ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ | Information about national symbols in Kannada

Join Telegram Group Join Now
WhatsApp Group Join Now

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ Information about national symbols Rastriya Chinhegala bagge Mahithi in Kannada

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಚಿಹ್ನೆಗಳು :

ಸಾಮಾನ್ಯವಾಗಿ ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆಮಾಡುತ್ತದೆ. ಅವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು. ಮುಖ್ಯವಾಗಿ ರಾಷ್ಟ್ರಧ್ವಜ ಮತ್ತು ರಾಷ್ಟ್ರ ಲಾಂಛನ ಒಂದು ದೇಶದ ರಾಷ್ಟ್ರೀಯ ಚಿಹ್ನೆಗಳು. ಪ್ರತಿ ದೇಶಕ್ಕೂ ತನ್ನದೇ ಆದ ರಾಷ್ಟ್ರಗೀತೆ ಇದೆ. ಹಾಗೆಯೇ ಭಾರತ ದೇಶಕ್ಕೆ ರಾಷ್ಟ್ರೀಯ ಪ್ರಾಣಿ, ರಾಷ್ಟ್ರೀಯ ಪಕ್ಷಿ ಇವೆ. ಪ್ರಜೆಗಳಲ್ಲಿ ದೇಶಾಭಿಮಾನ ಮತ್ತು ಭಾವೈಕ್ಯತೆ ಬೇರೂರಲು ಇವು ಪೂರಕ.

ರಾಷ್ಟ್ರ ಗೀತೆ :

  • ʼಜನಗಣಮನʼ ಭಾರತದ ರಾಷ್ಟ್ರಗೀತೆ. ಇದನ್ನು ರವೀಂದ್ರನಾಥ ಠಾಕೂರ್‌ ಅವರು 1911 ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದರು. ಈ ದೀರ್ಘಗೀತೆಯ ಐದು ವೃತ್ತಗಳಲ್ಲಿ ಮೊದಲ ವೃತ್ತವನ್ನು ಮಾತ್ರ ರಾಷ್ಟ್ರಗೀತೆಯೆಂದು ಸಂವಿಧಾನ ಸಭೆಯು ಜನವರಿ 24, 1950 ರಂದು ಅಂಗೀಕರಿಸಿತು. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು. ಕೆಲವು ಸಂದರ್ಭಗಳಲ್ಲಿ ಸಂಕ್ಷಿಪ್ತವಾಗಿ ಗೀತೆಯ ಮೊದಲ ಮತ್ತು ಕೊನೆಯ ಸಾಲುಗಳನ್ನು ಮಾತ್ರವೇ ಹಾಡಲಾಗುವುದು. ಇದಕ್ಕೆ ಸುಮಾರು 20 ಸೆಕೆಂಡುಗಳು ತಗಲುತ್ತವೆ.
  • ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.
  • ರಾಷ್ಟ್ರ ಗೀತೆಯನ್ನು ಹಾಡುವಾಗ ಶಿಸ್ತಿನಿಂದ ನೇರವಾಗಿ ನಿಲ್ಲಬೇಕು.
  • ಉಚ್ಚಾರದಲ್ಲಿ ತಪ್ಪಿಲ್ಲದಂತೆ ಹಾಡಬೇಕು.

ರಾಷ್ಟ್ರ ಧ್ವಜ :

ನಮ್ಮದು ಮೂರು ಬಣ್ಣಗಳಿಂದ ಕೂಡಿದ ಧ್ವಜವಾಗಿದೆ. ಮೇಲೆ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಹಸಿರು ಬಣ್ಣಗಳಿವೆ. ಬಿಳಿ ಬಣ್ಣದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಚಕ್ರದಲ್ಲಿ 24 ಗೆರೆಗಳಿವೆ. ಚಕ್ರದ ವ್ಯಾಸ ಬಿಳಿ ಪಟ್ಟಿಯ ಅಗಲದಷ್ಠೇ ಇದೆ.

ರಾಷ್ಟ್ರ ಧ್ವಜದ ವಿಶೇಷತೆ :

ಕೇಸರಿ ಬಣ್ಣವು ನಿಸ್ವಾರ್ಥ ಹಾಗೂ ತ್ಯಾಗವನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವು ಸತ್ಯ, ಶಾಂತಿ, ಪರಿಶುದ್ದತೆಯ ಪ್ರತೀಕವಾಗಿದೆ. ಹಸಿರು ಸಸ್ಯ ಶ್ಯಾಮಲೆಯಾದ ಭೂಮಿಯ ಸಂಕೇತ; ಕೃಷಿ, ಕೈಗಾರಿಕೆಗಳ ಸಮೃದ್ದಿಯ ಗುರುತು. ಚಕ್ರವು ಸಾರನಾಥದ ಅಶೋಕ ಸ್ತಂಭದಲ್ಲಿರುವ ಚಕ್ರದ ಪ್ರತಿರೂಪವಾಗಿದೆ. ಅಶೋಕ ಚಕ್ರವು ನಿರಂತರ ಚಲನೆಯ ಹಾಗೂ ಪ್ರಗತಿಯ ಪ್ರತೀಕವೂ ಆಗಿದೆ.

