ಉದ್ಯಮಗಾರಿಕೆ ಬಗ್ಗೆ ಮಾಹಿತಿ | Information About Entrepreneurship in Kannada

Join Telegram Group Join Now
WhatsApp Group Join Now

ಉದ್ಯಮಗಾರಿಕೆ ಬಗ್ಗೆ ಮಾಹಿತಿ Information About Entrepreneurship udyamagarike bagge mahiti in kannada

ಉದ್ಯಮಗಾರಿಕೆ ಬಗ್ಗೆ ಮಾಹಿತಿ

Information About Entrepreneurship in Kannada
Information About Entrepreneurship in Kannada

ಈ ಲೇಖನಿಯಲ್ಲಿ ಉದ್ಯಮಗಾರಿಕೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಯಿತು.

ಉದ್ಯಮಿಯ ಅರ್ಥ :

ಉದ್ಯಮಿ, ಎಂಬ ಪದವು ಫ್ರೆಂಚ್‌ ಪದ “ಎಂಟ್ರ ಪ್ರೆಂಡೆ” ಯಿಂದ ಬಂದಿದೆ. ಅಂದರೆ ಒಂದು ಚಟುವಟಿಕೆಯನ್ನು ಕೈಗೆತ್ತಿಕೊಳ್ಳುವವ ಎಂದಾಗಿದೆ. ಉದ್ಯಮಿಯು ಹೊಸ ಕಲ್ಪನೆಯನ್ನು ವ್ಯವಹಾರದಲ್ಲಿ ರೂಢಿಗೆ ತರುವವನಾಗಿದ್ದು, ಇವನಲ್ಲಿ ವ್ಯವಹಾರ ನಿರ್ವಹಿಸಲು ಆಡಳಿತ ನಿರ್ವಹಣೆಯ ಕೌಶಲ್ಯ ಮತ್ತು ತಂಡವನ್ನು ನಿರ್ಮಿಸುವ ಸಾಮರ್ಥ್ಯ ಮತ್ತು ಮುಂದಾಳತ್ವದ ಗುಣಗಳು ಇರುತ್ತವೆ.

ಉದ್ಯಮಿಯು ಯಾವುದಾದರೂ ಒಂದು ಪ್ರತಿಫಲ ಕೊಡುವ ಉದ್ದಿಮೆಯನ್ನು ಸ್ಥಾಪಿಸುವ ಅವಕಾಶಕ್ಕೆ ಕೈ ಹಾಕುತ್ತಾನೆ. ವ್ಯವಹಾರದ ವಿಧಾನದಲ್ಲಿ ಯಾವುದನ್ನು ಹೇಗೆ ಮತ್ತು ಎಷ್ಟು ಉತ್ತಮ ಎಂಬುದನ್ನು ಗಣನೆಗೆ ತೆಗೆದುಕೊಂಡು ಒಂದು ಉದ್ಯಮವನ್ನು ಪ್ರಾರಂಭಿಸುತ್ತಾನೆ ಹಾಗೂ ಪ್ರತಿಸ್ವಂದನೆ ನಿರ್ಣಯಿಸುತ್ತಾನೆ. ಉದ್ಯಮಿಗಳು ಹೊಸ ವಸ್ತುಗಳ ಬಗ್ಗೆ ಊಹೆಮಾಡಿಕೊಂಡು ಅವುಗಳ ಮಾರುಕಟ್ಟೆ ಮತ್ತು ತಾಂತ್ರಿಕತೆಗಳ ಮತ್ತು ಬದಲಾವಣೆಗಳು, ಬಟ್ಟೆ ಒಗೆಯುವ ಯಂತ್ರಗಳು. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡುಗಳು, ಕೊರಿಯರ್‌ ಸೇವೆ ಮತ್ತು ತತ್ ಕ್ಷಣದಲ್ಲಿ ತಯಾರಿಸಬಹುದಾದ ಆಹಾರ ಪರ್ದಾರ್ಥಗಳು ಉದ್ಯಮಿಗಳ ಕಲ್ಪನೆಗಳಲ್ಲಿ ರೂಢಿಗೆ ಬಂದಿರುವುದಕ್ಕೆ ಉದಾಹರಣೆಗಳಾಗಿವೆ.

