ಹಳೇಬೀಡು ಬಗ್ಗೆ ಮಾಹಿತಿ | Information about Halebidu in Kannada

Join Telegram Group Join Now
WhatsApp Group Join Now

ಹಳೇಬೀಡು ಬಗ್ಗೆ ಮಾಹಿತಿ Information about Halebidu Halebidina Bagge Mahiti in Kannada

ಹಳೇಬೀಡು ಬಗ್ಗೆ ಮಾಹಿತಿ

Information about Halebidu in Kannada
Information about Halebidu in Kannada

ಈ ಲೇಖನಿಯಲ್ಲಿ ಹಳೇಬೀಡಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ಹಳೇಬೀಡು

ಕರ್ನಾಟಕವು ಶಿಲ್ಪಕಲೆಗೆ ಹೆಸರಾಗಿದೆ, ಐತಿಹಾಸಿಕ ಸ್ಥಳವಾದ ಹಳೆಬೀಡು ಹಾಸನ ಜಿಲ್ಲೆಯಲ್ಲಿ ಕಾಣಬಹುದು. ಹಳೇಬೀಡು ೧೧ ನೇ ಶತಮಾನದಲ್ಲಿ ಹೊಯ್ಸಳ ಅರಸರ ರಾಜಧಾನಿಯಾಗಿತ್ತು. ಹಳೆಬೀಡನ್ನು ದೋರಸಮುದ್ರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಹೆಚ್ಚು ಧನಧಾನ್ಯದಿಂದ ಸಂಪತ್ತ್ಬರಿತವಾಗಿ ತುಂಬಿ ಸಮೃದ್ಧವಾಗಿತ್ತು. ಮಹಮದೀಯ ದಂಡನಾಯಕನಾಗಿದ್ದ ಮಲ್ಲಿಕಾಫರನು ದಾಳಿ ಮಾಡಿ ಅಲ್ಲಿದ್ದ ಐಶ್ವರ್ಯವನ್ನೆಲ್ಲಾ ದೊಚಿಕೊಂಡು ಹೋಗುವನು. ಇದು ಮತ್ತೆ ಮತ್ತೆ ಮಹಮದೀಯರ ದಾಳಿಗೆ ಬಲಿಯಾಗಿ ಹಳೇಬೀಡು ಎಂಬ ಹೆಸರನ್ನು ಪಡೆದುಕೊಂಡಿತು. ಒಂಬತ್ತನೆಯ ಶತಮಾನದಲ್ಲಿ ರಾಷ್ಟೃಕೂಟರ ದೊರೆ ಧ್ರುವ ನಿರುಪಮನೆಂಬುವನು ದೊಡ್ಡ ಕೆರೆಯೊಂದನು ನಿರ್ಮಿಸಿ ಅದಕ್ಕೆ ಧ್ರುವಸಮುದ್ರವೆಂದು ಹೆಸರಿಟ್ಟನು. ಅದೇ ಕ್ರಮೇಣ ದೊರಸಮುದ್ರ ಎಂದು ಕರೆಯಲ್ಪಟ್ಟಿತು.

ಭಾರತವು ಅತಿ ಹೆಚ್ಚು ಶಿಲ್ಪಕಲೆಯನ್ನು ಹೊಂದಿದ ರಾಷ್ಟ್ರವಾಗಿದೆ “ಸೂಕ್ಷ್ಮ ಕೌಶಲದ ಕೆತ್ತನೆಯ ಕೆಲಸದಲ್ಲಿ ಇಡೀ ಜಗತ್ತಿನ ಶಿಲ್ಪವನ್ನೇ ಮೀರಿಸಿದ ಅನೇಕ ಕಟ್ಟಡಗಳು ಭಾರತದಲ್ಲಿವೆ. ಆದರೆ ಬೇಲೂರು, ಹಳೇಬೀಡು ದೇವಾಲಯಗಳು ಅವೆಲ್ಲವನ್ನೂ ಮೀರಿಸಿವೆ” ಕಲಾ ವಿಮರ್ಶಕ ಫರ್ಗ್ಯುಸನ್‌ನ ಈ ಮಾತು ಇಲ್ಲಿಯ ಶಿಲ್ಪಕಲಾ ವೈಭವವನ್ನು ಕಂಡಾಗ ಹೇಳಿದ್ದು ಅತಿಶಯೋಕ್ತಿ ಅನ್ನಿಸದು. 12-13ನೆಯ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಹೊಯ್ಸಳ ದೊರೆಗಳ ಕಾಲದಲ್ಲಿ ಕಟ್ಟಿದ ಗುಡಿಗಳನ್ನು ‘ಹೊಯ್ಸಳ ಶೈಲಿ’ಯ ದೇವಾಲಯಗಳು ಎಂದು ಕರೆಯಲಾಗುತ್ತದೆ.

