ಸಂಚಿ ಹೊನ್ನಮ್ಮನ ಜೀವನ ಚರಿತ್ರೆ | Biography of Sanchi Honnamma in Kannada

Join Telegram Group Join Now
WhatsApp Group Join Now

ಸಂಚಿ ಹೊನ್ನಮ್ಮನ ಜೀವನ ಚರಿತ್ರೆ Biography of Sanchi Honnamma Sanchi Honnamma Jeevana Charitre in Kannada

ಸಂಚಿ ಹೊನ್ನಮ್ಮನ ಜೀವನ ಚರಿತ್ರೆ

Biography of Sanchi Honnamma in Kannada
Biography of Sanchi Honnamma in Kannada

ಈ ಲೇಖನಿಯಲ್ಲಿ ಸಂಚಿ ಹೊನ್ನಮ್ಮನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಂಚಿ ಹೊನ್ನಮ್ಮ

ಸ್ಥಾಪಿತ ಕವಿಗಳು ಮತ್ತು ಗಣ್ಯರು ಮಾತ್ರ ತಮ್ಮ ಹೆಸರಿಗೆ ಲಿಖಿತ ಕೃತಿಗಳನ್ನು ಹೊಂದಿದ್ದ ಸಮಯದಲ್ಲಿ ವಿನಮ್ರ ಹಿನ್ನೆಲೆಯಿಂದ ಹೊರಹೊಮ್ಮಿದ ಆರಂಭಿಕ ಮಹಿಳಾ ಬರಹಗಾರರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಸಂಚಿ ಹೊನ್ನಮ್ಮ ಪಾತ್ರರಾಗಿದ್ದಾರೆ.

ಸಂಚಿ ಹೊನ್ನಮ್ಮನ ಜನನ

ಸಂಚಿಯ ಹೊನ್ನಮ್ಮ ಸುಮಾರು ಕ್ರಿ.ಶ. ೧೬೮೦ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ (ಕ್ರಿ.ಶ.೧೬೭೩-೧೭೦೪) ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ. ಈಕೆ ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ ಜನಿಸಿದಳು. ಇದೆ ಸ್ಥಳಕ್ಕೆ ಸೇರಿದ್ದ ಚಿಕ್ಕದೇವರಾಜರ ಪಟ್ಟದರಸಿಯಾಗಿದ್ದ ದೇವರಾಜಮ್ಮಣ್ಣಿಯ ಬಾಲ್ಯ ಸ್ನೇಹಿತೆಯಾಗಿದ್ದಳು.

ಸಂಚಿ ಹೊನ್ನಮ್ಮನ ಜೀವನ

ಹೊನ್ನಮ್ಮ ರಾಣಿ ದೇವಜಮ್ಮಣ್ಣಿಯವರಿಗೂ ಅಚ್ಚುಮೆಚ್ಚಿನವಳಾಗಿದ್ದಳು ಮತ್ತು ಮೈಸೂರು ಆಸ್ಥಾನದಲ್ಲಿ ಗೌರವಾನ್ವಿತಳಾಗಿ ಬೆಳೆದಳು. ಅವರು ಸಾಮಾನ್ಯ ಮಹಿಳೆಯರ ಜೀವನದ ಬಗ್ಗೆ ಮತ್ತು ಆಗಾಗ್ಗೆ ಅವರು ಜೀವನದಲ್ಲಿ ಅನುಭವಿಸಿದ ನೋವಿನ ಬಗ್ಗೆ ಬರೆದಿದ್ದಾರೆ. ಅವಳು ತೋರಿಕೆಯಲ್ಲಿ ಸಾಂಪ್ರದಾಯಿಕ ಚಿಂತಕಿಯಾಗಿದ್ದಳು ಮತ್ತು ತನ್ನ ಕಾಲದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಳು. ಅವಳು ರಾಜ್ಯಕ್ಕೆ ತುಂಬಾ ನಿಷ್ಟಾವಂತಳಾಗಿದ್ದಳು.