ಉದ್ಯಮಗಾರಿಕೆ :

ಒಬ್ಬ ಉದ್ಯಮಿಯು ತನ್ನ ಉದ್ದಿಮೆಯನ್ನು ಸ್ಥಾಪಿಸಲು ಕೈಗೊಳ್ಳುವ ಕ್ರಿಯೆಗಳನ್ನು ಉದ್ಯಮಗಾರಿಕೆ ಎನ್ನುತ್ತೇವೆ. ಉದ್ಯಮಗಾರಿಕೆಯು ಒಂದು ಸೃಜನಾತ್ಮಕ ಚಟುವಟಿಕೆಯಾಗಿದೆ. ಇದು ಏನೂ ಇಲ್ಲದುದನ್ನು ಏನಾದರೊಂದಾಗಿ ಸೃಜಿಸುವ ಸಾಮರ್ಥ್ಯವಾಗಿದೆ. ಇದು ಬೇರೆಯವರಿಂದ ಕಷ್ಟಸಾಧ್ಯವಾದ ಗೊಂದಲಮಯ, ವಿರೋಧಾತ್ಮಕ ಮತ್ತು ಅಸ್ತವ್ಯಸ್ತತೆಯಿಂದ ಕೂಡಿದ ಒಂದು ಅವಕಾಶವನ್ನು ಗುರ್ತಿಸಿ ಅದನ್ನು ಕಾರ್ಯರೂಪಕ್ಕೆ ತರುವುದೇ ಆಗಿದೆ. ಉದ್ಯಮಗಾರಿಕೆಯು ಅವಕಾಶಗಳನ್ನು ಅನ್ವೇಷಿಸಿ ಅಥವಾ ಹುಡುಕಿ, ನಷ್ಟಗಳನ್ನು ಲೆಕ್ಕಾಚಾರ ಹಾಕಿ ಅದರಿಂದ ಲಾಭಪಡೆಯಲು ಒಂದು ಸಾಹಸಕಾರ್ಯವನ್ನು ಸ್ಥಾಪಿಸುವುದೇ ಅಗಿದೆ. ಉದ್ಯಮಗಾರಿಕೆ ಒಂದು ಕಾರ್ಯವಿಧಾನವಾಗಿದೆ. ಇದು ಕೆಲವು ಅಪರೂಪದ ಸಂಘಟನೆಗಳ ಸಂಯೋಜನೆಯಲ್ಲಿ ಉದ್ದೇಶ ಹೊಂದಿರುವ ಮತ್ತು ಸಂಘಟಿತವಾದ ಬದಲಾವಣೆಗಳಿಗಾಗಿ ಒಂದು ಅನ್ವೇಷಣೆಯನ್ನು ಕ್ರಮಬದ್ಧವಾದ ಪರಿಸರದಲ್ಲಿ ವಿಶ್ಲೇಷಿಸುವ ಕಾರ್ಯವಾಗಿದೆ.

ಉದ್ಯಮಿಯ ಕಾರ್ಯಗಳು :

ಉದ್ಯಮಿಯು ಅವಕಾಶಗಳನ್ನು ಅವಲೋಕಿಸಿ, ಯೋಚನೆ ಮಾಡಿ, ಸಂಪನ್ಮೂಲಗಳನ್ನು ಸಂಘಟಿಸಿ, ಉತ್ಪಾದನೆ, ಮಾರುಕಟ್ಟೆ ಮತ್ತು ಇತರೆ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಅತ್ಯಂತ ಮುಖ್ಯವಾಗಿ ಮಾರ್ಪಾಡುಗಳನ್ನು ಮಾಡಿ ನಷ್ಟಗಳಾದಾಗ ಎದುರಿಸಬೇಕಾಗುತ್ತದೆ.

