ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ | Information about Subhas Chandra Bose and Indian National Army in Kannada

Join Telegram Group Join Now
WhatsApp Group Join Now

ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ Information about Subhas Chandra Bose and Indian National Army Subhash Chandra Bose mattu Bharathiya Rastriya Sene bagge Mahithi in Kannada

ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ

Information about Subhas Chandra Bose and Indian National Army in Kannada
ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸುಭಾಸ್‌ ಚಂದ್ರ ಬೋಸ್‌ ಮತ್ತು ಭಾರತೀಯ ರಾಷ್ಟ್ರೀಯ ಸೇನೆ :

ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಸ್‌ ಚಂದ್ರ ಬೋಸ್‌ ರವರ ಪಾತ್ರ ಅನನ್ಯವಾದುದು. ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಲಂಡನಿನಲ್ಲಿ ಐ.ಸಿ.ಎಸ್.‌ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್‌ ಪಡೆದಿದ್ದರು. ಅವರು ದೇಶಬಂಧು ಚಿತ್ತರಂಜನ್‌ ದಾಸರ ಪ್ರಭಾವದಿಂದ ಚಳುವಳಿಗೆ ಆಕರ್ಷಿತರಾಗಿ ರಾಜಕೀಯಕ್ಕೆ ಧುಮುಕಿದರು. ವಿಶೇಷವಾಗಿ ಸ್ವಾಮಿ ವಿವೇಕಾನಂದರ ಬದುಕು ಮತ್ತು ಬರವಣಿಗೆಗಳಿಂದ ಅವರು ಸ್ಪೂರ್ತಿ ಪಡೆದಿದ್ದರು.

ಗಾಂಧೀಜೀಯವರ ರಾಜನೀತಿಯನ್ನು ಇವರು ವಿರೋಧಿಸಿದರು. ಕೊನೆಗೆ ಗಾಂಧೀಜಿ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯ ತಳೆದು 1939 ರಲ್ಲಿ ಕಾಂಗ್ರೇಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದರು. ನಂತರ “ಫಾರ್ವರ್ಡ್‌ ಬ್ಲಾಕ್”‌ ಎಂಬ ಹೊಸ ಪಕ್ಷವನ್ನು ಸಂಘಟಿಸಿದರು.

ಈ ವೇಳೆಗೆ 2ನೇಯ ಮಹಾಯುದ್ದ ಆರಂಭವಾಗಿತ್ತು. ಬ್ರಿಟೀಷರು ಬೋಸರ ಕ್ರಾಂತಿಕಾರಿ ನಿಲುವನ್ನು ಗಮನಿಸಿ, ಅವರು ಅಪಾಯಕಾರಿ ಎಂದು ಪರಿಗಣಿಸಿ ಗೃಹ ಬಂಧನದಲ್ಲಿ ಬಂಧಿಸಿದರು. ಆದರೆ ಬೋಸರು ಅಲ್ಲಿಂದ ತಪ್ಪಿಸಿಕೊಂಡು ಪೇಷಾವರ ಮತ್ತು ಕಾಬೂಲ್‌ ಮೂಲಕ ಮಾಸ್ಕೊಗೆ ಹೋಗುವ ಪ್ರಯಾಸಕಾರಿ ಪ್ರಯಾಣವನ್ನು ಕೈಗೊಂಡರು. ಅಲ್ಲಿಂದ ವಿಮಾನದ ಮೂಲಕ ಜರ್ಮನಿಯ ಬರ್ಲಿನ್‌ ನಗರಕ್ಕೆ ತೆರೆಳಿದರು. ಬ್ರಿಟೀಷರ ಶತ್ರುವಾದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರನೊಂದಿಗೆ ಒಪ್ಪಂದ ಮಾಡಿಕೊಂಡರು. ಆ ಮೂಲಕ ಭಾರತದಿಂದ ಬ್ರಿಟಿಷರನ್ನು ಹೊರದೂಡಲು ನೆರವನ್ನು ಪಡೆಯುವಲ್ಲಿ ಯಶಸ್ವಿಯಾದರು.