ಹಳೆಬೀಡಿನ ಐತಿಹಾಸಿಕ ಹಿನ್ನೆಲೆ

ಸುಮಾರು ಒಂಬತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರ ದೊರೆ ದೋರ ಎಂಬುವವನು ಈ ಊರಿನಲ್ಲಿ ದೊಡ್ಡಕೆರೆಯೊಂದನ್ನು ಕಟ್ಟಿಸಿದನೆಂದು ಶಾಸನಗಳಿಂದ ತಿಳಿಯಲು ಸಾಧ್ಯವಾಗಿದೆ. ಈ ಕೆರೆಯು ೧೨೦೦ ಎಕರೆಗೂ ಮೀರಿ ವ್ಯಾಪ್ತಿಯನ್ನು ಹೊಂದಿದ್ದಾಗಿದೆ. ಈಗಲೂ ಕೆರೆಯು ನೀರಿನಿಂದ ತುಂಬಿಕೊಂಡಾಗ ಸಮುದ್ರದಂತೆ ತೋರುತ್ತದೆ. ಈ ಕಾರಣದಿಂದಾಗಿಯೇ ಈ ಕೆರೆಯನ್ನು ದೋರಸಮುದ್ರ ಎಂದು ಉಲ್ಲೇಖಿಸಲಾಗಿದೆ. ಅಂದಿನ ಕಾಲಕ್ಕೆ ದೋರಸಮುದ್ರ ಎನ್ನುವ ಹೆಸರೇ ಊರಿಗೂ ಇತ್ತೆಂದು ಹೊಯ್ಸಳರ ಕಾಲದ ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ೧೮ ನೇ ಶತಮಾನದ ಆಸು-ಪಾಸಿನಲ್ಲಿ ದ್ವಾರಾವತಿ-ದ್ವಾರಸಮುದ್ರ ಎನ್ನುವ ಹೆಸರಿನ ಬಳಕೆಯೂ ಇತ್ತೆಂದು ಜನಪದದಿಂದ ತಿಳಿದುಬರುತ್ತದೆ. ದೋರಸಮುದ್ರ ಕೆರೆಯೇ ಅಂದಿನ ಕಾಲಕ್ಕೆ ಇಡೀ ರಾಜಧಾನಿಯ ಮತ್ತು ಸುತ್ತಲಿನ ಪ್ರದೇಶಗಳ ಮುಖ್ಯ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇಂದಿನ ಬೇಲೂರು ಪಟ್ಟಣದ ಮೂಲಕ ಹರಿಯುವ ಯಗಚಿ ನದಿ or ಸೋಮವತೀ ಎನ್ನುವ ನದಿಯು ಈ ಕೆರೆಗೆ ನೀರುಣಿಸುವ ಮುಖ್ಯ ಮೂಲವಾಗಿತ್ತು. ೧೨ನೇ ಶತಮಾನದಲ್ಲೇ ನದಿಯ ಪಾತ್ರದಿಂದ ದೊಡ್ಡ ಕಾಲುವೆಗಳನ್ನು ನಿರ್ಮಿಸಿರುವ ಕುರುಹುಗಳನ್ನು ಇಂದೂ ನಾವು ಕಾಣಬಹುದು.

ರಾಜ ವಿಷ್ಣುವರ್ಧನನ ಕಾಲವನ್ನು ಹೊರತುಪಡಿಸಿ ಮಿಕ್ಕ ಎಂಟು ರಾಜರ ಕಾಲದಲ್ಲೂ ಇಂದಿನ ಹಳೇಬೀಡು ಪಟ್ಟಣವೇ ರಾಜಧಾನಿಯಾಗಿತ್ತೆಂದು ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಹೊಯ್ಸಳರಲ್ಲಿ ಒಂಬತ್ತು ಮಂದಿ ರಾಜರುಗಳು ಆಗಿಹೋಗಿದ್ದರೂ ವೀರಬಲ್ಲಾಳ, ವಿಷ್ಣುವರ್ಧನ ಮತ್ತು ನರಸಿಂಹ ಬಲ್ಲಾಳರು ಮಾತ್ರ ಹೆಚ್ಚು ಸಾಮರ್ಥ್ಯವುಳ್ಳರಾಗಿದ್ದರೆಂದು ಇತಿಹಾಸವು ಹೇಳುತ್ತದೆ.