Join WhatsApp Join Telegram
  • ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ.
  • ಉದ್ಯಮಿಯು ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.
  • ಉದ್ಯಮಗಾರನು ಉತ್ಪಾದಿಸುವ ವಸ್ತುಗಳ ಬಗ್ಗೆ, ತಾಂತ್ರಿಕತೆ ಬಗ್ಗೆ, ಮಾರುಕಟ್ಟೆ ಮತ್ತು ಉದ್ಯೋಗ ಮುಂತಾದವುಗಳ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾನೆ.
  • ಉದ್ಯಮಿಯು ಎಲ್ಲ ಅಂಶಗಳನ್ನು ಸಮಂಜಸವಾಗಿ ಸಂಯೋಜಿಸುತ್ತಾನೆ.
  • ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.
  • ಉದ್ಯಮಿಯು ತನ್ನ ಉದ್ಯಮದ ಹಣಕಾಸಿನ ಅಯವ್ಯಯವನ್ನು ನಿಭಾಯಿಸುತ್ತಾನೆ.
  • ಉದ್ಯಮಿಯು ಕಷ್ಟನಷ್ಟಗಳನ್ನು ಮತ್ತು ಅನಿಶ್ಚಿತೆಗಳನ್ನು ಎದುರಿಸುತ್ತಾನೆ.
  • ಉದ್ಯಮಿಯು ವ್ಯಾಪಾರದ ಮಾರ್ಗಗಳನ್ನು ತಿಳಿಸಿ ಅದು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳ್ಳುವಂತೆ ಮಾರ್ಗದರ್ಶನ ನೀಡುತ್ತಾನೆ.

ಉದ್ಯಮಿಯ ಪಾತ್ರ ಮತ್ತು ಪ್ರಾಮುಖ್ಯತೆ :

ಉದ್ಯಮಿಯ ಪಾತ್ರ :

ಉದ್ಯಮಿಗಳು ವ್ಯಾಪಾರದ ಧುರೀಣರಾಗಿದ್ದು ವಿವಿಧ ಅನಿಸಿಕೆಗಳನ್ನು ಗಮನಿಸಿ ಅವುಗಳನ್ನು ಕಾರ್ಯ ರೂಪಕ್ಕೆ ತಂದು ಅರ್ಥಿಕಪ್ರಗತಿ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುತ್ತಾರೆ. ಭಾರತದ ಆರ್ಥಿಕ ಪ್ರಗತಿಯಲ್ಲಿ ಉದ್ಯಮಿಗಳ ಪಾತ್ರ ಬಹುಮುಖ್ಯವಾಗಿದೆ. ಇವರು ಕೈಗಾರಿಕಾ ಕ್ಷೇತ್ರದ ಪರಿವರ್ತನೆಯೇ ಅಲ್ಲದೆ ವ್ಯವಸಾಯ ಮತ್ತು ಸೇವಾಕ್ಷೇತ್ರಗಳ ಅಭಿವೃದ್ಧಿಯಲ್ಲೂ ಮುಖ್ಯ ಪಾತ್ರ ವಹಿಸುತ್ತಾರೆ.

೧. ಉದ್ಯಮಿಗಳು ಜನರ ಅನುಪಯುಕ್ತ ಉಳಿತಾಯಗಳನ್ನು ಬಂಡವಾಳ ರೂಪದಲ್ಲಿ ನಿರ್ಮಾಣ ಮಾಡುತ್ತಾರೆ. ಅವರು ಸಂಪನ್ಮೂಲಗಳನ್ನು ಉದ್ದಿಮೆಗಳನ್ನು ಪ್ರಾರಂಭಿಸಲು ಉಪಯೋಗಿಸುತ್ತಾರೆ.

೨. ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸುವುದರ ಮೂಲಕ ಉದ್ಯಮಿಗಳು ಕುಶಲಕರ್ಮಿಗಳಿಗೆ, ತಾಂತ್ರಿಕ ಯೋಗ್ಯತೆ ಉಳ್ಳವರಿಗೆ ಮತ್ತು ಕಸಬುದಾರರಿಗೆ ಅಧಿಕ ಪ್ರಮಾಣದ ಉದ್ಯೋಗಗಳನ್ನು ಒದಗಿಸುತ್ತಾರೆ.

೩. ಉದ್ಯಮಿಗಳು ಒಂದು ದೇಶದ ನಿವ್ವಳದೇಶಿಯ ಉತ್ಪನ್ನ ಮತ್ತು ಜನರ ತಲಾವರಮಾನ ಹೆಚ್ಚಿಸುತ್ತಾರೆ.

೪. ಉದ್ಯಮಿಗಳು ಬಂಡವಾಳ ಮತ್ತು ಕೌಶಲ್ಯವನ್ನು ಪ್ರಯೋಜನಕಾರಿಯಾಗಿ ಒಟ್ಟುಗೂಡಿಸಿ ಹೊಸವಸ್ತುಗಳನ್ನು ಮತ್ತು ಸೇವೆಗಳನ್ನು ರೂಢಿಸಿ ತಂದು ಮಾರುಕಟ್ಟೆಗಳನ್ನು ಅಭಿವೃದ್ದಿ ಪಡಿಸುತ್ತಾರೆ.

