ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆಯ ವಿವರಣೆ An explanation of the proverb, if you live together, heaven will be happy Koodi Balidare Swarga Sukha Gadeya Vivarane in Kannada
ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆಯ ವಿವರಣೆ
ಈ ಲೇಖನಿಯಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕೂಡಿ ಬಾಳಿದರೆ ಸ್ವರ್ಗ ಸುಖ :
ಗಾದೆಗಳು ವೇದಗಳಿಗೆ ಸಮ “ವೇದ ಸುಳ್ಳಾದರು ಗಾದೆ ಸುಳ್ಳಾಗದು” ಎಂಬ ಮಾತಿದೆ. ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ ʼಕೂಡಿ ಬಾಳಿದರೆ ಸ್ವರ್ಗ ಸುಖʼ ಎಂಬ ಗಾದೆ ಒಗ್ಗಟ್ಟಾಗಿ ಬಾಳುವುದರಲ್ಲಿ ಸುಖವಿದೆ ತತ್ವವನ್ನು ಹೇಳುತ್ತದೆ.
ಕೂಡಿ ಬಾಳುವುದು ಎಂದರೆ ಒಗ್ಗಟ್ಟಾಗಿ ದ್ವೇಷ, ಜಗಳಗಳು ಇಲ್ಲದೆ ಅನ್ಯೋನ್ಯತೆಯಿಂದ ಜೀವಿಸುವುದು. ಕೂಡಿ ಬಾಳುವುದು ಮನೆಯ ಒಟ್ಟು ಕುಟುಂಬಕ್ಕೆ ಸೀಮಿತವಾಗಿಲ್ಲ, ನಮ್ಮ ಊರಲ್ಲಿ, ದೇಶದಲ್ಲಿ, ಸಮಾಜದಲ್ಲಿ ಕೂಡ ಒಗ್ಗಟ್ಟಾಗಿರಬೇಕು. ಮನೆಯೇ ಮೊದಲ ಪಾಠ ಶಾಲೆ ಎನ್ನುವರು ಮನೆಯಲ್ಲಿ ನಾವು ಕೂಡಿ ಬಾಳಿ ಅನ್ಯೋನ್ಯವಾಗಿ ಬಾಳಿದರೆ ಸಮಾಜದಲ್ಲಿ, ಊರಿನಲ್ಲಿ, ದೇಶದಲ್ಲಿ ಕೂಡಿ ಬಾಳುವ ನಿಯಮ ಪಾಲನೆ, ಶಿಸ್ತು ಪಾಲಿಸಲು ಸುಲಭ.
ಮೊದಲು ನಾವು ಮನೆಯಲ್ಲಿ ನಮ್ಮ ಕುಟುಂಬದ ಸದ್ಯಸರೊಂದಿಗೆ ಅನ್ಯೋನ್ಯವಾದ ಭಾಂಧವ್ಯವನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನೆಗಳಲ್ಲಿ ಕೂಡಿಬಾಳುವ ಸ್ವಭಾವ ಇದ್ದರೆ, ನಮ್ಮ ನಮ್ಮಲ್ಲಿ ಕೌಟುಂಬಿಕ ಬಾಂಧವ್ಯ ಹೆಚ್ಚಾಗಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಇದರಿಂದ ಪರರಿಂದ ನಮ್ಮಲ್ಲಿ ಒಡಕು ಕೆಡಕು ಮಾಡಲಾಗದು, ಕುಟುಂಬದಲ್ಲಿ ಕೂಡಿ ಒಟ್ಟಾಗಿ ಕೆಲಸ ಹಂಚಿಕೊಂಡು ಮಾಡುವುದರಿಂದ ಆರ್ಥಿಕ ಸಮಸ್ಯೆಯು ಬರುವುದಿಲ್ಲ.
ಇಲ್ಲಿ ಬದುಕು ಸುಭದ್ರವಾಗಿರುತ್ತದೆ. ಹೀಗೆ ನಾವು ವಾಸಿಸುತ್ತಿರುವ ನಮ್ಮ ಸಮಾಜದಲ್ಲಿ ಅನೇಕ ಜಾತಿಮತಗಳು ಇವೆ. ವಿವಿಧ ಪರಂಪರೆ, ಹಬ್ಬಗಳು ಆಚರಣೆ ಮಾಡುವುದು ನಾವು ನೋಡಬಹುದು. ನಮ್ಮ ಸಮಾಜದಲ್ಲಿ ನಾವು ಒಟ್ಟಾಗಿ ಕೂಡಿ ಬಾಳಲು ನಮ್ಮ ಹಿರಿಯರು ಹೇಳುವರು. ಅದರಂತೆ ನಾವು ಒಟ್ಟಾಗಿ ಬೇಧಭಾವಗಳಿಲ್ಲದೆ ಇವುಗಳಲ್ಲಿ ಭಾಗವಹಿಸಿ ಸ್ನೇಹ, ಆತ್ಮೀಯತೆಯಿಂದ ಆತ್ಮವಿಶ್ವಾಸದಿಂದ ಸಹಕರಿಸುತ್ತಾ ಬದುಕುತ್ತಿದ್ದೇವೆ. ಹೀಗೆ ನಾವೆಲ್ಲ ಒಟ್ಟಾಗಿ ಭಾವೈಕ್ಯತೆಯಿಂದ ಬಾಳುತ್ತಿರುವುದು ನೋಡಿ ಒಡಕು, ಕೇಡು ಮಾಡಲು ಬಂದರೂ ನಾವೆಲ್ಲರೂ ಒಂದಾಗಿ, ಒಟ್ಟಾಗಿ ಇದ್ದರೆ ಯಾರಿಂದಲೂ ನಮಗೆ ಬೇರೆ ಮಾಡುವ ಸಾಹಸಮಾಡಲಾಗದು. ಒಂದು ಊರು ಎಂದರೆ ಅನೇಕ ತೊಂದರೆ, ಸಮಸ್ಯೆಗಳು ಇದ್ದೇ ಇರುತ್ತೇ.
ಪರಸ್ಪರ ಅಸೂಯೆ, ಹಗೆತನ, ಹೊಡೆದಾಟ ಹೋರಾಟ ಮೊದಲಾದವು ಅಶಾಂತಿ ಅಸಮಧಾನಗಳಿಗೆ ಎಡೆಮಾಡಿಕೊಡುತ್ತದೆ. ನೆಮ್ಮದಿ ಇರದ ಇಂತಹ ಬದುಕು ನರಕಸದೃಶವಾಗುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖವನ್ನು ಪಡೆಯಬಹುದು, ಜನರ ನಡೆ ನುಡಿಗಳೇ ಅವರ ಸುಖ ದುಃಖಗಳಿಗೆ ಸ್ವರ್ಗ ನರಕಗಳಿಗೆ ಕಾರಣವಾಗುತ್ತದೆ. ಸುಖ ಸಂತೋಷವನ್ನು ಹೊಂದಬೇಕಾದರೆ ಕೂಡಿ ಬಾಳಬೇಕು.
ಇತರೆ ವಿಷಯಗಳು :