ಚಂದ್ರಶೇಖರ್ ಆಜಾದ್ ರವರ ಜೀವನ ಚರಿತ್ರೆ Biography of Chandrasekhar Azad Chandrashekar Azad Ravara Jeevana Charitre in Kannada
ಚಂದ್ರಶೇಖರ್ ಆಜಾದ್ ರವರ ಜೀವನ ಚರಿತ್ರೆ
ಈ ಲೇಖನಿಯಲ್ಲಿ ಚಂದ್ರಶೇಖರ್ ಆಜಾದ್ ರವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಚಂದ್ರಶೇಖರ್ ಆಜಾದ್ :
ಚಂದ್ರಶೇಖರ ಆಜಾದ್ ಅವರು ಭಾರತದ ಸ್ವಾತಂತ್ಯ ಹೋರಾಟದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಚಂದ್ರಶೇಖರ ತಿವಾರಿಯಾಗಿ ಜನಿಸಿದರೂ, ಚಂದ್ರಶೇಖರ ಆಜಾದ್ ಆಗಿ ಹುತಾತ್ಮರಾಗಿದ್ದಾರೆ. ಬ್ರಿಟಿಷರ ದೌರ್ಜನ್ಯದಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದ ಅಪ್ರತಿಮ ನಾಯಕ.
ಜನನ ಶಿಕ್ಷಣ :
ಜುಲೈ 23 1906 ರಂದು ಮಧ್ಯಪ್ರದೇಶದ ಸಣ್ಣ ಭಾಭ್ರಾ ಗ್ರಾಮದಲ್ಲಿ ಜನಿಸಿದರು. ಇವರ ಪುರ್ಣ ಹೆಸರು ಪಂಡಿತ್ ಚಂದ್ರಶೇಖರ್ ಸೀತಾರಾಮ್ ತಿವಾರಿ, ಇವರ ತಂದೆ ಪಂಡಿತ್ ಸೀತಾರಾಮಯ್ಯ ತಿವಾರಿ ಮತ್ತು ತಾಯಿ ಜಾಗರಾಣಿ ದೇವಿ ತಿವಾರಿ. ಚಂದ್ರಶೇಖರ್ ಆಜಾದ್ ರವರು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದು ಮತ್ತು ಉನ್ನತ ವ್ಯಾಸಂಗಕ್ಕಾಗಿ ಅವರು ಉತ್ತರ ಪ್ರದೇಶದ ವಾರಣಾಸಿಯ ಸಂಸ್ಕೃತ ಪಾಠಶಾಲೆಗೆ ಸೇರಿದರು.
ಚಂದ್ರಶೇಖರ್ ಆಜಾದ್ ರವರಿಗೆ ಆಜಾದ್ ಎಂಬ ಹೆಸರು ಬರಲು ಕಾರಣ :
ಇವರು 15 ವರ್ಷದಲ್ಲಿದ್ದಾಗ ಗಾಂಧಿಜಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಬ್ರಿಟೀಷರ ಪೊಲೀಸರಿಗೆ ಸಿಕ್ಕಿ ಬಿದ್ದ ಇವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ಅವರು ತಮ್ಮ ಹೆಸರು ಆಜಾದ್,ತಮ್ಮ ತಂದೆಯ ಹೆಸರು ಸ್ವಾತಂತ್ರ್ಯ ಮತ್ತು ತಮ್ಮ ವಿಳಾಸ ಜೈಲು ಎಂದು ಹೇಳಿದ್ದರು, ಇದು ನ್ಯಾಯಾಧೀಶರ ಸಿಟ್ಟನ್ನು ಕೆರಳಿಸಿತು ಮತ್ತು ಆಜಾದ್‌ಗೆ 15 ಬೆತ್ತದ ಶಿಕ್ಷೆ ವಿಧಿಸಲಾಗಿತ್ತು. ಅಂದಿನಿಂದ ಇವರನ್ನು ಆಜಾದ್ ಎಂದು ಕರೆಯುವರು.
ಚಂದ್ರಶೇಖರ್ ರವರ ಕ್ರಾಂತಿಕಾರಿ ಚಟುವಟಿಕೆಗಳು :
1921 ರಲ್ಲಿ ಗಾಂಧೀಜಿಯವರು ಆರಂಭಿಸಿದ ಅಸಹಕಾರ ಚಳುವಳಿಯಲ್ಲಿ ಚಂದ್ರಶೇಖರ್ ಆಜಾದ್ ರವರು ಭಾಗವಹಿಸಿದರು. ನಂತರ ಚೌರಿ-ಚೌರಾ ಘಟನೆಯಿಂದಾಗಿ, ಫೆಬ್ರವರಿ 12, 1922 ರಲ್ಲಿ ಭಾರ್ಡೋಲಿ ಘೋಷಣೆಯ ಮೂಲಕ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು. ಇದಾದ ನಂತರ ಕಾಕೋರಿ ಘಟನೆಯಲ್ಲಿ ತೊಡಗಿದರು.