೫. ಉದ್ಯಮಿಗಳು ಉತ್ತಮ ವಸ್ತುಗಳನ್ನು ಕಡಿಮೆದರದಲ್ಲಿ ಜನರಿಗೆ ಒದಗಿಸಿ ಅವರ ಜೀವನಮಟ್ಟ ಉತ್ತಮಗೊಳ್ಳಲು ಶ್ರಮಿಸುತ್ತಾರೆ.

೬. ಉದ್ಯಮಿಗಳು ಕೈಗಾರಿಕೆಗಳನ್ನು ಅಭಿವೃದ್ದಿ ಪಡಿಸುತ್ತಾರೆ. ಅವರು ಪ್ರಾಂತೀಯ ತಾರತಮ್ಯಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ನಿವಾರಿಸುತ್ತಾರೆ.

೭. ಉದ್ಯಮಿಗಳು ಆದಾಯ ಮತ್ತು ಸಂಪತ್ತು ಒಂದು ಪ್ರದೇಶದಲ್ಲಿ ಕೇಂದ್ರೀಕೃತವಾಗುದನ್ನು ಕಡಿಮೆ ಮಾಡಿ ಸಮಾಜದ ಏಳಿಗೆಗೆ ಸಹಾಯ ಮಾಡುತ್ತಾರೆ.

೮. ಉದ್ಯಮಿಗಳು ಹೊಸ ಬದಲಾವಣೆಗಳನ್ನು ರೂಢಿಗೆ ತಂದು ತಾಂತಿಕತೆಯನ್ನು ಬದಲಾಯಿಸಿ ಹೆಚ್ಚು ಲಾಭದಾಯಕವಾಗಲು ಶ್ರಮಿಸುತ್ತಾರೆ.

ಉದ್ಯಮಿಗಳ ಪ್ರಾಮುಖ್ಯತೆ :

ಉದ್ಯಮಿಗಳು ಮಾರುಕಟ್ಟೆಯ ಆರ್ಥಿಕ ಸ್ಥಿತಿಯಲ್ಲಿ ಕೇಂದ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಉದ್ಯಮಿಗಳಲ್ಲಿ ಆರ್ಥಿಕತೆಯ ಯಂತ್ರದಲ್ಲಿ ವಿದ್ಯುತ್ತನ್ನು ಸಂಚರಿಸಲು ಸಹಕಾರಿಯಾಗುವ ಅಗ್ನಿಬಿರಟೆಯಂತೆ ಆರ್ಥಿಕ ಚಟುವಟಿಕೆಗಳಿಗೆ ಚೇತನ ಕೊಡುವ ಸಾಧಕರಾಗಿದ್ದಾರೆ.

ಒಂದು ದೇಶದ ಆರ್ಥಿಕ ಯಶಸ್ಸು ವಿಶ್ವದಾದ್ಯಂತ ಹಬ್ಬಲು ಉದ್ಯಮಗಳನ್ನು ಉತ್ತೇಜಿಸಿ ಅವುಗಳಿಗೆ ಸರಿಯಾದ ಬಹುಮಾನಕೊಡಬೇಕಾದುದು ಅಗತ್ಯವಾಗಿದೆ. ಏಕೆಂದರೆ ಉದ್ಯಮಿಗಳು ಮತ್ತು ಅವರ ಚಟುವಟಿಕೆಗಳು ದೇಶದ ಯಶಸ್ಸು, ಅಭಿವೃದ್ಧಿ, ಬೆಳವಣಿಗೆ ಮತ್ತು ಸಮಯೋಚಿತ ವಿಮರ್ಶಾತ್ಮಕ ನಿರ್ಣಯಗಳಾಗಿರುತ್ತವೆ. ಜಗತ್ತಿನ ಅತಿ ಕ್ರಿಯಾತ್ಮಕ ಅಥವ ಚಲನಾತ್ಮಕ ಸಮಾಜಗಳು ಅತಿ ಹೆಚ್ಚು ಉದ್ಯಮಿಗಳಿಂದ ಕೂಡಿರುವುದಾಗಿವೆ. ಹಾಗೂ ಆರ್ಥಿಕ ಮತ್ತು ಕಾನೂನಿನ ರಚನೆಗಳು ಉದ್ಯಮಿಗಳು ಜನರ ಪ್ರಯೋಜನಕಾರಿಯಲ್ಲಿರದ ಉಳಿತಾಯಗಳಿಂದ ಬಂಡವಾಳವನ್ನು ಬೆಳೆಸುತ್ತಾರೆ.

