ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಮಾಹಿತಿ | Information about Central and State Public Service Commission in Kannada

Join Telegram Group Join Now
WhatsApp Group Join Now

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಮಾಹಿತಿ Information about Central and State Public Service Commission Kendra mattu Rajya Lokaseva Ayogada bagge Mahithi in Kannada

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಮಾಹಿತಿ

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಸಂಪೂರ್ಣವಾದ ಮಾಹಿತುಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕೇಂದ್ರ ಲೋಕಸೇವಾ ಆಯೋಗ :

ಕೇಂದ್ರ ಲೋಕಸೇವಾ ಆಯೋಗವು ಸಂವಿಧಾನದ ವಿಧಿ 315ರ ಅಡಿಯಲ್ಲಿ ಸ್ಥಾಪಿತವಾಗಿರುವ ಸಂವಿಧಾನಾತ್ಮಕ ಆಯೋಗವಾಗಿರುತ್ತದೆ. ಈ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು 10 ಜನ ಸದಸ್ಯರು ಇರುತ್ತಾರೆ. ಇವರುಗಳನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸದಸ್ಯರುಗಳ ಅಧಿಕಾರಾವಧಿಯು ನೇಮಕವಾದ ದಿನಾಂಕದಿಂದ ಆರು ವರ್ಷಗಳ ಅವಧಿಗೆ ಅಥವಾ ಅವರಿಗೆ 65 ವರ್ಷ ವಯಸ್ಸಿನವರೆಗೆ ಅವಕಾಶವಿದ್ದು, ಇವುಗಳನ್ನು ಯಾವುದು ಮೊದಲ ಅದನ್ನು ಪರಿಗಣಿಸಿ ಸದಸ್ಯತ್ವದ ಅವಧಿಯನ್ನು ಅಂತ್ಯಗೊಳಿಸಲಾಗುತ್ತದೆ. ರಾಷ್ಟ್ರಪತಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ದುರ್ನಡತೆಯ ಆಧಾರದ ಮೇಲೆ ವಜಾ ಮಾಡುವ ಅಧಿಕಾರ ಹೊಂದಿರುತ್ತಾರೆ. ಆಯೋಗವು ಶಾಸಕಾಂಗ ಮತ್ತು ಕಾರ್ಯಾಂಗಗಳ ಹಸ್ತಕ್ಷೇಪದಿಂದ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುತ್ತದೆ. ಆಯೋಗದಲ್ಲಿ ಕಾರ್ಯದರ್ಶಿಯವರು ಇರುತ್ತಾರೆ.

ಕೇಂದ್ರ ಲೋಕಸೇವಾ ಆಯೋಗದ ಕಾರ್ಯಗಳು :

  • ಸಂವಿಧಾನದ 320ನೇ ವಿಧಿಯು ಕೆಳಕಂಡ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದೆ.
  • ಕೇಂದ್ರದ ಎ ಮತ್ತು ಬಿ ವೃಂದದ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷಗಳನ್ನು ನಡೆಸುವುದು.
  • ನೇರ ನೇಮಕಾತಿಗೆ ಸಂದರ್ಶನಗಳನ್ನು ನಡೆಸುವುದು.
  • ಸೇವಾ ಹುದ್ದೆಗಳಿಗೆ ಬಡ್ತಿ ಮತ್ತು ವರ್ಗಾವಣೆಗೆ ಅನುಸರಿಸಬೇಕಾದ ತತ್ವಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳ ವರ್ತನೆಯ ಮೇರೆಗೆ ಶಿಸ್ತುಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು.
  • ರಾಷ್ಟ್ರಪತಿಗಳ ಸೂಚನೆ ಅನ್ವಯ ಯಾವುದೇ ವಿಷಯಗಳಿಗೆ ಸರ್ಕಾರಕ್ಕೆ ಸಲಹೆ ನೀಡುವುದು.

ಆಯೋಗವು ರಾಷ್ಟ್ರಮಟ್ಟದಲ್ಲಿ ಸಿವಿಲ್‌ ಸೇವೆ, ತಾಂತ್ರಿಕ ಸೇವೆ, ವೈದ್ಯಕೀಯ ಸೇವೆ, ಅರಣ್ಯ ಸೇವೆ ಮತ್ತು ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ನೇಮಕಾತಿಗಾಗಿ ಸ್ಪರ್ಧತ್ಮಕ ಪರೀಕ್ಷೆಗಳನ್ನು ನಡೆಸುತ್ತದೆ. ಇವುಗಳಲ್ಲಿ ಸಿವಿಲ್‌ ಸರ್ವಿಸ್ ಗಾ ಹಂತದಲ್ಗಿಲಿ ನಡೆಸುವ ಪರೀಕ್ಷೆಯು ಮಹತ್ವದ್ದಾಗಿರುತ್ತದೆ. ಐ.ಎ.ಎಸ್, ಐ.ಪಿ.ಸ್‌, ಐ.ಎಫ್.ಸ್‌, ಐ.ಆರ್.ಸ್‌, ಐ.ಎ.ಎ.ಎಸ್‌, ಪರೀಕ್ಷೆಗಳನ್ನು ಮುಖ್ಯವಾಗಿರುತ್ತವೆ. ಸಾಮಾನ್ಯವಾಗಿ ಈ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸುತ್ತದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ.