ಕಾಕೋರಿ ಘಟನೆ :
1925 ಆಗಸ್ಟ್ 9, ರಂದು ಪಕ್ಷದ 10 ಸದಸ್ಯರು ಸೇರಿ ಬ್ರಿಟಿಷರ ಖಜಾನೆಯನ್ನು ಲೂಟಿ ಮಾಡುವ ಮೂಲಕ ಸವಾಲು ಹಾಕಿದರು. ಈ ಘಟನೆಯ ನಂತರ, ಪಕ್ಷದ ಹಲವಾರು ಸದಸ್ಯರನ್ನು ಬಂಧಿಸಲಾಯಿತು. ಮತ್ತೆ ಆಜಾದ್ ಪಕ್ಷ ಸ್ಥಾಪಿಸುವ ಸಮಸ್ಯೆಯನ್ನು ಎದುರಿಸಿದರು. ಬ್ರಿಟೀಷರು ಅವರನ್ನು ಹುಡುಕುವ ಪ್ರಯತ್ನ ಮಾಡಿದರು. ಅಲ್ಲಿ ಉಳಿದ ಎಲ್ಲಾ ಕ್ರಾಂತಿಕಾರಿಗಳ ರಹಸ್ಯ ಸಭೆಯನ್ನು ಫಿರೋಜ್‌ಶಾ ಕೋಟ್ಲಾ ಮೈದಾನದಲ್ಲಿ ಆಯೋಜನೆ ಮಾಡಲಾಯಿತು. ನಂತರ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪನೆ. ಆಜಾದ್ ಅವರನ್ನು ಕಮಾಂಡರ್ ಇನ್ ಚೀಫ್ ಮಾಡಲಾಯಿತು.
ಅಲ್ಲದೆ 1928 ಲಾಹೋರ್ ನಲ್ಲಿ ಸೈಮನ್ ವಿರೋಧಿ ಆದೋಂಲನದ ನೇತೃತ್ವವಹಿಸಿದ ಲಾಲಾ ಲಜಪತ್ ರಾಯ್ ರಿಗೆ ಸ್ಯಾಂಡರ್ಸ್ ಎಂಬ ಅಧಿಕಾರಿಯ ಆದೇಶದಂತೆ ಸ್ಕಾಟ್ ಎಂಬ ಪೊಲೀಸನು ಲಾಠಿ ಏಟು ನೀಡಿದನು. ಇದರಿಂದ ಮಾರಣಾಂತಿಕ ಪೆಟ್ಟಾಗಿ ಅವರು ಅಸುನೀಗಿದರು. ಬ್ರಿಟೀಷರ ವಿರುದ್ದ ಸೇಡು ತೀರಿಸಿಕೊಳ್ಳಲು ಆಜಾದ್ ರವರು ಸ್ಯಾಂಡರ್ಸ್ ನ ಹತ್ಯೆಯಲ್ಲಿ ತೊಡಗಿದ್ದರು.
1931, ಫೆಬ್ರವರಿ 27 ರಂದು, ಅವರು ಅಲಹಾಬಾದ್‌ಗೆ ಹೋಗಿ ಜವಾಹರಲಾಲ್ ನೆಹರು ಅವರನ್ನು ಭೇಟಿ ಮಾಡಿದರು. ತಮಗೆ ವಿಧಿಸಿದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ ಮಾಡಲು ಲಾರ್ಡ್ ಇರ್ವಿನ್ ಅವರನ್ನು ಮನವೊಲಿಸಲು ಗಾಂಧೀಜಿಯವರನ್ನು ಒತ್ತಾಯಿಸಿದರು. ನೆಹರೂ ರವರು ಆಜಾದ್ ರವರ ಮಾತನ್ನು ಕೇಳುವುದಿಲ್ಲ. ನಂತರ ಆಜಾದ್ ರವರು ಗೊಣಗುತ್ತಾ ಅಲ್ಪ್ರೆಡ್ ಪಾರ್ಕ್ ನ ಕಡೆಗೆ ಹೋದರು.
ಚಂದ್ರಶೇಖರ್ ಆಜಾದ್ ರವರ ಮರಣ :
ಆಲ್ಫ್ರೆಡ್ ಪಾರ್ಕ್‌ನಲ್ಲಿ ಆಜಾದ್ ರವರು ಸುಖದೇವ್ ರಾಜ್ ಅವರನ್ನು ಭೇಟಿಯಾಗಿ ಅದರ ಬಗ್ಗೆ ಮಾತನಾಡುತ್ತಿದ್ದಾಗ ಸಿಐಡಿಯ ಎಸ್‌ಎಸ್‌ಪಿ ನಾಟ್ ಬಾಬರ್ ಭಾರಿ ಪೊಲೀಸ್ ಪಡೆಯೊಂದಿಗೆ ಜೀಪಿನಲ್ಲಿ ಅಲ್ಲಿಗೆ ಬಂದರು. ಈ ಎನ್‌ಕೌಂಟರ್‌ನಲ್ಲಿ ಎರಡೂ ಕಡೆಯಿಂದ ಉಗ್ರರ ಗುಂಡಿನ ದಾಳಿ ನಡೆದಿತ್ತು, ಚಂದ್ರಶೇಖರ್ ಆಜಾದ್ ರವರು ಹುತಾತ್ಮರಾದರು. ಪೊಲೀಸರು ಆಜಾದ್ ಅಂತ್ಯಸಂಸ್ಕಾರ ಮಾಡಿದರು.
FAQ :
ಚಂದ್ರಶೇಖರ್ ಆಜಾದ್ ರವರ ಮೂಲ ಹೆಸರೇನು?
ಚಂದ್ರಶೇಖರ್ ತಿವಾರಿ
ಕಾಕೋರಿ ಘಟನೆ ಯಾವಾಗ ನಡೆಯಿತು?
1925, ಆಗಸ್ಟ್ 9 ರಂದು ನಡೆಯಿತು.
ಇತರೆ ವಿಷಯಗಳು :