ಜಲ ಮಾಲಿನ್ಯದ ಬಗ್ಗೆ ಪ್ರಬಂಧ | Essay On Water Pollution in Kannada

Join Telegram Group Join Now
WhatsApp Group Join Now

ಜಲ ಮಾಲಿನ್ಯದ ಬಗ್ಗೆ ಪ್ರಬಂಧ Essay On Water Pollution jala malinya bagge prabandha in kannada

ಜಲ ಮಾಲಿನ್ಯದ ಬಗ್ಗೆ ಪ್ರಬಂಧ

Essay On Water Pollution in Kannada
ಜಲ ಮಾಲಿನ್ಯದ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಜಲ ಮಾಲಿನ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ :

ಹಿಂದಿನ ಕಾಲದಲ್ಲಿ ಜನ ನೀರನ್ನು ದೇವರೆಂದು ಪೂಜಿಸುತ್ತಿದ್ದರು. ಏಕೆಂದರೆ ನೀರು ಇಲ್ಲ ಎಂದರೆ ಬದುಕಿಲ್ಲ. ನೀರಿನಿಂದಲೇ ಬದುಕು. ಆದ್ದರಿಂದಲೇ ನೀರನ್ನು ಜೀವಜಲ ಎಂದು ಕರೆಯುತ್ತಾರೆ. ಜಲಮಾಲಿನ್ಯ ಇದು ತುಂಬಾ ವಿಶಾಲವಾದ ಅರ್ಥವನ್ನು ಒಳಗೊಂಡಿರುವ ಪದವಾಗಿದೆ. ಇದು ನದಿ, ಸರೋವರ ಮತ್ತು ಸಮುದ್ರ ಸಾಗರದಂತಹ ನೀರಿನ ಮೂಲಗಳ ಕಲುಷಿತತೆಯನ್ನು ವಿವರಿಸುತ್ತದೆ. ಈ ಜಲಮಾಲಿನ್ಯ ಹೆಚ್ಚಾಗಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ವಿಷಯ ವಿವರಣೆ :

ನೀರಿನಲ್ಲಿ ಉಂಟಾಗುವ ಭೌತಿಕ ಜೈವಿಕ ಮತ್ತು ರಾಸಾಯನಿಕ ಬದಲಾವಣೆಯನ್ನು ಜಲಮಾಲಿನ್ಯ ಎಂದು ಕರೆಯುತ್ತಾರೆ. ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಮಾನವನ ಚಟುವಟಿಕೆಗಳಿಂದ ನೀರಿನ ಮೂಲಗಳು ಕಲುಷಿತಗೊಳ್ಳುವುದು ಜಲಮಾಲಿನ್ಯ.

ಜಲಮಾಲಿನ್ಯ ಹೇಗೆ ಉಂಟಾಗುತ್ತದೆ?

ಕಾರ್ಖಾನೆ ಕೈಗಾರಿಕೆಗಳಿಂದ ಮತ್ತು ನಗರದಿಂದ ಹೊರ ಬರುವ ತ್ಯಾಜ್ಯವು ನೀರಿನಲ್ಲಿ ಬೆರೆತಾಗ ಜಲಮಾಲಿನ್ಯವು ಉಂಟಾಗುತ್ತದೆ. ಈ ತ್ಯಾಜ್ಯಗಳಿಂದ ಹಳ್ಳ ಕೆರೆ ನದಿ ಸರೋವರ ಸಾಗರಗಳಂತಹ ನೀರು ತ್ಯಾಜ್ಯ ಪದಾರ್ಥಗಳಿಂದ ವಿಘಟನೆಗೊಳ್ಳುತ್ತವೆ. ಈ ರೀತಿ ಬೆರೆತ ಪದಾರ್ಥಗಳು ಮಾಲಿನ್ಯಕಾರಕವಾಗಿ ಮಾರ್ಪಾಡುಗೊಳ್ಳುತ್ತವೆ.

