ಕಮಲಾದೇವಿ ಚಟ್ಟೋಪಾಧ್ಯಾಯರವರ ಜೀವನ ಚರಿತ್ರೆ | Biography of Kamaladevi Chattopadhyay in Kannada

Join Telegram Group Join Now
WhatsApp Group Join Now

ಕಮಲಾದೇವಿ ಚಟ್ಟೋಪಾಧ್ಯಾಯರವರ ಜೀವನ ಚರಿತ್ರೆ Biography of Kamaladevi Chattopadhyay Kamaladevi Chattopadhyayaravara Jeevana Charitre in Kannada

ಕಮಲಾದೇವಿ ಚಟ್ಟೋಪಾಧ್ಯಾಯರವರ ಜೀವನ ಚರಿತ್ರೆ

ಕಮಲಾದೇವಿ ಚಟ್ಟೋಪಾಧ್ಯಾಯರವರ ಜೀವನ ಚರಿತ್ರೆ

ಈ ಲೇಖನಿಯಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕಮಲಾದೇವಿ ಚಟ್ಟೋಪಾಧ್ಯಾಯ :

ಜನನ ಮತ್ತು ಶಿಕ್ಷಣ :

ಕಮಲಾದೇವಿ ಚಟ್ಟೋಪಾಧ್ಯಾಯ ಅವರು 1903 ಏಪ್ರಿಲ್‌ 3 ರಂದು ಮಂಗಳೂರಿನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಧಾರೇಶ್ವರ ಅನಂತರಾಯರು, ತಾಯಿ ಗಿರಿಜಾಬಾಯಿ. ಬ್ರಿಟಿಷ್‌ ವಸಾಹತುಶಾಹಿ ವ್ಯವಸ್ಥೆಯಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಕಮಲಾದೇವಿಯವರು ಕ್ಯಾಥೊಲಿಕ್‌ ಕಾನ್ವೆಂಟ್‌ ಮತ್ತು ಸೇಂಟ್‌ ಮೇರಿಸ್‌ ಶಾಲೆಯಲ್ಲಿ ಶಿಕ್ಷಣವನ್ನು ಪಡೆದರು.

ಆರಂಭಿಕ ಜೀವನ :

ಇವರಿಗೆ 14 ನೇ ವಯಸ್ಸಿನಲ್ಲಿ ವಿವಾಹವಾಯಿತು, ಮತ್ತು ಸ್ವಲ್ಪ ಕಾಲದಲ್ಲಿ ವಿಧವೆಯಾದರು. ಅವರ ತಂದೆಯವರಿಗೆ ಮದ್ರಾಸಿಗೆ ವರ್ಗಾವಣೆ ಯಾದಾಗ ಮದ್ರಾಸಿನಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಮುಂದೆ ಇಂಗ್ಲೀಷರ ಪ್ರಸಿದ್ದ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ ನಲ್ಲಿ ಪದವಿಯನ್ನು ಪಡೆದು ಭಾರತಕ್ಕೆ ಹಿಂದುರಿಗಿದರು. ರಂಗಕರ್ಮಿಯಾದ ಹರೀಂದ್ರನಾಥ್‌ ಚಟ್ಟೋಪಾಧ್ಯಾಯ ಪರಿಚಯವಾಯಿತು. ನಂತರ ಮರುವಿವಾಹವಾಗಿ ಕಮಲಾದೇವಿ ಚಟ್ಟೋಪಾಧ್ಯಾಯರಾದರು.

