿ 4.5 ರಿಂದ 5.6 ಲೀಟರ್ ಇರತ್ತದೆ
- ಮಾನವನ ರಕ್ತವು ಪ್ರತ್ಯಾಮ್ಲೀಯ ಗುಣವನ್ನು ಹೊಂದಿದೆ.
- ಕೆಂಪು ರಕ್ತ ಕಣಗಳು ಕಣದಂಗಗಳನ್ನು ಒಳಗೊಂಡಿರುವುದಿಲ್ಲ.
- ರಕ್ತ ಹೆಪ್ಪುಗಟ್ಟಲು 2 ನಿಮಿಷ ಅವಧಿ ಬೇಕು.
- ರಕ್ತವು ಒಂದು ದ್ರವಸಂಯೋಜಕ ಅಂಗಾಂಶ
- ರಕ್ತದ pH ಮೌಲ್ಯ – 7.4
- ರಕ್ತದ ರೋಗಗಳು ಮತ್ತು ಚಿಕತ್ಸೆಯ ಅಧ್ಯಯನ – ಹೆಮಟಾಲಜಿ
- ರಕ್ತದ ವೈಜ್ಞಾನಿಕ ಅಧ್ಯಯನ – ಸಿರಾಲಜಿ
- ರಕ್ತ ಹೆಪ್ಪು ಗಟ್ಟಲು ಸಹಾಯಕವಾದ ಖನಿಜ – ಕ್ಯಾಲ್ಸಿಯಂ
- ರಕ್ತ ಹೆಪ್ಪುಗಟ್ಟಲು ಸಹಾಯಕವಾದ ರಕ್ತ ಕಣಗಳು – ಕಿರುತಟ್ಟೆ
- ರಕ್ತ ಹೆಪ್ಪುಗಟ್ಟಲು ಸಹಾಯಕವಾದ ಪ್ರೋಟಿನ್ಗಳು – ಪೈಬ್ರಿನೋಜನ್
- ರಕ್ತ ಹೆಪ್ಪುಗಟ್ಟಲು ಸಹಾಯಕವಾದ ವಿಟಮಿನ್ – k
- ರಕ್ತವು ಪ್ಲಾಸ್ಮ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಕಿರುತಟ್ಟೆಗಳನ್ನು ಒಳಗೊಂಡಿರುತ್ತದೆ.
- ದೇಹದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಗಟ್ಟುವ ಪ್ರೋಟೀನ್ – ಹೆಪ್ಯಾರಿನ್
ಪ್ಲಾಸ್ಮಾ :
- 90% ರಷ್ಟು ನೀರಿನಿಂದ ಮಾಡಲ್ಪಟ್ಟಿದೆ.
- ಇದು ತಿಳಿ ಹಳದಿ ಬಣ್ಣವನ್ನು ಹೊಂದಿದೆ.
- ಇದರಲ್ಲಿ ಪೈಬ್ರಿನೋಜನ್ ಮತ್ತು ಪ್ರೋಥಾಂಬಿನ್ಗಳು ಇರುತ್ತವೆ.
- ಪ್ರೋಟಿನಗಳು ಕಂಡುಬರುತ್ತವೆ.
- ಇದು ರಕ್ತದ PH ಮೌಲ್ಯವನ್ನು ಕ್ರಮಗೊಳಿಸುತ್ತದೆ.
ರಕ್ತದ ಕಣಗಳು :
ಕೆಂಪು ರಕ್ತ ಕಣಗಳು :
- ಇವುಗಳನ್ನು ಎರಿಥ್ರೋಸೈಟ್ಸ್ಗಳೆಂದು ಕರೆಯುತ್ತಾರೆ.
- ಇವುಗಳಲ್ಲಿ ಕಬ್ಬಿಣದ ಅಂಶವನ್ನು ಹೊಂದಿರುವ ಹಿಮೋಗ್ಲೋಬಿನ್ ಇರುತ್ತದೆ.
- ಇವುಗಳು ಭ್ರೂಣದಲ್ಲಿ ಲಿವರ್ ಮತ್ತು ಗುಲ್ಮದಲ್ಲಿ ಉತ್ಪತ್ತಿಯಾಗುತ್ತದೆ. ವಯಸ್ಕರಲ್ಲಿ ಅಸ್ಥಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ.