ಜಲ ಮಾಲಿನ್ಯಕ್ಕೆ ಪ್ರಮುಖ ಕಾರಣಗಳು :

  • ನಗರೀಕರಣ
  • ಅರಣ್ಯನಾಶ
  • ಕೈಗಾರಿಕಾ ತ್ಯಾಜ್ಯಗಳು
  • ಸಾಮಾಜಿಕ ಮತ್ತು ಧಾರ್ಮಿಕ ಅಚರಣೆಗಳು
  • ರಸಗೊಬ್ಬರಗಳ ಮತ್ತು ಮಾರ್ಜಕಗಳ ಬಳಕೆ
  • ಕೃಷಿಗೆ ಬಳಸಿದ ಕೀಟನಾಶಕಗಳ ಹರಿಯುವಿಕೆ
  • ಅಪಘಾತಗಳು

ಜಲ ಮಾಲಿನ್ಯದಿಂದ ಉಂಟಾಗುವ ಪರಿಣಾಗಳು :

  • ಕುಡಿಯುವ ನೀರಿನ ಕೊರತೆಗಳು ಉಂಟಾಗುತ್ತವೆ.
  • ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ.
  • ಕಲುಷಿತ ನೀರಿನಿಂದ ಕೃಷಿ ಜಾನುವಾರುಗಳು ಮರಣಕ್ಕೆ ದಾರಿಯಾಗುತ್ತವೆ.
  • ಜಲವಾಸಿ ಪ್ರಾಣಿಗಳು ಅಳಿವಿನ ಅಂಚಿಗೆ ತಲುಪುತ್ತವೆ.
  • ಶಿಶು ಮರಣ ಹೆಚ್ಚಾಗುತ್ತದೆ.

ಜಲ ಮಾಲಿನ್ಯವನ್ನು ತಡೆಗಟ್ಟುವಿಕೆಯ ಕ್ರಮಗಳು :

  • ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸುವುದು.
  • ವಸ್ತುಗಳ ಮರುಬಳಕೆ ಮಾಡಬೇಕು.
  • ನೀವು ಬಳಸುವ ಪ್ಲಾಸ್ಟಿಕ್‌ ಇತರ ವಸ್ತುಗಳನ್ನು ನೀರಿನಲ್ಲಿ ಹಾಕದೇ ಕಸದ ಚೀಲದಲ್ಲಿ ಹಾಕಬೇಕು.
  • ಕೆರೆ, ನದಿ, ಸಮುದ್ರ ತೀರಗಳನ್ನು ಸ್ವಚ್ಚಗೊಳಿಸಲು ಸ್ವಯಂ ಸೇವಕರಂತೆ ಸಿದ್ದರಾಗಬೇಕು.
  • ಬಟ್ಟೆ ಅಥವಾ ಪಾತ್ರಗಳನ್ನು ತೊಳೆಯುವಾಗ ಆದಷ್ಟು ಕಡಿಮೆ ಸಾಬೂನು ಬಳಸಬೇಕು.
  • ಸರ್ಕಾರ ಇದಕ್ಕೆ ಕಠಿಣ ನಿಯಂತ್ರಣವನ್ನು ತರಬೇಕು.
  • ನೀರನ್ನು ಸಂರಕ್ಷಿಸುವುದು :

ನೀರಿನ ಸಂರಕ್ಷಣೆಗೆ ನಮ್ಮ ಮೊದಲ ಆದ್ಯತೆಯಾಗಬೇಕು. ನೀರು ವ್ಯರ್ಥವಾಗುವುದು ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿರಬಹುದು, ಆದರೆ ನಾವು ಈಗ ಅದರ ಬಗ್ಗೆ ಜಾಗೃತರಾಗಿದ್ದೇವೆ.

Join WhatsApp Join Telegram
  • ಒಳಚರಂಡಿ ಸಂಸ್ಕರಣೆ :

ನಾವು ನಮ್ಮ ಮನೆಯ ಚರಂಡಿಗಳು ಮತ್ತು ಬೀದಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.
ಚರಂಡಿಗಳ ಸರಿಯಾದ ವ್ಯವಸ್ಥೆ ಮಾಡಬೇಕು. ತ್ಯಾಜ್ಯ ವಸ್ತುಗಳನ್ನು ಜಲಮಾರ್ಗಗಳಲ್ಲಿ ವಿಲೇವಾರಿ ಮಾಡುವ ಮೊದಲು ಸ್ವಚ್ಛಗೊಳಿಸುವುದರಿಂದ ಮಾಲಿನ್ಯವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಅದರ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ, ಈ ತ್ಯಾಜ್ಯ ನೀರನ್ನು ಇತರ ಕ್ಷೇತ್ರಗಳಲ್ಲಿ ಅಥವಾ ಕೃಷಿಯಲ್ಲಿ ಬಳಸಲಾಗುತ್ತದೆ.