ಹನ್ನೆರಡನೆಯ ಶತಮಾನದ ಅಕ್ಕಮಹಾದೇವಿ ಮತ್ತಿತರ ವಚನಕಾರ್ತಿಯರನ್ನು ಬಿಟ್ಟರೆ, ಕನ್ನಡದಲ್ಲಿ ಸ್ತ್ರೀಯರು ಕೃತಿ ರಚನೆ ಮಾಡಿದ ನಿದರ್ಶನಗಳು ದೊರೆಯುವುದು ಹದಿನೆಂಟನೆಯ ಶತಮಾನದಲ್ಲಿಯೇ. ಚಿಕ್ಕದೇವರಾಯರ ಅರಮನೆಯ ಪರಿಸರದಲ್ಲಿ, ಹೊನ್ನಮ್ಮ, ಶೃಂಗಾರಮ್ಮ, ಚೆಲುವಾಂಬೆಯರೆಂಬ ಕವಯಿತ್ರಿಯರಿದ್ದರು.

Join WhatsApp Join Telegram

ದಂತಕಥೆಯ ಪ್ರಕಾರ ಸಾಂಚಿಯು ರಾಜ ಚಿಕ್ಕ ದೇವರಾಯನ ಅರಮನೆಯಲ್ಲಿ ರಾಜ ರಾಣಿಯರ ಸಮೀಪವರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಆಸ್ಥಾನದ ಕವಿ ಸಿಂಗರಾಚಾರ್ಯರು ಅವಳ ಪದಗಳ ಮೇಲಿನ ಪ್ರೀತಿಯನ್ನು ಗುರುತಿಸಿದರು ಮತ್ತು ಕವಿತೆಯನ್ನು ಓದಲು, ಬರೆಯಲು ಮತ್ತು ರಚಿಸಲು ಕಲಿಸಿದರು. ಅವರು ಅವಳನ್ನು ‘ಕಾವ್ಯದ ದೇವತೆ‘ ಎಂದು ಕರೆದನೆಂದು ಹೇಳಲಾಗುತ್ತದೆ. ಹೊನ್ನಮ್ಮನ ಬರೆವಣಿಗೆ ಮಾತ್ರ ತನ್ನ ಅಚ್ಚಗನ್ನಡದ ಸೊಗಸಿನಿಂದ, ಹೃದ್ಯವಾಗಿದೆ.

ಕವಯಿತ್ರಿಯಾಗಿ ಹೊನ್ನಮ್ಮ

ಅರಮನೆಯ ಊಳಿಗದ ಹೆಣ್ಣಾದ ಇವಳು ಸಿಂಗರಾರ್ಯನಿಂದ ವ್ಯಾಸಂಗವನ್ನು ಪಡೆದು, ‘ಹದಿಬದೆಯ ಧರ್ಮ’ ಎಂಬ ಕಾವ್ಯವನ್ನು ಬರೆದು ಕವಯಿತ್ರಿಯಾದಳು. ಈ ‘ಹದಿಬದೆಯ ಧರ್ಮ’ ಎನ್ನುವುದು ಗೃಹಿಣೀ ಧರ್ಮದ ಕೈಪಿಡಿ. ಗಂಡನೊಡನೆ, ಗರತಿಯಾಗಿ ಸುಗಮವಾಗಿ ಸಂಸಾರ ಮಾಡುವ ಹೆಣ್ಣಿಗೆ ಹೇಳಿದ ಬುದ್ಧಿವಾದದಂತಿದೆ ಈ ಕಾವ್ಯ. ಧರ್ಮಶಾಸ್ತ್ರದಲ್ಲಿರುವ ಸಂಗತಿಗಳನ್ನೆಲ್ಲಾ ಸಂಗ್ರಹಿಸಿ, ಕನ್ನಡದ ಹೆಣ್ಣು ಮಕ್ಕಳಿಗೆ ತಿಳಿಯುವಂತೆ ಸಾಂಗತ್ಯದಲ್ಲಿ ಈ ನೀತಿ ಕಾವ್ಯ ರಚಿತವಾಗಿದೆ. ೯ ಸಂಧಿಗಳು ಹಾಗು ೪೨೦ ಪದ್ಯಗಳನ್ನು ಒಳಗೊಂಡ ಈ ಕೃತಿಯು ತನ್ನ ಕಾವ್ಯಸೌಂದರ್ಯದಿಂದಾಗಿ ಹಾಗು ದಿಟ್ಟ ಸ್ತ್ರೀಪರ ಧೋರಣೆಯಿಂದಾಗಿ ಖ್ಯಾತವಾಗಿದೆ. ಇದರ ಒಂದು ಪದ್ಯ ಈ ಕೆಳಗಿನಂತಿದೆ.

“ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು”

ತಮ್ಮೆಲ್ಲರನ್ನು ಹಡೆದವಳು ಹೆಣ್ಣಲ್ಲವೇ, ಕಾಪಾಡಿದವಳು ಹೆಣ್ಣಲ್ಲವೇ, ಹೀಗಿರುವಾಗ ಹೆಣ್ಣು ಹೆಣ್ಣು ಎಂದು ಯಾಕೆ ನಿಕೃಷ್ಟರಾಗಿ ಕಾಣುತ್ತಾರೋ ಕಣ್ಣು ಕಾಣದ ಈ ಮೂರ್ಖರು, ಎಂಬ ಮಾತಿನಲ್ಲಿ ಹೊನ್ನಮ್ಮ ಮುಖ್ಯವಾಗಿ ಗಂಡಸರನ್ನು ಗಮರ್ನಹವಾಗಿ ಹೇಳಿರುವಂತದ್ದಾಗಿದೆ. ಅಷ್ಟೇ ಅಲ್ಲ, ಪರಂಪರಾಗತವಾಗಿ ಹೆಣ್ಣಿನ ಬಗ್ಗೆ ಒಂದು ಬಗೆಯ ಕೀಳು ಭಾವನೆಯನ್ನು ಬೆಳೆಯಿಸಿದ ಮನೋಧರ್ಮವನ್ನು ಹೊನ್ನಮ್ಮ ಖಂಡಿಸಿದ ಈ ಮಾತು ಹೊಸತಾಗಿದೆ. ಇದೊಂದು ಮಾತನ್ನು ಬಿಟ್ಟರೆ ಇವಳ ಕೃತಿ ಹೆಣ್ಣಿನಲ್ಲಿ ಯಾವ ವೈಚಾರಿಕ ಜಾಗೃತಿಯನ್ನಾಗಲಿ, ಹೆಚ್ಚಿನ ಆತ್ಮಾಭಿಮಾನಗಳನ್ನಾಗಲಿ ಪ್ರೇರಿಸದೆ, ಪತಿಪಾದಸೇವೆಯನ್ನು ಮಾಡಿಕೊಂಡು, ಉತ್ತಮ ಗೃಹಿಣಿಯಾಗಿ ಹೆಣ್ಣು ಹೇಗೆ ಬಾಳಬೇಕೆಂಬುದನ್ನು ಹೇಳಿಕೊಂಡು ಹೋಗುತ್ತದೆ. ‘ಹದಿಬದೆಯ ಧರ್ಮ’ದಿಂದ ಆಧುನಿಕ ವಿಚಾರ ಧಾರೆಯನ್ನು ನಿರೀಕ್ಷಿಸುವುದೇ ತಪ್ಪು; ಅರಮನೆಯ ಊಳಿಗದ ಹೆಣ್ಣೊಬ್ಬಳು, ಅಂದಿನ ಪರಿಸರದಲ್ಲಿ ಕವಯಿತ್ರಿಯಾಗಿ ರೂಪುಗೊಂಡ ಆಶ್ಚರ್ಯಕ್ಕೆ ಸಂತೋಷಪಡಬೇಕಾಗಿದೆ. ಆದರೆ ಹೊನ್ನಮ್ಮನ ಬರೆವಣಿಗೆ ಮಾತ್ರ ತನ್ನ ಅಚ್ಚಗನ್ನಡದ ಸೊಗಸಿನಿಂದ, ಹೃದ್ಯವಾಗಿದೆ.

FAQ

ಸಂಚಿ ಹೊನ್ನಮ್ಮ ಎಲ್ಲಿ ಜನಿಸಿದಳು ?

ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ ಜನಿಸಿದಳು.

ಸಿಂಗರಾಚಾರ್ಯರು ಸಂಚಿ ಹೊನ್ನಮ್ಮನಿಗೆ ಎನೆಂದು ಕರೆದಿದ್ದಾರೆ ?

ಕಾವ್ಯದ ದೇವತೆ ಎಂದು ಕರೆದಿದ್ದಾರೆ.

ಇತರೆ ವಿಷಯಗಳು :

ಕನಕದಾಸರ ಬಗ್ಗೆ ಪ್ರಬಂಧ

ಜಾಗತಿಕ ತಾಪಮಾನ ಪ್ರಬಂಧ 

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.