Join WhatsApp Join Telegram

ಅಂದಿನ ಈ ನಗರದಲ್ಲಿ ಸುಮಾರು ಒಂದು ಲಕ್ಷ ಮಂದಿ ವಾಸಿಸುತ್ತಿದ್ದು ನಗರದ ರಕ್ಷಣೆಗಾಗಿ ಹೊರವಲಯದಲ್ಲಿ ಸುತ್ತಲೂ ದೊಡ್ಡ ಕಲ್ಲುಗಳಿಂದ ಎರಡು ಸುತ್ತಿನ ಕೋಟೆಯನ್ನು ನಿರ್ಮಿಲಾಗಿತ್ತು. ಕೋಟೆಯ ಕುರುಹುಗಳನ್ನು ಇಂದೂ ಕಾಣಬಹುದು. ಊರಿನ ಪ್ರವೇಶಕ್ಕೆ ಒಟ್ಟು ಐದು ಹೆಬ್ಬಾಗಿಲುಗಳಿದ್ದುದು ಕೋಟೆಯ ರಚನೆಯಲ್ಲಿ ಕಂಡುಬರುತ್ತದೆ.

ಹಳೆಬೀಡಿನ ಮಹತ್ವ

ಹಳೇಬೀಡು ಕರ್ನಾಟಕದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಹೊಯ್ಸಳೇಶ್ವರ ದೇವಸ್ಥಾನವು ಒಂದು ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡು ಪಟ್ಟಣದಲ್ಲಿರುವ ಶಿವನಿಗೆ ಅರ್ಪಿತವಾದ ಐತಿಹಾಸಿಕ ದೇವಾಲಯವಾಗಿದೆ. ಹೊಯ್ಸಳೇಶ್ವರ ದೇವಾಲಯದ ಹೊರತಾಗಿ, ಹಳೇಬೀಡು ಕೇದಾರೇಶ್ವರ ದೇವಸ್ಥಾನ ಮತ್ತು ಅನೇಕ ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಕೇದಾರೇಶ್ವರ ದೇವಸ್ಥಾನವನ್ನು ಎರಡನೆಯ ವೀರ ಬಲ್ಲಾಳ ಮತ್ತು ರಾಣಿ ಕೇತಲದೇವಿ ನಿರ್ಮಿಸಿದ್ದಾರೆ.

ಹೊಯ್ಸಳೇಶ್ವರ ದೇವಾಲಯ :

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಭಾರತೀಯ ವಾಸ್ತುಶಿಲ್ಪದಲ್ಲೇ ‘ ಅಗ್ರಸ್ಥಾನವನ್ನು ಪಡೆದಿರುವ ಭವ್ಯ ದೇವಾಲಯ, ಎರಡು ಗರ್ಭಗೃಹಗಳನ್ನುಳ್ಳ ಕಟ್ಟಡ ಇದು. ಹೊಯ್ಸಳರ ದೊರೆ ವಿಷ್ಣುವರ್ಧನನ ದಂಡಾಧಿಕಾರಿಯಾಗಿದ್ದ ಕೇತಮಲ್ಲ ಸು ಕ್ರಿ.ಶ. 121ರಲ್ಲಿ ತನ್ನ ರಾಜನ ಹೆಸರಿನಲ್ಲಿ ಕಟ್ಟಿಸಿದನೆಂದು ಹೇಳಲಾಗಿದೆ. ದೇವಾಲಯ ಐದಡಿ ಎತ್ತರದ ಜಗಲಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿದೆ. ಜಗಲಿಯ ಆಕಾರ ಕಟ್ಟಡದ ನಕ್ಷತ್ರಾಕಾರವನ್ನು ಅನುಸರಿಸಿದೆ. ದೇವಾಲಯ ಉತ್ತರ ದಕ್ಷಿಣವಾಗಿ 160 ಅಡಿ ಪೂರ್ವ ಪಶ್ಚಿಮವಾಗಿ 122 ಅಡಿಗಳಿಷ್ಟಿದೆ. ಈ ಉದ್ದದ ಹಜಾರವನ್ನು ಎರಡು ಭಾಗಗಳಾಗಿ ವಿಂಗಡಿಸಿದಂತ ರಚನೆಯಿದ್ದು ಒಂದೊಂದು ಭಾಗದಲ್ಲಿಯೂ ಗರ್ಭಗೃಹ, ಸುಕನಾಸಿ, ನವರಂಗ ಮಹಾದ್ವಾರಗಳಿವೆ. ಇದಕ್ಕೆ ದ್ವಾರಮಂಟಪವಿದೆ. ಇದೊಂದು ದ್ವಿಕೂಟ ಅಥವಾ ಅವಳಿ ದೇವಾಲಯ. ಎರಡು ಗರ್ಭಗುಡಿಗಳಲ್ಲಿಯೂ ಒಂದೊಂದು ಲಿಂಗ ಇದೆ. ಒಂದು ಹೊಯ್ಸಳೇಶ್ವರ ಮತ್ತೊಂದು ಶಾಂತಲೇಶ್ವರ, 30 ಕಂಬಗಳಿಂದ ರಚಿತವಾಗಿದೆ. ಈ ಮಂಟಪದಲ್ಲಿ 13 ಅಡಿ ಉದ್ದ 16/12 ಅಡಿ ಅಗಲ ಮತ್ತು 8112 ಅಡಿ ಎತ್ತರವಿರುವ ನಂದಿ ವಿಗ್ರಹವಿದೆ. ಉತ್ತರದ ಕಡೆಯ ಗರ್ಭಗೃಹದ ಎದುರಿನ ನಂದಿ ಮಂಟಪದಲ್ಲಿ 19ಕಂಬಗಳಿವೆ.