ಸ್ವಾತಂತ್ಯ ಚಳುವಳಿಯಲ್ಲಿ ಭಾಗವಹಿಸುವಿಕೆ :

ಕಮಲಾದೇವಿ ರಾಷ್ಟ್ರರಾಜಕಾರಣದಲ್ಲಿ ಗುರುತಿಸಿಕೊಂಡ ಕರ್ನಾಟಕದ ಬಹುಮುಖ ಪ್ರತಿಭೆಯ ಮಹಿಳೆ. ಇವರು ಗಾಂಧೀಜಿ ಮತ್ತು ಸರೋಜಿನಿ ನಾಯ್ಡುರವರಿಂದ ಪ್ರಭಾವಿತರಾಗಿ ಅಸಹಕಾರಿ ಚಳುವಳಿಯಲ್ಲಿ ಭಾಗವಹಿಸಿದರು. ಕರ್ನಾಟಕದಾದ್ಯಂತ ಸಂಚರಿಸಿ ಯುವಜನತೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. 1929 ರಲ್ಲಿ ಅಲಹಾಬಾದ್‌ ನಗರದಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಘೋ಼ಣೆಗಳನ್ನು ಕೂಗುತ್ತಾ ಮೆರವಣಿಗೆ ಹೊರಟು ಬ್ರಿಟೀಷ್‌ ದಬ್ಬಾಳಿಕೆಯನ್ನು ಖಂಡಿಸಿದರು. ಲಾಹೋರ್ ಕಾಂಗ್ರೇಸ್‌ ಅಧಿವೇಶನದ ನಿರ್ಣಯದಂತೆ ಗಾಂಧೀಜಿಯವರು ಮಮಾರ್ಚ್‌ 12,1930 ರಂದು ತಮ್ಮ 78 ಅನುಯಾಯಿಗಳೊಂದಿಗೆ ಸಬರಮತಿ ಆಶ್ರಮದಿಂದ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಮೇ 5 ರಂದು ದಂಡಿಯನ್ನು ತಲುಪಿ ಮೇ 6 ರಂದು ಉಪ್ಪನ್ನು ತಯಾರಿಸುವುದರ ಮೂಲಕ ಉಪ್ಪಿನ ಕಾನೂನುಗಳನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ದೇಶದ ಜನತೆ ಉಪ್ಪಿನ ಸತ್ಯಾಗ್ರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಕಮಲಾದೇವಿಯವರು ಗಾಂಧೀಜಿಯವರನ್ನು ಭೇಟಿಮಾಡಿ ಮಹಿಳೆಯರು ಉಪ್ಪಿಸ ಸತ್ಯಾಗ್ರಹದಲ್ಲಿ ಭಾಗವಹಿಸಲು ಅನುಮತಿ ಪಡೆದರು. ಕಮಲಾದೇವಿ ಮತ್ತು ಅವಂತೀಬಾಯಿ ಗೋಖಲೆಯವರು ಮೊದಲ ತಂಡದ ಮಹಿಳೆಯರಾಗಿ ಉಪ್ಪಿನ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದರು.

“ಗಾಂಧೀ ಉಪ್ಪನ್ನು ಕೊಳ್ಳಿ ಇದರ ಬೆಲೆ ಆರು ತಿಂಗಳ ಶಿಕ್ಷೆ” ಎಂದು ಹೇಳುತ್ತಾ ಉಪ್ಪನ್ನು ಮಾರಾಟಮಾಡಿ ದಸ್ತಗಿರಿಯಾಗಿ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಬಿಡುಗಡೆ ಹೊಂದಿದ ನಂತರವು ಸಹ ಬಾಂಬೆಯ ಗಬಾಕಾಪುರದಲ್ಲಿ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡಿದರು. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೇಸಿನ ಸೇವಾದಳದ ಮಹಿಳೆಯರ ತಂಡದ ಜವಬ್ದಾರಿಯನ್ನು ವಹಿಸಿಕೊಂಡು ದೇಶದಾದ್ಯಂತ ಸಂಚರಿಸಿ ಮಹಿಳಾ ಸ್ವಯಂಏವಕರನ್ನು ಸಂಘಟಿಸಿದರು. ಬಾಂಬೆ ಮತ್ತು ಬೋರೀವಿಗಳಲ್ಲಿ ಮಹಿಳಾ ಸ್ವಯಂಸೇವಕ ತರಬೇತಿ ಶಿಬಿರಗಳನ್ನು ತೆರೆಯಲಾಯಿತು. ಸೇವಾದಳದ ಈ ಸಂಘಟಿತ ಚಟುವಟಿಕೆಗಳಿಂದಾಗಿ ಬ್ರಿಟೀಷ್‌ ಸರ್ಕಾರ ಸೇವಾದಳವನ್ನು ರ್ದುಮಾಡಿ ಕಮಲಾದೇವಿಯವರನ್ನು ದಸ್ತಗಿರಿಮಾಡಿ ಆರ್ಥರ್‌ ರಸ್ತೆ ಜೈಲಿನಲ್ಲಿರಿಸಿತು.