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ :

ಕೇಂದ್ರ ಹಂತದಲ್ಲಿ ಕೇಂದ್ರ ಲೋಕಸೇವಾ ಆಯೋಗವಿರುವಂತೆಯೇ ರಾಜ್ಯ ಹಂತದಲ್ಲಿ ರಾಜ್ಯ ಲೋಕಸೇವಾ ಆಯೋಗ ಸಂವಿಧಾನದ ನಿರ್ದೇಶನದನ್ವಯ ಅಸ್ತಿತ್ವದಲ್ಲಿರುತ್ತದೆ. ಇದನ್ನು ಕರ್ನಾಟಕದಲ್ಲಿ ಕರ್ನಾಟಕ ಲೋಕಸೇವಾ ಆಯೋಗವೆಂದು ಕರೆಯುತ್ತಾರೆ. 18-5-1951 ರಲ್ಲಿ ಸ್ಥಾಪಿಸಲ್ಪಟ್ಟಿತು. ಆಯೋಗವು ಒಬ್ಬರು ಅಧ್ಯಕ್ಷರು ಮತ್ತು 89 ಜನ ಸದಸ್ಯರುಗಳನ್ನು ಒಳಗೊಂಡಿರುತ್ತದೆ. ಇವರುಗಳನ್ನು ರಾಜ್ಯಪಾಲರು ನೇಮಿಸುತ್ತಾರೆ. ಇವರುಗಳ ಅಧಿಕಾರವಧಿಯು ನೇಮಕದಿಂದ ಆರು ವರ್ಷಗಳು ಅಥವಾ ಅವರುಗಳ 62 ನೇ ವಯಸ್ಸಿನವೆರೆಗೆ ಇದ್ದು ಇವುಗಳನ್ನು ಪ್ರಥಮವಾಗುವುದನ್ನು ಪರಿಗಣಿಸಲಾಗುತ್ತದೆ. ಆಯೋಗವು ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುತ್ತದೆ. ಮೈಸೂರು, ಬೆಳಗಾವಿ, ಕಲ್ಬುರ್ಗಿ ಮತ್ತು ಶಿವಮೊಗ್ಗಗಳಲ್ಲಿ ಪ್ರಾಂತೀಯ ಕಛೇರಿಗಳನ್ನು ಹೊಂದಿರುತ್ತದೆ.

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಕಾರ್ಯಗಳು :

  • ರಾಜ್ಯ ಸರ್ಕಾರಿ ಸೇವೆಗೆ ಪತ್ರಾಂಕಿತ ಅಧಿಕಾರಿಗಳು ಮತ್ತು ಅಪ್ರಾಂಕಿತ ಸಿಬ್ಬಂದಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂದರ್ಶನಗಳ ಮೂಲಕ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ನೇಮಕಾತಿ ನಿಯಮಗಳು ಹಾಗೂ ಸಂಬಂಧಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಮೇರೆಗೆ ಆಯ್ಕೆ ಮಾಡುವುದು.
  • ನೇರವಾಗಿ ನೇಮಕಗೊಳ್ಳುವ ಅಭ್ಯರ್ಥಿಗಳ ಸಂದರ್ಶನ ನಡೆಸುವುದು.
  • ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ಇಲಾಖಾ ಪರೀಕ್ಷೆಗಳನ್ನು ನಡೆಸುವುದು.
  • ಶಿಸ್ತು ಮತ್ತು ಪೂರ್ವಾನ್ವಯ ಬಡ್ತಿ ಪ್ರಕರಣಗಳ ಬಗ್ಗರ ಸರ್ಕಾರಕ್ಕೆ ಸಲಹೆ ನೀಡುವುದು.
  • ಕೇಂದ್ರ ಲೋಕಸೇವಾ ಆಯೋಗವು ರಾಜ್ಯದಲ್ಲಿ ನಡೆಸುವ ವಿವಿಧ ಪರೀಕ್ಷೆಗಳ ಸಮನ್ವಯ ಕಾರ್ಯ ನಿರ್ವಹಿಸುವುದು.

FAQ :

ಕೇಂದ್ರ ಲೋಕಸೇವಾ ಆಯೋಗದ ಒಂದು ಕಾರ್ಯ ತಿಳಿಸಿ?

ಕೇಂದ್ರದ ಎ ಮತ್ತು ಬಿ ವೃಂದದ ಸೇವೆಗಳಿಗೆ ನೇಮಕ ಮಾಡಲು ಪರೀಕ್ಷಗಳನ್ನು ನಡೆಸುವುದು.
ನೇರ ನೇಮಕಾತಿಗೆ ಸಂದರ್ಶನಗಳನ್ನು ನಡೆಸುವುದು.

Join WhatsApp Join Telegram

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಒಂದು ಕಾರ್ಯ ತಿಳಿಸಿ?

ರಾಜ್ಯ ಸರ್ಕಾರಿ ಸೇವೆಗೆ ಪತ್ರಾಂಕಿತ ಅಧಿಕಾರಿಗಳು ಮತ್ತು ಅಪ್ರಾಂಕಿತ ಸಿಬ್ಬಂದಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಂದರ್ಶನಗಳ ಮೂಲಕ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ನೇಮಕಾತಿ ನಿಯಮಗಳು ಹಾಗೂ ಸಂಬಂಧಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಮೇರೆಗೆ ಆಯ್ಕೆ ಮಾಡುವುದು

ಇತರೆ ವಿಷಯಗಳು :

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.