Join WhatsApp Join Telegram

ರಾಷ್ಟ್ರ ಧ್ವಜದ ಸಂಹಿತೆ :

  • ಧ್ವಜ ಕೊಳೆಯಾಗಿರಬಾರದು, ಹರಿದಿರಬಾರದು.
  • ಹಾರಿಸುವಾಗ ಯಾವಾಗಲೂ ಕೇಸರಿ ಬಣ್ಣ ಮೇಲಿರುವಂತೆ ಹಾರಿಸಬೇಕು.
  • ರಾಷ್ಟ್ರ ಧ್ವಜದ ಎತ್ತರಕ್ಕೆ ಬೇರೆ ಯಾವುದೇ ಧ್ವಜವನ್ನು ಹಾರಿಸಬಾರದು.
  • ಕಂಬದ ತುದಿಯವರೆಗೂ ಮೇಲೇರಿಸಿ ಹಾರಿಸಬೇಕು.
  • ಯಾವಾಗಲೂ ಸೂರ್ಯೋದಯದ ನಂತರ ರಾಷ್ಟ್ರಧ್ವಜವನ್ನು ಹಾರಿಸಬೇಕು; ಸೂರ್ಯಾಸ್ತಕ್ಕೆ ಮೊದಲು ಇಳಿಸಬೇಕು.
  • ರಾಷ್ಟ್ರೀಯ ಶೋಕವನ್ನು ಆಚರಿಸುವ ಸಮಯದಲ್ಲಿ ಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸುವುದು.
  • ಧ್ವಜವನ್ನು ಬಲಗೈಲಿ ಹಿಡಿದು ನಡೆಯಬೇಕು.
  • ಧ್ವಜವನ್ನು ನೆಲಕ್ಕೆ ತಾಗಿಸಬಾರದು.

ನಮ್ಮ ರಾಷ್ಟ್ರಲಾಂಛನ :

ಇದು ಸಾರಾನಾಥದ ಅಶೋಕನ ಶಿಲಾಸ್ತಂಭದ ಬೋದಿಗೆಯ ರೂಪಾಂತರವಾಗಿದೆ. ಇದನ್ನು ಸಿಂಹ ಬೋದಿಗೆ ಎನ್ನಲಾಗುತ್ತದೆ. ಇದರಲ್ಲಿ ನಾಲ್ಕು ಸಿಂಹಗಳು ನಾಲ್ಲು ದಿಕ್ಕುಗಳ ಕಡೆಗೆ ಮುಖಮಾಡಿ, ಒಂದಕ್ಕೊಂದು ಬೆನ್ನುಮಾಡಿ, ಪೀಠವೊಂದರ ಮೇಲೆ ನಿಂತಿವೆ. ಪೀಠವು ಗುಂಡಾಗಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಒದೊಂದು ಅಶೋಕ ಚಕ್ರವಿದೆ. ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರಣವಿದೆ. ಪೀಠದಲ್ಲಿರುವ ಚಕ್ರವನ್ನು ʼಧರ್ಮ ಚಕ್ರʼ ವೆಂದು ಕರೆಯುತ್ತಾರೆ.

ಭಾರತ ಸರ್ಕಾರವು ನಮ್ಮ ರಾಷ್ಟ್ರಲಾಂಛನವನ್ನು ಜನವರಿ 26, 1950ರಂದು ಅಂಗೀಕರಿಸಿತು. ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ “ಸತ್ಯಮೇವ ಜಯತೇ” ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.

ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ಪಕ್ಷಿ :

ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ನೋಡಲು ಅದು ಆಕರ್ಷಕ ಹಾಗೂ ಗಂಭೀರ, ಅದರ ಮೈಕಟ್ಟು ಬಲಿಷ್ಠ. ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣದ ರೆಕ್ಕೆ, ತಲೆಯ ಮೇಲೆ ತುರಾಯಿಯಂತಿರುವ ಗರಿಯುಳ್ಳ ನವಿಲು ನೋಡಲು ಮನೋಹರ.

FAQ :

ರಾಷ್ಟ್ರ ಗೀತೆಯನ್ನು ಯಾವಾಗ ಅಳವಡಿಸಿಕೊಳ್ಳಲಾಯಿತು?

ಜನವರಿ 24, 1950.

ನಮ್ಮ ರಾಷ್ಟ್ರ ಧ್ವಜದಲ್ಲಿರುವ ಕೇಸರಿ ಬಣ್ಣವು ಏನನ್ನು ಸಂಕೇತಿಸುತ್ತದೆ?

ಕೇಸರಿ ಬಣ್ಣವು ನಿಸ್ವಾರ್ಥ ಹಾಗೂ ತ್ಯಾಗವನ್ನು ಸಂಕೇತಿಸುತ್ತದೆ

ಇತರೆ ವಿಷಯಗಳು :

ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ

ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.