ಉದ್ಯಮಿಗಳ ಸಾಮರ್ಥ್ಯ ಮತ್ತು ಪ್ರಚೋದನೆ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಉದ್ಯಮಿಯು ತನ್ನ ಉದ್ಯಮದ ನಷ್ಟಭರಿಕೆಯನ್ನು ಹೊರುತ್ತಾನೆ. ಲಾಭವನ್ನು ಹುಡುಕುತ್ತಾ ಹೋಗುತ್ತಾನೆ. ಅವಕಾಶಗಳನ್ನು ಹುಡುಕುತ್ತಾನೆ. ಲಾಭಗಳಿಸಿ ಇನ್ನು ತೃಪ್ತಿಕಾಣದ ಅಗತ್ಯಗಳನ್ನು ಪೂರೈಸಲು ಶ್ರಮಿಸುತ್ತಾನೆ.

ಉದ್ಯಮಿಗಳಿಗೆ ಸ್ವಂತ ಉದ್ಯೋಗ ಅವಕಾಶಗಳು :

ಸ್ವಂತ ಉದ್ಯೋಗಿಗಳು ಅಥವಾ ಸ್ವಉದ್ಯೋಗದಾರರು ದೇಶದ ಬೆನ್ನಲುಬಾಗಿದ್ದಾರೆ. ಒಂದು ರಸೆಯ ಮೂಲೆಯಲ್ಲಿನ ಚಹಾ ಅಂಗಡಿಯಿಂದ ಹಿಡಿದು, ಮಾಮ್‌ ಅಂಡ್‌ ಪಾಪ್‌ ಕಿರಾಣಿ ಅಂಗಡಿ, ಗುಜರಿವ್ಯಾಪಾರಿ, ಅಂತರ್ಜಾಲದ ಸೈಬರ್‌ ಅಂಗಡಿಗಳು ಮುಂತಾದುವೆಲ್ಲ ಸ್ವಉದ್ಯೊಗ ಸಂಸ್ಥೆಗಳಾಗಿವೆ. ಈ ಉದ್ದಿಮೆಗಳಿಗೆ ಉತ್ತೇಜನ ಬೇಕಾಗಿದೆ. ಇದರಿಂದಾಗಿ ಜಾಗತೀಕರಣ ಆರ್ಥಿಕ ವ್ಯವಸ್ಥೆಯೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ. ಭಾರತ ಸರ್ಕಾರವು ಖಾಸಗಿ ರಂಗದ ಉದ್ಯಮಗಳಿಗೆ ಹೆಚ್ಚು ಪೋತ್ಸಾಹ ನೀಡಿ ಅವುಗಳಿಗೆ ಬೇಕಾದ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮತ್ತು ಪರಿಸರದ ಹೊಸಪದ್ದತಿಯನ್ನು ಉತ್ತೇಜಿಸುತ್ತಿದೆ. ಒಬ್ಬ ಮನುಷ್ಯನು ಸ್ವ ಉದ್ಯಮದಿಂದ ಉದ್ಯಮಶೀಲನಾಗಲು ಅನೇಕ ಸೇವಾಸಂಸ್ಥೆಗಳನ್ನು ಕೇಂದ್ರಸರ್ಕಾರದ ಅತಿ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ವ್ಯವಹಾರ ಸಂಸ್ಥೆಗಳ, ಮಂತ್ರಿಮಂಡಲ ಈ ಬದಲಾವಣೆಗೆ ಶ್ರಮಿಸುತ್ತದೆ.