ಈ ನಡುವೆ ಜಪಾನ್‌ ಬ್ರಿಟಿಷರ ವಿರುದ್ದ 2ನೇ ಮಹಾಯುದ್ದವನ್ನು ಪ್ರವೇಶಿಸಿತು. ಯುದ್ದದಲ್ಲಿ ಬ್ರಿಟನಿನ ಪರ ಹೋರಾಡಿದ ಸುಮಾರು 40,000 ಭಾರತೀಯ ಸೈನಿಕರು ಜಪಾನಿನ ಯುದ್ದ ಖೈದಿಗಳಾಗಿದ್ದರು. ಅವರು ಮೋಹನ್‌ ಸಿಂಗ್‌ ನೇತೃತ್ವದಲ್ಲಿ ಭಾರತೀಯ ರಾಷ್ಟ್ರೀಯ ಸೇನೆ ಅಥವಾ ಆಜಾದ್‌ ಹಿಂದ್‌ ಫೌಜ್‌ ಎಂಬ ಹೆಸರಿನಿಂದ ಸಂಘಟಿತರಾಗಿದ್ದರು. 1943 ರಲ್ಲಿ ಸುಭಾಸ್‌ ಚಂದ್ರ ಬೋಸ್‌ರು ಸಿಂಗಾಪುರಕ್ಕೆ ಬಂದು ಐ.ಎನ್.ಎ.ಯ ನಾಯಕತ್ವ ವಹಿಸಿಕೊಂಡರು. ಸುಭಾಸ್‌ರನ್ನು ʼನೇತಾಜಿʼ ಎಂದು ಕರೆಯಲಾಯಿತು.

Join WhatsApp Join Telegram

ನಂತರ ನೇತಾಜಿಯವರು ಸಿಂಗಾಪುರದಲ್ಲಿ ʼಸ್ವತಂತ್ರ ಭಾರತದ ಹಂಗಾಮಿ ಸರ್ಕಾರʼ ವನ್ನು ಸ್ಥಾಪಿಸಿದರು. ಜರ್ಮನಿ, ಇಟಲಿ, ಜಪಾನ್‌ ದೇಶಗಳು ಅದಕ್ಕೆ ಮಾನ್ಯತೆ ನೀಡಿದವು. ʼಚಲೋ ದಿಲ್ಲಿʼ ಎಂಬ ಘೋಷಣೆಯೊಂದಿಗೆ ನೇತಾಜಿಯವರ ನಾಯಕತ್ವದಲ್ಲಿ ಐ.ಎನ್.ಎ. ಬರ್ಮದ ಕಡೆಯಿಂದ ಭಾರತದ ಪ್ರದೇಶದಲ್ಲಿ ಸುಮಾರು 150 ಮೈಲಿಗಳಷ್ಟು ಮುನ್ನುಗಿತು. ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಭಾರತೀಯ ನೆಲದ ಮೇಲೆ ಹಾರಿಸಿತು. ಆದರೆ ಅಲ್ಪಕಾಲದಲ್ಲೇ ಬ್ರಿಟಿಷ್‌ ಸೇನೆ ಬರ್ಮದ ರಾಜಧಾನಿ ರಂಗೂನನ್ನು ವಶಪಡಿಸಿಕೊಂಡಿದ್ದರಿಂದ ಐ.ಎನ್.ಎ.ಗೆ ಹಿನ್ನಡೆ ಉಂಟಾಯಿತು. ಇದೇ ವೇಳೆ ಅಣುಬಾಂಬ್‌ ದಾಳಿಗೆ ಒಳಗಾದ ಜಪಾನ್‌ 1945 ಆಗಸ್ಟ್‌ ತಿಂಗಳಲ್ಲಿ ಶರಣಾಯಿತು. ಆಗಸ್ಟ್‌ 18 ರಂದು ನೇತಾಜಿ ಅವರು ವಿಮಾನದಲ್ಲಿ ಹೊರಟವರು ನಿಗೂಢವಾಗಿ ಕಣ್ಮರೆಯಾದರು.

ಐ.ಎನ್.ಎ. ತನ್ನ ತತ್ ಕ್ಷಣದ ಗುರಿಸಾಧಿಸುವಲ್ಲಿ ವಿಫಲವಾದರೂ, ಸ್ವಾತಂತ್ರ್ಯ ಹೋರಾಟದಲ್ಲಿ ಅದಕ್ಕೆ ಮಹತ್ವದ ಸ್ಥಾನವಿದೆ. “ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ” ಎಂದು ನೇತಾಜಿ ಅವರು ಭಾರತೀಯರಿಗೆ ಕರೆ ನೀಡಿದರು.ನೇತಾಜಿಯವರ ಅಪ್ರತಿಮ ಸಾಮರ್ಥ್ಯಗಳಿಗೆ ಐ.ಎನ್.ಎ ಸಾಕ್ಷಿಯಾಗಿ ನಿಂತಿದೆ.

FAQ :

“ಫಾರ್ವರ್ಡ್‌ ಬ್ಲಾಕ್”‌ ಎಂಬ ಹೊಸ ಪಕ್ಷವನ್ನು ಸಂಘಟಿಸಿದವರು ಯಾರು?

ಸುಭಾಸ್‌ ಚಂದ್ರ ಬೋಸ್‌.

ಸುಭಾಸ್‌ ಚಂದ್ರ ಬೋಸ್‌ರವರ ಪ್ರಮುಖ ಘೋಷಣೆ ಯಾವುದು?

“ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ”

ಇತರೆ ವಿಷಯಗಳು :

ಪೌರತ್ವದ ಬಗ್ಗೆ ಮಾಹಿತಿ

ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.