- ಈ ಕಣಗಳು ಆಮ್ಲಜನಕವನ್ನು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ.
- ಈ ಕಣಗಳು ಒಂದು ಸೆಕೆಂಡಿಗೆ 1.2 ಮಿಲಿಯನ್ಗಳ ವೇಗದಲ್ಲಿ ಉತ್ಪತ್ತಿಯಾಗುತ್ತದೆ.
- ಈ ಕಣಗಳ ಜೀವಿತಾವಧಿ 120 ದಿನಗಳು
- ಈ ಕಣಗಳು ಲೀವರ ಮತ್ತು ಪ್ಲೀಹದಲ್ಲಿ ನಾಸಗೊಳ್ಳುತ್ತವೆ. ಆದ್ದರಿಂದ ಪ್ಲೀಹನ್ನು ಕೆಂಪು ರಕ್ತ ಕಣಗಳ ಸ್ಮಶಾನ ಎನ್ನುತ್ತಾರೆ.
- ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದರೆ ಅನೀಮಿಯಾ ಮತ್ತು ಹೆಚ್ಚಾದರೆ ಪಾಲಿ ಸೈಥೇಮಿಯಾ ಎಂಬ ಕಾಯಿಲೆ ಉಂಟಾಗುತ್ತದೆ.
- ರಕ್ತಹೀನತೆ ಅಥವಾ ಅನೀಮಿಯಾ ರೋಗ ಬಿ-12 ಜೀವಸತ್ವದ ಕೊರತೆಯಿಂದ ಕಂಡುಬರುತ್ತದೆ.
ಬಿಳಿ ರಕ್ತ ಕಣಗಳು :
- ಇವು ನ್ಯೂಕ್ಲಿಯಸ್ನ್ನು ಹೊಂದಿರುತ್ತವೆ.
- ಇವುಗಳನ್ನು ಲುಕೋಸೈಟ್ಸ್ಗಳೆಂದು ಕರೆಯುತ್ತಾರೆ.
- ಈ ಕಣಗಳ ಜೀವಿತಾವಧಿಯು 12 ಗಂಟೆಯಿಂದ ಕೆಲವು ವಾರಗಳ ವರೆಗೆ.
- ಇವು ಮಾನವನ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತವೆ.
- ಇವುಗಳನ್ನು ದೇಹದ ಸೈನಿಕರೆಂದು ಕರೆಯುತ್ತಾರೆ.
- ಇವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ರೋಗಾಣುಗಳನ್ನು ನಾಶಮಾಡುತ್ತವೆ.
- ಈ ಕಣಗಳ ಸಂಖ್ಯೆ ಹೆಚ್ಚಾದರೆ ಲುಕೇಮಿಯಾ ರಕ್ತದ ಕ್ಯಾನ್ಸರ್ ಬರುತ್ತದೆ.
ಕಿರುತಟ್ಟೆಗಳು :
- ಇವುಗಳನ್ನು ಥ್ರೋಂಬೋ ಸೈಟ್ಸ್ ಎಂದು ಕರೆಯುತ್ತಾರೆ.
- ಇವು ಅಸ್ತಿಮಜ್ಜೆಯಲ್ಲಿ ಉತ್ಪತಿಯಾಗುತ್ತವೆ.
- ಇವುಗಳ ಜೀವಿತಾವಧಿ 7 ರಿಂದ 9 ದಿನಗಳು
- ಇವುಗಳ ಸಂಖ್ಯೆ 2,50,000 ಕ್ಯುಬಿಕ್ ಮಿಲಿ ಲೀಟರ್
- ಇವು ರಕ್ತ ಹೆಪ್ಪುಗಟ್ಟಿಸುವಿಕೆಯಲ್ಲಿ ಪಾಲ್ಗೊಳ್ಳುತ್ತವೆ.
- ಇವು ನ್ಯೂಕ್ಲಿಯಸ್ ನ್ನು ಹೊಂದಿರುವುದಿಲ್ಲ.
- ರಕ್ತ ಹೆಪ್ಪುಗಟ್ಟದೇ ಇರುವ ಸ್ಥಿತಿಯನ್ನು ಹಿಮೋಫಿಲಿಯಾ/ರಾಯಲ್ ಕಾಯಿಲೆ ಎನ್ನುವರು.