  • ಜಾಹಿರಾತು ಸೇವಾಸಂಸ್ಥೆಗಳು
  • ಮಾರುಕಟ್ಟೆ ಸಲಹಾ ಸಂಸ್ಥೆ
  • ಕೈಗಾರಿಕಾ ಸಲಹಾ ಸಂಸ್ಥೆ
  • ವಸ್ತುಗಳನ್ನು ಬಾಡಿಗೆಗೆ ಮತ್ತು ಗುತ್ತಿಗೆಗೆ ನೀಡುವ ಸಂಸ್ಥೆಗಳು
  • ಛಾಯಾಪ್ರತಿ ತೆಗೆಯುವ ಕೇಂದ್ರಗಳು
  • ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು
  • ಕೈಗಾರಿಕಾ ವಸ್ತುಗಳ ಗುಣಮಟ್ಟ ಪ್ರಯೋಗಾಲಯಗಳು
  • ಅಂತರ್ಜಾಲ ಮತ್ತು ಸಂವಹನ ಅಂಗಡಿಗಳು
  • ದೂರದರ್ಶನ ಜಾಲ ಬಂದದ ಸೇವಾಕ್ಷೇತ್ರಗಳು
  • ಕ್ರೆಚ್‌ ಮತ್ತು ಬ್ಯೂಟಿಪಾರ್ಲರ್ ಗಳು

ಸ್ವಯಂ ಉದ್ಯೋಗಕ್ಕಾಗಿ ಯೋಜನೆಗಳು :

ಯಾವುದೇ ಉದ್ಯಮ ಪ್ರಾರಂಭಿಸಲು ಹಣಕಾಸಿನ ಅವಶ್ಯಕತೆ ಮುಖ್ಯವಾಗಿದೆ. ಸಾಕಷ್ಟು ಬಂಡವಾಳ ಇಲ್ಲದೇ ಹೋದಲ್ಲಿ ಯಾವುದೇ ಉದ್ಯಮ ಸ್ಥಾಪಿಸಲು ಮತ್ತು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಉದ್ದಿಮೆಗಳ ಸ್ಥಾಪನೆ ಅಭಿವೃದ್ಧಿ ಮತ್ತು ಅವುಗಳನ್ನು ಕಾಲಕ್ಕೆ ತಕ್ಕಂತೆ ಮಾರ್ಪಡಿಸಲು ಅನೇಕ ಹಣಕಾಸಿನ ಸಂಸ್ಥೆಗಳನ್ನು ಸ್ಥಾಪಿಸಿವೆ. ಈ ಸಂಸ್ಥೆಗಳು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೂ ಕೂಡ ಸಾಲರೂಪದಲ್ಲಿ ಹಣ ಸಹಾಯ ಮಾಡುತ್ತದೆ.

  • ಭಾರತದ ಕೈಗಾರಿಕಾ ಅಭಿವೃದ್ದಿ ಬ್ಯಾಂಕು
  • ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕು
  • ಆಮದು ಮತ್ತು ರಫ್ತು ಬ್ಯಾಂಕು
  • ಭಾರತೀಯ ಸಣ್ಣಕೈಗಾರಿಕಾ ಅಭಿವೃದ್ದಿ ಬ್ಯಾಂಕು
  • ಭಾರತೀಯ ಕೈಗಾರಿಕಾ ಹಣಕಾಸು ನಿಗಮ
  • ಭಾರತೀಯ ಕೈಗಾರಿಕೆಗೆ ಹಣಕಾಸಿನ ಹೂಡಿಕೆ ಮತ್ತು ಸಾಲದ ನಿಗಮ
  • ಭಾರತೀಯ ಕೈಗಾರಿಕಾ ಮರು ನಿರ್ಮಾಣ ಬ್ಯಾಂಕು
  • ಭಾರತೀಯ ವಾಣಿಜ್ಯ ಮತ್ತು ಇತರೆ ಬ್ಯಾಂಕುಗಳು
  • ರಾಜ್ಯ ಹಣಕಾಸು ನಿಗಮಗಳು
  • ಭಾರತೀಯ ಜೀವ ವಿಮಾ ನಿಗಮ
  • ಯೂನಿಟ್‌ ಟ್ರಸ್ಟ್‌ ಆಫ್‌ ಇಂಡಿಯ

FAQ

ಪೋಲಿಯೊ ಲಸಿಕೆ ಕಂಡುಹಿಡಿದ ವಿಜ್ಞಾನಿ ಯಾರು?

ಜೋನನ್‌ ಎಡ್ವರ್ಡ್‌ ಸಾಲ್ಕ್.‌

ಭಾರತದಲ್ಲಿ ಬಿ ಆರ್‌ ಅಂಬೇಡ್ಕರ್‌ ವಿಮಾನಾಶ್ರಯ ಎಲ್ಲಿದೆ?

ನಾಗ್ವುರ್.

ಇತರೆ ವಿಷಯಗಳು :

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ

ದೇಶದ ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.