Join WhatsApp Join Telegram

ಕಮಲಾದೇವಿ ಚಟ್ಟೋಪಾಧ್ಯಾಯರು 1934 ರಲ್ಲಿ ಈ ಪಕ್ಷದ ಸದಸ್ಯತ್ವವನ್ನು ಪಡೆದರು. ಸಮಾಜವಾದ ತತ್ವಗಳ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬಂದು ಸಾರ್ವಜನಿಕ ಉಪನ್ಯಾಸಗಳನ್ನು ನೀಡಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಇದರಿಂದ ಅನೇಕ ತೊಂದರೆಗಳಿಗೂ ಒಳಗಾದರು. ಕಮಲಾದೇವಿಯವರು ಸ್ವಾತಂತ್ಯ ಹೋರಾಟಗಾರರಷ್ಟೇ ಅಲ್ಲದೇ ಸಮಾಜ ಸುಧಾರಕರು, ಸ್ತ್ರೀವಾದಿ ಚಿಂತಕರು, ಸಾಹಿತಿ ಮತ್ತು ಚಲನಚಿತ್ರ ನಟರೂ ಆಗಿದ್ದರು.

ಇವರಿಗೆ ಲಭಿಸಿದ ಪ್ರಶಸ್ತಿಗಳು :

1955 ರಲ್ಲಿ ಪದ್ಮಭೂಷಣ, 1962 ರಲ್ಲಿ ವತ್ಮುಲ್‌ ಪೌಂಡೇಷನ್‌ ಪ್ರಶಸ್ತಿ, 1966 ರಲ್ಲಿ ರಾಮನ್‌ ಮ್ಯಾಗಸೇ ಇಂಟರ್‌ ನ್ಯಾಷನಲ್‌ ಪ್ರಶಸ್ತಿ, ಶಾಂತಿಭಾರತ ದೆಸೆಟೀಕೊತ್ತಂ ಪ್ರಶಸ್ತಿ, ಸೆಂಟ್ರಲ್‌ ಅಕಾಡೆಮಿ ಪ್ರಶಸ್ತಿ ಮತ್ತು 1987 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.

ಮರಣ :

ಇಂತಹ ಬಹುಮುಖ ಪ್ರತಿಭೆಯವರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರವರು ಕರ್ನಟಕದ ಹೆಮ್ಮೆ. ಇವರು 1988 ರಲ್ಲಿ ತೀರಿಕೊಂಡರು.

FAQ :

ಕಮಲಾದೇವಿ ಚಟ್ಟೋಪಾಧ್ಯಾಯ ರವರು ಯಾವಾಗ ಜನಿಸಿದರು?

1903 ಏಪ್ರಿಲ್‌ 3 ರಂದು

ಕಮಲಾದೇವಿ ಚಟ್ಟೋಪಾಧ್ಯಾಯ ಲಭಿಸಿದ ಒಂದು ಪ್ರಶಸ್ತಿ ತಿಳಿಸಿ?

1955 ರಲ್ಲಿ ಪದ್ಮಭೂಷಣ

ಇತರೆ ವಿಷಯಗಳು :

ಟಿಪ್ಪು ಸುಲ್ತಾನ್ ಜೀವನ ಚರಿತ್ರೆ

ಆರ್ಯಭಟ ಜೀವನ ಚರಿತ್ರೆ

Leave your vote

-4 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.