ರಕ್ತದ ಗುಂಪುಗಳು :
- 1900 ರಲ್ಲಿ ಕಾರ್ಲ್ಲ್ಯಾಂಡ್ ಸ್ಟೀನರ್ ರಕ್ತದ ಗುಂಪುಗಳನ್ನು ಕಂಡಿಹಿಡಿದರು.
- ಸ್ಟೀನ್ ರವರನ್ನು ರಕ್ತದ ಗುಂಪುಗಳ ಪಿತಾಮಹಾ ಎನ್ನುವರು.
- 1902 ರಲ್ಲಿ ಡಿ ಕ್ಯಾಸ್ಟಿಲೋ ಮತ್ತು ಸ್ಟರ್ಲಿ AB ರಕ್ತದ ಗುಂಪನ್ನು ಕಂಡುಹಿಡಿದರು.
- ಸ್ಟಿನರ್ನು ರಕ್ತದ ಗುಂಪುಗಳಿಗೆ ಸಂಬಂಧಪಟ್ಟಂತೆ ಕೆಂಪು ರಕ್ತ ಕಣಗಳ ಮೇಲೆ ಗ್ಲೈಕ್ಲೋ ಪ್ರೋಟೀನ್ ರಾಸಾಯನಿಕ ಪದಾರ್ಥಗಳನ್ನು ಗುರುತಿಸಿದನು. ಇವುಗಳನ್ನು ಯಾಂಟಿಜನ್ ಅಥವಾ ಪ್ರತಿಕಾಯಜನಕ ಎಂದು ಕರೆದನು.
- ಯಾಂಟಿಜನ್ಗಳಲ್ಲಿ 2 ವಿಧಗಳು : ಯಾಂಟಿಜನ್ A, ಯಾಂಟಿಜನ್ B
- ಸ್ಟಿನರ್ ರವರು ಯಾಂಟಿಜನ್ಗಳ ಆಧಾರದ ಮೇಲೆ ಮಾನವನ ರಕ್ತವನ್ನು A, B, AB, O ಎಂದು ವಿಂಗಡಿಸಿದ್ದಾರೆ.
- ಸ್ಟೀನರ್ ನು ರಕ್ತದ ಗುಂಪುಗಳಿಗೆ ಸಂಬಂಧಪಟ್ಟಂತೆ ಪ್ಲಾಸ್ಮಾದಲ್ಲಿ ಕೆಲವೊಂದು ಪ್ರೋಟಿನ್ಗಳೂ ಕಂಡುಹಿಡಿದನು.
- ಒಂದೇ ತರಹದ ಯಾಂಟಿಜನ್ ಮತ್ತು ಯಾಂಟಿಬಾಡಿಗಳು ಕೂಡಿಕೊಂಡರೆ ರಕ್ತ ಹೆಪ್ಪುಗಟ್ಟುತ್ತದೆ.
- AB ರಕ್ತದ ಗುಂಪನ್ನು ಸಾರ್ವತ್ರಿಕ ಸ್ವೀಕಾರಿ ಎನ್ನುವರು.
- O ರಕ್ತದ ಗುಂಪನ್ನು ಸಾರ್ವತ್ರಿಕ ದಾನಿ ಎನ್ನುವರು.
- ಭಾರತೀಯರಲ್ಲಿ ಅತಿ ಹೆಚ್ಚು ರಕ್ತದ ಗುಂಪು B ಕಂಡು ಬರುತ್ತದೆ.
FAQ :
ಆರೋಗ್ಯವಂತ ಮಾನವರಲ್ಲಿ ಎಷ್ಟು ಲೀಟರ್ ಇರುತ್ತದೆ?
4.5 ರಿಂದ 5.6 ಲೀಟರ್ ಇರತ್ತದೆ.
ರಕ್ತ ಹೆಪ್ಪುಗಟ್ಟದೇ ಇರುವ ಸ್ಥಿತಿಯನ್ನು ಏನೆಂದು ಕರೆಯುವರು?
ರಾಯಲ್ ಕಾಯಿಲೆ
ಇತರೆ ವಿಷಯಗಳು :
ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