  • ಪರಿಸರ ಸ್ನೇಹಿ ವಸ್ತುಗಳ ಬಳಕೆ :

ಮಾಲಿನ್ಯಕಾರಕಗಳಾಗಿ ಬದಲಾಗದ ಕರಗುವ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ನಾವು ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತೇವೆ. ಜನರಿಗೆ ಪರಿಸರ ಸಂರಕ್ಷಣೆ ಮತ್ತು ಪರಿಸರ ಶಿಕ್ಷಣ ನೀಡಬೇಕು.ಗೃಹೋಪಯೋಗಿ ವಸ್ತುಗಳಿಂದ ಸಂಗ್ರಹವಾಗುವ ಕಸವನ್ನು ಆದಷ್ಟು ಬೇಗ ತೆಗೆಯಬೇಕು.
ಕಲುಷಿತ ನೀರನ್ನು ಶುದ್ಧಗೊಳಿಸಲು ನಿರಂತರ ಸಂಶೋಧನೆ ಮತ್ತು ಬದಲಾವಣೆಗಳನ್ನು ಮಾಡಬೇಕು.
ನದಿ, ಬಾವಿ, ಹೊಳೆ ಮತ್ತು ಕೊಳಗಳಲ್ಲಿ ಬಟ್ಟೆ ಒಗೆಯುವಂತಹ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಬೇಕು.

  • ಜನರಲ್ಲಿ ಜಾಗೃತಿ ಮೂಡಿಸುವುದು :

ಜಲ ಮಾಲಿನ್ಯದಂತಹ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಅದರ ಕಾರಣಗಳು, ಅಡ್ಡ ಪರಿಣಾಮಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಪ್ರತಿಯೊಂದು ಮಾಹಿತಿಯು ಜನರಿಗೆ ಲಭ್ಯವಾಗುವಂತೆ ಮಾಡಬೇಕು.

ಉಪಸಂಹಾರ

ಭಾರತದಲ್ಲಿ ಜಲಮಾಲಿನ್ಯಕ್ಕೆ ಅತಿದೊಡ್ಡ ಕಾರಣ ಸಂಸ್ಕರಿಸದ ಒಳಚರಂಡಿ ಹರಿವು ಮತ್ತು ಕೈಗಾರಿಕಾ ತ್ಯಾಜ್ಯಗಳು. ಮೊದಲು ಇವುಗಳನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಮತ್ತು ಜನರು ಗಮನಹರಿಸಬೇಕು. ಪ್ರತಿಯೊಬ್ಬ ನಾಗರಿಕ ಜವಬ್ದಾರಿಯುತವಾಗಿ ನಡೆದುಕೊಂಡರೆ ಜಲಮಾಲಿನ್ಯವನ್ನು ಕಡಿಮೆ ಮಾಡಬಹುದು.

FAQ

ಜಲಮಾಲಿನ್ಯ ಎಂದರೇನು ?

ಮಾಲಿನ್ಯಕಾರಕಗಳು ನೀರಿನ ಮೂಲಗಳನ್ನು ಕಲುಷಿತಗೊಳಿಸಿದಾಗ ಮತ್ತು ನೀರನ್ನು ಕುಡಿಯಲು, ಅಡುಗೆ ಮಾಡಲು, ಸ್ವಚ್ಛಗೊಳಿಸಲು, ಈಜಲು ಮತ್ತು ಇತರ ಚಟುವಟಿಕೆಗಳಲ್ಲಿ ಬಳಸಲು ಅನರ್ಹಗೊಳಿಸಿದಾಗ ನೀರಿನ ಮಾಲಿನ್ಯ ಸಂಭವಿಸುತ್ತದೆ.

ವಿಶ್ವ ಜಲದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ 22

ಇತರೆ ವಿಷಯಗಳು :

ವರದಕ್ಷಿಣೆ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ


Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.