ಇಲ್ಲಿಯ ನಂದಿ ಚಿಕ್ಕದು 10 ಅಡಿ ಉದ್ದ, 5 ಅಡಿ ಅಗಲ, 7112 ಅಡಿ ಎತ್ತರವಿದೆ. ಗೋಡೆಗಳ ಹೊರಮುಖದಲ್ಲಿ ಸುತ್ತಲೂ ಒಂದರ ಮೇಲೊಂದರಂತೆ ಎಂಟು ಚಿತ್ರ ಪಟ್ಟಿಕೆಯನ್ನು ನೋಡಬಹುದು. ಅವು ಕ್ರಮವಾಗಿ ಆನೆಗಳು, ಸಿಂಹಗಳು, ಬಳ್ಳಿಯ ಕೆತ್ತನೆಗಳು ಮತ್ತು ಅವುಗಳ ಮಧ್ಯೆದಲ್ಲಿ ಋಷಿಗಳು, ಸಿದ್ದರು, ಕುದುರೆ ಸವಾರರು, ಪುರಾಣೇತಿಹಾಸಗಳ ಘಟನೆಗಳನ್ನು ಚಿತ್ರಿಸುವ ವಿಗ್ರಹಗಳು, ಮಕರಗಳು ಮತ್ತು ಮಧ್ಯೆ ಮಧ್ಯೆ ಚಿಕ್ಕ ವಿಗ್ರಹಗಳು ಮತ್ತು ಹಂಸಗಳು ಹೀಗೆ ಪಟ್ಟಿಕೆಗಳಿವೆ. ದೇವಾಲಯದ ಸುತ್ತಲೂ ಬಂದಿರುವ ಈ ಪತ್ರಪಟ್ಟಿಕೆಗಳಲ್ಲಿ ಒಂದೊಂದೂ ಸುಮಾರು 700 ಅಡಿಗಳಷ್ಟು ಉದ್ದವಾಗಿದೆ. ಸುಮಾರು 2000 ಆನೆಗಳ ಚಿತ್ರಪಟವನ್ನು ಕಾಣಬಹುದು. ಅಂತೆಯೇ ದೇವಾಲಯದ ದಕ್ಷಿಣದ ಬಾಗಿಲಿನಿಂದ ಉತ್ತರದ ಬಾಗಿಲಿನವರೆಗೆ ಕುಳಿತಿರುವ, ನಿಂತಿರುವ ಹಲವಾರು ವಿಗ್ರಹಗಳನ್ನು ನಾವು ಕಾಣುತ್ತೇವೆ. ಅವುಗಳ ಮೇಲೆ ಚಿಕ್ಕ ಗೋಪುರಗಳು, ಮಧ್ಯೆ ಮಧ್ಯೆ ಸಿಂಹಗಳು, ಕಟಾಂಜನ, ಜೋಡಿಕಂಬಗಳೂ ಇವೆ. ಎರಡೆರಡು ಜೋಡಿ ಕಂಬಗಳ ಮಧ್ಯೆ ಶಿಲಾಫಲಕಗಳು. ಅದರಲ್ಲಿ ಮೂರ್ತಿಗಳೂ ಇವೆ. ಕೊರೆದು ಮಾಡಿರುವ ಜಾಲಂಧ್ರಗಳಿವೆ, ಈ ಸುಂದರವಾದ ಮೂರ್ತಿಗಳನ್ನು ನಾವು ಇಲ್ಲಿ ಕಾಣಬಹುದು.

FAQ

ಹಳೆಬೀಡು ಯಾವ ಜಿಲ್ಲೆಯಲ್ಲಿದೆ ?

ಹಾಸನ ಜಿಲ್ಲೆಯಲ್ಲಿದೆ.

ಹಳೆಬೀಡು ಯಾರ ರಾಜಧಾನಿಯಾಗಿತ್ತು ?

ಹೊಯ್ಸಳರು

ಇತರೆ ವಿಷಯಗಳು :

ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ 

ಪುಸ್ತಕಗಳ ಮಹತ್ವ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.